For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಕಾಮಾಸಕ್ತಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರಗಳು

By Arshad
|

ದಂಪತಿಗಳ ನಡುವೆ ಬಾಂಧವ್ಯ ಉತ್ತಮವಾಗಿರಲು ಆರೋಗ್ಯಕರ ಲೈಂಗಿಕ ಜೀವನವೂ ತುಂಬ ಅಗತ್ಯವೆಂಬುದನ್ನು ನಾವೆಲ್ಲರೂ ಒಪ್ಪಲೇಬೇಕು. ಈ ಜೀವನವನ್ನು ಉತ್ತಮಗೊಳಿಸಲು ಏನು ಬೇಕು ಏನು ಬೇಡವೆಂಬುದನ್ನು ಸ್ಪಷ್ಟವಾಗಿ ತಿಳಿಸಿ ಪಡೆಯುವುದರಲ್ಲಿ ಸಂಕೋಚವನ್ನು ಪಡಬಾರದು. ಅಷ್ಟಕ್ಕೂ ಮನಮೆಚ್ಚಿದ ಸಂಗಾತಿಯಲ್ಲಿ ಸಂಕೋಚವೇಕೆ?

ದಾಂಪತ್ಯ ಸುಖವನ್ನು ಪರಿಪೂರ್ಣವಾಗಿಸಬೇಕಾದರೆ ಪರಸ್ಪರ ಆಕರ್ಷಣೆ, ಆತ್ಮೀಯ ಅಪ್ಪುಗೆ, ಮುನ್ನಲಿವುಗಳ ಬಳಿಕ ಸಮಾಗಮ ಎಲ್ಲವನ್ನೂ ಸರಿಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಪುರುಷರಲ್ಲಿ, ಲೈಂಗಿಕ ಬಯಕೆ ಅಥವಾ ಕಾಮಾಸಕ್ತಿ ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲ, ಪುರುಷರಲ್ಲಿ ಲೈಂಗಿಕ ಶಕ್ತಿ ಮತ್ತು ಶೀಘ್ರ ಸ್ಖಲನದಂತಹ ತೊಂದರೆಗಳು ದಾಂಪತ್ಯದಲ್ಲಿ ಅತೃಪ್ತಿಯುಂಟುಮಾಡಬಹುದು.

ಸಮಾಗಮದ ನಡುವೆ ಕೆಲವು ಪುರುಷರಲ್ಲಿ ಉದ್ರೇಕವೇ ಉಂಟಾಗದಿರಬಹುದು. ಅಥವಾ ಅತಿ ಕ್ಷಿಪ್ರವಾಗಿ ಉದ್ರೇಕತೆ ಇಳಿದುಹೋಗಬಹುದು. ವಿಶೇಷವಾಗಿ ಸಮಾಗಮದ ನಡುವೆ ಇದು ದಂಪತಿಗಳಿಬ್ಬರಿಗೂ ತುಂಬಾ ನಿರಾಶಾದಾಯಕವಾಗಿ ಪರಿಣಮಿಸಬಹುದು. ಏಕೆಂದರೆ ಉದ್ರೇಕವಿಲ್ಲದೇ ಯಾವುದೇ ಪುರುಷ ತನ್ನ ಸಂಗಾತಿಯನ್ನು ತೃಪ್ತಿಪಡಿಸಲಾರರು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಉದ್ರೇಕವಾಗದೇ ಇರಲು ಕಾಮಾಸಕ್ತಿಯ ಕೊರತೆ ಪ್ರಮುಖ ಕಾರಣವಾಗಿದೆ. ಕಾಮಾಸಕ್ತಿ ಉಂಟಾದರೆ ಮಾತ್ರವೇ ಪುರುಷರ ಮೆದುಳಿನಿಂದ ಪುರುಷಾಂಗದಲ್ಲಿ ರಕ್ತ ತುಂಬಿಸಲು ಸಂಕೇತ ನೀಡುವ ಸೂಚನೆಗಳು ಹೊರಡಲು ಸಾಧ್ಯ. ಈ ಸೂಚನೆಗಳನ್ನು ದೇಹದಲ್ಲಿ ಸ್ರವಿಸುವ ಕೆಲವು ರಸದೂತಗಳು ನಿರ್ವಹಿಸುತ್ತವೆ.

