For Quick Alerts
ALLOW NOTIFICATIONS  
For Daily Alerts

  ನೈಸರ್ಗಿಕ ಜ್ಯೂಸ್ ಸೇವಿಸಿ-ಥೈರಾಯ್ಡ್ ಸಮಸ್ಯೆಯಿಂದ ಮುಕ್ತರಾಗಿ

  By Arshad
  |

  ನಿಮ್ಮ ತೂಕ ಇಳಿಸುವ ಪ್ರಯತ್ನಗಳು ಫಲ ಕೊಡುತ್ತಿಲ್ಲವೇ? ಕೊಂಚ ಹೊತ್ತು ಮಲಗಿದರೂ ನಿದ್ದೆ ಆವರಿಸುತ್ತಿದೆಯೇ? ಸ್ನಾಯುಗಳಲ್ಲಿ ಬಲವೇ ಇಲ್ಲದಂತೆ ಅನ್ನಿಸುತ್ತಿದೆಯೇ? ಅಥವಾ ದಿನದ ಬಹುತೇಕ ಸಮಯದಲ್ಲಿ ಆಯಾಸ ಆವರಿಸಿರುತ್ತದೆಯೇ? ಮೆದುಳಿನ ಕ್ಷಮತೆ ಕಡಿಮೆಯಾಗಿದೆ ಎಂದು ಅನ್ನಿಸುತ್ತಿದೆಯೇ?  ತೂಕ ಹೆಚ್ಚಾದರೂ ಥೈರಾಯ್ಡ್ ಪರೀಕ್ಷೆ ಮಾಡಿಸಬೇಕೆ?

  ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಇದಕ್ಕೆ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕುಂದಿರುವುದು ಅಥವಾ hypothyroidism ಎಂಬ ತೊಂದರೆಯ ಕಾರಣವಿರಬಹುದು. ನಮ್ಮ ನಿತ್ಯದ ಚಟುವಟಿಕೆಗೆ ಅಗತ್ಯವಾದ ಜೀವರಾಸಾಯನಿಕ ಕ್ರಿಯೆ ಪೂರ್ಣಗೊಳ್ಳಲು ಥೈರಾಯ್ಡ್ ಗ್ರಂಥಿಯ ಪೂರ್ಣ ಪ್ರಮಾಣದ ಸ್ರವಿಸುವಿಕೆ ಅಗತ್ಯ. ಥೈರಾಯ್ಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

  ಒಂದು ವೇಳೆ ಈ ಪ್ರಮಾಣದಲ್ಲಿ ಕಡಿಮೆಯಾದರೆ ಜಡತೆ ಆವರಿಸುತ್ತದೆ. ಸಾಮಾನ್ಯವಾಗಿ ಈ ತೊಂದರೆಯನ್ನು ವೈದ್ಯರು ಕೆಲವು ಪರೀಕ್ಷೆಗಳ ಮೂಲಕ ಸ್ಪಷ್ಟಪಡಿಸುತ್ತಾರೆ. ಈ ತೊಂದರೆ ಇದೆ ಎಂದಾಕ್ಷಣ ಹೆಚ್ಚಿನವರು ದುಗುಡಕ್ಕೆ ಒಳಗಾಗುತ್ತಾರೆ ಹಾಗೂ ಈ ತೊಂದರೆಯಿಂದ ಆದಷ್ಟು ಬೇಗನೇ ಹೊರಬರಲು ಚಿಕಿತ್ಸೆಗೆ ಒಳಗಾಗಲು ಮುಂದಾಗುತ್ತಾರೆ. ಒಂದು ವೇಳೆ ನೀವು ಈ ಅನುಭವವನ್ನು ಪಡೆದಿದ್ದರೆ ಇಂದಿನ ಲೇಖನ ನಿಮಗೆ ಅತ್ಯಂತ ಉಪಯುಕ್ತವಾಗಲಿದೆ.  ಥೈರಾಯ್ಡ್ ನಿಯಂತ್ರಣಕ್ಕೆ 12 ಸೂಪರ್ ಫುಡ್

  ಥೈರಾಯ್ಡ್ ಗ್ರಂಥಿಯ ಕೆಲಸವನ್ನು ಉತ್ತಮಗೊಳಿಸುವ ಒಂದು ನೈಸರ್ಗಿಕ ಪೇಯವನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದ ಮತ್ತು ಸುರಕ್ಷಿತವಾದ ಪೇಯವಾಗಿದೆ. ಇದನ್ನು ತಯಾರಿಸಲು ಬೇಕಾಗಿರುವುದು ಎಂದರೆ ಕ್ಯಾರೆಟ್, ಬೀಟ್ರೂಟ್, ಅನಾನಾಸು, ಸೆಲೆರಿ ಎಲೆಗಳು ಮತ್ತು ಸೇಬು ಇಷ್ಟೇ. ಈ ಕಾಯಿಲೆಗೆ ಸೂಕ್ತ ಸಮಯದಲ್ಲಿ ಸೂಕ್ತ ಔಷಧಿಯನ್ನು ಸೇವಿಸುವುದು ತುಂಬಾ ಅಗತ್ಯ. ಅಲ್ಲದೇ ನಿಮ್ಮ ದೇಹಕ್ಕೆ ಒಗ್ಗುವಂತಹ ಆಹಾರಗಳನ್ನು ಮಾತ್ರವೇ ಸೇವಿಸಬೇಕಾದುದು ಸಹಾ ಇನ್ನೊಂದು ಅಗತ್ಯವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....  

  ಅಷ್ಟಕ್ಕೂ ಈ ಥೈರಾಯ್ಡ್ ಎಂದರೇನು?

  ಅಷ್ಟಕ್ಕೂ ಈ ಥೈರಾಯ್ಡ್ ಎಂದರೇನು?

