For Quick Alerts
ALLOW NOTIFICATIONS  
For Daily Alerts

ಜ್ಞಾಪಕಶಕ್ತಿ, ಬುದ್ಧಿ ಶಕ್ತಿ ಹೆಚ್ಚಲು, ತಪ್ಪದೇ ಈ ಆಹಾರ ಪಥ್ಯ ಅನುಸರಿಸಿ

By Manu
|

ಪ್ರತಿಯೊಬ್ಬ ಮನುಷ್ಯನಿಗೂ ದೇವರು ಒಂದೇ ರೀತಿಯ ಹಾಗೂ ಅಷ್ಟೇ ಗಾತ್ರದ ಮೆದುಳು ನೀಡಿರುವನು. ಆದರೆ ಅದನ್ನು ಬಳಸಿಕೊಳ್ಳುವ ವಿಧಾನದಿಂದಾಗಿ ಕೆಲವರು ತುಂಬಾ ಜಾಣರಾಗಿರುವರು ಮತ್ತು ಇನ್ನು ಕೆಲವರು ಕಡಿಮೆ ಬುದ್ಧಿ ಹೊಂದಿರುವರು. ದೇವರು ಮೆದುಳು ಮಾತ್ರ ನೀಡಿರುವನು. ಅದರೊಳಗಿನ ಜ್ಞಾಪಕ ಶಕ್ತಿ, ಜ್ಞಾನ ಎಲ್ಲವನ್ನೂ ನಾವೇ ತುಂಬಬೇಕಾಗಿದೆ.

ಮೆದುಳಿಗೆ ಯಾವುದೇ ಪರ್ಯಾಯವಿಲ್ಲ. ಮೆದುಳಿನ ಶಕ್ತಿ ಹೆಚ್ಚಿಸುವಂತಹ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದನ್ನು ನಂಬುವುದು ಸುಲಭವಲ್ಲ. ಆದರೆ ನಾವು ತಿನ್ನುವಂತಹ ಆಹಾರ ಕ್ರಮದಲ್ಲಿ ಕೆಲವೊಂದು ಆಹಾರಗಳನ್ನು ಸೇರಿಸಿಕೊಂಡರೆ ಮೆದುಳಿನ ಶಕ್ತಿಯು ಹೆಚ್ಚಾಗಿ ನಮ್ಮ ಜ್ಞಾಪಕಶಕ್ತಿ ದ್ವಿಗುಣವಾಗುವುದರಲ್ಲಿ ಸಂಶಯವೇ ಇಲ್ಲ. ಮೆದುಳಿನ ಶಕ್ತಿ ಹೆಚ್ಚಿಸುವ ಆಹಾರದಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇಲ್ಲ. ಇದನ್ನು ಪರೀಕ್ಷಿಸಿ ನೋಡಿದರೆ ನಿಮಗೆ ತಿಳಿದುಬರುವುದು...

ಚಹಾ

ಚಹಾ

ಚಹಾ ಕುಡಿದರೆ ನೀವು ಗಣಿತದಲ್ಲಿ ತುಂಬಾ ಜಾಣನಾಗುತ್ತೀ ಎಂದು ನಮ್ಮ ಅಜ್ಜಂದಿರು ಹೇಳುತ್ತಾ ಇದ್ದದ್ದು ನಮಗೆ ತಿಳಿದಿದೆ. ಇದು ಸುಳ್ಳು ಮಾತು ಎಂದು ನಮಗನಿಸುತ್ತಾ ಇತ್ತು. ಆದರೆ ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಚಹಾದಲ್ಲಿ ತರಕಾರಿ ಅಥವಾ ಹಣ್ಣುಗಳಲ್ಲಿ ಇರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಚಹಾದಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ನ್ನು ಪಾಲಿಫಿನಾಲ್ ಎಂದು ಕರೆಯಲಾಗುವುದು. ಇದು ಮೆದುಳನ್ನು ಉತ್ತೇಜಿಸುವುದು. ಚಹಾದಲ್ಲಿ ಇರುವಂತಹ ಅಮಿನೋ ಆಮ್ಲವು ಮೆದುಳಿನಲ್ಲಿ ಪ್ರಶಾಂತ ಪರಿಣಾಮ ಉಂಟು ಮಾಡುವುದು. ಇದರಿಂದ ಸ್ಪಷ್ಟವಾಗಿ ಯೋಜಿಸಲು ಸಾಧ್ಯವಾಗುವುದು. ಶತಮಾನಗಳ ಹಿಂದೆ ಚೀನಾದಲ್ಲಿ ಗಿಡಗಳ ಎಲೆಗಳಿಂದ ಮಾಡಿದ ಬಿಸಿ ನೀರನ್ನು ಕುಡಿಯುತ್ತಾ ಇದ್ದರು. ಇದರಿಂದ ಮೆದುಳು ಚುರುಕಾಗುತ್ತಾ ಇತ್ತು. ಅದನ್ನೇ ನಾವಿಂದು ಚಹಾ ಎನ್ನುತ್ತೇವೆ.

