Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಯ್ಯೋ! ಹೌದಾ? ಅಕ್ಕಿಯಿಂದಲೂ ಹಲವಾರು ಕಾಯಿಲೆ ಬರುತ್ತದೆಯಂತೆ!!
ದಿನವಿಡೀ ಎಷ್ಟೇ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ತಿಂದರೂ ಸರಿ. ಎರಡು ತುತ್ತು ಅನ್ನ ಊಟ ಮಾಡಿದಷ್ಟು ಸಮಾಧಾನ ಇರುವುದಿಲ್ಲ. ಯಾಕೆಂದರೆ ಅನ್ನದಲ್ಲಿ ಅಂತಹ ವಿಶೇಷ ಶಕ್ತಿಯಿದೆ. ಜೊತೆಗೆ ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಅದು ಎಂತಹದೇ ಕಾಯಿಲೆ ಇರಲಿ, ಪಥ್ಯವಿರಲಿ, ದಿನದಲ್ಲಿ ಒಂದು ಹೊತ್ತು ಅನ್ನ ಊಟ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ಅನ್ನವನ್ನು ಇಷ್ಟ ಪಡುವವರಿಗೆಲ್ಲಾ ಒಂದು ಅಚ್ಚರಿಯ ವಿಷಯ ಇಲ್ಲಿದೆ. ಅದೇನೆಂದರೆ " ಅನ್ನ ತಿಂದರೆ ಕ್ಯಾನ್ಸರ್ ಬರುವುದು''!! ಎನ್ನುವುದು.
ಅಯ್ಯೋ! ಹೌದಾ? ಎನ್ನುವ ಪ್ರಶ್ನೆ ಮನಸ್ಸಿಗೆ ಕಾಡಿದರೆ ಅದು ನಿಜ. ಬೆಳೆಯ ಉತ್ತಮ ಫಸಲಿಗಾಗಿ, ಕೀಟಗಳ ಕಾಟ ತಪ್ಪಿಸಲು ಹಾಗೂ ಕಲುಷಿತ ನೀರಿನ ನೀರಾವರಿಗಳಿಂದ ಬೆಳೆಯು ವಿಷದಿಂದ ಕೂಡಿರುತ್ತದೆ. ಇದರ ಪರಿಣಾಮವಾಗಿ ಕ್ಯಾನ್ಸರ್ ಎನ್ನುವ ಮಾರಿಗೆ ಬಲಿಯಾಗಬೇಕಾಗುವುದು. ಈ ರೀತಿಯಲ್ಲಿ ಬೆಳೆದ ಅಕ್ಕಿಯನ್ನು ನಿತ್ಯವೂ ಸೇವಿಸುತ್ತಿದ್ದರೆ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಹೆಚ್ಚುತ್ತದೆ ಎನ್ನಲಾಗುತ್ತಿದೆ. ಈ ವಿಷಯದ ಇನ್ನಷ್ಟು ಮಾಹಿತಿಗೆ ಮುಂದೆ ಓದೋಣ ಬನ್ನಿ....

ವಿಶೇಷ ಅಧ್ಯಯನ
ಇಂಗ್ಲೆಂಡ್‍ನ ಕ್ವೀನ್ಸ್ ವಿಶ್ವವಿದ್ಯಾಲಯ ಬೆಲ್ಫಾಸ್ಟ್ ನಡೆಸಿದ ಅಧ್ಯಯನದ ಪ್ರಕಾರ, ಮಣ್ಣಿನಲ್ಲಿ ಇರುವ ವಿಷಕಾರಿ ಮತ್ತು ಕೀಟನಾಶಕಗಳ ರಾಸಾಯನಿಕವು ಲಕ್ಷಾಂತರ ಜನರ ಆರೋಗ್ಯ ಕೆಡಿಸುವ ಸಾಧ್ಯತೆ ಇದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ವಿವಿಧ ರೋಗಗಳಿಗೆ ಆಹ್ವಾನ
ಕ್ರಿಮಿನಾಶಕಗಳ ಹಾನಿಕಾರಕ ಅಂಶವು ವ್ಯಕ್ತಿಯ ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ. ಇದನ್ನು ರೈಸ್ ಆರ್ಸೆನಿಕ್ ವಿಷ ಎಂದು ಕರೆಯಲಾಗುವುದು.

ಆರ್ಸೆನಿಕ್ ಎಂದರೇನು?
ಆರ್ಸೆನಿಕ್ ಎಂದರೆ ಖನಿಜಗಳಲ್ಲಿ ನೈಸರ್ಗಿಕವಾಗಿ ಇರುವ ಒಂದು ರಾಸಾಯನಿಕ ಅಂಶ. ಇದು ಗಂಧಕ ಮತ್ತು ಲೋಹಗಳ ಸಂಯೋಜನೆಯಿಂದ ಉಂಟಾಗುವ ಪದಾರ್ಥ(ರಾಸಾಯನಿಕ ಅಂಶ). ಇದನ್ನು ಕೀಟನಾಶಕ ಉತ್ಪಾದನಾ ಘಟಕ ತನ್ನ ಉತ್ಪನ್ನದಲ್ಲಿ ಬಳಸುತ್ತದೆ.

ಇದು ಹಲವೆಡೆಯಿದೆ
ಎಲ್ಲೆಲ್ಲಿ ಕಲುಷಿತ ನೀರು ಮತ್ತು ಅತಿಯಾದ ಕೀಟನಾಶಕ ಬಳಕೆಯಿಂದ ಬೆಳೆಯನ್ನು ಬೆಳೆಯುತ್ತಾರೋ ಅಲ್ಲಿಯ ಬೆಳೆಗಳಲ್ಲಿ ವಿಷಕಾರಿ ಅಂಶ ಇರುತ್ತದೆ. ವಿಶ್ವದೆಲ್ಲೆಡೆಯ ದೇಶದಲ್ಲೂ ಹರಡಿರುವ ಇದು ಭಾರತದ ಪಶ್ಚಿಮ ಬಂಗಾಳದಲ್ಲೂ ಇದೆ. ಇಲ್ಲಿ ಕಲುಷಿತ ನೀರಿನಿಂದಲೇ ಬೆಳೆಗಳನ್ನು ಬೆಳೆಯುತ್ತಾರಂತೆ!

ಇದರಿಂದ ಬರುವ ಕಾಯಿಲೆಗಳು
ಈ ರೀತಿಯ ರಾಸಾಯನಿಕಯುಕ್ತ ಅಕ್ಕಿಯನ್ನು ಸೇವಿಸುವುದರಿಂದ ವಾಂತಿ, ಹೊಟ್ಟೆನೋವು, ಅತಿಸಾರ, ಕ್ಯಾನ್ಸರ್, ನರರೋಗ, ಮಧುಮೇಹ ಮತ್ತು ಹೃದಯದ ರಕ್ತನಾಳ ಕಾಯಿಲೆಗಳು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳುತ್ತವೆ.

ಸೂಕ್ತ ರೀತಿಯ ಬಳಕೆ
ಅಕ್ಕಿಯನ್ನು ಸೂಕ್ತ ರೀತಿಯಲ್ಲಿ ಬೆಳೆಯದಿದ್ದರೆ ಹಾಗೂ ಬಳಕೆ ಮಾಡುವ ವಿಧಾನ ಅರಿಯದಿದ್ದರೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆಯಬಾರದು.

ವಿಷ ತೆಗೆಯುವುದು ಹೇಗೇ?
ವಿವಿಧ ಅಧ್ಯಯನ ಹಾಗೂ ಪ್ರಯೋಗದ ಮೂಲಕ ಅಕ್ಕಿಯಲ್ಲಿರುವ ಟಾಕ್ಸಿನ್ ವಿಷವನ್ನು ತೆಗೆಯುವುದು ಹೇಗೆ? ಎನ್ನುವುದಕ್ಕೆ ಪರಿಹಾರ ಕಂಡು ಹಿಡಿಯಲಾಗಿದೆ. ಬಳಕೆ ಮಾಡಬೇಕೆಂದುಕೊಂಡ ಅಕ್ಕಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆಯಿಡಬೇಕು. ಆಗ ಅಕ್ಕಿಯಲ್ಲಿರುವ ವಿಷದ ಮಟ್ಟ ಶೇ. 80 ರಷ್ಟು ಕಡಿಮೆಯಾಗುತ್ತದೆ ಎನ್ನಲಾಗಿದೆ.

ಬೇಯಿಸುವ ವಿಧಾನ
ಅಕ್ಕಿಯನ್ನು ಬಳಸುವಾಗ ಅದರ ಸ್ವಚ್ಛತೆ ಹಾಗೂ ಬೇಯಿಸುವ ವಿಧಾನ ತಿಳಿದಿರಬೇಕು. ಇಲ್ಲವಾದರೆ ಅಕ್ಕಿಯಲ್ಲಿ ರಾಸಾಯನಿಕ ಅಂಶ ಕಡಿಮೆಯಾಗದು. ಸೂಕ್ತ ರೀತಿಯ ಸ್ವಚ್ಛತೆಯು ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಲು ಸಹಾಯ ಮಾಡುವುದು.
ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?


Click it and Unblock the Notifications
