Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಆಯುರ್ವೇದ ಟಿಪ್ಸ್: ಬೆಳ್ಳುಳ್ಳಿ ಹಾಕಿದ ಹಾಲು-ಅಮೃತಕ್ಕೆ ಸಮ
ಪುರಾತನ ಕಾಲದಿಂದಲೂ ಆಯುರ್ವೇದವು ಭಾರತದಲ್ಲಿ ಪ್ರಮುಖ ಚಿಕಿತ್ಸಾ ಕ್ರಮವಾಗಿ ಬಳಸಲಾಗುತ್ತಿದೆ. ಆಯುರ್ವೇದದಿಂದ ಸಿಗುವಂತಹ ಲಾಭಗಳು ಬೇರೆ ಯಾವುದೇ ಚಿಕಿತ್ಸಾ ಕ್ರಮದಿಂದ ಸಿಗುವುದಿಲ್ಲವೆಂದರೆ ತಪ್ಪಲ್ಲ. ಆಯುರ್ವೇದವು ಸಂಪೂರ್ಣ ದೇಹವನ್ನು ಪುನರ್ಚೇತನಗೊಳಿಸುತ್ತದೆ. ಅದೇ ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವಂತಹ ಮನೆಮದ್ದಿನಿಂದಲೂ ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದು.
ಬಾಲ್ಯದಲ್ಲಿ ಹಾಲು ಕುಡಿಯುವಾಗ ಅದಕ್ಕೆ ನಿಮ್ಮ ತಾಯಿ ಯಾವುದಾದರೂ ಸಾಂಬಾರ ಪದಾರ್ಥಗಳನ್ನು ಹಾಕಿ ಕೊಟ್ಟಿರುವ ನೆನಪಿದೆಯಾ? ಅಂತಹ ಹಾಲು ಕುಡಿದಿರುವ ನೀವು ಇಂದು ಖಂಡಿತವಾಗಿಯೂ ಅದರ ಆರೋಗ್ಯ ಲಾಭ ಪಡೆದುಕೊಳ್ಳುತ್ತಾ ಇರಬಹುದು. ಹಾಲಿಗೆ ಬೆಳ್ಳುಳ್ಳಿ ಹಾಕಿ ಕುಡಿದರೆ ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ.
ಒಂದು ಲೋಟ ಬಿಸಿ ಹಾಲಿಗೆ ಮೂರು ಚಮಚ ನೀರು ಬೆರೆಸಿಕೊಳ್ಳಿ. ಐದರಿಂದ ಆರು ಬೆಳ್ಳುಳ್ಳಿ ಎಸಲುಗಳನ್ನು ರುಬ್ಬಿಕೊಂಡು ಅದರ ರಸ ತೆಗೆದು ಹಾಲಿಗೆ ಹಾಕಿ ಮಿಶ್ರಣ ಮಾಡಿ. ಪ್ರತೀ ರಾತ್ರಿ ಊಟವಾದ ಬಳಿಕ ಈ ಹಾಲನ್ನು ಕುಡಿಯಿರಿ. ಬೆಳ್ಳುಳ್ಳಿ ರಸ ಬೆರೆಸಿದ ಹಾಲಿನಿಂದ ಸಿಗುವಂತಹ ಲಾಭಗಳು ಯಾವುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಅಸ್ತಮಾ ರೋಗಕ್ಕೆ ರಾಮಬಾಣ
ಅಸ್ತಮಾದಿಂದ ಬಳಲುತ್ತಾ ಇರುವವರು ದಿನದಲ್ಲಿ ಒಂದು ಸಲವಾದರೂ ಬೆಳ್ಳುಳ್ಳಿ ತಿನ್ನಬೇಕು. ಅದೇ ನ್ಯುಮೋನಿಯಾದಿಂದ ಬಳಲುವವರು ದಿನಕ್ಕೆ ಮೂರು ಸಲ ಬೆಳ್ಳುಳ್ಳಿ ಹಾಲನ್ನು ಕುಡಿಯುವುದು ಅತ್ಯುತ್ತಮ.

ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ
ಆಯುರ್ವೇದದ ಪ್ರಕಾರ ಹಾಲು ಮತ್ತು ಬೆಳ್ಳುಳ್ಳಿ ರಸದ ಮಿಶ್ರಣವು ನೈಸರ್ಗಿಕ ಕಾಮೋತ್ತೇಜಕವಾಗಿ ಕೆಲಸ ಮಾಡುವುದು. ಇದು ಪುರುಷರ ಜನನಾಂಗಕ್ಕೆ ರಕ್ತ ಸಂಚಾರವನ್ನು ಉತ್ತಮಪಡಿಸುವುದು. ಇದರಿಂದ ನಿಮಿರುವಿಕೆ ಸರಿಯಾಗುವುದು.
ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?
ಕೊಲೆಸ್ಟ್ರಾಲ್ ಕಡಿಮೆ ಮಾಡುವುದು
ರಕ್ತನಾಳಗಳನ್ನು ಹಿಗ್ಗಿಸಿ ತಡೆಯನ್ನು ನಿವಾರಣೆ ಮಾಡಿ, ಅಲ್ಲಿ ಜಮೆಯಾಗಿರುವಂತಹ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವಂತಹ ಶಕ್ತಿಯು ಹಾಲು ಮತ್ತು ಬೆಳ್ಳುಳ್ಳಿಯ ಮಿಶ್ರಣಕ್ಕೆ ಇದೆ. ಇದರಿಂದ ಅತಿಯಾದ ಕೊಲೆಸ್ಟ್ರಾಲ್ ನಿವಾರಣೆಯಾಗುವುದು.

