ಬೆಳಿಗ್ಗೆ ಎದ್ದ ಕೂಡಲೇ ಮೊದಲು ಒಂದೆರಡು ಲೋಟ ನೀರು ಕುಡಿಯಿರಿ

By: manu
Subscribe to Boldsky

ಜಪಾನಿಯರು ತುಂಬಾ ಚುರುಕಾಗಿರುತ್ತಾರೆ ಮತ್ತು ಅವರು ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ವಿಚಾರವನ್ನು ನಾವು ಕೇಳಿದ್ದೇವೆ. ಇದಕ್ಕೆಲ್ಲದಕ್ಕೂ ಅವರು ಪಾಲಿಸಿಕೊಂಡು ಹೋಗುವಂತಹ ಆಹಾರ ಕ್ರಮವೇ ಪ್ರಮುಖ ಕಾರಣವಾಗಿದೆ. ಜಪಾನಿಯರು ಎದ್ದ ಬಳಿಕ ಉಗುರು ಬೆಚ್ಚಗಿನ ನೀರು ಕುಡಿಯುತ್ತಾರೆ. ಇದರಿಂದ ಅವರು ದಿನವಿಡಿ ಚುರುಕಾಗಿರುತ್ತಾರೆ ಎನ್ನಲಾಗುತ್ತದೆ. ಎದ್ದ ಕೂಡಲೇ ಒಂದೆರಡು ಲೋಟ ನೀರು ಕುಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ನಮ್ಮ ದೇಹಕ್ಕೆ ಆಗುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ.  ನೆನಪಿಟ್ಟುಕೊಳ್ಳಿ- ಇನ್ನೆಂದಿಗೂ 'ನಿಂತು ನೀರು' ಕುಡಿಯಬೇಡಿ!

ರಾತ್ರಿ ನಾವು ಮಲಗಿದ ಬಳಿಕ ನೀರಿನಾಂಶವು ದೇಹಕ್ಕೆ ಸಿಗದೆ ಇರುವ ಕಾರಣದಿಂದ ದೇಹವು ಸಂಪೂರ್ಣವಾಗಿ ಒಣಗಿರುತ್ತದೆ. ಇದರಿಂದ ಎದ್ದ ತಕ್ಷಣ ನೀರು ಕುಡಿದು ದೇಹಕ್ಕೆ ತೇವಾಂಶವನ್ನು ನೀಡಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದ ಸಂಪೂರ್ಣ ವ್ಯವಸ್ಥೆ ಸಂಚಲನಗೊಳ್ಳುತ್ತದೆ...   ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳು ಸಿಗಲಿದೆ ಎಂದು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಬಹುದು. ಅದರಲ್ಲೂ ಎದ್ದ ಒಂದೇ ನಿಮಿಷದಲ್ಲಿ ನೀರು ಕುಡಿದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು. ಅದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ....   

 

ಜೀರ್ಣಕ್ರಿಯೆಯನ್ನು ಆರಂಭಿಸುವುದು

ಜೀರ್ಣಕ್ರಿಯೆಯನ್ನು ಆರಂಭಿಸುವುದು

ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು 1.5 ಗಂಟೆಗಳ ಕಾಲ ಶೇ.24ರಷ್ಟು ಹೆಚ್ಚಿಸುವುದು.

ದೇಹದ ಕಲ್ಮಶಗಲನ್ನು ಹೊರಹಾಕುವುದು

ದೇಹದ ಕಲ್ಮಶಗಲನ್ನು ಹೊರಹಾಕುವುದು

ರಕ್ತದಲ್ಲಿ ಇರುವಂತಹ ವಿಷಕಾರಿ ಅಂಶ ಹಾಗೂ ಕಲ್ಮಶಗಳನ್ನು ಕಿಡ್ನಿಯು ಹೊರಹಾಕುವುದು. ಅಲ್ಲದೆ ಕಿಡ್ನಿಗೆ ತನ್ನ ಕಾರ್ಯವನ್ನು ಮಾಡಲು ಹೆಚ್ಚಿನ ನೀರಿನಾಂಶದ ಅಗತ್ಯವಿರುತ್ತದೆ.

ತಿನ್ನುವುದು ಕಡಿಮೆಯಾಗುವುದು

ತಿನ್ನುವುದು ಕಡಿಮೆಯಾಗುವುದು

ಹಸಿವಾದಾಗ ಒಂದು ಲೋಟ ನೀರನ್ನು ಕುಡಿದರೆ ಅದರಿಂದ ಹಸಿವು ಕಡಿಮೆಯಾಗುವುದು. ಬಾಯಾರಿಕೆಯನ್ನು ಹಸಿವು ಎಂದು ತಿಳಿದು ತಿನ್ನುವುದು ಕೂಡ ಕಡಿಮೆಯಾಗುತ್ತದೆ. ಎದ್ದ ಒಂದು ನಿಮಿಷದಲ್ಲಿ ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯಿರಿ.

ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ದೇಹವನ್ನು ತೇವಾಂಶದಿಂದ ಇಡುವುದರಿಂದ ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯನಿರ್ವಹಿಸುವುದು. ಇದರಿಂದ ದೇಹದ ಪ್ರತಿರೋಧಕ ಶಕ್ತಿ ಕೂಡ ಹೆಚ್ಚಿ ಹಲವಾರು ರೋಗಗಳ ವಿರುದ್ಧ ಹೋರಾಡುವಂತೆ ಮಾಡುವುದು.

ಚರ್ಮಕ್ಕೆ ಕಾಂತಿ ನೀಡುವುದು

ಚರ್ಮಕ್ಕೆ ಕಾಂತಿ ನೀಡುವುದು

ದೇಹವು ತೇವಾಂಶದಿಂದ ಇದ್ದರೆ ಚರ್ಮವು ಕಾಂತಿಯುತವಾಗಿ ಕಾಣುವುದು. ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿದರೆ ಚರ್ಮದ ಸೌಂದರ್ಯವು ಹೆಚ್ಚಾಗುವುದು.

ಕರುಳಿನ ಆರೈಕೆ

ಕರುಳಿನ ಆರೈಕೆ

ಕರುಳಿನ ಕೆಲಸ ಮಾಡಬೇಕಾದರೆ ನೀರು ಅಗತ್ಯವಾಗಿರುತ್ತದೆ. ನೀರು ಸರಿಯಾಗಿ ಕುಡಿಯದೆ ಇದ್ದರೆ ಕರುಳು ಕಲ್ಮಷದಿಂದ ನೀರನ್ನು ಹೀರಿಕೊಳ್ಳುವುದು. ಇದರಿಂದ ತೊಂದರೆಯುಂಟಾಗುತ್ತದೆ. ದೇಹದಲ್ಲಿ ನೀರಿನಾಂಶವು ಸರಿಯಾಗಿದ್ದರೆ ಕರುಳು ಕೂಡ ತನ್ನ ಕಾರ್ಯವನ್ನು ಸರಿಯಾಗಿ ಮಾಡುತ್ತದೆ.

 

English summary

Reasons Why You Must Drink A Glass Of Water 60 Seconds After You Wake Up

Drinking water on an empty stomach helps refine the body. It also recharges the body and kick-starts all other body processes with vigour. In this article, we have listed some of the main reasons on why drinking water in the morning is good for health.
Story first published: Tuesday, April 25, 2017, 23:42 [IST]
Subscribe Newsletter