For Quick Alerts
ALLOW NOTIFICATIONS  
For Daily Alerts

  ಸಮೋಸಾ-ಪಿಜ್ಜಾ, ಸೇವಿಸುವ ಮುನ್ನ ಒಮ್ಮೆ ಇತ್ತ ಗಮನಿಸಿ...

  By Arshad
  |

  ಈ ಶೀರ್ಷಿಕೆಯನ್ನು ಕಂಡಾಕ್ಷಣ ನಮ್ಮ ಮನದಲ್ಲಿ ಮೊದಲಾಗಿ ಈ ಎರಡೂ ಆಹಾರಗಳ ರುಚಿಯೇ ನೆನಪಿಗೆ ಬಂದು ನೀರೂರಿರಬಹುದು. ವಿಶೇಷವಾಗಿ ಒಂದು ವೇಳೆ ಕೆಲಸದ ಒತ್ತಡದಿಂದ ಬಳಲಿದ ಸಮಯದಲ್ಲಿ ಏನಾದರೂ ತಿನ್ನಬೇಕೆಂದು ಅನ್ನಿಸುತ್ತಿದ್ದು ಊಟದ ಸಮಯಕ್ಕೆ ಕಾಯುತ್ತಿದ್ದರೆ ಈ ರುಚಿ ಇನ್ನಷ್ಟು ಕಾಡಬಹುದು.

  ಇಂದಿನ ದಿನಗಳಲ್ಲಿ ಸಿದ್ಧರೂಪದಲ್ಲಿ ಸಿಗುತ್ತಿರುವ ಹಲವಾರು ಆಹಾರಗಳು 'ಅನಾರೋಗ್ಯಕರ' ಎಂಬ ಪಟ್ಟವನ್ನೂ ಪಡೆದುಕೊಂಡಿವೆ. ಏಕೆಂದರೆ ಈ ಆಹಾರಗಳನ್ನು ತಿನ್ನುವ ಮೂಲಕ ತಿನ್ನುವವರಿಗೆ ರುಚಿಯ ಮೂಲಕ ಮಾತ್ರವೇ ತೃಪ್ತಿಯಾಗುವುದಿಲ್ಲ ಬದಲಿಗೆ ಶ್ರೀಮಂತರು ತಿನ್ನುವ ಆಹಾರವನ್ನೇ ನಾವೂ ತಿನ್ನುತ್ತಿದ್ದೇವೆ ಎಂದು ಇತರರಿಗೆ ತಿಳಿಸುವ ಮೂಲಕ ಪಡುವ ತೃಪ್ತಿಯೂ ಅಡಗಿದೆ. 

  ಕಾರಣವೇನೇ ಇದ್ದರೂ ಮೂಲತಃ ಇವು ಅನಾರೋಗ್ಯಕರ ಆಹಾರಗಳೇ ಹೌದು ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಒಂದು ವೇಳೆ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕಾದರೆ ಆರೋಗ್ಯಕರ ಅಹಾರಗಳನ್ನು ಮಾತ್ರವೇ ಸೇವಿಸಬೇಕಾಗಿದ್ದು ಸಂತುಲಿತ ಪ್ರಮಾಣ ಹಾಗೂ ಸಾಕಷ್ಟು ವ್ಯಾಯಾಮಗಳೂ ಅಗತ್ಯವಾಗಿವೆ. 

  pizza

  ಆದರೆ ಕೆಲವೊಮ್ಮೆ ಔತಣಕೂಟ ಅಥವಾ ಮದುವೆಯ ಊಟ ಮೊದಲಾದ ಸಂದರ್ಭಗಳಲ್ಲಿ ನೋಡಲು ಸುಂದರವಾಗಿರುವ ಅನಾರೋಗ್ಯಕರ ಆಹಾರಗಳೇ ಇದ್ದು ಬೇರೆ ಆಯ್ಕೆಯೇ ಇರದಿದ್ದಾಗ ಅತಿಥಿಗಳಾಗಿ ಅಥವಾ ಕಾರ್ಯಕ್ರಮದ ಪಾಲುದಾರರಾಗಿ ಊಟ ಮಾಡದೇ ಇರುವುದು ಅವಮಾನ ಎಸಗಿದಂತಾಗುತ್ತದೆ.

