For Quick Alerts
ALLOW NOTIFICATIONS  
For Daily Alerts

ಪ್ರತಿನಿತ್ಯ ಒಂದು 'ದಾಳಿಂಬೆ ಹಣ್ಣು' ಸೇವಿಸಿ-ಯಾವ ಕಾಯಿಲೆಯೂ ಬರಲ್ಲ...

By Manu
|

ನಮ್ಮ ಕವಿಗಳು ಸುಂದರವಾದ ಹಲ್ಲುಗಳನ್ನು ದಾಳಿಂಬೆ ಹಣ್ಣಿನ ಕಾಳುಗಳಿಗೆ ಹೋಲಿಸಿ ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಇಲ್ಲಿ ಕಾಳುಗಳ ಹೊಳಪು ಹಲ್ಲುಗಳಿಗೆ ಉಪಮೇಯವಾಗಿದೆಯೇ ಹೊರತು ಕಾಳಿನ ಇತರ ಆರೋಗ್ಯಕರ ಗುಣಗಳಲ್ಲ. ದಾಳಿಂಬೆಯನ್ನು ಸ್ವರ್ಗಲೋಕದ ಹಣ್ಣು ಎಂದು ಕುರಾನ್ ನಲ್ಲಿಯೂ ಪ್ರಸ್ತಾಪಿಸಲಾಗಿದೆ. ಮಾರುಕಟ್ಟೆಯಲ್ಲಿ ದಾಳಿಂಬೆಯ ಬೆಲೆ ಸ್ವಲ್ಪ ದುಬಾರಿ ಬಿಟ್ಟರೆ ಆರೋಗ್ಯಕ್ಕೆ ಮಾತ್ರ ಹಲವು ರೀತಿಯಲ್ಲಿ ಉಪಕಾರಿಯಾಗಿದೆ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಕೆ ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಅಲ್ಲದೆ ಹೇರಳ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಕೇವಲ ಕಾಳುಗಳು ಮಾತ್ರವಲ್ಲ, ಇದರ ಸಿಪ್ಪೆ ಸಹಾ ಹಲವು ಆರೋಗ್ಯಕರ ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿದೆ.


'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

ಅದರಲ್ಲೂ ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಹಲವು ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಉದಾಹರಣೆಗೆ ಹೃದಯದ ತೊಂದರೆ, ಕ್ಯಾನ್ಸರ್ ಮೊದಲಾದ ತೊಂದರೆಗಳಿಂದ ರಕ್ಷಣೆ ನೀಡುವುದರ ಜೊತೆಗೇ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಉಲ್ಲಾಸದ ಮನೋಭಾವನ್ನು ಹೆಚ್ಚಿಸುವುದು, ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುವುದು. ಹೀಗೆ ಹತ್ತು ಹಲವು ರೋಗಗಳನ್ನು ಗುಣ ಪಡಿಸುವ ಶಕ್ತಿ ಈ ದಾಳಿಂಬೆ ಒಳಗೊಂಡಿದೆ... ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ..

ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL-low density lipids) ಶೇಖರಣೆ ಹೆಚ್ಚುತ್ತಿದ್ದಂತೆ ನರಗಳು ತಿರುವಿದೆಡೆಯಲ್ಲಿ, ಕವಲಿನ ನಡುವಣ ಭಾಗದಲ್ಲಿ ಶೇಖರಗೊಂಡು ರಕ್ತದ ಮೂಲಕ ಬಳಿಕ ಆಗಮನವಾಗುವ ಕೊಲೆಸ್ಟ್ರಾಲ್ ಅನ್ನು ಅಂಟಿಸಿಕೊಂಡು ನರಗಳ ಒಳಭಾಗವನ್ನು ಒತ್ತುತ್ತಾ ಬರುತ್ತದೆ. ಪರಿಣಾಮವಾಗಿ ಹೃದಯಕ್ಕೆ ಈ ಭಾಗದಿಂದ ರಕ್ತವನ್ನು ಸರಬರಾಜು ಮಾಡಲು ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ನೈಸರ್ಗಿಕವಾಗಿ ಸಿಗುವ ಆಂಟಿ ಆಕ್ಸಿಡೆಂಟುಗಳು ಈ ಗಂಟುಗಳನ್ನು ಕರಗಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅಲ್ಲಿಂದ ತೊಲಗಿಸಲು ಸಹಾಯ ಮಾಡುತ್ತದೆ. ಹಸಿರು ಚಹಾದಲ್ಲಿ (ಗ್ರೀನ್ ಟೀ) ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದರೂ ದಾಳಿಂಬೆಯಲ್ಲಿ ಇನ್ನೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ. ತಾಜಾ ದಾಳಿಂಬೆ ಹಣ್ಣುಗಳನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೂರವಾಗಿ ಆರೋಗ್ಯ ವೃದ್ಧಿಸುತ್ತದೆ.

