ಆರೋಗ್ಯ ಟಿಪ್ಸ್: ಕರಿಬೇವಿನ ಎಲೆ ತಿನ್ನಿ ಬುದ್ಧಿಶಕ್ತಿ ಹೆಚ್ಚಿಸಿ!

Posted By: Lekhaka
Subscribe to Boldsky

ದಕ್ಷಿಣ ಭಾರತೀಯರು ಯಾವುದೇ ಪದಾರ್ಥ ಮಾಡುವಾಗ ಅದಕ್ಕೊಂದು ಒಗ್ಗರಣೆ ನೀಡುವುದು ಸಾಮಾನ್ಯ. ಇಂತಹ ಒಗ್ಗರಣೆಯಲ್ಲಿ ಪ್ರಮುಖವಾಗಿ ಬಳಸುವುದೇ ಕರಿಬೇವಿನ ಎಲೆ. ಕರಿಬೇವಿನ ಎಲೆಯನ್ನು ಕೆಲವರು ಇಷ್ಟಪಟ್ಟರೆ ಇನ್ನು ಕೆಲವರು ಅದನ್ನು ದ್ವೇಷಿಸಬಹುದು. ಇದರ ರುಚಿಯು ಹಲವಾರು ಮಂದಿಗೆ ಇಷ್ಟವಾಗಬಹುದು. ಇನ್ನು ಕೆಲವು ಮಂದಿ ಸಿಕ್ಕಿದಾಗಲೆಲ್ಲಾ ಅದನ್ನು ಹೆಕ್ಕಿ ಬದಿಗಿಡಬಹುದು. ಆದರೆ ಇದನ್ನು ದ್ವೇಷಿಸುವವರು ಇನ್ನು ಮುಂದೆ ಕರಿಬೇವಿನ ಎಲೆಗಳನ್ನು ತಿನ್ನಲೇಬೇಕು. ಯಾಕೆಂದರೆ ಇದನ್ನು ಸೇವಿಸಿದರೆ ಅದರಿಂದ ಮೆದುಳಿನ ಶಕ್ತಿಯು ಹೆಚ್ಚಾಗುವುದು.

memory

ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ನೆನೆಪಿನ ಶಕ್ತಿ ಹೆಚ್ಚಿಸುವಂತಹ ಗುಣ ಇದರಲ್ಲಿ ಇದೆ ಎಂದು ನಿಮಗೆ ತಿಳಿದಿದೆಯಾ? ಇಲಿಗಳ ಮೇಲೆ ನಡೆಸಿರುವ ಸಂಶೋಧನೆ ಕೂಡ ಇದನ್ನು ಸಾಬೀತುಮಾಡಿದೆ. ಇದರ ಅಧ್ಯಯನ ವರದಿಯು 2009 ಮಾರ್ಚ್ ನಲ್ಲಿ ಫೈಟೋಥೆರಫಿ ರಿಸರ್ಚ್ ನಲ್ಲಿ ಪ್ರಕಟವಾಗಿದೆ. ಸಂಶೋಧನೆಯ ಅಂಗವಾಗಿ ಇಲಿಗಳಿಗೆ ಸ್ಕೊಪೊಲಾಮೈನ್ ಮತ್ತು ಡೈಯಾಜೆಪಮ್ ಔಷಧಿ ನೀಡಲಾಯಿತು. ಇದು ವಿಸ್ಮೃತಿ ಉಂಟುಮಾಡುತ್ತದೆ. ಇದರ ಬಳಿಕ ಇಲಿಗಳಿಗೆ ಶೇ. 2ರಷ್ಟು, ಶೇ. 4ರಷ್ಟು ಶೇ.8ರಷ್ಟು ಕರಿಬೇವಿನ ಎಲೆಗಳನ್ನು 30 ದಿನಗಳ ಕಾಲ ನೀಡಲಾಯಿತು. 

ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳು

ಜ್ಞಾಪಕಶಕ್ತಿಯ ಸಾಮರ್ಥ್ಯ, ಪೂರ್ಣ ಸೀರಮ್ ಕೊಲೆಸ್ಟ್ರಾಲ್ ಮಟ್ಟ ಮತ್ತು ಮೆದುಳಿನ ಕೊಲೆನ್ಸೆರಾಸ್ ಚಟುವಟಿಕೆ ಅರಿಯುವ ದೃಷ್ಟಿಯಿಂದ ಈ ಅಧ್ಯಯನ ಮಾಡಲಾಯಿತು. ಅಧ್ಯಯನದಲ್ಲಿ ಕಂಡುಕೊಂಡ ವಿಚಾರವೆಂದರೆ ಕರಿಬೇವಿನ ಎಲೆಗಳು ಇಲಿಗಳಲ್ಲಿ ಅದ್ಭುತವಾಗಿ ನೆನಪಿನ ಶಕ್ತಿ ಹೆಚ್ಚಿಸಿದೆ ಮತ್ತು ಮರೆವು ಕಡಿಮೆ ಮಾಡಿದೆ. ಆಹಾರವು ಮಿದುಳಿನ ಕೋಲಿನ್ಟೆಸ್ಟೇಸ್ ಚಟುವಟಿಕೆ ಮತ್ತು ಇಲಿಗಳ ಒಟ್ಟು ಕೊಲೆಸ್ಟ್ರಾಲ್ಮ ಟ್ಟವನ್ನು ಕಡಿಮೆ ಮಾಡಿತು. ಕರಿಬೇವಿನಲ್ಲಿ ಇರುವ ಕೋಲಿನರ್ಜಿಕ್ ಪರ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಗುಣದಿಂದ ಹೀಗೆ ಆಗಿದೆ ಎಂದು ಸಂಶೋಧನೆಗಳು ಕಂಡುಕೊಂಡಿವೆ.

