ಮಹಿಳೆಯರಿಗೆ ಕಾಡುವ ಲೈಂಗಿಕ ಸಮಸ್ಯೆಗಳು-ಅಲಕ್ಷ್ಯ ಮಾಡದಿರಿ

By: manu
Subscribe to Boldsky

ಸಾಮಾನ್ಯವಾಗಿ ನಮ್ಮ ಜನನಾಂಗಗಳ ಬಳಿ ಅಸಹಜವಾದುದೇನಾದರೂ ಕಂಡುಬಂದರೆ ಸ್ವಾಭಾವಿಕವಾಗಿಯೇ ನಾವೆಲ್ಲರೂ ಈ ಕುರಿತು ವ್ಯಾಕುಲರಾಗುತ್ತೇವೆ. ಆದರೆ ನಮ್ಮಲ್ಲಿ ಎಷ್ಟು ಜನರು ಇದಕ್ಕೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುತ್ತೇವೆ? ಕೆಲವು ಮಹಿಳೆಯರು ಇಂತಹ ಗುಪ್ತ ವಿಷಯಗಳನ್ನು ತಡಮಾಡದೇ ಸಂಬಂಧಪಟ್ಟವರಲ್ಲಿ ಹಂಚಿಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಆದರೆ ಈ ತೊಂದರೆ ಎದುರಾಗಲು ಕಾರಣವೇನಿರಬಹುದು ಎಂಬುದನ್ನು ಕಂಡುಕೊಳ್ಳಲು ವಿಫಲರಾಗುತ್ತಾರೆ. 

ಮಹಿಳೆಯರೇ ಎಚ್ಚರ!! ನಾಚಿಕೆ-ಸಂಕೋಚ ಪಟ್ಟರೆ ಸಮಸ್ಯೆ ಜಾಸ್ತಿಯಾಗಬಹುದು!!

ಮಹಿಳೆಯರಿಗೆ ಮಾತ್ರವೇ ಎದುರಾಗುವ ಗರ್ಭಾವಸ್ಥೆ, ರಜೋನಿವೃತ್ತಿ ಹಾಗೂ ಇತರ ಸ್ತ್ರೀರೋಗ ಸಂಬಂಧಿತ ಕಾರಣಗಳಿಂದಾಗಿ ಕೆಲವು ವಿಶಿಷ್ಟ ತೊಂದರೆಗಳು ಆವರಿಸುತ್ತವೆ. ಹದಿನೈದರಿಂದ ನಲವತ್ತನ್ನಾಲ್ಕು ವರ್ಷದ ನಡುವಿನ ವಯಸ್ಸಿನ ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಒಟ್ಟಾರೆ ಅನಾರೋಗ್ಯಕ್ಕೆ ಲೈಂಗಿಕ ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ಕಾರಣಗಳು ಒಟ್ಟು ಕಾರಣಗಳ ಮೂರನೆಯ ಒಂದರಷ್ಟಿರುವುದು ಕಂಡುಬಂದಿದೆ. ಅದರಲ್ಲಿಯೂ ಮುಂದುವರೆಯುತ್ತಿರುವ ದೇಶಗಳಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆ ಅತಿ ಹೆಚ್ಚು ಕಳಕಳಿಗೆ ಕಾರಣವಾಗಿದೆ.

ಲೈಂಗಿಕ ಸಮಸ್ಯೆಗೆ, ಮಾತ್ರೆಗಳು ಬೇಕಾಗಿಲ್ಲ! ಈ ಟಿಪ್ಸ್ ಅನುಸರಿಸಿ

ಮಹಿಳೆಯರಿಗೆ ಕೆಲವು ಲೈಂಗಿಕ ಅನಾರೋಗ್ಯಗಳು ಸಾಮಾನ್ಯವಾಗಿ ಕಾಡುತ್ತವೆ. ಇವುಗಳಿಗೆ ದೈಹಿಕ ಮತ್ತು ಮಾನಸಿಕ ಎರಡೂ ಬಗೆಯ ಕಾರಣಗಳಿರಬಹುದು. ಇಂದಿನ ಲೇಖನದಲ್ಲಿ ಮಹಿಳೆಯರಿಗೆ ಲೈಂಗಿಕವಾಗಿ ಕಾಡುವ ಅನಾರೋಗ್ಯಗಳ ಬಗ್ಗೆ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಇದಕ್ಕೆ ಸಾಮಾನ್ಯ ಕಾರಣಗಳನ್ನು ಅರಿತುಕೊಳ್ಳಬಹುದು....

ಶಿಲೀಂಧ್ರದ ಸೋಂಕು

ಶಿಲೀಂಧ್ರದ ಸೋಂಕು

ಶಿಲೀಂಧ್ರದ ಸೋಂಕು ತುಂಬಾ ದಿನ ಕಾಡುವ ತೊಂದರೆಯಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಓಡುವ ಅಥವಾ ಈಜಾಟ ಈ ಸೋಂಕಿಗೆ ಪ್ರಮುಖ ಕಾರಣವಾಗಿರುತ್ತವೆ. ಬೆವರು ಹರಿಯುವ ಬೇಸಿಗೆಯಲ್ಲಿ ಇದು ಒಂದು ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿಯೂ ಕಾಡಬಹುದು.

ಮೂತ್ರನಾಳದಲ್ಲಿ ಸೋಂಕು

ಮೂತ್ರನಾಳದಲ್ಲಿ ಸೋಂಕು

ಮಧ್ಯರಾತ್ರಿ ಸುಖನಿದ್ದೆಯ ನಡುವೆ ಮೂತ್ರವಿಸರ್ಜಿಸಲು ಅವಸರವಾಗುವುದು ಮೂತ್ರನಾಳದಲ್ಲಿ ಸೋಂಕು ಉಂಟಾಗಿರುವ ಒಂದು ಸಂಕೇತವಾಗಿದೆ. ಸಾಮಾನ್ಯವಾಗಿ ಪ್ರತಿ ಮಹಿಳೆಯೂ ವರ್ಷಕ್ಕೆ ಒಂದು ಬಾರಿಯಾದರೂ ಈ ಸ್ಥಿತಿ ಅನುಭವಿಸುತ್ತಾರೆ. ಆದರೆ ಇದು ವರ್ಷಕ್ಕೆ ಹಲವು ಬಾರಿ ಉಂಟಾಗುತ್ತಿದ್ದರೆ ನೀವು ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಈ ಸ್ಥಿತಿಗೆ ಲೈಂಗಿಕ ಆರೋಗ್ಯದಲ್ಲಿ ಏರುಪೇರಾಗಿರುವುದು ಕಾರಣವಾಗಿರಬಹುದು.

ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!

ಬಿಳಿಸೆರಗು

ಬಿಳಿಸೆರಗು

ವರ್ಷದಲ್ಲಿ ಒಂದೆರಡು ಬಾರಿ ಮೊಸರಿನಂತಹ ದ್ರವದ ಸ್ರಾವವಾಗುವುದು ಸಾಮಾನ್ಯ. ಇದಕ್ಕೆ ಶಿಲೀಂಧ್ರದ ಸೋಂಕು ಪ್ರಮುಖ ಕಾರಣವಾಗಿದೆ. ಈ ಸ್ರಾವದ ಪ್ರಮಾಣ ಹಾಗೂ ಎಷ್ಟು ಗಾಢವಾಗಿದೆ ಎಂಬುದು ಈ ಸೋಂಕಿನ ತೀವ್ರತೆಯನ್ನು ಸೂಚಿಸುತ್ತದೆ. ಈ ಸ್ರಾವ ಹೆಚ್ಚು ಗಾಢವಾಗಿದ್ದಷ್ಟೂ ಬ್ಯಾಕ್ಟೀರಿಯಾಗಳು ಅತಿ ಹೆಚ್ಚು ಆವರಿಸಿವೆ ಎಂದು ತಿಳಿದುಕೊಳ್ಳಬೇಕು.

ಮಾಸಿಕ ಋತುಚಕ್ರದ ದಿನ ಹೆಚ್ಚುಕಡಿಮೆಯಾಗುವುದು

ಮಾಸಿಕ ಋತುಚಕ್ರದ ದಿನ ಹೆಚ್ಚುಕಡಿಮೆಯಾಗುವುದು

ಒಂದು ವೇಳೆ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಿದ್ದು ನಡುವೆ ಇದರ ಸೇವನೆಯನ್ನು ನಿಲ್ಲಿಸಿದರೆ ಇದರ ಪರಿಣಾಮ ಮಾಸಿಕ ಋತುಚಕ್ರದ ದಿನಗಳ ಮೇಲೆ ನೇರವಾಗಿ ಆಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ದಿನಗಳು ಮುಂದೂಡಲ್ಪಡುತ್ತವೆ. ಒಂದು ವೇಳೆ ನಿಮ್ಮ ದೇಹ ಅತಿ ಸೂಕ್ಷ್ಮವಾಗಿದ್ದರೆ ಒಂದು ದಿನ ಗುಳಿಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೂ ಕೆಲವಾರು ದಿನಗಳಿಗೆ ಮಾಸಿಕ ಚಕ್ರ ಮುಂದೂಡಲ್ಪಡಬಹುದು.

ಒಳಮುಖ ಬೆಳೆಯುವ ಕೂದಲು

ಒಳಮುಖ ಬೆಳೆಯುವ ಕೂದಲು

ಒಂದು ವೇಳೆ ವಸ್ತಿಕುಹರದ ಮೇಲಿನ ಚರ್ಮದಲ್ಲಿ ರೋಮ ಬೆಳೆಯುವುದನ್ನು ನೀವು ಇಷ್ಟಪಡದೇ ಇದ್ದರೆ ಇದಕ್ಕಾಗಿ ಅನುಸರಿಸುವ ವ್ಯಾಕ್ಸಿಂಗ್ ಅಥವಾ ಶೇವಿಂಗ್ ನ ಪರಿಣಾಮವಾಗಿ ಒಳಮುಖ ಬೆಳೆಯುವ ರೋಮಗಳು ಹೆಚ್ಚು ಹೆಚ್ಚಾಗಿ ಎದುರಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇದು ನೋವು ನೀಡುವಂತಹವೂ ಆಗಿರುತ್ತವೆ.

ಇಷ್ಟವಾಗದ ವಾಸನೆ

ಇಷ್ಟವಾಗದ ವಾಸನೆ

ಸಾಮಾನ್ಯವಾಗಿ ಜನನಾಂಗದ ಭಾಗದಲ್ಲಿ ಕೊಂಚವೇ ಕಮಟು ವಾಸನೆ ಇರುತ್ತದೆ. ಆದರೆ ಈ ವಾಸನೆ ಹೆಚ್ಚು ಕಟುವಾಗಿದ್ದರೆ ಇದಕ್ಕೆ ಯಾವುದಾದರೊಂದು ಸೋಂಕು ಕಾರಣವಾಗಿರಬಹುದು. ಈ ವಾಸನೆಗೆ bacterial vaginosis ಎಂದು ಕರೆಯುತ್ತಾರೆ. ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳದೇ ಇರುವ ಮೂಲಕ ಈ ಪರಿಸ್ಥಿತಿ ಎದುರಾಗುತ್ತಿದ್ದು ಈ ಬಗ್ಗೆ ತಕ್ಷಣ ಕಾಳಜಿ ವಹಿಸಲು ನೀಡುವ ಎಚ್ಚರಿಕೆಯೂ ಆಗಿದೆ.

ಕೆಳಹೊಟ್ಟೆಯಲ್ಲಿ ಎದುರಾಗುವ ನೋವಿನಲ್ಲಿ ಏರುಪೇರು

ಕೆಳಹೊಟ್ಟೆಯಲ್ಲಿ ಎದುರಾಗುವ ನೋವಿನಲ್ಲಿ ಏರುಪೇರು

ಕೆಳಹೊಟ್ಟೆಯಲ್ಲಿ ನೋವನ್ನು ಎಲ್ಲಾ ಮಹಿಳೆಯರು ಅನುಭವಿಸುತ್ತಾರೆ. ಆದರೆ ಒಂದು ವೇಳೆ ಈ ನೋವು ಸಹಿಸಲಸಾಧ್ಯವಾಗುವಷ್ಟಿದ್ದರೆ ಹಾಗೂ ಮಾಸದ ದಿನಗಳಲ್ಲಿ ಹೆಚ್ಚು ಕಡಿಮೆಯಾಗುತ್ತಿದ್ದರೆ ಇದು ಲೈಂಗಿಕ ಸಂಪರ್ಕದ ಮೂಲಕ ಹರಡಿರಬಹುದಾದ ಕಾಯಿಲೆಯ ಸಂಕೇತವೂ ಆಗಿರಬಹುದು.

ಸ್ತನಗಳ ಮೇಲೆ ಮೂಡುವ ಬೊಕ್ಕೆಗಳು

ಸ್ತನಗಳ ಮೇಲೆ ಮೂಡುವ ಬೊಕ್ಕೆಗಳು

ಒಂದು ವೇಳೆ ಸ್ತನದ ಮೇಲೆ ಕೀವುಭರಿತ ಬೊಕ್ಕೆ ಮೂಡಿದರೆ ಇದು ಸ್ತನ ಕ್ಯಾನ್ಸರ್ ನ ಲಕ್ಷಣವೆಂದು ಸರ್ವಥಾ ಅರ್ಥವಲ್ಲ. ಸಾಮಾನ್ಯವಾಗಿ ಸ್ತನದ ಮೇಲೆ ಮೂಡುವ ಬೊಕ್ಕೆಗಳು ಒಂದು ತಿಂಗಳ ಒಳಗೆ ತಾವಾಗಿಯೇ ಮಾಯವಾಗುತ್ತವೆ. ಆದರೆ ಇದಕ್ಕೂ ಹೆಚ್ಚು ಸಮಯವಾದರೂ ಬೊಕ್ಕೆ ಮಾಯವಾಗದೇ ಇದ್ದರೆ ಹಾಗೂ ನಿಮ್ಮ ಕುಟುಂಬದಲ್ಲಿ ಸ್ತನ ಕ್ಯಾನ್ಸರ್ ನ ಇತಿಹಾಸವಿದ್ದರೆ ಮಾತ್ರ ಈ ಬಗ್ಗೆ ನೀವು ಕಾಳಜಿ ವಹಿಸಿ ತಕ್ಷಣವೇ ಮ್ಯಾಮೋಗ್ರಫಿ ತಪಾಸಣೆಗೆ ಒಳಗಾಗುವ ಅವಶ್ಯಕತೆ ಇದೆ.

English summary

Serious Sexual Health Issues That Women Often Ignore

When something unfamiliar pops up down there, then we start worrying about it. But do we take an actual step to take care of the issue at hand? Many women might have shared such anxiety, but none of them actually know what is the reason for such problems to crop up. Women experience unique health issues and conditions from pregnancy and menopause to other gynaecological conditions.
Subscribe Newsletter