ಕ್ಯಾನ್ಸರ್ ರೋಗಕ್ಕೆ ರಾಮಬಾಣ

ಕ್ಯಾನ್ಸರ್ ರೋಗಕ್ಕೆ ರಾಮಬಾಣ

ದಾಳಿಂಬೆಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುವುದರಿಂದ ದೇಹ ಕ್ಯಾನ್ಸರ್ ರೋಗವನ್ನು ಎದುರಿಸಲು ಹೆಚ್ಚು ಶಕ್ತಿ ಪಡೆಯುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅಥವಾ ಕ್ಯಾನ್ಸರ್ ಲಕ್ಷಣಗಳು ಗೋಚರಿಸುತ್ತಿದ್ದರೆ ದಾಳಿಂಬೆಯ ನಿಯಮಿತ ಸೇವನೆ ಕ್ಯಾನ್ಸರ್ ನ ಆಗಮನವನ್ನು ದೂರವಿಡುತ್ತದೆ.

ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್
ಕಫ ಮತ್ತು ಗಂಟಲು ನೋವಿಗೆ

ಕಫ ಮತ್ತು ಗಂಟಲು ನೋವಿಗೆ

ಗಂಟಲು ನೋವು ಮತ್ತು ಒಣ ಕೆಮ್ಮಿಗೆ ದಾಳಿಂಬೆ ಸಿಪ್ಪೆಯು ಒಳ್ಳೆಯ ಮನೆಮದ್ದು. ಸ್ವಲ್ಪ ದಾಳಿಂಬೆ ಹುಡಿಯನ್ನು ನೀರಿಗೆ ಹಾಕಿಕೊಂಡು ಅದನ್ನು ಕುದಿಸಿ. ಈ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದರಿಂದ ಗಂಟಲಿನ ಸೋಂಕು ನಿವಾರಣೆಯಾಗುವುದು.

ಪುರುಷರ ಮಿಲನ ಶಕ್ತಿಯನ್ನು ಹೆಚ್ಚಿಸುತ್ತದೆ

ಪುರುಷರ ಮಿಲನ ಶಕ್ತಿಯನ್ನು ಹೆಚ್ಚಿಸುತ್ತದೆ

ದಾಳಿಂಬೆ ಒಂದು ಉತ್ತಮ ಕಾಮೋತ್ತೇಜಕವಾಗಿದೆ. ದಾಳಿಂಬೆಯ ನಿಯಮಿತ ಸೇವನೆಯಿಂದ ದೇಹದಲ್ಲಿ ಹೆಚ್ಚುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನು ಪುರುಷರ ಆಂತರಿಕ ಶಕ್ತಿಯನ್ನು ಹೆಚ್ಚಿಸಿ ಮಿಲನದಲ್ಲಿ ಹೆಚ್ಚು ಉತ್ಸಾಹದಿಂದ ಭಾಗವಹಿಸಲು ನೆರವಾಗುತ್ತದೆ. ದಾಳಿಂಬೆ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಹಣ್ಣಿನ ರಸವನ್ನು ಸೇವಿಸಿದಾಗ ಉತ್ತಮ ಪರಿಣಾಮ ಕಂಡುಬಂದಿದೆ.

