For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಗ್ಲಾಸ್ ಅರಿಶಿನ ಬೆರೆಸಿದ ನೀರು- ಆರೋಗ್ಯ ಗಟ್ಟಿ-ಮುಟ್ಟು

By Manu
|

ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನಾದರೂ ಮಾಡುತ್ತಲೇ ಇರಬೇಕಾಗುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ತೆಗೆದುಕೊಳ್ಳುವಂತಹ ಕೆಲವೊಂದು ಆಹಾರಗಳು, ಪಾನೀಯ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದಕ್ಕಾಗಿಯೇ ನಾವು ಬೆಳಿಗ್ಗೆ ಎದ್ದು ಬಿಸಿ ನೀರಿಗೆ ಲಿಂಬೆ ರಸ ಹಾಕಿ ಕುಡಿಯುವುದು, ಯಾವುದಾದರೂ ಹಣ್ಣುಗಳು ಜ್ಯೂಸ್ ಕುಡಿಯುವುದು ನಮ್ಮ ದೇಹಕ್ಕೆ ಒಳ್ಳೆಯದೇ. ಆದರೆ ನಾವು ಅಡುಗೆಯಲ್ಲಿ ಬಳಸುವಂತಹ ಅರಿಶಿನವು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯಾ?

ಹೌದು, ಇದರಲ್ಲಿರುವ ಊರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು, ಆಗಾಧ ಪ್ರಮಾಣದಲ್ಲಿರುವುದರಿಂದ. ಅರಿಶಿನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಕರ್ಕ್ಯೂಮಿನಂತಹ ಅಂಶವು ವೈಜ್ಞಾನಿಕ ವಲಯದಲ್ಲಿ ಅರಿಶಿನಕ್ಕೆ ಒಂದು ಉನ್ನತ ಸ್ಥಾನವನ್ನು ನೀಡಿದೆ. ಅರಿಶಿನಲ್ಲಿ ಶಮನಕಾರಿ ಗುಣಗಳು ಇವೆ ಎನ್ನುವುದು ಇತ್ತೀಚಿನ ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾದರೆ ಅರಿಶಿನದ ನೀರನ್ನು ಮಾಡುವುದು ಹೇಗೆ ಎನ್ನುವುದು ನೀವು ತಿಳಿದುಕೊಳ್ಳಿ.....

ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ, ಕೊಂಚ ಲಿಂಬೆರಸ ಹಾಗೂ ಕೊಂಚ ಜೇನು ಬೆರೆಸಿದರೆ ಹಲವು ಕಾಯಿಲೆಗಳನ್ನು ಗುಣಪಡಿಸಬಲ್ಲ ಸಿದ್ಧೌಷದ ತಯಾರಾದಂತೆ. ಇದನ್ನು ಸರಿಯಾಗಿ ಕಳಸಿ, ಬೆಳಗ್ಗಿನ ವೇಳೆ ಬಿಸಿ ಇರುವಾಗಲೇ ಬರೀ ಹೊಟ್ಟೆಗೆ ಸೇವಿಸಿ....

ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ

ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ

ಅರಿಶಿನದ ನೀರು ಸೇವಿಸುವ ಮೂಲಕ ಇನ್ಸುಲಿನ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ತಿಂಗಳೊಳಗೆ 'ಟೈಪ್-2 ಮಧುಮೇಹ' ನಿಯಂತ್ರಣಕ್ಕೆ! ಇಲ್ಲಿದೆ ನೋಡಿ ಟಿಪ್ಸ್

ಉರಿಯೂತ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟ್ ಗುಣಗಳು

ಉರಿಯೂತ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟ್ ಗುಣಗಳು

ಒಂದು ವೇಳೆ ಉರಿಯೂತ ತೀರಾ ಹೆಚ್ಚಾಗಿದ್ದರೆ ಪ್ರಾಣಾಪಾಯವೂ ಉಂಟಾಗಬಹುದು...ಅರಿಶಿನದಲ್ಲಿರುವ ಕುರ್ಕುಮಿನ್ ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಹಲವಾರು ಉರಿಯೂತಗಳಿಂದ ರಕ್ಷಿಸುತ್ತದೆ.

ಸಂಧಿವಾತದಿಂದ ಶಮನ ನೀಡುತ್ತದೆ...

ಸಂಧಿವಾತದಿಂದ ಶಮನ ನೀಡುತ್ತದೆ...

ಅರಿಶಿನ ಬೆರೆಸಿದ ನೀರು ಕುಡಿಯುವ ಮೂಲಕ ದೇಹಕ್ಕೆ ಹಾನಿ ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ದೇಹದ ಜೀವಕೋಶಗಳನ್ನು ಇನ್ನಷ್ಟು ಘಾಸಿಗೊಳಿಸುವುದರಿಂದ ರಕ್ಷಿಸುತ್ತದೆ. ತನ್ಮೂಲಕ ಸಂಧಿವಾತ ಹಾಗೂ ಉರಿಯಿಂದ ಕೂಡಿದ್ದ ಗಂಟುಗಳ ಕಷ್ಟವನ್ನು ನಿವಾರಿಸುತ್ತದೆ.

ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ನರಗಳ ಒಳಗೆ ಅಂಟಿಕೊಳ್ಳುವ ಜಿಡ್ಡನ್ನು ತಡೆಯಲು ಕುರ್ಕುಮಿನ್ ನೆರವಾಗುತ್ತದೆ. ಈ ಮೂಲಕ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಿ ಹಲವಾರು ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ನೀಡುತ್ತದೆ

ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ನೀಡುತ್ತದೆ

ಒಮ್ಮೆ ಕ್ಯಾನ್ಸರ್‌ಗೆ ಒಳಗಾದ ಜೀವಕೋಶಗಳು ಪ್ರಾರಂಭವಾದರೆ ಇದು ಬೆಳೆದು ಹರಡಲು ಹೆಚ್ಚು ಸಮಯ ಬೇಕಾಗಿಲ್ಲ. ಆದರೆ ಅರಿಶಿನ ಬೆರೆತ ನೀರನ್ನು ಕುಡಿಯುತ್ತಾ ಬರುವ ಮೂಲಕ ಈ ಜೀವಕೋಶಗಳು ಮುಂದಕ್ಕೆ ಬೆಳೆಯದಂತೆ ಹಾಗೂ ಉಳಿದ ಭಾಗಗಳಿಗೆ ಹರಡದಂತೆ ತಡೆಯುವ ಮೂಲಕ ಕೆಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುತ್ತದೆ.

English summary

Pour A Spoon Of Turmeric Into Water And Cure These Diseases

Turmeric with water is known to have strong anti-inflammatory and anti-carcinogenic properties. Warm water of turmeric with lemon and honey is a remedy for all illnesses. Turmeric is known to be the most powerful herb, ever known to mankind. It is also known to be disease-reversing spice. It has several healing properties. Turmeric is also known to contain bioactive compounds with amazing medicinal properties.
X
Desktop Bottom Promotion