ಕಾಮಸುಖವನ್ನು ಅನುಭವಿಸಲು ದಂಪತಿಗಳಿಬ್ಬರಲ್ಲಿಯೂ ಸಮಾನವಾದ ಕಾಮಾಸಕ್ತಿ ಇರುವುದು ಅವಶ್ಯ. ಒಂದು ವೇಳೆ ಮಹಿಳೆಯಲ್ಲಿ ಕಾಮಾಸಕ್ತಿಯ ಕೊರತೆಯಿದ್ದರೆ ಆಕೆಯ ಜನನಾಂಗಗಳಲ್ಲಿ ಸೂಕ್ತ ಪ್ರಮಾಣದ ನೈಸರ್ಗಿಕ ಸ್ರಾವವಾಗದೇ ಸಮಾಗಮ ನೋವಿನಿಂದ ಕೂಡಿರುವಂತೆ ಮಾಡುತ್ತದೆ. ಈ ಆಸಕ್ತಿಯನ್ನು ಹೆಚ್ಚಿಸಲು ಆರೋಗ್ಯಕರ ಆಹಾರ, ಒತ್ತಡರಹಿತ ಜೀವನ, ನಿತ್ಯವೂ ವ್ಯಾಯಮದಲ್ಲಿ ತೊಡಗುವುದು ಹಾಗೂ ದಂಪತಿಗಳ ನಡುವೆ ವಿಶ್ವಾಸ ಮೊದಲಾದವು ಕಾಮಾಸಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿವೆ. ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಕೆಲವು ಆಹಾರಗಳು ನೆರವಾಗುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಕಲ್ಲಂಗಡಿ

ಕಲ್ಲಂಗಡಿ

ಇದರಲ್ಲಿ ಅತಿಹೆಚ್ಚು ಪ್ರಮಾಣದ ನೀರು ಇದ್ದರೂ ಉಳಿದ ಪೋಷಕಾಂಶಗಳಲ್ಲಿ ಸಿಟ್ರುಲೈನ್ ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ವಿಶೇಷವಾಗಿ ಜನನಾಂಗಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ಹೆಚ್ಚಿನ ರಕ್ತಪೂರೈಕೆ ಸಾಧ್ಯವಾಗುತ್ತದೆ ಹಾಗೂ ವಯಾಗ್ರಾದಷ್ಟೇ ಪರಿಣಾಮಕಾರಿಯಾಗಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ.

ಒಣಫಲಗಳು

ಒಣಫಲಗಳು

ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬಹಳ ಹಿಂದಿನಿಂದಲೂ ಭಾರತದಲ್ಲಿ ನೈಸರ್ಗಿಕ ಕಾಮೋತ್ತೇಜಕವಾಗಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತಾ ಬರಲಾಗಿದೆ. ಇದೇ ಕಾರಣಕ್ಕೆ ಬೆಳ್ಳುಳ್ಳಿಗೆ 'ಗರ್ಮಿ ಸಾಮಾನು' ಎಂದೂ ಹಳ್ಳಿಗಳಲ್ಲಿ ಕರೆಯುತ್ತಾರೆ. ಇದು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾಗಿ ಕಾಮೋತ್ತೇಜಕತೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಜನನಾಂಗಗಳಿಗೆ ರಕ್ತಪೂರೈಕೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಜನನಾಂಗಗಳ ರಕ್ತನಾಳಗಳನ್ನು ಸಡಿಲಗೊಳಿಸಿ ಜನನಾಂಗಗಳಲ್ಲಿ ಹೆಚ್ಚು ರಕ್ತಪೂರೈಕೆ ಒದಗಿಸುವ ಮೂಲಕ ಉದ್ರೇಕತೆಯನ್ನು ಹೆಚ್ಚಿಸುತ್ತದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನು ಇದ್ದು ವಿಶೇಷವಾಗಿ ಪುರುಷರಲ್ಲಿ ಕಾಮಾಸಕ್ತಿ ಹಾಗೂ ಪೌರುಷವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ L-arginine ಎಂಬ ಪೋಷಕಾಂಶ ಪುರುಷರಲ್ಲಿ ಟೆಸ್ಟಾಸ್ಟೆರಾನ್ ರಸದೂತವನ್ನು ಹೆಚ್ಚು ಉತ್ಪಾದಿಸಿ ಕಾಮಾಸಕ್ತಿ ಹೆಚ್ಚಲೂ ನೆರವಾಗುತ್ತದೆ.

ಕೇಸರಿ

ಕೇಸರಿ

ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

ಲೆಟ್ಯೂಸ್

ಲೆಟ್ಯೂಸ್

ಇದು ಹಸಿಯಾಗಿ ಸೇವಿಸಬಹುದಾದ ಎಲೆಗಳಾಗಿದ್ದು ಜೀರ್ಣಕ್ರಿಯೆಗೆ ಅಗತ್ಯವಾದ ಕರಗದ ನಾರು ಒದಗಿಸುವ ಜೊತೆಗೇ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ, ತನ್ಮೂಲಕ ಕಾಮಾಸಕ್ತಿಯನ್ನೂ ಹೆಚ್ಚಿಸುತ್ತದೆ.

English summary

These Foods Can Help Boost Men’s Libido & Increase Stamina In Bed!

Both men and women need to have a healthy libido to engage and enjoy sex. If a woman does not have a healthy libido, then she will not be able to attain a natural lubrication in the vagina, which may make sex less enjoyable and even painful for her. A healthy diet, reduced stress and daily exercise can help boost libido. There are certain foods as well that can increase a man's libido, check them out, here.
X
Desktop Bottom Promotion