ವೃದ್ಧಾಪ್ಯವನ್ನು ದೂರವಿಡುತ್ತದೆ

ವೃದ್ಧಾಪ್ಯವನ್ನು ದೂರವಿಡುತ್ತದೆ

ದಾಳಿಂಬೆಯಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಶಾರೀರಿಕ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯನ್ನೂ ಹೆಚ್ಚಿಸುವ ಕಾರಣ ವೃದ್ಧಾಪ್ಯದ ಚಿಹ್ನೆಗಳು ಬೇಗನೇ ಆವರಿಸದು. ನಮ್ಮ ಚರ್ಮ ಕೊಲಾಜೆನ್ ಮತ್ತು ಎಲಾಸ್ಟಿಕ್ ನಾರುಗಳಿಂದ ಮಾಡಲ್ಪಟ್ಟಿದೆ (collagen and elastic fibres). ಈ ಕೊಲಾಜೆನ್ ಸುಸ್ಥಿತಿಯಲ್ಲಿಡಲು ವಿಟಮಿನ್ ಸಿ ಅಗತ್ಯ. ದಾಳಿಂಬೆಯಲ್ಲಿ ಸಮಪ್ರಮಾಣದಲ್ಲಿರುವ ವಿಟಮಿನ್ ಸಿ ಚರ್ಮದ ಆರೈಕೆ ಮತ್ತು ರಕ್ಷಣೆಗೆ ಕಾರಣವಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಟಮಿನ್ ಸಿ ನ ಇನ್ನೊಂದು ಉಪಯೋಗವೆಂದರೆ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು. ಮಳೆಗಾಲದಲ್ಲಿ ಗಾಳಿ, ನೀರಿನ ಮೂಲಕ ದೇಹಕ್ಕೆ ಧಾಳಿಯಿಡುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ.

ಅಲರ್ಜಿಗೆ ರಾಮಬಾಣ

ಅಲರ್ಜಿಗೆ ರಾಮಬಾಣ

ಹಲವರಿಗೆ ಕೆಲವು ವಸ್ತುಗಳಿಂದ ಅಲರ್ಜಿಯುಂಟಾಗುತ್ತದೆ. ಹೂವಿನ ಪರಾಗ, ಕೀಟಗಳ ಕಚ್ಚುವಿಕೆ, ಕೆಲವು ಗಿಡಗ ಮುಳ್ಳುಗಳು, ಎಲೆ ತುಂಡಾದರೆ ಒಸರುವ ಹಾಲಿನಂತಹ ದ್ರವ ಮೊದಲಾದವು ಅಲರ್ಜಿ ಉಂಟುಮಾಡುತ್ತವೆ. ಈ ಅಲರ್ಜಿಗಳನ್ನು ಎದುರಿಸಲು ದೇಹ ಅದಕ್ಕೆ ಕಾರಣವಾದ ಅಲರ್ಜಿಕಾರಕ ವಸ್ತುವಿಗೆ ಪ್ರತಿರೋಧಿಯನ್ನು ಸೃಷ್ಟಿಸಿಕೊಳ್ಳಬೇಕು. ದಾಳಿಂಬೆಯಲ್ಲಿರುವ polyphenol ಎಂಬ ಕಿಣ್ವ ಈ ಪ್ರತಿರೋಧಿಯನ್ನು ಸೃಷ್ಟಿಸಲು ನೆರವಾಗುತ್ತದೆ. ಪರಿಣಾಮವಾಗಿ ದೇಹ ಅಲರ್ಜಿಯಿಂದ ಶೀಘ್ರ ಹೊರಬರುತ್ತದೆ.