ಮಲಬದ್ಧತೆ ನಿವಾರಣೆ
ಹಾಲು ಮತ್ತು ಬೆಳ್ಳುಳ್ಳಿ ರಸದ ಮಿಶ್ರಣವು ಕರುಳಿನ ಕ್ರಿಯೆಯನ್ನು ಸುಧಾರಿಸಿ ಮಲವನ್ನು ಮೃದುವಾಗಿಸಿ ಮಲಬದ್ಧತೆ ನಿವಾರಿಸುತ್ತದೆ ಎಂದು ಆಯುರ್ವೇದವು ಹೇಳುತ್ತದೆ.

ಎದೆಹಾಲು ಹೆಚ್ಚಳ
ಈ ಮಿಶ್ರಣವನ್ನು ಬಾಣಂತಿ ಮಹಿಳೆಯರು ಸೇವಿಸಿದಾಗ ಎದೆಹಾಲು ಹೆಚ್ಚಾಗುವುದು. ಇದು ಹಾಲಿನ ನಾಳಗಳಿಗೆ ಪೋಷಣೆ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸುವುದು.

ಅಜೀರ್ಣಕ್ಕೆ ಚಿಕಿತ್ಸೆ
ಹಾಲು ಮತ್ತು ಬೆಳ್ಳುಳ್ಳಿ ರಸದ ಮಿಶ್ರಣವು ಆರೋಗ್ಯಕಾರಿಯಾಗಿ ಜೀರ್ಣಕ್ರಿಯೆ ರಸದ ಉತ್ಪಾದನೆ ಹೆಚ್ಚಿಸುವುದು. ಇದರಿಂದ ಅಜೀರ್ಣ, ಅಸಿಡಿಟಿ ಮತ್ತು ವಾಯುವಿನ ಸಮಸ್ಯೆ ಕಡಿಮೆಯಾಗುವುದು.

ಗಂಟು ನೋವು
ಹಾಲು ಮತ್ತು ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವ ಕಾರಣದಿಂದಾಗಿ ಗಂಟು ನೋವಿಗೆ ಬೆಳ್ಳುಳ್ಳಿ ಹಾಲು ಒಳ್ಳೆಯ ನೈಸರ್ಗಿಕ ಮದ್ದಾಗಿದೆ. ಇದು ಗಂಟಿನಲ್ಲಿ ಉಂಟಾಗುವ ಉರಿಯೂತ ಕಡಿಮೆ ಮಾಡಿ ನೋವು ನಿವಾರಿಸುವುದು. ಹಾಲಿನಲ್ಲಿ ಇರುವ ಕ್ಯಾಲ್ಸಿಯಂ ಗಂಟು ನೋವು ಕಡಿಮೆ ಮಾಡುವುದು.

ಮೈಗ್ರೇನ್ ನಿವಾರಣೆ
ಈ ಮಿಶ್ರಣದಲ್ಲಿರುವ ಉರಿಯೂತ ಶಮನಕಾರಿ ಗುಣವು ಮೈಗ್ರೇನ್ ನಿವಾರಣೆ ಮಾಡಿ ಮೈಗ್ರೇನ್ ಗೆ ಸಂಬಂಧಿಸಿದ ತಲೆನೋವು ಕಡಿಮೆ ಮಾಡುತ್ತದೆ.

ರಕ್ತಪರಿಚಲನೆ ವ್ಯವಸ್ಥೆ
ಬೆಳ್ಳುಳ್ಳಿ ಹಾಲನ್ನು ಕುಡಿದಾಗ ಸಂಪೂರ್ಣ ರಕ್ತಪರಿಚಲನೆ ವ್ಯವಸ್ಥೆ ಮೇಲೆ ಅದರ ಪರಿಣಾಮ ಬೀರುತ್ತದೆ. ರಕ್ತ ಪರಿಚಲನೆ ಸರಿಯಾಗಿ ಆಗಲು ಇದು ಅತ್ಯುತ್ತಮ ಮದ್ದಾಗಿದೆ.
ಬಿಪಿ ರೋಗದ ಸಮಸ್ಯೆ ಇದ್ದರೆ-'ಮುಳ್ಳುಸೌತೆ-ಬೆಳ್ಳುಳ್ಳಿ' ಸಲಾಡ್ ಸೇವಿಸಿ


Click it and Unblock the Notifications