ಗಿಡಮೂಲಿಕೆಗಳು

ಗಿಡಮೂಲಿಕೆಗಳು

ಜ್ಞಾಪಕಶಕ್ತಿಗಾಗಿ ರೋಸ್ಮೆರಿ ಎನ್ನುವ ಪದದ ಬಗ್ಗೆ ನೀವು ಯಾವತ್ತಾದರೂ ಕೇಳಿರಬಹುದು. ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುವ ವಿಚಾರವೆಂದು ರೋಸ್ಮೆರಿಯು ನೆನಪಿನ ಶಕ್ತಿ ಹೆಚ್ಚಿಸುವುದು. ಅದರಲ್ಲೂ ಇದು ಹಿಂದಿನ ಜನ್ಮದ ನೆನಪನ್ನು ಮರಳಿ ತರುವ ಶಕ್ತಿ ಹೊಂದಿದೆ. ರೋಸ್ಮೆರಿಯ ಸುವಾಸನೆಗೆ ಕಾರಣವಾಗುವ ಕಾರ್ನೋಸಿಕ್ ಆಮ್ಲವು ಮೆದುಳಿನ ಸ್ನಾಯುಗಳನ್ನು ಉತ್ತೇಜಿಸುವುದು. ಗಿನ್ಕೊ ಮತ್ತು ಗೊಟು ಕೊಲಾ ಎನ್ನುವ ಗಿಡಮೂಲಿಕೆಗಳನ್ನು ಆಫ್ರಿಕಾದಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಬಳಸುತ್ತಾರೆ.

ಹಣ್ಣುಗಳು

ಹಣ್ಣುಗಳು

ಕೆಂಪು ಮತ್ತು ನೀಲಿ ಬಣ್ಣವು ನಿಮಗೆ ಹೆಚ್ಚಿನ ಜ್ಞಾಪಕಶಕ್ತಿ ನೀಡಲಿದೆ. ಸೇಬು ಮತ್ತು ನೇರಳೆಹಣ್ಣು ಜ್ಞಾಪಕಶಕ್ತಿ ಹೆಚ್ಚಿಸಲು ಪ್ರಮುಖವಾದ ಹಣ್ಣುಗಳಾಗಿದೆ. ನಿಮಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆಯೆಂದು ಅನಿಸಿದರೆ ಸೇಬು ತಿನ್ನಲು ಮರೆಯಬೇಡಿ. ನೀಲಿ ಹಣ್ಣುಗಳು ಮತ್ತು ಬೆರ್ರಿಗಳು ಜ್ಞಾಪಕಶಕ್ತಿ ಹೆಚ್ಚಿಸುವ ಅಂಥೋಸಯಾನಿನ್ ಹೊಂದಿದೆ.

ತರಕಾರಿಗಳು

ತರಕಾರಿಗಳು

ನೀಲಿ, ಕೆಂಪು ಮತ್ತು ಹಸಿರು ತರಕಾರಿಗಳು ನೆನೆಪಿನ ಶಕ್ತಿ ಹೆಚ್ಚಿಸುವುದು. ಮೆದುಳಿನ ಶಕ್ತಿ ಹೆಚ್ಚಿಸಬೇಕೆಂದರೆ ನೀವು ಇಂದಿನಿಂದಲೇ ಬದನೆ ತಿನ್ನಲು ಆರಂಭಿಸಿ. ಬದನೆಯಲ್ಲಿ ಇರುವಂತಹ ನಾಸುನಿನ್ ಎನ್ನುವ ಪೋಷಕಾಂಶವು ಮೆದುಳನ್ನು ಆರೋಗ್ಯವಾಗಿಟ್ಟು ಮೆದುಳಿನ ಕೋಶಗಳಿಗೆ ಪೋಷಕಾಂಶ ಒದಗಿಸುವುದು. ಬೀಟ್ ರೂಟ್ ಮತ್ತು ಈರುಳ್ಳಿಯು ಮೆದುಳಿಗೆ ತುಂಬಾ ಒಳ್ಳೆಯದು. ತುಂಬಾ ಗಾಢ ಹಸಿರು ಬಣ್ಣ ಹೊಂದಿರುವಂತಹ ತರಕಾರಿಗಳಲ್ಲಿ ಫಾಲಿಕ್ ಆಮ್ಲವು ಇರುವುದರಿಂದ ಇದು ಮೆದುಳಿಗೆ ತುಂಬಾ ಒಳ್ಳೆಯದು. ವಿಸ್ಮೃತಿ ರೋಗಿಗಳಿಗೆ ಗಾಢ ಹಸಿರು ಬಣ್ಣದ ತರಕಾರಿಗಳನ್ನು ತಿನ್ನಲು ಸೂಚಿಸಲಾಗುತ್ತದೆ.

ಮೀನು

ಮೀನು

ಬಂಗಾಳಿಗಳು ತುಂಬಾ ಬುದ್ಧಿವಂತರಾಗಿರಲು ಅವರು ತಮ್ಮ ಆಹಾರ ಕ್ರಮದಲ್ಲಿ ಮೀನನ್ನು ಹೆಚ್ಚಾಗಿ ಬಳಸುವುದು ಕಾರಣವಂತೆ! ಮೀನಿನಲ್ಲಿ ಇರುವಂತಹ ಒಮೆಗಾ 3 ಆಮ್ಲದಿಂದಾಗಿ ಮೀನು ಮೆದುಳಿಗೆ ಹೇಳಿ ಮಾಡಿಸಿದಂತಹ ಆಹಾರ. ಮೀನಿನ ತೈಲದ ಪೋಷಕಾಂಶಗಳು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಕಾರಣ ಇದರ ಲಾಭಗಳು ಭರಿಸಲಾಗದ್ದು. ಈ ಆಹಾರ ಕ್ರಮ ಪಾಲಿಸಿಕೊಂಡು ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ.

English summary

Top Foods To Increase Memory!

There is no alternative or supplement for a good memory. It is that one special 'something' that will make the difference between who gets the corner cabin and who sits in the cubicle. Memory foods have the potential to give you one thing that no gym or spa can, good memory.
Story first published: Friday, September 22, 2017, 20:12 [IST]
X
Desktop Bottom Promotion