  ಹಾಗಾಗಿ ನಾವು ಇತರರ ಎದುರು ಕೆಳಮಟ್ಟಕ್ಕಿಳಿಯಲು ಬಯಸದೇ ಅನಾರೋಗ್ಯಕರವೆಂದು ತಿಳಿದಿದ್ದರೂ ಆಹಾರವನ್ನು ಸೇವಿಸಬೇಕಾಗಿ ಬರುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳ ಅನಾರೋಗ್ಯಕರ ಆಹಾರದ ಭರ್ಜರಿ ಮಾರಾಟದ ಗುಟ್ಟೇ ಇದು. ಒಂದು ವೇಳೆ ಈ ಅಭ್ಯಾಸ ನಿಯಮಿತವಾಗಿದ್ದರೆ ತೂಕದಲ್ಲಿ ಹೆಚ್ಚಳ ಹಾಗೂ ಈ ಮೂಲಕ ಎದುರಾಗಬಹುದಾದ ಇತರ ಆರೋಗ್ಯ ಸಂಬಂಧಿ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 

  ಸಿದ್ಧ ಆಹಾರಗಳು ಅನಾರೋಗ್ಯಕರ ಎಂದು ನಮಗೆಲ್ಲಾ ಗೊತ್ತಿದ್ದರೂ ಇದನ್ನು ತಿನ್ನದೇ ಇರಲು ನಮ್ಮ ಮನೋಸ್ಥೈರ್ಯ ಸಾಲದು. ಏಕೆಂದರೆ ಇವುಗಳ ಮಾರಾಟಕ್ಕಾಗಿ ಬಳಸುವ ಜಾಹೀರಾತು, ಈಗಾಗಲೇ ಈ ಉತ್ಪನ್ನಗಳು ಪಡೆದಿರುವ ಜನಮನ್ನಣೆ ಹಾಗೂ ಇವುಗಳನ್ನು ಹೆಸರಿಸಿ, ಬಳಸಿ ತಾವು ಮೇಲ್ವರ್ಗಕ್ಕೆ ಸೇರಿದವರೆಂದು ತಿಳಿಕೊಳ್ಳುವ ಜನರ ತವಕ ಮೊದಲಾದವು ಇವುಗಳನ್ನು ಅನಿವಾರ್ಯವೆಂಬ ಭಾವನೆಯನ್ನು ಮೂಡಿಸುತ್ತವೆ. ಆದರೆ ಇವುಗಳನ್ನು ನಿತ್ಯವೂ ತಿಂದರೆ ಮಾತ್ರ ತೊಂದರೆ, ಆಗಾಗ ತಿಂದರೆ ಪರವಾಗಿಲ್ಲ ಎಂದು ತಮಗೆ ತಾವೇ ಸಾಂತ್ವಾನ ನೀಡುವ ಮೂಲಕ ಧಾರಾಳವಾಗಿ ಸೇವಿಸುತ್ತಾರೆ. ವೈದ್ಯರ ಪ್ರಕಾರವೂ, ಇದರ ರುಚಿಯನ್ನು ಹತ್ತಿಕ್ಕಲಾಗದಿದ್ದರೆ ಆಗಾಗ ತಿಂದರೆ ಪರವಾಗಿಲ್ಲ. 

