ಮೊಣಕಾಲು ನೋವು ನಿವಾರಣೆಗೆ ನೈಸರ್ಗಿಕ ಆಯುರ್ವೇದ ಚಿಕಿತ್ಸೆ

By
Subscribe to Boldsky

ವಯಸ್ಸಾಗುತ್ತಿರುವಂತೆ ಮೂಳೆಗಳು ದುರ್ಬಲಗೊಳ್ಳುವ ಕಾರಣದಿಂದಾಗಿ ಮೊಣಕಾಲು ನೋವು ಅಥವಾ ಮಂಡಿ ನೋವು ಆರಂಭವಾಗುವುದು ಸಹಜ. ಇದರಿಂದಾಗಿ ಯಾವುದೇ ಕೆಲಸಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನೋವು ತಡೆಯಲಾರದಷ್ಟು ಇರುತ್ತದೆ. ಇಂತಹ ನೋವನ್ನು ಸಹಿಸಿಕೊಂಡು ಜೀವನ ಸಾಗಿಸುವುದು ಕಷ್ಟದ ಕೆಲಸ.  ಯಮಯಾತನೆ ನೀಡುವ ಮೊಣಕಾಲು ನೋವಿಗೆ ಪರಿಹಾರವೇನು?

ಸಾಮಾನ್ಯವಾಗಿ ಸ್ನಾಯುಗಳು ಮತ್ತು ಅಂಗಾಂಶಗಳು ದುರ್ಬಲವಾಗುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಪ್ರಮುಖವಾಗಿ ಮೊಣಕಾಲು ನೋವು ವಯಸ್ಸಾಗುವ ಸಮಯದಲ್ಲಿ ಜೀವನವನ್ನು ದುಸ್ತರ ಮಾಡಿಬಿಡುತ್ತದೆ. ದೈನಂದಿನ ಚಟುವಟಿಕೆಗಳು ಕೂಡ ಮಂಡಿನೋವಿನಿಂದಾಗಿ ಅಸಾಧ್ಯವಾಗುತ್ತದೆ.  ಮೊಣಕಾಲು ನೋವನ್ನು ನಿವಾರಿಸಲು 5 ಸಲಹೆಗಳು 

Knee Pain
 

ಕೆಲವೊಂದು ಸಲ ಮೊಣಕಾಲು ನೋವನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆ ಕೂಡ ಮಾಡಬೇಕಾಗುತ್ತದೆ. ಆದರೆ ಆಯುರ್ವೇದದ ಮೂಲಕ ಮೊಣಕಾಲು ನೋವನ್ನು ಕಡಿಮೆ ಮಾಡಬಹುದು. ಆ ಆಯುರ್ವೇದದ ಔಷಧಿ ಯಾವುದು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.

ಬೇಕಾಗುವ ಸಾಮಗ್ರಿಗಳು

ಅರಿಶಿನ 2 ಚಮಚ

ಆ್ಯಪಲ್ ಸೀಡರ್ ವಿನೇಗರ್ 2 ಚಮಚ 

turmeric
 

ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ನಂತಹ ಅಂಶವು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಇದು ಸಂಧಿಯ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ಊತವನ್ನು ಕಡಿಮೆ ಮಾಡುತ್ತದೆ. ಇದರಿಂದ ನೋವು ಕಡಿಮೆಯಾಗುವುದು.

ಆ್ಯಪಲ್ ಸೀಡರ್ ವಿನೇಗರ್‌ನಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಗಂಟುಗಳಲ್ಲಿ ಕೀಲೆಣ್ಣೆಯನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ.   ಮಂಡಿ ನೋವೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು  

vinegar
 

ತಯಾರಿಸುವ ವಿಧಾನ

*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಕಪ್‌ಗೆ ಹಾಕಿಕೊಳ್ಳಿ.

*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. 

knee pain2

*ಈಗ ಮದ್ದು ಸೇವಿಸಲು ತಯಾರಾಗಿದೆ.

*ಪ್ರತೀ ನಿತ್ಯ ರಾತ್ರಿ ಊಟದ ಬಳಿಕ ಎರಡು ತಿಂಗಳ ಕಾಲ ಸೇವಿಸಿ.

For Quick Alerts
ALLOW NOTIFICATIONS
For Daily Alerts

    English summary

    Natural Ayurvedic Home Remedies for Knee Pain

    If you are someone who is above the age of 45 and you are experiencing knee pain on a regular basis, you must surely be feeling miserable, right? Well, there is an excellent ayurvedic remedy that can help you! As we grow older, the muscles and tissues of our body start to weaken and hence, we experience various symptoms, which include body pain.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more