ಹೊಟ್ಟೆಯ ಕಲ್ಮಶಗಳನ್ನು ಹೊರಹಾಕಲು ಸರಳ ಟಿಪ್ಸ್- ಹೀಗೆ ಮಾಡಿ

By: Arshad
Subscribe to Boldsky

ನಮ್ಮ ದೇಹವನ್ನು ಸೇರುವ ಆಹಾರದಲ್ಲಿರುವ ಕಲ್ಮಶಗಶಗಳು ಪೂರ್ಣವಾಗಿ ಹೊರಹೋಗುವುದಿಲ್ಲ. ಕೊಂಚ ಉಳಿದೇ ಉಳಿಯುತ್ತದೆ. ಆದ್ದರಿಂದ ತಿಂಗಳಿಗೊಂದು ಬಾರಿಯಾದರೂ ಉಳಿದ ಎಲ್ಲಾ ಕಲ್ಮಶಗಳನ್ನು ಹೊರಹಾಕುವುದು ಅನಿವಾರ್ಯವೂ ಆರೋಗ್ಯಕರವೂ ಆಗಿದೆ. ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು-ಉಪ್ಪು ನೀರಿನ ರೆಸಿಪಿ!

ಒಂದು ವೇಳೆ ನಿಮ್ಮ ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ ಈ ವಿಧಾನ ನಿಮಗೆ ಅಗತ್ಯವಾಗಿದ್ದು ನಿಮ್ಮ ದೇಹದಲ್ಲಿ ಅಪಾರ ಪ್ರಮಾಣದ ವಿಷಕಾರಿ ವಸ್ತುಗಳನ್ನು ಸಂಗ್ರಹವಾಗಿರಬಹುದು. ಇವುಗಳನ್ನು ಹೊರಹಾಕದೇ ಇದ್ದರೆ ಇವು ನಿಧಾನವಾಗಿ ಕರುಳುಗಳ ಮೂಲಕ ದೇಹದಲ್ಲಿ ಹೀರಲ್ಪಟ್ಟು ರಕ್ತದ ಮೂಲಕ ಇಡಿಯ ದೇಹವನ್ನು ವ್ಯಾಪಿಸುತ್ತದೆ. ವಾರಂತ್ಯದ ಸಲಹೆ; ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು

ಸೇಬುಹಣ್ಣಿನಲ್ಲಿ ಪೆಕ್ಟಿನ್ ಎಂಬ ಪೋಷಕಾಂಶವಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಪೋಷಕಾಂಶ ಕರುಳುಗಳ ಒಳಗೆ ಸಂಗ್ರಹವಾಗಿದ್ದ ಕಲ್ಮಶಗಳನ್ನು ಸ್ಪಂಜಿನಂತೆ ಆಕರ್ಷಿಸಿ ಉಂಡೆಗಟ್ಟಿಸುತ್ತದೆ ಹಾಗೂ ಸುಲಭವಾಗಿ ವಿಸರ್ಜಿಸುವ ಮೂಲಕ ದೇಹದಲ್ಲಿ ಕಲ್ಮಶಗಳು ಇಲ್ಲವಾಗುತ್ತವೆ. ಸೇಬುಹಣ್ಣಿನ ನೆರವಿನಿಂದ ಈ ಕಲ್ಮಶಗಳನ್ನು ಹೇಗೆ ಹೊರಹಾಕಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.... 

#1

#1

ಬೆಳಿಗ್ಗೆದ್ದ ತಕ್ಷಣ ಒಂದು ಲೋಟ ಸೇಬಿನ ರಸವನ್ನು ಯಾವುದೇ ಸಕ್ಕರೆ ಬೆರೆಸದೇ ಕುಡಿಯಿರಿ. ಅಗತ್ಯವೆನಿಸಿದರೆ ಅರ್ಧ ಲಿಂಬೆಯ ರಸವನ್ನು ಸೇರಿಸಬಹುದು.

#2

#2

ಮಾರುಕಟ್ಟೆಯಲ್ಲಿ ಸಿಗುವ ಸೇಬಿನ ರಸದಲ್ಲಿ ಹಣ್ಣಿನ ರಸದ ಪ್ರಮಾಣ ತುಂಬಾ ಕಡಿಮೆ ಇರುವ ಕಾರಣ ಇದು ಅಷ್ಟು ಪ್ರಯೋಜನವಾಗುವುದಿಲ್ಲ. ಬದಲಿಗೆ ಮನೆಯಲ್ಲಿಯೇ ತಯಾರಿಸುವುದು ಉತ್ತಮ.

#3

#3

ಸುಮಾರು ಎರಡು ಅಥವಾ ಮೂರು ಗಂಟೆಗಳ ನಂತರ ಎರಡು ಸೇಬುಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಿ.

#4

#4

ಮಧ್ಯಾಹ್ನದ ಊಟದ ಸಮಯದಲ್ಲಿ ಕೊಂಚ ಹಸಿರು ಟೀಯಲ್ಲಿ ಕೊಂಚ ಜೇನು ಬೆರೆಸಿ ಕುಡಿಯಿರಿ.

#5

#5

ಇದಾದ ನಂತರ ಸುಮಾರು ಎರಡು ಗಂಟೆಗಳ ಬಳಿಕ ಮತ್ತೊಮ್ಮೆ 2-4 ಸೇಬುಹಣ್ಣುಗಳನ್ನು ತಿನ್ನಿ

#6

#6

ಸಂಜೆಯ ಹೊತ್ತಿನ ಇನ್ನೊಂದು ಲೋಟ ಸೇಬಿನ ರಸ ಸೇವಿಸಿ

#7

#7

ರಾತ್ರಿಯ ಊಟಕ್ಕೆ ಒಂದೆರಡು ಸೇಬಿನ ತಿರುಳಿಗೆ (ಸಿಪ್ಪೆ, ಬೀಜಗಳನ್ನು ನಿವಾರಿಸಿದ ಬಳಿಕ ಉಳಿದ ತಿರುಳು) ಕೊಂಚ ಜೇನನ್ನು ಬೆರೆಸಿ ಸೇವಿಸಿ.

 
English summary

Remedy To Detox Your Body Once A Month

It is mandatory that each and every person go for a full body detox at least once in a month. This should be done in order to get rid of the toxins in the body. If you're following a poor diet, then this detox is compulsory, as it would have created huge amounts of toxins in the digestive system that need to be expelled out. The toxins will otherwise continue to expand and get absorbed into the body.
Please Wait while comments are loading...
Subscribe Newsletter