For Quick Alerts
ALLOW NOTIFICATIONS  
For Daily Alerts

ಲಿಂಬೆರಸ+ಲವಂಗದ ಜೋಡಿಯ ಪವರ್‌ಗೆ ತಲೆಬಾಗಲೇಬೇಕು

By Arshad
|

ಲವಂಗ ನೂರಾರು ವರ್ಷಗಳಿಂದ ಸಾಂಬಾರ ಪದಾರ್ಥದ ಹೊರತಾಗಿ ಔಷಧೀಯ ರೂಪದಲ್ಲಿಯೂ ಭಾರತದಲ್ಲಿ ಬಳಕೆಯಲ್ಲಿದೆ. ಹಲ್ಲುನೋವು ಸಹಿತ ಹಲವು ಜೀವಹಿಂಡುವ ನೋವುಗಳಿಗೆ ಲವಂಗ ಅತ್ಯುತ್ಯಮ ಪರಿಹಾರವಾಗಿದೆ. ಇಡಿಯಾಗಿಯೇ ಇರಲಿ ಅಥವಾ ಸಿಪ್ಪೆ ಸುಲಿದೇ ಇರಲಿ, ಲಿಂಬೆರಸದೊಂದಿಗೆ ಈ ಲವಂಗವನ್ನು ಸೇವಿಸಿದಾಗ ಇದರ ಪ್ರಯೋಜನಗಳು ನೂರುಪಟ್ಟು ಹೆಚ್ಚುತ್ತವೆ.

Lemon

ಲವಂಗದ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾಗಿ ಆಂಟಿ ಆಕ್ಸಿಡೆಂಟುಗಳು, ಪ್ರತಿಜೀವಕವಾಗಿ, ಸ್ಥಳೀಯ ಅರಿವಳಿಕೆಯಾಗಿ, ಉರಿಯೂತ ನಿವಾರಕವಾಗಿ ಇದರ ಬಳಕೆ ಪ್ರಮುಖವಾಗಿದೆ. ಲವಂಗದಲ್ಲಿ ಕೊಂಚ ಪ್ರಮಾಣದ ಅವಶ್ಯಕ ತೈಲವೂ ಇದೆ. ಇದರಲ್ಲಿ ಪ್ರಮುಖವಾಗಿ ಯೂಜಿನಾಲ್ ಎಂಬ ಎಣ್ಣೆಯ ಅಂಶವಿದ್ದು ಇದರಲ್ಲಿ ಪ್ರತಿಜೀವಕ ಹಾಗೂ ಗುಣಪಡಿಸುವ ಗುಣಗಳಿವೆ. ಲಿಂಬೆ ಮತ್ತು ಲವಂಗದ ಮಿಶ್ರಣದಿಂದ ಹಲ್ಲುನೋವು, ಸ್ನಾಯುಗಳ ನೋವು ಮತ್ತು ಸಂಧಿವಾತವನ್ನು ತಕ್ಷಣ ಗುಣಪಡಿಸುತ್ತದೆ.


ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!

ಈ ಸಂಯೋಜನೆಯಿಂದ ದೇಹ ಕೆಲವೊಮ್ಮೆ ಎದುರಿಸುವ ಥಟ್ಟನೇ ಸುಸ್ತಾಗುವಿಕೆಯನ್ನು ನಿಯಂತ್ರಿಸಬಹುದು. ಅಲ್ಲದೇ ಇದು ತ್ಯಾಜ್ಯಗಳನ್ನು ವಿಸರ್ಜಿಸುತ್ತದೆ ಹಾಗೂ ಮೂತ್ರನಾಳದ ಸೋಂಕಿನಿಂದ ರಕ್ಷಿಸುತ್ತದೆ. ಲವಂಗದ ಪೋಷಕಾಂಶಗಳು ಕೂದಲಿನ ಬೆಳವಣಿಕೆಯನ್ನೂ ಉತ್ತಮಗೊಳಿಸುತ್ತದೆ. ಇದು ದೇಹದ ಒಟ್ಟಾರೆ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.

ಈ ಸಂಯೋಜನೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಹಾಗೆಯೂ ಸೇವಿಸಬಹುದು ಅಥವಾ ಬೇರೆ ