ಆರೋಗ್ಯದ ಬಗ್ಗೆ ಕಣ್ಣುಗಳು ತಿಳಿಸುವ ಮಾಹಿತಿಗಳು ಭಯಹುಟ್ಟಿಸಬಹುದು!

By Arshad
Subscribe to Boldsky

ನಿಮ್ಮ ಕಣ್ಣುಗಳು ನಿಮ್ಮ ಆತ್ಮದ ಕಿಟಕಿಯಿದ್ದಂತೆ ಎಂಬ ಒಂದು ನಾಣ್ಣುಡಿ ಪ್ರಚಲಿತವಾಗಿದೆ. ಇದರ ಅರ್ಥ ಏನೇ ಇರಬಹುದು, ಆದರೆ ವಾಸ್ತವದಲ್ಲಿ ಕಣ್ಣುಗಳು ದೇಹದ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುವುದು ಮಾತ್ರ ನಿಜ. ಇದೇ ಕಾರಣಕ್ಕೆ ವೈದ್ಯರ ಪ್ರಾಥಮಿಕ ಪರಿಶೀಲನೆಯಲ್ಲಿ ಕಣ್ಣುಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ.

ಕಣ್ಣುಗಳನ್ನು ಗಮನವಿಟ್ಟು ಪರಿಶೀಲಿಸಿದಾಗ ನಿಮ್ಮ ಆರೋಗ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ಕೆಲವಾರು ಮಾಹಿತಿಗಳನ್ನು ಪಡೆಯಬಹುದು. ಇದಕ್ಕೆ ವೈದ್ಯರು ಅಥವಾ ಪರಿಣಿತರೇ ಬೇಕೆಂದಿಲ್ಲ, ಬದಲಿಗೆ ಸ್ವಚ್ಛ ಕನ್ನಡಿಯಲ್ಲಿ ನೀವೇ ನಿಮ್ಮ ಕಣ್ಣುಗಳನ್ನು ಗಮನಿಸಬಹುದು. ಕಣ್ಣುಗಳು ಅತಿ ಸೂಕ್ಷ್ಮವಾದ ಅಂಗಗಳಾಗಿದ್ದು ಇವುಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ.

ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!

ಕಣ್ಣುಗಳು ಆರೋಗ್ಯವನ್ನು ಸೂಸುತ್ತಿವೆ ಎಂದರೆ ನಿಮ್ಮ ದೇಹವೂ ಉತ್ತಮ ಆರೋಗ್ಯವನ್ನು ಹೊಂದಿದೆ ಎಂದೇ ಅರ್ಥವಾಗಿದೆ. ಕಣ್ಣುಗಳ ಸ್ಥಿತಿಯನ್ನು ಅರಿಯುವ ಮೂಲಕ ದೇಹದ ಯಾವ ಅಂಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಸ್ಥೂಲವಾಗಿ ಅರಿಯಬಹುದು. ಇವುಗಳಲ್ಲಿ ಕೆಲವು ನಿಮಗೆ ಅರಿವಿಲ್ಲದೆಯೂ ಇರಬಹುದು. ಇದೇ ಕಾರಣಕ್ಕೆ ಕಣ್ಣುಗಳನ್ನು ನಿಮ್ಮ ಆರೋಗ್ಯದ ಬಗ್ಗೆ ಇಣುಕುನೋಟ ಬೀರಬಹುದಾದ ಕಿಟಕಿಗಳು ಎಂದೂ ಕರೆಯಬಹುದು.  

ಕಣ್ಣಿಗೆ ಭಾದೆ ತರುವ ಕೆಂಗಣ್ಣು ರೋಗಕ್ಕೆ ಪರಿಹಾರವೇನು?