ಹೆಪ್ಪುಗಟ್ಟಿದ ರಕ್ತವನ್ನು ಸ್ವಾಭಾವಿಕವಾಗಿ ಕರಗಿಸುತ್ತದೆ

ಹೆಪ್ಪುಗಟ್ಟಿದ ರಕ್ತವನ್ನು ಸ್ವಾಭಾವಿಕವಾಗಿ ಕರಗಿಸುತ್ತದೆ

ರಕ್ತ ಎರಡು ರೀತಿಯಲ್ಲಿ ಹೆಪ್ಪುಗಟ್ಟುತ್ತದೆ.ಮೊದಲನೆಯದು ಚರ್ಮದ ಮೇಲ್ಭಾಗದಲ್ಲಾಗುವ ಗಾಯದಿಂದ ಅಥವಾ ತರಚಿ ಹೋಗುವುದರಿಂದ ಅದರ ಮೇಲಿನ ರಕ್ತ ಹೆಪ್ಪುಗಟ್ಟುತ್ತದೆ. ಮುಖ್ಯ ವಿಷಯವೆಂದರೆ ರಕ್ತ ಹೆಪ್ಪುಗಟ್ಟುವುದರಿಂದ ಹೆಚ್ಚು ರಕ್ತ ಸ್ರಾವ ಆಗುವುದನ್ನು ತಡೆಗಟ್ಟುತ್ತದೆ. ಎರಡನೇಯದು, ಶರೀರದ ಒಳಭಾಗದಲ್ಲಿ ಆಗುವ ರಕ್ತಸ್ರಾಮ ಇದು ಅತ್ಯಂತ ಅಪಾಯಕಾರಿಯಾದದ್ದು. ಉದಾಹರಣೆಗ ರಕ್ತವು ಹೃದಯದಲ್ಲಿ ಹೆಪ್ಪುಗಟ್ಟುವುದು, ಶರೀರದ ನರಗಳಲ್ಲಿ, ಮೆದುಳಿನ ನರಗಳಲ್ಲಿ ಹಾಗೂ ಮೂತ್ರ ವಿಸರ್ಜಿಸುವ ನರಗಳಲ್ಲಿ ಹೆಪ್ಪುಗಟ್ಟುತ್ತದೆ. ಶರೀರದ ಈ ಭಾಗಗಳಲ್ಲಿ ರಕ್ತಸ್ರಾವ ಆಗುವುದು ಅಪಾಯಕಾರಿಯಾಗಿದೆ. ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ದಾಳಿಂಬೆಯ ಬೀಜಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಶರೀರದೊಳಗೆ ಸೇರುತ್ತಿದ್ದಂತೆ ತಿನ್ನರ್ ನಂತೆ ಕೆಲಸ ಮಾಡುತ್ತದೆ.ದಾಳಿಂಬೆಯ ಬೀಜಗಳು ರಕ್ತದ ಕಣಗಳಲ್ಲಿರುವ ಕೊಬ್ಬಿನಂಶವನ್ನು ಕರಗಿಸಲು ಸಹಾಯಕವಾಗಿದೆ.

ಎಲುಬುಗಳ ಆರೋಗ್ಯಕ್ಕೆ

ಎಲುಬುಗಳ ಆರೋಗ್ಯಕ್ಕೆ

ದಾಳಿಂಬೆಯ ಔಷಧಿಯ ಗುಣಗಳು ಶರೀರದ ಉದ್ದಗಲಕ್ಕು ಉಪಯುಕ್ತವಾಗಿದೆ.ಇದು ಆರ್ಥರೈಟೀಸ್ ಬರುವುದನ್ನೂ ತಡೆಗಟ್ಟುತ್ತದೆ.ಇದು ಶರೀರದಲ್ಲಿರುವ ಉಷ್ಣಾಂಶವನ್ನು ತಡೆಗಟ್ಟುತ್ತದೆ ಹಾಗೂ ಮೃದುವಾದ ಎಲುಬುಗಳನ್ನು ಹಾಳುಮಾಡುವ ಕಿಣ್ವ(ಎನ್ ಜೈಮ್ಸ್) ವಿರುದ್ಧ ಹೋರಾಡುತ್ತದೆ.