ನೆನಪಿನ ಶಕ್ತಿ ಹೆಚ್ಚಿಸುವಂತಹ ಕರಿಬೇವಿನ ಗುಣಗಳ ಬಗ್ಗೆ ಭವಿಷ್ಯದಲ್ಲಿಯೂ ಸಂಶೋಧನೆಗಳು ನಡೆಯಲಿದೆ. ಇದು ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ರೋಗಗಳು ಬರುವುದರಿಂದ ಮೆದುಳನ್ನು ರಕ್ಷಿಸುವುದು. ಕರಿಬೇವಿನ ಎಲೆಯಿಂದ ಮಾಡುವ ಮೆದುಳಿಗೆ ಶಕ್ತಿ ನೀಡುವ ಚಹಾದ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಕೆಫಿನ್ ಯುಕ್ತ ಕಾಫಿ ಸೇವನೆ ಬದಲಿಗೆ ಈ ಚಹಾ ಸೇವನೆ ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದು.

curry leaves

ಬೇಕಾಗುವ ಸಾಮಗ್ರಿಗಳು

*ಒಂದು ಎಸಲು ಕರಿಬೇವಿನ ಎಲೆಗಳು

*2 ಕಪ್ ನೀರು

*ಒಂದು ತುಂಡು ಬೆಲ್ಲ

*ಒಂದು ಚಿಟಿಕೆ ಜೀರಿಗೆ

*ಒಂದು ಸಣ್ಣ ತುಂಡು ಶುಂಠಿ

*ಒಂದು ಚಿಟಿಕೆ ಕಪ್ಪು ಉಪ್ಪು

ತಯಾರಿಸುವ ವಿಧಾನ

1.ಜೀರಿಗೆಯನ್ನು ತವಾದಲ್ಲಿ ಹುರಿದುಕೊಂಡು ಅದರ ಹುಡಿ ತಯಾರಿಸಿಕೊಳ್ಳಿ.

2. ಅಡಿತಳದ ತವಾದಲ್ಲಿ ನೀರಿನೊಂದಿಗೆ ಕರಿಬೇವಿನ ಎಲೆಗಳಲ್ಲಿ ಕುದಿಸಿ.

3. ಬೆಲ್ಲದ ತುಂಡನ್ನು ಇದಕ್ಕೆ ಸೇರಿಸಿ.

4. ನೀರು ಸರಿಯಾಗಿ ಕುದಿದ ಬಳಿಕ ಗ್ಯಾಸ್ ನಂದಿಸಿ.

ಐದು ನಿಮಿಷ ಬಳಿಕ

curry leaves

5, ಇದನ್ನು ಒಂದು ಕಪ್ ಗೆ ಹಾಕಿ.

6. ಕಪ್ಪು ಉಪ್ಪನ್ನು ಸೇರಿಸಿ.

7. ಈ ಚಹಾಗೆ ಜೀರಿಗೆ ಹುಡಿ ಸಿಂಪಡಿಸಿ.

8. ಬಿಸಿಯಾಗಿರುವಾಗಲೇ ಕುಡಿಯಿರಿ.

ನಿಮಗೆ ರುಚಿ ಹಿಡಿಸದೆ ಇದ್ದರೆ ಬೆಲ್ಲ, ಶುಂಠಿ ಮತ್ತು ಜೀರಿಗೆ ಹಾಕಬೇಡಿ. ಕೇವಲ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ಚಹಾ ಮಾಡಬಹುದು. ಆದರೆ ಅದರ ರುಚಿ ಮಾತ್ರ ಮರೆಯಲು ಅಸಾಧ್ಯ.

English summary

Want sharper memory? Eat more curry leaves!

When it comes to curry leaves, people are divided. Some people love the earthy taste, fishing the leaves out of curries and gravies to relish on them. Some find the taste too overpowering and hate the thought of biting into a leave while eating. Curry leaf haters, you should seriously consider giving this herb a fighting chance, especially if you have memory issues! Here is a brain-boosting tea made of curry leaves that you can have every morning instead of your caffeine-infused beverages. Your brain will thank you.