ಕೆಲವಾರು ಪ್ರಮುಖ ಕಾಯಿಲೆಗಳ ಲಕ್ಷಣಗಳು ಕಣ್ಣುಗಳಲ್ಲಿ ಪ್ರಥಮವಾಗಿ ಹಾಗೂ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ರಕ್ತದ ಒತ್ತಡದಿಂದ ಹಿಡಿದು ಕ್ಯಾನ್ಸರ್ ವರೆಗೆ ಕೆಲವು ಕಾಯಿಲೆಗಳನ್ನು ಕಣ್ಣುಗಳೇ ಪ್ರಕಟಿಸುತ್ತವೆ. ಕಾಮಾಲೆ ರೋಗವಂತೂ ಕಣ್ಣುಗಳ ಬಣ್ಣದಿಂದಲೇ ಯಾರಿಗೇ ಆಗಲಿ ಥಟ್ಟನೆ ಗೋಚರಿಸಿಬಿಡುತ್ತದೆ. ಆದ್ದರಿಂದ ಆಗಾಗ ಕಣ್ಣುಗಳನ್ನು ನೀವೇ ಸ್ವತಃ ಪರಿಶೀಲಿಸಿಕೊಳ್ಳುತ್ತಾ ಉತ್ತಮ ಆರೋಗ್ಯ ಉಳಿಸಿಕೊಂಡು ಹೋಗುವುದನ್ನು ಖಾತರಿಪಡಿಸಿಕೊಳ್ಳಬಹುದು. ಇಂದಿನ ಲೇಖನದಲ್ಲಿ ನಿಮಗೆ ಅರಿವೇ ಇಲ್ಲದೇ ನಿಮ್ಮ ದೇಹವನ್ನು ಆವರಿಸುವ ಕಾಯಿಲೆಗಳನ್ನು ನಿಮ್ಮ ಕಣ್ಣುಗಳ ಪರಿಶೀಲನೆಯಿಂದ ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ. ಮುಂದೆ ಓದಿ...

ಶಾಶ್ವತ ಬೊಕ್ಕೆ

ಶಾಶ್ವತ ಬೊಕ್ಕೆ

ಕಣ್ಣುಗಳ ರೆಪ್ಪೆಗಳ, ವಿಶೇಷವಾಗಿ ಕೆಳರೆಪ್ಪೆಯ ಒಳಭಾಗದಲ್ಲಿ ಚಿಕ್ಕದೊಂದು ತಿಳಿ ಹಳದಿ ಬಣ್ಣದ ಅಥವಾ ನಸು ಹಸಿರು ಬಣ್ಣದ ಚುಕ್ಕೆಯಂತಹ ಬೊಕ್ಕೆಯೊಂದು ಕಾಣಬರಬಹುದು. ಸಾಮಾನ್ಯವಾಗಿ ಇವು ಸಬೇಶಿಯಸ್ ಗ್ರಂಥಿಗಳ ಮೇಲ್ತುದಿ ಮುಚ್ಚಿಕೊಳ್ಳುವ ಮೂಲಕ ಒಳಗಿನ ಕೀವು ಹೊರಬರಲಾರದೇ ಗಟ್ಟಿಯಾಗಿಬಿಟ್ಟು ಹಾಗೇ ಇರುವುದರಿಂದ ಬರಿಗಣ್ಣಿಗೆ ಚುಕ್ಕೆಯಂತೆ ಕಾಣುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇವು ನಿರಾಪಾಯಕಾರಿಯಾಗಿವೆ ಹಾಗೂ ಕೆಲವು ದಿನಗಳಲ್ಲಿ ತನ್ನಿಂತಾನೇ ಕಾಣೆಯಾಗುತ್ತವೆ. ಒಂದು ವೇಳೆ ಇವು ಬೇಳೆಯಷ್ಟು ದೊಡ್ಡದಾಗಿ ಬೆಳೆದು ಒತ್ತಿದಾದ ನೋವಾಗುತ್ತಿದ್ದರೆ ಇದು sebaceous gland carcinoma ಎಂಬ ಸ್ಥಿತಿ ಆವರಿಸಿರುವುದನ್ನು ಸ್ಪಷ್ಟಪಡಿಸುತ್ತದೆ.

ಹುಬ್ಬುಗಳ ಕೂದಲ ಉದುರುವಿಕೆ

ಹುಬ್ಬುಗಳ ಕೂದಲ ಉದುರುವಿಕೆ

ಹುಬ್ಬುಗಳ ಕೂದಲ ಉದುರುವಿಕೆಗೆ ಪ್ರಮುಖ ಕಾರಣವೆಂದರೆ hypothyroidism ಅಥವಾ ಥೈರಾಯ್ಡ್ ಗ್ರಂಥಿ ಅಗತ್ಯಕ್ಕೂ ಕಡಿಮೆ ಪ್ರಮಾಣದ ಹಾರ್ಮೋನುಗಳನ್ನು ಸ್ರವಿಸುವುದು. ಇದಕ್ಕೆ ಕೆಲವು ಕಾರಣಗಳೆಂದರೆ ವೃದ್ದಾಪ್ಯ, ಮಾನಸಿಕ ಒತ್ತಡ ಹಾಗೂ ಕೆಲವು ಪೋಷಕಾಂಶಗಳ ಕೊರತೆ. ಹುಬ್ಬಿನಲ್ಲಿ ಕೂದಲು ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾಗಿದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

ಮಂಜಾದ ದೃಷ್ಟಿ

ಮಂಜಾದ ದೃಷ್ಟಿ

ಕೆಲವೊಮ್ಮೆ ಮುಂದಿನ ದೃಶ್ಯವನ್ನು ಸ್ಪಷ್ಟವಾಗಿ ಕಾಣಲು ಕೊಂಚ ಹೆಚ್ಚೇ ತ್ರಾಸಪಡಬೇಕಾಗಿ ಬರುತ್ತದೆ. ಇದಕ್ಕೆ ಕಣ್ಣುಗಳ ಒತ್ತಡ ಅಥವಾ ಒಣಗಿದ ಕಣ್ಣುಗಳು ಕಾರಣವಾಗಿರಬಹುದು. ಕಂಪ್ಯೂಟರ್ ಪರದೆಯನ್ನೇ ತದೇಕಚಿತ್ತದಿಂದ ಇಡಿಯ ದಿನ ವೀಕ್ಷಿಸುವವರಿಗೆ ಈ ತೊಂದರೆ ಸಾಮಾನ್ಯವಾಗಿದೆ. ಇವರಿಗೆ ಕಣ್ಣು ಮಿಟುಕಿಸುವಾಗ ಕೊಂಚ ಉರಿಯಾಗಬಹುದು ಅಥವಾ ದೃಷ್ಟಿ ಮಂಜಾಗಬಹುದು. ಇದು ಕಣ್ಣೀರು ಇಂಗಿರುವುದನ್ನು ಹಾಗೂ ಕಣ್ಣುಗಳಿಗೆ ಹೆಚ್ಚು ಆರಾಮದ ಅಗತ್ಯವಿರುವುದನ್ನು ಸೂಚಿಸುತ್ತವೆ.

ದೃಷ್ಟಿಯ ಕೇಂದ್ರ ಮಾಯವಾಗಿರುವುದು (ಬ್ಲೈಂಡ್ ಸ್ಪಾಟ್)

ದೃಷ್ಟಿಯ ಕೇಂದ್ರ ಮಾಯವಾಗಿರುವುದು (ಬ್ಲೈಂಡ್ ಸ್ಪಾಟ್)

ಕೆಲವೊಮ್ಮೆ ತೀವ್ರ ತಲೆನೋವಿದ್ದಾಗ ನೋಡುತ್ತಿರುವ ದೃಶ್ಯದ ಕೇಂದ್ರ ಭಾಗ ಅದೃಶ್ಯವಾಗುತ್ತದೆ. ಉದಾಹರಣೆಗೆ ವ್ಯಕ್ತಿಯೊಬ್ಬರ ಮುಖವನ್ನೇ ನೋಡುತ್ತಿದ್ದರೆ ಅವರ ಮುಂಡ ಮಾತ್ರ ಗೋಚರಿಸಿ ರುಂಡವಿಲ್ಲದಂತೆ ಕಾಣುತ್ತದೆ. ಇದು ಮೈಗ್ರೇನ್ ತಲೆನೋವಿನ ಸ್ಪಷ್ಟ ಲಕ್ಷಣವಾಗಿದೆ. ಇದು ಮೈಗ್ರೇನ್ ಅತ್ಯುಗ್ರ ರೂಪ ತಳೆದಿರುವ ಸ್ಪಷ್ಟ ಲಕ್ಷಣವಾಗಿದ್ದು ತಡಮಾಡದೇ ತಜ್ಞ ವೈದ್ಯರಲ್ಲಿ ಭೇಟಿಯಾಗಲೇಬೇಕೆಂದು ಸೂಚಿಸುತ್ತದೆ.

 ಕಣ್ಣುಗಳು ಊದಿಕೊಂಡಿರುವುದು

ಕಣ್ಣುಗಳು ಊದಿಕೊಂಡಿರುವುದು

ಇತರ ಸಮಯಕ್ಕಿಂತಲೂ ಈಗ ಕಣ್ಣುಗಳು ಕೊಂಚ ಹೆಚ್ಚೇ ಮುಂದೆ ಬಂದಿರುವಂತೆ ಕಂಡುಬಂದರೆ ಇದು ಥೈರಾಯ್ಡ್ ಕಣ್ಣಿನ ಕಾಯಿಲೆ ಅಥವಾ Graves disease ಎಂಬ ಕಾಯಿಲೆಯ ಲಕ್ಷಣವಾಗಿರಬಹುದು. ಅಂದರೆ ಥೈರಾಯ್ಡ್ ಗ್ರಂಥಿ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ರಸದೂತಗಳನ್ನು ಸ್ರವಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಕಣ್ಣುಗಳ ಬಿಳಿಭಾಗ ಹಳದಿಯಾಗಿರುವುದು

ಕಣ್ಣುಗಳ ಬಿಳಿಭಾಗ ಹಳದಿಯಾಗಿರುವುದು

ಯಕೃತ್ ನ ಕ್ಷಮತೆ ಕಡಿಮೆಯಾದರೆ ಇದಕ್ಕೆ ಕಾಮಾಲೆ ಕಾಯಿಲೆ ಎಂದು ಕರೆಯುತ್ತಾರೆ. ಈ ರೋಗಿಯ ಕಣ್ಣುಗಳ ಬಿಳಿಭಾಗ ತಿಳಿಹಳದಿ ಬಣ್ಣದಿಂದ ಗಾಢಹಳದಿ ಬಣ್ಣವನ್ನು ಪಡೆಯುತ್ತದೆ. ಕಾಯಿಲೆ ಎಷ್ಟು ಹೆಚ್ಚು ಉಲ್ಬಣಗೊಂಡಿದೆಯೋ ಅಷ್ಟೂ ಹಳದಿ ಬಣ್ಣ ಗಾಢವಾಗಿರುತ್ತದೆ. ಪಿತ್ತಕೋಶ ಹಾಗೂ ಪಿತ್ತರಸದ ಪ್ರಮಾಣದಲ್ಲಿ ಏರುಪೇರು ಸಹಾ ಈ ಬಣ್ಣಕ್ಕೆ ಕಾರಣವಾಗುತ್ತವೆ. ಈ ಬಣ್ಣದಿಂದಲೇ ಕನ್ನಡದ ಗಾದೆ 'ಕಾಮಾಲೆ ಬಂದವನಿಗೆ ಜಗವೆಲ್ಲಾ ಹಳದಿ' ಹುಟ್ಟಿಕೊಂಡಿದೆ. ಯಾವಾಗ ಕಣ್ಣುಗಳು ಹಳದಿಯಾಗತೊಡಗಿತೋ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವ ಮೂಲಕ ಈ ರೋಗ ಉಲ್ಬಣಗೊಳ್ಳುವುದನ್ನು ತಡೆಯಬಹುದು.

