Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಒಂದು ವೇಳೆ ಗಾಯದಿಂದ ರಕ್ತ ಬರುತ್ತಿದ್ದರೆ, ಈ ಟಿಪ್ಸ್ ಅನುಸರಿಸಿ
ಮನೆಯಲ್ಲಿ ಪುಟಾಣಿ ಮಕ್ಕಳಿದ್ದಾಗ ಅವರ ಕಲರವ ತುಂಟಾಟ ಸಹಜವೇ ಆಗಿರುತ್ತದೆ ಮತ್ತು ಇದು ನಿಮ್ಮ ಮನಸ್ಸನ್ನು ತಣಿಸುವುದೂ ಖಂಡಿತ. ಹಿಂದಿನವರು ಹಾಡಿದಂತೆ ಮಕ್ಕಳಿರಲವ್ವ ಮನೆತುಂಬಾ ಇದರಿಂದ ಮನದ ಚಿಂತೆ ದೂರಾಗುತ್ತದಂತೆ. ಮಕ್ಕಳು ತಮ್ಮ ಆಟಪಾಠಗಳ ಸಮಯದಲ್ಲಿ ಬೀಳುವುದು ಗಾಯ ಮಾಡಿಕೊಳ್ಳುವುದು ನಂತರ ಬರುವ ಅಳು, ಪುನಃ ಅದುವೇ ತುಂಟಾಟ ಇದೆಲ್ಲಾ ಸಹಜವೇ ಆಗಿದೆ. ತ್ವಚೆಯ ಸುಟ್ಟ ಗಾಯ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ!
ಆದರೆ ನಿಮ್ಮ ಮಗುವಿನ ಗಾಯ ನಿಮ್ಮನ್ನಂತೂ ಹೈರಾಣಾಗಿಸಿಬಿಡುತ್ತದೆ. ಮಗುವಿಗೆ ಆಗಿರುವ ಗಾಯ ಸಣ್ಣದಾಗಿದ್ದರೂ ನಿಮಗೆ ಎಲ್ಲಿಲ್ಲದ ಗಾಬರಿ ಭಯ. ಇನ್ನು ರಕ್ತವನ್ನು ನೋಡಿದರಂತೂ ನಿಮ್ಮ ಕಂದನ ಅಳುವಿನೊಂದಿಗೆ, ನಿಮಗೂ ಟೆನ್ಷನ್ ಆಗಿಬಿಡುತ್ತದೆ... ಗಾಯ ಮಾಸಿದರೂ ಕಾಡುವ ಹಳೆ ಕಲೆಗಳು! ಇಲ್ಲಿದೆ ಮನೆಮದ್ದು
ಹಾಗಿದ್ದರೆ ಈ ಗಾಯಗಳನ್ನು ಕೂಡಲೇ ಪರಿಹರಿಸಲು ಉರಿಯನ್ನು ಶಮನ ಮಾಡಲು ಸೋರುತ್ತಿರುವ ರಕ್ತವನ್ನು ನಿಯಂತ್ರಿಸಲು ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನಾವು ತಿಳಿಸುತ್ತಿದ್ದೇವೆ. ಈ ಮನೆಮದ್ದುಗಳನ್ನು ದೊಡ್ಡವರು ಮಾಡಿಕೊಂಡ ಗಾಯಕ್ಕೂ ಬಳಸಬಹುದಾಗಿದೆ. ಮನೆಯಲ್ಲೇ ಇರುವ ಸಾಮಾಗ್ರಿಗಳಿಂದ ನಿಮಗಾದ ನೋವಿಗೆ ಶಮನವನ್ನು ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ....

ಕಾಫಿ ಹುಡಿ
ರಕ್ತ ಸೋರುತ್ತಿರುವ ಗಾಯಕ್ಕೆ ಕಾಫಿ ಹುಡಿಯನ್ನು ಹಾಕಿ. ಇದು ಗಾಯವನ್ನು ಮುಚ್ಚಲು ನೆರವುಕಾರಿಯಾಗಿದೆ. ಅಂತೆಯೇ ಗಾಯವನ್ನು ಗುಣಪಡಿಸುವ ಸರಳ ವಿಧಾನ ಕೂಡ ಹೌದು.

ಅರಿಶಿನ
ರಕ್ತವನ್ನು ನಿಲ್ಲಿಸಲು ಗಾಯದ ಮೇಲೆ ಚಿಟಿಕೆಯಷ್ಟು ಅರಿಶಿನ ಹುಡಿಯ ಪ್ರಯೋಗವನ್ನು ಮಾಡಿ. ಉಳಿದ ಭಾಗಕ್ಕೆ ಸೋಂಕು ಹರಡದಂತೆ ಇದು ತಡೆಯುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ರಕ್ತವನ್ನು ನಿಯಂತ್ರಣಕ್ಕೆ ತರುತ್ತದೆ.

ಟೀ ಬ್ಯಾಗ್
ಟೀ ಬ್ಯಾಗ್ ಅನ್ನು ತಣ್ಣೆಯ ನೀರಿನಲ್ಲಿ ಮುಳುಗಿಸಿ ಮತ್ತು ಅದನ್ನು ಗಾಯದ ಮೇಲೆ ಒತ್ತಿಹಿಡಿದುಕೊಳ್ಳಿ. ಇದೂ ಕೂಡ ಶೀಘ್ರದಲ್ಲೇ ರಕ್ತವನ್ನು ತಡೆಹಿಡಿಯುತ್ತದೆ.