  ಇದು ನಮ್ಮ ಕುತ್ತಿಗೆಯಲ್ಲಿ ಧ್ವನಿಪೆಟ್ಟಿಗೆಯನ್ನು ಸುತ್ತುವರೆದಿರುವಂತಿರುವ ಒಂದು ಗ್ರಂಥಿಯಾಗಿದ್ದು ನಮ್ಮ ದೇಹದ ಬೆಳವಣಿಗೆ ಮತ್ತು ಇತರ ಚಟುವಟಿಕೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಈ ಹಾರ್ಮೋನುಗಳ ಸ್ರವಿಕೆ ಏಕೆ ಅಗತ್ಯ? ನಮ್ಮ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡುವುದು, ಜೀರ್ಣಕ್ರಿಯೆ, ಶಕ್ತಿಯ ಬಳಕೆ ಇತ್ಯಾದಿಗಳಿಗೆಲ್ಲಾ ಅಗತ್ಯ ಪ್ರಮಾಣದ ಹಾರ್ಮೋನುಗಳನ್ನು ಸ್ರವಿಸುವುದು ಈ ಗ್ರಂಥಿಯ ಕೆಲಸ. ಅಲ್ಲದೇ ನಮ್ಮ ದೇಹದ ಅತಿಮುಖ್ಯ ಅಂಗಗಳಾದ ಹೃದಯ ಮತ್ತು ಯಕೃತ್‪ಗಳ ಕಾರ್ಯವನ್ನು ನಿರ್ವಹಿಸಲೂ ಥೈರಾಯ್ಡ್ ಸ್ರವಿಕೆ ಅವಶ್ಯಕವಾಗಿದ್ದು ಒಂದರ್ಥದಲ್ಲಿ ಈ ಅಂಗಗಳನ್ನು ನಿಯಂತ್ರಿಸುವ ಚಾಲಕನಾಗಿದೆ.

  ಕ್ಯಾರೆಟ್

  ಕ್ಯಾರೆಟ್

  ಇದರಲ್ಲಿ ಅತಿ ಹೆಚ್ಚಿನ ಪ್ರಮಾನದ ಆಂಟಿ ಆಕ್ಸಿಡೆಂಟುಗಳು ಮತ್ತು ಬೀಟಾ ಕ್ಯಾರೋಟಿನ್ ಇದ್ದು ಇವು ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನುಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಒಂದು ಮಧ್ಯಮ ಗಾತ್ರದ ಕ್ಯಾರೆಟ್ಟನ್ನು ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.

  ಬೀಟ್ರೂಟ್

  ಬೀಟ್ರೂಟ್

  ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಕರಗುವ ನಾರು ಇದ್ದು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ಮಧ್ಯಮ ಗಾತ್ರದ ಬೀಟ್ರೂಟನ್ನು ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.

  ಅನಾನಸ್

  ಅನಾನಸ್

  ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಉರಿಯೂತ ನಿವಾರಕ ಗುಣವನ್ನೂ ಹೊಂದಿದೆ. ಒಂದು ತಾಜಾ ಅನಾನಸ್ ಕತ್ತರಿಸಿ ಸುಮಾರು ಒಂದು ಕಪ್ ನಷ್ಟು ಚಿಕ್ಕ ತುಂಡುಗಳನ್ನು ಸಂಗ್ರಹಿಸಿ.

  ಸೇಬು

  ಸೇಬು

  ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಮತ್ತು ಪೆಕ್ಟಿನ್ ಎಂಬ ಪೋಷಕಾಂಶವಿದ್ದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಹಾಗೂ ಥೈರಾಯ್ಡ್ ಗ್ರಂಥಿಯ ಹಾರ್ಮೋನುಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಒಂದು ತಾಜಾ ಸೇಬುಹಣ್ಣನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ತುಂಡುಗಳಾಗಿಸಿ.

  ಸೆಲೆರಿ ಎಲೆಗಳು

  ಸೆಲೆರಿ ಎಲೆಗಳು

  ಈ ಎಲೆಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿದ್ದು ಥೈರಾಯ್ಡ್ ಗ್ರಂಥಿಯ ಸ್ರಾವವನ್ನು ನಿಯಂತ್ರಿಸಲೂ ಸಹಕರಿಸುತ್ತದೆ. ಎರಡು ದಂಟು ಸೆಲೆರಿ ಎಲೆಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ತುಂಡುಮಾಡಿಟ್ಟುಕೊಳ್ಳಿ.

  ತಯಾರಿಕಾ ವಿಧಾನ

  ತಯಾರಿಕಾ ವಿಧಾನ

  ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರಿನಲ್ಲಿ ಕೊಂಚ ನೀರಿನೊಂದಿಗೆ ಕಡೆಯಿರಿ. ಈ ಪೇಯವನ್ನು ದಿನಕ್ಕೊಂದು ಬಾರಿ ಕುಡಿಯಿರಿ. ಥೈರಾಯ್ಡ್ ಗ್ರಂಥಿಯ ಕ್ಷಮತೆ ಉತ್ತಮವಾಗಿದೆ ಎಂದು ವೈದ್ಯರು ತಿಳಿಸುವವರೆಗೂ ಕುಡಿಯುವುದನ್ನು ಮುಂದುವರೆಸಿ.

   

  English summary

  Ultimate Drink That Helps To Treat Thyroid Problem

  Today we will be discussing about one natural drink that will help in treating hypothyroidism. All that you need to prepare this drink is fresh carrot, beetroot, pineapple, celery and apple. Hence, getting the correct treatment at the right time is very important. In addition, taking care of the food that we eat is equally important in order to prevent this condition... have a look
  Story first published: Monday, March 20, 2017, 23:41 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more