For Quick Alerts
ALLOW NOTIFICATIONS  
For Daily Alerts

ಪಪ್ಪಾಯಿ ಬೀಜ+ಜೇನು, ಬರೋಬ್ಬರಿ ಏಳು ರೋಗಕ್ಕೆ ಮದ್ದು....

ಪಪ್ಪಾಯಿ ಹಣ್ಣು ಎಂದರೇ ನಮ್ಮಲ್ಲಿ ಹೆಚ್ಚಿನವರಿಗೆ ಇಷ್ಟವಿಲ್ಲದ ಹಣ್ಣು. ಅದರಲ್ಲೂ ಪಪ್ಪಾಯಿಯ ಬೀಜವೇ? ಇಸ್ಸೀ.. ಎಂದೇ ಮೂಗು ಮುರಿಯಬಹುದು... ಆದರೆ ಇದರಲ್ಲಿರುವ ಪ್ರಯೋಜನಗಳ ಬಗ್ಗೆ ಕೇಳಿದರೆ ಅಚ್ಚರಿಪಡೆಯುವಿರಿ!

By Arshad
|

ಆಧುನಿಕ ವೈದ್ಯವಿಜ್ಞಾನ ಮತ್ತು ಔಷಧಿಗಳನ್ನು ಕಂಡುಹಿಡಿಯುವ ಮೊದಲು ಹಲವಾರು ಕಾಯಿಲೆಗಳ ಚಿಕಿತ್ಸೆಗೆ ನಮ್ಮ ಹಿರಿಯರು ನೈಸರ್ಗಿಕ ಸಾಮಾಗ್ರಿಗಳಲ್ಲಿಯೇ ಔಷಧಿಗಳನ್ನು ಕಂಡುಕೊಳ್ಳುತ್ತಿದ್ದರು. ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಿರುವಂತೆ ಹಿಂದಿನ ದಿನಗಳಲ್ಲಿ ಮಾರಕ ಕ್ಯಾನ್ಸರ್ ಮತ್ತು ಏಡ್ಸ್ ನಂತಹ ಕಾಯಿಲೆಗಳೇ ಇರಲಿಲ್ಲ ಅಥವಾ ಅತ್ಯಪರೂಪವಾಗಿತ್ತು. ಏಕೆಂದರೆ ಆ ದಿನಗಳಲ್ಲಿ ಜನರು ಅತಿ ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಅನಿವಾರ್ಯ ದೈಹಿಕ ಶ್ರಮದಿಂದಾಗಿ ಉತ್ತಮ ಆರೋಗ್ಯವನ್ನೂ ಪಡೆದಿರುತ್ತಿದ್ದರು. ಪಪ್ಪಾಯಿ ಬೀಜದಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಪವರ್

ನಮ್ಮ ಅಡುಗೆ ಸಾಮಾಗ್ರಿ ಮತ್ತು ಹಿತ್ತಲ ಗಿಡಗಳಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಉದಾರಹಣೆಗೆ ಪಪ್ಪಾಯಿ ಹಣ್ಣಿನ ಬೀಜವನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿದರೆ ಕನಿಷ್ಠ ಏಳು ಬಗೆಯ ಕಾಯಿಲೆಗಳಿಗೆ ಔಷಧಿಯಾಗುತ್ತದೆ. ಆಹಾ ಜೇನು ತುಪ್ಪವೇ, ಏನು ನಿನ್ನ ಹನಿಗಳ ಲೀಲೆ..

ಇದಕ್ಕಾಗಿ ಎರಡು ಚಿಕ್ಕ ಚಮಚದಷ್ಟು ಪಪ್ಪಾಯಿ ಬೀಜಗಳನ್ನು ಒಂದು ಚಿಕ್ಕಚಮಚ ಜೇನಿನೊಂದಿಗೆ ಬೆರೆಸಿ ಕನಿಷ್ಠ ಒಂದು ತಿಂಗಳವರೆಗೆ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಅದ್ಭುತವಾದ ಪ್ರಯೋಜನಗಳನ್ನೇ ಪಡೆಯಬಹುದು. ಇವು ಯಾವುವು ಎಂಬುದನ್ನು ಈಗ ನೋಡೋಣ....

ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ

ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ

ಇದರಲ್ಲಿರುವ ಕೆಲವು ಆಮ್ಲಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಹೊಟ್ಟೆ ಮತ್ತು ಇತರ ಪ್ರಮುಖ ಅಂಗಗಳಲ್ಲಿರುವ ಕಲ್ಮಶಗಳನ್ನು ಹೊರಹಾಕಿ ಸ್ವಚ್ಛಗೊಳಿಸುತ್ತದೆ.

ಹೊಟ್ಟೆಯ ಹುಳಗಳನ್ನು ಕೊಲ್ಲುತ್ತದೆ

ಹೊಟ್ಟೆಯ ಹುಳಗಳನ್ನು ಕೊಲ್ಲುತ್ತದೆ

ಹೊಟ್ಟೆಯಲ್ಲಿ ಹುಳವಾಗಿದೆ ಎಂಬ ಅನುಮಾನವಿದ್ದರೆ ಪಪ್ಪಾಯಿ ಬೀಜ ಅತ್ಯುತ್ತಮವಾದ ಆಯ್ಕೆಯಾಗಿದೆ. ಕ್ರಿಮಿಗಳ ಉಪಟಳದಿಂದ ಹೊಟ್ಟೆಯಲ್ಲಿ ಗುಡುಗುಡು, ಅಜೀರ್ಣತೆ, ಆಮ್ಲೀಯತೆ ಮೊದಲಾದ ತೊಂದರೆ ಇದ್ದವರಿಗೆ ಈ ಮಿಶ್ರಣದ ಸೇವನೆಯಿಂದ ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ಸಾಯಿಸಿ ಹೊರಹಾಕಲು ಸಾಧ್ಯವಾಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಇದರಲ್ಲಿ ಕೆಲವು ಆರೋಗ್ಯಕರ ಮೇದಸ್ಸುಗಳು, ಪೊಟ್ಯಾಶಿಯಂ ಹಾಗೂ ಇತರ ಪೋಷಕಾಂಶಗಳಿದ್ದು ಇವು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ

ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ

ಈ ಮಿಶ್ರಣದಲ್ಲಿ ಉತ್ತಮ ಪ್ರಮಾಣದಲ್ಲಿರುವ ಪ್ರೋಟೀನುಗಳು ನಿಯಮಿತ ಸೇವನೆಯ ಮೂಲಕ ಸ್ನಾಯುಗಳು ಬೆಳೆಯಲು ಸಹಕರಿಸುತ್ತದೆ. ಸೂಕ್ತ ವ್ಯಾಯಾಮದ ಮೂಲಕ ಮಾಂಸಖಂಡಗಳು ಹುರುಗಟ್ಟುತ್ತವೆ.

ವೈರಲ್ ಜ್ವರದ ವಿರುದ್ಧ ಹೋರಾಡುತ್ತದೆ

ವೈರಲ್ ಜ್ವರದ ವಿರುದ್ಧ ಹೋರಾಡುತ್ತದೆ

ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಫ್ಲೂ ಜ್ವರ ಮೊದಲಾದ ವೈರಸ್ ಆಧಾರಿತ ಕಾಯಿಲೆ ಮತ್ತು ಸೋಂಕುಗಳು ಉಂಟಾಗದಂತೆ ರಕ್ಷಿಸುತ್ತದೆ.

ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ

ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ

ಇದರಲ್ಲಿರುವ ಕೆಲವು ಕಿಣ್ವಗಳು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಿ ಸಂತಾನಫಲ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಸಂಧಿವಾತಕ್ಕೂ ಉತ್ತಮ

ಸಂಧಿವಾತಕ್ಕೂ ಉತ್ತಮ

ಇದರ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಗುಣಪಡಿಸಲು ಮತ್ತು ಮೂಳೆಗಳು ಹೆಚ್ಚಿನ ದೃಢತೆ ಪಡೆಯಲು ನೆರವಾಗುತ್ತದೆ.ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

English summary

Start Eating Papaya Seeds with Honey Right Now!

Did you know that the combination of papaya seeds and honey has over 7 health benefits? Just scoop out 2 teaspoons of papaya seeds from the fruit, add a teaspoon of honey to it, mix well and consume every morning on an empty stomach, for at least a month. Have a look at some of the amazing health benefits of this natural mixture, here.
X
Desktop Bottom Promotion