For Quick Alerts
ALLOW NOTIFICATIONS  
For Daily Alerts

  ನೆನಪಿಡಿ, ಯಾವತ್ತೂ ಖಾಲಿ ಹೊಟ್ಟೆಗೆ ಇದನ್ನೆಲ್ಲಾ ಮಾತ್ರ ಸೇವಿಸಬೇಡಿ!

  By Manu
  |

  ತಿನ್ನುವಂತಹ ಆಹಾರವು ನಮ್ಮ ಆರೋಗ್ಯ ಹಾಗೂ ದೇಹದ ಮೇಲೆ ಪ್ರಭಾವ ಬೀರುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಆರೋಗ್ಯಕರ ಆಹಾರ ಸೇವನೆ ಮಾಡಿದರೆ ನಮ್ಮ ದೇಹವು ಹೆಚ್ಚಿನ ಶಕ್ತಿ ಪಡೆಯುವುದು. ರೋಗಗಳು ಬರದೇ ಇರುವಂತೆ ತಡೆಯಲು ಬೇಕಾಗುವಂತ ಪ್ರತಿರೋಧಕ ಶಕ್ತಿಯು ನಾವು ತಿನ್ನುವ ಆಹಾರದಿಂದ ಲಭ್ಯವಾಗುವುದು. ಊಟದ ಮೊದಲು ಮತ್ತು ಊಟವಾದ ಬಳಿಕ ಯಾವ ಆಹಾರಗಳನ್ನು ಸೇವಿಸಬೇಕು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ.

  ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!

  ಆದರೆ ಬೆಳಿಗ್ಗೆ ನಿದ್ರೆಯಿಂದ ಎದ್ದ ಬಳಿಕ ಯಾವ ರೀತಿ ಆಹಾರ ಸೇವನೆ ಮಾಡಬೇಕು ಎನ್ನುವ ಬಗ್ಗೆ ಹಲವಾರು ರೀತಿಯ ವಿಡಿಯೋಗಳು ನಿಮಗೆ ಇಂಟರ್‌ನೆಟ್‌ನಲ್ಲಿ ಲಭ್ಯವಾಗಬಹುದು. ಆದರೆ ಇದು ಎಷ್ಟು ಸುರಕ್ಷಿತ ಎಂದು ಮೊದಲು ತಿಳಿದುಕೊಳ್ಳಬೇಕು. ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅನಾರೋಗ್ಯಕರ ಆಹಾರ ಸೇವನೆ ಮಾಡುತ್ತಾರೆ.

  ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಸೇವನೆ ದೇಹಕ್ಕೆ ಆರೋಗ್ಯಕಾರಿ ಹೇಗೆ?

  ಇದರಿಂದ ತಕ್ಷಣ ಪರಿಣಾಮವಾಗದೆ ಇದ್ದರೂ ಮುಂದೆ ಇದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬಾರದ ಆಹಾರಗಳ ಪಟ್ಟಿಯನ್ನು ಬೋಲ್ಡ್ ಸ್ಕೈ ನಿಮ್ಮ ಮುಂದಿಟ್ಟಿದೆ.... ಮುಂದೆ ಓದಿ 

  ಖಾಲಿ ಹೊಟ್ಟೆಯಲ್ಲಿ ಔಷಧಿ ಸೇವನೆ...

  ಖಾಲಿ ಹೊಟ್ಟೆಯಲ್ಲಿ ಔಷಧಿ ಸೇವನೆ...

  ಖಾಲಿ ಹೊಟ್ಟೆಯಲ್ಲಿ ಉರಿಯೂತ ಶಮನಕಾರಿ ಔಷಧಿ ಸೇವಿಸಲೇಬಾರದು. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಯಾಗಬಹುದು. ಇದರಿಂದ ಗ್ಯಾಸ್ಟ್ರಿಕ್ ರಕ್ತಸ್ರಾವವಾಗಬಹುದು ಮತ್ತು ಔಷಧಿಯ ಪರಿಣಾಮವು ಕಡಿಮೆಯಾಗುವುದು.

  ಕಾಫಿ ಸೇವನೆ

  ಕಾಫಿ ಸೇವನೆ

  ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ಆಮ್ಲದ ಉತ್ಪಾದನೆಯು ಹೆಚ್ಚುವುದು. ಇದರಿಂದ ಎದೆಯುರಿ ಮತ್ತು ಇತರ ಕೆಲವೊಂದು ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸಲೇಬಾರದು.