  ಸಿದ್ದ ಆಹಾರಗಳಲ್ಲಿ ಸಾವಿರಾರು ವಿಧಗಳಿದ್ದು ಒಂದಕ್ಕೊಂದು ಪೈಪೋಟಿ ನೀಡುತ್ತವೆ. ಇಂದು ಮಾರುಕಟ್ಟೆಯಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದ ಅಪಾರ ಜನಸಂಖ್ಯೆಗೆ ಇವುಗಳನ್ನು ತಿನ್ನಿಸಿ ಅಭ್ಯಾಸ ಮಾಡಿಸಿ ಲಾಭ ಗಳಿಸುವ ಹುನ್ನಾರದಲ್ಲಿವೆ. ಪರಿಣಾಮವಾಗಿ ಪಿಜ್ಜಾ, ಬರ್ಗರ್, ಪೇಸ್ಟ್ರೀ ಮೊದಲಾದವು ಚಿಕ್ಕ ಪಟ್ಟಣಗಳಲ್ಲಿಯೂ ಲಭ್ಯವಾಗುತ್ತಿವೆ. ಇದುವರೆಗೆ ನಮ್ಮ ದೇಶೀಯ ಆಹಾರಗಳಾದ ಸಮೋಸ, ಚಾಟ್ ಮೊದಲಾದವುಗಳನ್ನು ಪಕ್ಕಕ್ಕೆ ಸರಿಸುತ್ತಿವೆ. ನಗರಗಳಲ್ಲಂತೂ ಸಿದ್ಧ ಆಹಾರಗಳ ವೈವಿಧ್ಯತೆಯ ಭಂಡಾರವೇ ಲಭ್ಯವಿದೆ. ಇವುಗಳ ಆಕರ್ಷಣೆಯನ್ನು ಹತ್ತಿಕ್ಕುವುದು ಅಷ್ಟು ಸುಲಭವಲ್ಲ. ತಿನ್ನಲೇಬೇಕಾದರೆ ಕಡಿಮೆ ಅನಾರೋಗ್ಯಕರವಾಗಿರುವ ಆಹಾರ ತಿನ್ನುವುದೇ ಜಾಣತನ ಎಂದು ಕೆಲವರ ಅಭಿಪ್ರಾಯವಾಗಿದೆ. ಆಯ್ಕೆ ಅಷ್ಟು ಸುಲಭವಲ್ಲ. ಈ ದ್ವಂದ್ವವನ್ನು ಸುಲಭಗೊಳಿಸಲು ನಮ್ಮದೇ ಆದ ಸಮೋಸಾ ಹಾಗೂ ಇಟಲಿ ಮೂಲದ ಪಿಜ್ಜಾ ಗಳನ್ನು ಹೋಲಿಸಿ ನೋಡೋಣ...

  ಸಮೋಸಾ ವಿರುದ್ಧ ಪಿಜ್ಜಾ: ಇವೆರಡರಲ್ಲಿ ಯಾವ ಆಹಾರ ಹೆಚ್ಚು ಆರೋಗ್ಯಕರ?

  ಪಿಜ್ಜಾದಲ್ಲಿ ಮುಖ್ಯವಾಗಿ ನಮ್ಮ ದೋಸೆಯಂತಹ ದಪ್ಪನೆಯ ರೊಟ್ಟಿ ಹಾಗೂ ಇದರ ಮೇಲೆ ವಿವಿಧ ಮಸಾಲೆ ಹಾಗೂ ತರಕಾರಿಗಳನ್ನು ಅಥವಾ ಮಾಂಸದ ತುಣುಕುಗಳನ್ನು ಸಿಂಗರಿಸಿ ಬೇಯಿಸಲಾಗುತ್ತದೆ. ಇದು ಹೆಚ್ಚಿನ ಕಾರ್ಬೋಹೈಡ್ರೇಟುಗಳನ್ನು ಹೊಂದಿದೆ ಹಾಗೂ ರುಚಿಗಾಗಿ ಸವರುವ ಒಂದು ಪದರ ಚೀಸ್ ಅತಿಹೆಚ್ಚಿನ ಕೊಬ್ಬು ಹೊಂದಿದೆ. ಒಟ್ಟಾರೆಯಾಗಿ ಇದೊಂದು ಹೆಚ್ಚಿನ ಕ್ಯಾಲೋರಿ ಒದಗಿಸುವ ಸಿದ್ಧ ಆಹಾರವಾಗಿದ್ದು ಮೈದಾ ಉಪಯೋಗಿಸಿರುವ ಕಾರಣ ನಾರಿಲ್ಲದೇ ಜೀರ್ಣಕ್ರಿಯೆ ಕಷ್ಟವಾಗಿಸುತ್ತದೆ ಹಾಗೂ ಮಲಬದ್ದತೆಯ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

