ಬೆಳಗ್ಗೆ ಟೀ-ಕಾಫಿ ಕುಡಿಯುವ ಬದಲು, ಒಂದು ಲೋಟ ಮಜ್ಜಿಗೆ ಕುಡಿಯಿರಿ

By: Hemanth
Subscribe to Boldsky

ಹಾಲು ಹಾಗೂ ಹಾಲಿನ ಪ್ರತಿಯೊಂದು ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಿಗುವಂತಹ ಹಾಲು, ಮೊಸರು ಹಾಗೂ ಮಜ್ಜಿಗೆಯಲ್ಲಿ ಯಾವುದೇ ರೀತಿಯ ಕಲಬೆರಕೆ ಇಲ್ಲದೆ ಇರುವ ಕಾರಣದಿಂದಾಗಿ ಅದರಿಂದ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆಯುತ್ತದೆ. ಹಾಲು ಹಾಗೂ ಮೊಸರಿನಂತೆ ಮಜ್ಜಿಗೆ ಕೂಡ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಒಂದು ಸಲವಾದರೂ ಮಜ್ಜಿಗೆ ಕುಡಿಯುತ್ತಾರೆ. 

ಆಹಾ ಮಜ್ಜಿಗೆ ಸಾಂಬಾರ್, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಅದರಲ್ಲೂ ಬೇಸಿಗೆಯಲ್ಲಿ ಮಜ್ಜಿಗೆಯು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಉಷ್ಣತೆಯನ್ನು ಕಡಿಮೆ ಮಾಡುವುದು. ಮೊಸರು, ನೀರು, ಕರಿಬೇವಿನ ಎಲೆ, ಜೀರಿಗೆ, ಉಪ್ಪು ಮತ್ತು ಶುಂಠಿಯಂತಹ ಮಸಾಲೆ ಹಾಕಿಕೊಂಡು ಮಜ್ಜಿಗೆಯನ್ನು ವಿವಿಧ ರೀತಿಯಿಂದ ತಯಾರಿಸಲಾಗುವುದು. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವಿದೆ.

ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?

ಅದೇ ರೀತಿ ಮಜ್ಜಿಗೆಯು ಜೀರ್ಣಕ್ರಿಯೆ ನೆರವಾಗುವುದು ಮತ್ತು ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆಯಿದೆ. ಮಲಬದ್ಧತೆಯಿಂದ ಬಳಲುತ್ತಾ ಇರುವವರು ಬೆಳಿಗ್ಗೆ ಒಂದು ಲೋಟ ಮಜ್ಜಿಗೆ ಸೇವಿಸಬೇಕು. ಮಜ್ಜಿಗೆಯ ಇನ್ನಷ್ಟು ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.... 

 ಉರಿಯ ಅನುಭವ ಕಡಿಮೆ ಮಾಡುವುದು

ಉರಿಯ ಅನುಭವ ಕಡಿಮೆ ಮಾಡುವುದು

ಅಸಿಡಿಟಿಯಿಂದ ಬಳಲುತ್ತಾ ಇರುವಾಗ ಹೊಟ್ಟೆಯಲ್ಲಿ ಉರಿಯ ಅನುಭವವಾಗುವುದು. ಇಂತಹ ಸಮಯದಲ್ಲಿ ಒಂದು ಲೋಟ ಮಜ್ಜಿಗೆ ಕುಡಿದರೆ ತುಂಬಾ ಒಳ್ಳೆಯದು. ಆಮ್ಲದ ಹಿಮ್ಮುಖ ಹರಿವನ್ನು ಇದು ಕಡಿಮೆಗೊಳಿಸುವುದು.

ಹೊಟ್ಟೆಯಲ್ಲಿ ಕಿರಿಕಿರಿ ಕಡಿಮೆಯಾಗುವುದು

ಹೊಟ್ಟೆಯಲ್ಲಿ ಕಿರಿಕಿರಿ ಕಡಿಮೆಯಾಗುವುದು

ಒಂದು ಲೋಟ ಮಜ್ಜಿಗೆ ಕುಡಿದರೆ ನಿಮ್ಮ ಹೊಟ್ಟೆಯು ತುಂಬಾ ಶಾಂತವಾಗುವುದು. ಯಾಕೆಂದರೆ ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡುವ ಕೆಲವೊಂದು ವಸ್ತುಗಳನ್ನು ಇದು ಹೊರಹಾಕುವುದು. ಕರಿಬೇವು, ಜೀರಿಗೆ ಮತ್ತು ಕರಿಮೆಣಸಿನ ಹುಡಿಯನ್ನು ಮಜ್ಜಿಗೆಗೆ ಸೇರಿಸಿದಾಗ ಅದಕ್ಕೆ ಮತ್ತಷ್ಟು ಔಷಧೀಯ ಗುಣಗಳು ಸಿಗುವುದು.