ಮಧುಮೇಹಿಗಳ ದೃಷ್ಟಿ ಮೋಡ-ಮೋಡವಾಗಿರುವುದು

ಮಧುಮೇಹಿಗಳ ದೃಷ್ಟಿ ಮೋಡ-ಮೋಡವಾಗಿರುವುದು

ಮಧುಮೇಹಿಗಳಿಗೆ ಎದುರಾಗುವ ಕೆಲವಾರು ಅಡ್ಡಪರಿಣಾಮಗಳಲ್ಲಿ ಕಣ್ಣಿನ ದೃಷ್ಟಿ ಮಂಜಾಗುವುದೂ ಒಂದು. ಮಧುಮೇಹಿಗಳ ಕಣ್ಣುಗಳಿಗೆ ರಕ್ತ ತಲುಪಿಸಬೇಕಾದ ಸೂಕ್ಷ್ಮ ರಕ್ತನಾಳಗಳು ಘಾಸಿಗೊಂಡಾಗ ಕಣ್ಣುಗಳ ಕ್ಷಮತೆ ಕುಂದುತ್ತದೆ ಹಾಗೂ ದೃಷ್ಟಿಯಲ್ಲಿ ಕಾಣುವ ಪರದೆಯಲ್ಲಿ ಅಲ್ಲಲ್ಲಿ ಮೋಡಗಳಿದ್ದಂತೆ ತೋರುತ್ತವೆ. ಇದಕ್ಕೆ diabetic retinopathy ಎಂದು ಕರೆಯುತ್ತಾರೆ. ಈ ಸೂಚನೆ ಕಣ್ಣುಗಳು ನಿಮ್ಮ ಆರೋಗ್ಯದ ಬಗ್ಗೆ ಸೂಚಿಸುವ ಪ್ರಮುಖ ಸೂಚನೆಯಾಗಿದೆ.

ದುರ್ಬಲ ದೃಷ್ಟಿ ಅಥವಾ ಕೇಂದ್ರೀಕರಿಸಲು ಕಷ್ಟಕರವಾಗುವುದು

ದುರ್ಬಲ ದೃಷ್ಟಿ ಅಥವಾ ಕೇಂದ್ರೀಕರಿಸಲು ಕಷ್ಟಕರವಾಗುವುದು

ಕಣ್ಣುಗಳ ದೃಷ್ಟಿಯನ್ನು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸಲು ಕಷ್ಟವಾಗುವುದು ಅಥವಾ ಸಾಮಾನ್ಯ ದೃಷ್ಟಿಯಿಂದ ಯಾವುದೇ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಒಂದು ವೇಳೆ ನಿಮ್ಮ ದೃಷ್ಟಿ ಏಕಾಏಕಿ ದುರ್ಬಲವಾದಂತೆ ಕಂಡುಬಂದರೆ, ಮುಂದಿನ ದೃಶ್ಯ ಮಂಜು ಮಂಜಾದಂತೆ ತೋರಿದರೆ ಅಥವಾ ಅದೃಶ್ಯವಾದರೆ ತಕ್ಷಣವೇ ವೈದ್ಯರ ಭೇಟಿ ಅನಿವಾರ್ಯ. ಇದು ಹೃದಯಾಘಾತದ ಪ್ರಥಮ ಪೂರ್ವ ಸೂಚನೆಗಳಾಗಿರಬಹುದು.

For Quick Alerts
ALLOW NOTIFICATIONS
For Daily Alerts

    English summary

    Scary Things Your Eyes Are Trying To Tell You About Your Health

    Your eyes can reveal quite a lot about your health. Some of these things can be simply detected by looking at the mirror. Eyes are precious and keeping them healthy will have a great impact on improving the quality of your health. It turns out that your eyes can warn you about a variety of diseases that you may not even know you have.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more