ಟೂತ್‌ಪೇಸ್ಟ್
ರಕ್ತ ನಿಲ್ಲುವಂತಾಗಲು ಟೂತ್ ಪೇಸ್ಟ್ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಇದು ತ್ವಚೆಯಲ್ಲಿ ಸಂಕೋಚನವನ್ನು ಉಂಟುಮಾಡಿ ರಕ್ತಹರಿಯುವಿಕೆಯನ್ನು ತಡೆಯುತ್ತದೆ.

ಗ್ಲಾಸ್
ಗಾಯದ ಮೇಲೆ ಚಿಕ್ಕ ತುಂಡಿನ ಗಾಜನ್ನು ಇರಿಸಿ ಮೃದುವಾಗಿ ಒತ್ತಿ. ಇದರಿಂದ ರಕ್ತ ನಿಯಂತ್ರಣಕ್ಕೆ ಬರುತ್ತದೆ. ಗಾಜು ಇಲೆಕ್ಟ್ರೊ ನೆಗೆಟೀವ್ ಚಾರ್ಜ್ ಅನ್ನು ಪಡೆದುಕೊಂಡಿದೆ. ಆದರೆ ಗಾಜು ಬಳಸುವಾಗ ಹೆಚ್ಚಿನ ಜಾಗರೂಕತೆಯನ್ನು ನೀವು ಪಾಲಿಸಬೇಕಾಗುತ್ತದೆ.

ಜೋಳದ ಗಂಜಿ
ಈ ಮನೆಮದ್ದಿನಿಂದ ಸರಳವಾಗಿ ನಿಮಗೆ ರಕ್ತವನ್ನು ತಡೆಹಿಡಿಯಬಹುದಾಗಿದೆ. ಗಾಯಕ್ಕೆ ನೇರವಾಗಿ ಜೋಳದ ಗಂಜಿಯನ್ನು ಹಚ್ಚಿರಿ. ಇದು ರಕ್ತವನ್ನು ಹೀರಿಕೊಳ್ಳುತ್ತದೆ ಮತ್ತು ಹೆಪ್ಪುಗಟ್ಟಲು ನೆರವಾಗುತ್ತದೆ.

ಐಸ್ ಕ್ಯೂಬ್ಸ್
ತೆರೆದ ಗಾಯದ ಮೇಲೆ ಐಸ್ ಕ್ಯೂಬ್‌ಗಳನ್ನು ಒತ್ತಿಹಿಡಿಯಿರಿ. ತ್ವಚೆಯ ಕೋಶಗಳನ್ನು ಮತ್ತು ಅಂಗಾಂಶಗಳನ್ನು ರಚಿಸಿಕೊಂಡು ಇದು ರಕ್ತ ಸೋರುವಿಕೆಯನ್ನು ನಿಯಂತ್ರಿಸುತ್ತದೆ.

ಸೇಂಟ್ ಜಾನ್ಸ್ ವೋರ್ಟ್
ಇದು ಆಂಟಿಸೆಪ್ಟಿಕ್ ಮತ್ತು ಆಂಟಿವೈರಲ್ ಅಂಶಗಳನ್ನು ಹೊಂದಿದೆ. ಇದರ ಎಲೆಯನ್ನು ಗಾಯದ ಮೇಲೆ ಹಚ್ಚುವುದರಿಂದ ಇದು ಗಾಯವನ್ನು ಬೇಗನೇ ಒಣಗಿಸುತ್ತದೆ ಮತ್ತು ಸೋಂಕಿನಿಂದ ತಡೆಯುತ್ತದೆ.

ವಿಚ್ ಹೇಜಲ್
ರಕ್ತಸ್ರಾವವನ್ನು ತಡೆಯಲು ಮತ್ತು ಗಾಯವನ್ನು ಒಣಗಿಸಲು ಇದು ನೈಸರ್ಗಿಕ ವಿಧಾನವಾಗಿದೆ. ಇದು ಸೋಂಕಿನಿಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ ಇದು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದೆ.

ಉಪ್ಪು
ರಕ್ತವನ್ನು ನಿಲ್ಲಿಸಲು ಉಪ್ಪಿನ ಬಳಕೆಯನ್ನು ಮಾಡಬಹುದಾಗಿದೆ. ಇದು ಕೊಂಚ ನೋವನ್ನು ಉಂಟುಮಾಡಿದರೂ ಶೀಘ್ರದಲ್ಲೇ ಪರಿಣಾಮಕಾರಿ ಎಂದೆನಿಸಿದೆ. ಗಾಯದಿಂದ ಒಸರುತ್ತಿರುವ ರಕ್ತವನ್ನು ಹೀರಿಕೊಳ್ಳಲು ಉಪ್ಪು ಸಹಕಾರಿಯಾಗಿದೆ. ಇದು ಗಾಯವನ್ನು ಬೇಗನೇ ಮುಚ್ಚಲು ಸಹಕಾರಿಯಾಗಿದ್ದು ಮತ್ತು ಸೋಂಕು ಉಂಟಾಗದಂತೆ ತಡೆಯುತ್ತದೆ.



Click it and Unblock the Notifications