ಪ್ರಾಸ್ಟ್ರೇಟ್ ಕ್ಯಾನ್ಸರ್

ಪ್ರಾಸ್ಟ್ರೇಟ್ ಕ್ಯಾನ್ಸರ್

ಇದು ಪ್ರಾಸ್ಟ್ರೇಟ್ ಕ್ಯಾನ್ಸರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.ಎರಡು ಬೇರೆ ಬೇರೆ ಸಂಶೋಧನೆಯ ಪ್ರಕಾರ ದಾಳಿಂಬೆ ರಸ ಪ್ರಾಸ್ಟ್ರೇಟ್ ಕ್ಯಾನ್ಸರ್ ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಒಂದು ಪ್ರಯೋಗಾಲಯ ವರದಿಯ ಪ್ರಕಾರ 'ದಾಳಿಂಬೆ ರಸ ಕ್ಯಾನ್ಸರ್ ರೋಗಾಣುಗಳ ಬೆಳವಣಿಗೆಯನ್ನು ಕುಂಟಿತಗೊಳಿಸಿ ಆ ರೋಗಾಣುಗಳನ್ನು ನಾಶ ಪಡಿಸುತ್ತದೆ' ಎಂದು ತಿಳಿದು ಬಂದಿದೆ. ಎರಡನೆ ಪ್ರಯೋಗದಲ್ಲಿ ' ದಾಳಿಂಬೆ ರಸವು ರಕ್ತವನ್ನು ಶುದ್ದಿ ಮಾಡಿ ಮನುಷ್ಯನ ಆರೋಗ್ಯವನ್ನು ವೃದ್ದಿಗೆ ಹೃದಯದ ಕಾಯಿಲೆಯಿಂದ ಬಿಡುಗಡೆ ನೀಡುತ್ತದೆ.

ಸೌಂದರ್ಯದ ವಿಷಯದಲ್ಲೂ ಎತ್ತಿದಕೈ

ಸೌಂದರ್ಯದ ವಿಷಯದಲ್ಲೂ ಎತ್ತಿದಕೈ

ದಾಳಿಂಬೆ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ತುಂಬಾ ಒಳ್ಳೆಯದು ಕೆಲವು ದಾಳಿಂಬೆ ಬೀಜಗಳನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಿ,. ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ 30 ನಿಮಿಷ ಹಾಗೆಯೇ ಬಿಟ್ಟು ನಂತ್ರ ವಾಷ್ ಮಾಡಿ. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿದ್ರೆ, ನಿಮ್ಮ ಚರ್ಮಕ್ಕೆ ಕಾಂತಿ ಬರುವಲ್ಲಿ ಈ ಮಿಶ್ರಣ ಸಹಾಯ ಮಾಡಲಿದೆ.

 ಬಾಯಿಯಿಂದ ಕೆಟ್ಟ ವಾಸನೆ ಬರುತ್ತಾ ಇದ್ದರೆ

ಬಾಯಿಯಿಂದ ಕೆಟ್ಟ ವಾಸನೆ ಬರುತ್ತಾ ಇದ್ದರೆ

ಬಾಯಿಯಿಂದ ಕೆಟ್ಟ ವಾಸನೆ ಬರುತ್ತಾ ಇದ್ದರೆ ದಾಳಿಂಬೆ ಸಿಪ್ಪೆಯು ಇದನ್ನು ಹೋಗಲಾಡಿಸುತ್ತದೆ. ದಾಳಿಂಬೆ ಸಿಪ್ಪೆಯ ಹುಡಿ ಮಾಡಿಕೊಂಡು ಅದನ್ನು ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿ ಹಲ್ಲುಗಳಿಗೆ ತಿಕ್ಕಿಕೊಳ್ಳಿ. ಹಲ್ಲುಗಳು ಕೆಡುವುದು ಮತ್ತು ಬಾಯಿಯ ಹುಣ್ಣನ್ನು ಇದರಿಂದ ತಡೆಯಬಹುದು.

English summary

Pomegranate Health Benefits that prevent powerful diseases

Ruby red, delicious and nutrient rich pomegranates pack a mighty punch in safeguarding your health. Pomegranate contains a unique and powerful antioxidant called puritanical, the most abundant antioxidant in pomegranate, responsible for more than half of the antioxidant activity of pomegranate juice. Pomegranate juice has been analyzed to have greater antioxidant capacity than red wine, grape juice, cranberry juice, green tea or acai juice.2 Drinking pomegranate juice measurably reduces oxidative stress (the toxic effects of free radicals) in healthy humans.
X
Desktop Bottom Promotion