  ಮೊಸರು

  ಮೊಸರು

  ಖಾಲಿಹೊಟ್ಟೆಯಲ್ಲಿ ಬರೆಯ ಮೊಸರನ್ನೂ ಸೇವಿಸಬಾರದು. ಏಕೆಂದರೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಖಾಲಿ ಹೊಟ್ಟೆಯಲ್ಲಿ ಜಠರದಲ್ಲಿರುವ ಜೀರ್ಣರಸದೊಂದಿಗೆ ಬೆರೆತು ಇನ್ನಷ್ಟು ಆಮ್ಲೀಯವಾಗಿಸುತ್ತವೆ. ಇದು ಹೊಟ್ಟೆಯ ಪದರವನ್ನು ಇನ್ನಷ್ಟು ಸುಡಲು ಕಾರಣವಾಗುತ್ತದೆ.

  ಬಾಳೆಹಣ್ಣು

  ಬಾಳೆಹಣ್ಣು

  ಇದೊಂದು ಉತ್ತಮ ಆಹಾರವಾದರೂ ಖಾಲಿಹೊಟ್ಟೆಯಲ್ಲಿ ಸೇವಿಸಲು ತಕ್ಕುದಲ್ಲ. ಏಕೆಂದರೆ ಇದರಲ್ಲಿರುವ ಮೆಗ್ನೀಶಿಯಂ ತಕ್ಷಣವೇ ರಕ್ತದಲ್ಲಿರುವ ಕ್ಯಾಲ್ಸಿಯಂ ನೊಂದಿಗೆ ಬೆರೆತು ಸಮತೋಲನವನ್ನು ಏರುಪೇರಾಗಿಸುತ್ತದೆ.

  ಖಾರವಾದ ಆಹಾರಗಳು

  ಖಾರವಾದ ಆಹಾರಗಳು

  ಖಾಲಿಹೊಟ್ಟೆಯಲ್ಲಿ ನಮ್ಮ ಜೀರ್ಣರಸಗಳು ಹೊಟ್ಟೆಯ ಒಳಪದರವನ್ನು ಸುಡುತ್ತಿರುತ್ತವೆ. ಈ ಆಹಾರದ ಸೇವನೆಯ ಮೂಲಕ ಸುಡುವುದು ಇನ್ನಷ್ಟು ಹೆಚ್ಚುತ್ತದೆ. ಪರಿಣಾಮ, ಹೊಟ್ಟೆನೋವು, ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ.

   ಚೂಯಿಂಗ್ ಗಮ್

  ಚೂಯಿಂಗ್ ಗಮ್

  ಖಾಲಿ ಹೊಟ್ಟೆಯಲ್ಲಿ ಚೂಯಿಂಗ್ ಗಮ್ ಸೇವನೆ ಮಾಡಿದರೆ ಅದರಿಂದ ಉತ್ಪತ್ತಿಯಾಗುವ ಜೀರ್ಣಕ್ರಿಯೆ ಆಮ್ಲವು ಹೊಟ್ಟೆಯಲ್ಲಿನ ಪದರ ಧ್ವಂಸ ಮಾಡುವುದು. ಇದರಿಂದ ಜಠರದಲ್ಲಿ ಉರಿ ಕಾಣಿಸಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಮಾಡಲೇಬಾರದು.

  ಆಲ್ಕೋಹಾಲ್ ಸೇವನೆ

  ಆಲ್ಕೋಹಾಲ್ ಸೇವನೆ

  ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೆ ಆಲ್ಕೋಹಾಲ್ ಹೀರಿಕೊಳ್ಳುವುದು ಶೇ.2ರಷ್ಟು ಹೆಚ್ಚಾಗುವುದು. ಆಲ್ಕೋಹಾಲ್ ವಿಭಜನೆಗೊಳ್ಳುವುದು ನಿಧಾನವಾಗಬಹುದು ಮತ್ತು ಇದರಿಂದ ಗಂಭೀರ ನಶೆ ಏರಬಹುದು. ಇದು ಖಾಲಿ ಹೊಟ್ಟೆಯಲ್ಲಿ ಮಾಡಲೇಬಾರದ ಕೆಲಸಗಳು.

  ನಿದ್ರಿಸಲು ಹೋಗುವುದು

  ನಿದ್ರಿಸಲು ಹೋಗುವುದು

  ಹಸಿವು ಮತ್ತು ಗ್ಲೂಕೋಸ್ ಮಟ್ಟವು ಕಡಿಮೆಯಾಗುವ ಕಾರಣದಿಂದ ನಿದ್ರಾಹೀನತೆ ಕಾಣಿಸಿಕೊಳ್ಳಬಹುದು. ನಿದ್ರಾಹೀನತೆಯಿಂದಾಗಿ ಹಸಿವಿನ ಹಾರ್ಮೋನುಗಳು ಹೆಚ್ಚಾಗಬಹುದು.

  English summary

  Things You Should Never Do On An Empty Stomach

  You are what you eat! Yes, that's a pretty well-known fact. But what we do before a meal and when we eat a meal is also very important. Most of us have a daily routine to follow when the alarm clock goes off in the morning. Whether it's turning on the coffee pot, going for a morning run or rushing to get ready for work, there are certain things that you must avoid doing on an empty stomach.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more