  ಇದಕ್ಕೆದುರಾಗಿರುವ ಸಮೋಸಾವನ್ನು ಸಹಾ ಮೈದಾಹಿಟ್ಟಿನ ಚಪಾತಿ ತಯಾರಿಸಿ ಇದರೊಳಗೆ ಬೇಯಿಸಿದ ಆಲುಗಡ್ಡೆ, ಬಟಾಣಿ ಹಾಗೂ ಇತರ ಮಸಾಲೆಗಳನ್ನು ತುಂಬಿಸಿ ಬದಿಗಳನ್ನು ಮುಚ್ಚಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಆಲುಗಡ್ಡೆ ಸಹಾ ಹೆಚ್ಚಿನ ಕಾರ್ಬೋಹೈಡ್ರೇಟುಗಳನ್ನು ಹೊಂದಿದೆ. ಎಣ್ಣೆಯಲ್ಲಿ ಕರಿದಿರುವ ಕಾರಣ ಹಿಟ್ಟಿನೊಳಗೂ ಎಣ್ಣೆ ತುಂಬಿಕೊಂಡು ಹೆಚ್ಚಿನ ಎಣ್ಣೆಯಂಶ ಉಳಿದಿರುತ್ತದೆ. ಒಟ್ಟಾರೆಯಾಗಿ ಸಮೋಸಾ ಸಹಾ ಅನಾರೋಗ್ಯಕರ ಹಾಗೂ ಕೊಬ್ಬು ಹೆಚ್ಚಿಸುವ ಆಹಾರವೇ ಆಗಿದೆ.

  Samosa

  ಸುಮಾರು ನೂರು ಗ್ರಾಂ ಪಿಜ್ಜಾದಲ್ಲಿ 276 ಕ್ಯಾಲೋರಿಗಳಿದ್ದರೆ ಇಷ್ಟೇ ಪ್ರಮಾಣ ಸಮೋಸಾದಲ್ಲಿ ಸುಮಾರು ನಾನೂರು ಕ್ಯಾಲೋರಿಗಳಿರುತ್ತವೆ. ಆದ್ದರಿಂದ ಕೊಬ್ಬು ಮತ್ತು ಕಾರ್ಬೋಹೈಡ್ರೇಟುಗಳಿರುವ ಕಾರಣ ಪಿಜ್ಜಾ ಅನಾರೋಗ್ಯಕರ ಆಹಾರವೆಂದು ಪರಿಗಣಿಸಿದರೆ ಇದಕ್ಕೂ ಹೆಚ್ಚಿನ ಕೊಬ್ಬು, ಕ್ಯಾಲೋರಿಗಳು ಹಾಗೂ ಎಣ್ಣೆಯಂಶ ಹೊಂದಿದ ಸಮೋಸಾ ಇನ್ನಷ್ಟು ಹೆಚ್ಚು ಅನಾರೋಗ್ಯಕರ ಆಹಾರವಾಗಿದೆ.

  ಒಂದು ವೇಳೆ ನೀವು ಸಹಾ ಮೋಟು-ಪತ್ಲು ಎಂಬ ಕಾರ್ಟೂನು ಶೃಂಖಲೆಯ ಮೋಟುವಿನಂತೆ ಸಮೋಸಾಪ್ರಿಯರಾಗಿದ್ದರೆ ಇದನ್ನು ಕಣ್ಣಿನಿಂದ ನೋಡಿ ಮೆಚ್ಚುಕೊಳ್ಳುವುದೇ ಮೇಲು. ಸಮೋಸಾ ಆಕರ್ಷಣೆ ತಡೆಯಲಸಾಧ್ಯವಾದರೆ ಮಾರುಕಟ್ಟೆಯಲ್ಲಿ ಸಿಗುವ ಅನಾರೋಗ್ಯಕರ ಸಮೋಸಾಗಳಿಗಿಂತ ಮನೆಯಲ್ಲಿಯೇ ತಯಾರಿಸಿದ ಬೇಯಿಸಿದ ಅಥವಾ ಕಡಿಮೆ ಎಣ್ಣೆಯ ಮೂಲಕ ಹುರಿದಿರುವ ಸಮೋಸಾ ತಿನ್ನುವ ಮೂಲಕ ಆರೋಗ್ಯಕರ ಆಹಾರವನ್ನು ಸೇವಿಸಬಹುದು.

  English summary

  Samosa VS Pizza : Find Out Which One Of These Foods Is Healtheir!

  Starting from the western junk foods like pizzas, burgers, pasteries, etc., to our very own Indian delicacies like samosas, kachoris, chaats and so on - there is no dearth of junk food in the world. So, it can be rather hard to stay in control with all these deliciously unhealthy foods around us. Now, if we want to indulge in junk food once in a while and still keep our health intact, then we must try to become aware of which of the junk foods are unhealthier in comparison to the others. Let's take two top favourites of people across the globe - pizza and samosa and learn which one is the least healthy, in this article.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more