ಅಷ್ಟಕ್ಕೂ ನಿದ್ರಾಹೀನತೆ ಸಮಸ್ಯೆಗೆ ಕಾರಣವೇನು? ಸಂಶೋಧಕರು ಏನು ಹೇಳುತ್ತಾರೆ?

By: Suhani B
Subscribe to Boldsky

ನಿದ್ರೆ ಪ್ರತಿ ಮನುಷ್ಯನಿಗೆ ಅತೀ ಅವಶ್ಯಕ. ನಿದ್ದೆ ಸರಿಯಾಗಿಲ್ಲದಿದ್ದರೆ ಎಲ್ಲವೂ ಡೋಲಾಯಮಾನ. ಅನಿದ್ರೆ ಆಗಲು ಹಲವಾರು ಒತ್ತಡದ ಕಾರಣಗಳು ಇರಬಹುದು. ನಮ್ಮ ಹೆಚ್ಚಿನ ನಿದ್ರೆಯನ್ನು ನಿಯಂತ್ರಿಸುವುದು ಮೆದುಳು ಆಗಿದೆಯೆಂದು ನಮ್ಮಲ್ಲಿ ಹೆಚ್ಚಿನವರು ನಂಬುತ್ತಾರೆ. ಆದರೆ ಇದು ನಿಜವಲ್ಲ.

ಸ್ನಾಯುಗಳಲ್ಲಿರುವ ಪ್ರೋಟೀನ್‌ನಿಂದ ನಿದ್ರಾಹೀನತೆಯ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಸಂಶೋಧನೆ ಇತ್ತೀಚೆಗೆ ಜರ್ನಲ್ ಇಲೈಫ್ನಲ್ಲಿ ಪ್ರಕಟವಾಯಿತು. UT ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್, ಮೋರ್ಹೌಸ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಯೂನಿವರ್ಸಿಟಿ ಫ್ಲೋರಿಡಾ ನಡುವಿನ ಸಹಯೋಗದಲ್ಲಿ ನಡೆಸಿದ ಅಧ್ಯಯನವು ಸ್ನಾಯುನಲ್ಲಿನ ಒಂದು ಸಿರಾಡಿಯನ್ ಗಡಿಯಾರದ ಪ್ರೋಟೀನ್ - BMAL1 - ಹೇಗೆ ದೀರ್ಘ ನಿದ್ರೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ತೋರಿಸಿದೆ.

Sleep Disorder

ಮೆದುಳಿನಲ್ಲಿ ಪ್ರೋಟೀನ್ ಗಳ ಉಪಸ್ಥಿತಿ ಅಥವಾ ಗೈರುಹಾಜರಿಯು ನಿದ್ರಾಹೀನತೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ, ನಿಧಾನವಾಗಿ ಚೇತರಿಸಿಕೊಳ್ಳುವ ಸ್ನಾಯುಗಳಲ್ಲಿನ BMAL1 ನ ಹೆಚ್ಚಿನ ಮಟ್ಟವನ್ನು ಇಲಿಗಳ ಮೇಲೆ ಸಂಶೋಧನೆ ನಡೆಸಿದಾಗ ಕಂಡುಬಂದವು. ಸ್ನಾಯುದಿಂದ BMAL1 ಅನ್ನು ತೆಗೆದುಹಾಕುವುದರಿಂದ, ಆಳವಾದ ನಿದ್ರೆ, ಮತ್ತು ಚೇತರಿಸಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು ಮತ್ತು ಸಾಮಾನ್ಯ ನಿದ್ರೆಗೆ ಕಾರಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಯುಟಿ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್ನ ಡಾ. ಜೋಸೆಫ್ ಎಸ್. ತಕಾಹಾಶಿ ಈ ಸಂಶೋಧನೆಯು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ ಮತ್ತು ಜನರು ನಿದ್ರಾವಸ್ಥೆಯನ್ನು ನಿಯಂತ್ರಿಸುವ ರೀತಿಯಲ್ಲಿ ಬದಲಾಗಬಹುದು ಎಂದು ಹೇಳಿದರು.

English summary

This Is One Of The Causes For Sleep Disorder

The study which was conducted in collaboration between UT Southwestern Medical Center, Morehouse School of Medicine, and the University Florida showed how a circadian clock protein in the muscle - BMAL1 - regulates the length and manner of sleep.
Subscribe Newsletter