ಜೀರ್ಣಕ್ರಿಯೆ ಉತ್ತಮಗೊಳಿಸುವುದು

ಜೀರ್ಣಕ್ರಿಯೆ ಉತ್ತಮಗೊಳಿಸುವುದು

ಅತಿಯಾಗಿ ತಿಂದ ಬಳಿಕ ಹೊಟ್ಟೆ ತುಂಬಾ ಭಾರವೆನಿಸುತ್ತಾ ಇದ್ದರೆ ನೀವು ತಕ್ಷಣ ಶುಂಠಿ ಹುಡಿ ಹಾಕಿದ ಒಂದು ಲೋಟ ಮಜ್ಜಿಗೆ ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವುದು.

ನಿರ್ಜಲೀಕರಣಕ್ಕೆ ಮದ್ದು

ನಿರ್ಜಲೀಕರಣಕ್ಕೆ ಮದ್ದು

ನೀವು ನಿರ್ಜಲೀಕರಣದಿಂದ ಬಳಲುತ್ತಾ ಇದ್ದರೆ ಒಂದು ಲೋಟ ಮಜ್ಜಿಗೆ ಕುಡಿಯಿರಿ. ಈ ಮಜ್ಜಿಗೆಗೆ ಸ್ವಲ್ಪ ಮಸಾಲೆ ಮತ್ತು ಉಪ್ಪು ಹಾಕಿಕೊಳ್ಳಿ. ಬೇಸಿಗೆಯಲ್ಲೂ ದೇಹದಲ್ಲಿ ನೀರಿನಾಂಶವನ್ನು ಉಳಿಸಿಕೊಳ್ಳಲು ಇದು ಒಳ್ಳೆಯ ಔಷಧಿ.

ಪೋಷಕಾಂಶಗಳು

ಪೋಷಕಾಂಶಗಳು

ಔಷಧೀಯ ಗುಣಗಳನ್ನು ಹೊಂದಿರುವಂತಹ ಮಜ್ಜಿಗೆಯಲ್ಲಿ ಪೊಟಾಶಿಯಂ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿಯಂತಹ ಪೋಷಕಾಂಶಗಳು ಇವೆ.

ಅತಿಸಾರಗೆ ಒಳ್ಳೆಯ ಔಷಧಿ

ಅತಿಸಾರಗೆ ಒಳ್ಳೆಯ ಔಷಧಿ

ಅತಿಸಾರದಿಂದ ಬಳಲುತ್ತಾ ಇದ್ದರೆ ಒಂದು ಲೋಟ ಮಜ್ಜಿಗೆಗೆ ಅರ್ಧ ಚಮಚದಷ್ಟು ಶುಂಠಿ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಮೂರು ಸಲ ಇದನ್ನು ಸೇವಿಸಿದರೆ ಕೆಲವೇ ದಿನಗಳಲ್ಲಿ ಅತಿಸಾರವು ಕಡಿಮೆಯಾಗುವುದು.

ಕೊಲೆಸ್ಟ್ರಾಲ್ ನಿಯಂತ್ರಿಸುವುದು

ಕೊಲೆಸ್ಟ್ರಾಲ್ ನಿಯಂತ್ರಿಸುವುದು

ದಿನನಿತ್ಯ ಒಂದು ಲೋಟ ಮಜ್ಜಿಗೆ ಸೇವನೆ ಮಾಡಿದರೆ ಅದರಿಂದ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿ ಇರುವುದು. ಮಜ್ಜಿಗೆಯಲ್ಲಿ ಇರುವಂತಹ ಜೈವಿಕ ಸಕ್ರಿಯ ಪ್ರೋಟೀನ್ ಕ್ಯಾನ್ಸರ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಮಜ್ಜಿಗೆ ಸೇವನೆ ಮಾಡಿದರೆ ರಕ್ತದೊತ್ತಡವು ನಿಯಂತ್ರಣದಲ್ಲಿರುವುದು.

English summary

Why Drink Buttermilk Is Better Than Coffee In The Morning?

In the rural areas of India, people have their daily dose of buttermilk and yes, they enjoy its health benefits. Especially, during the summer season, buttermilk helps in withstanding the heat. Buttermilk is made of curd, water and some spices. Curry leaves, cumin seeds, salt and ginger powder are the main ingredients of buttermilk.
Subscribe Newsletter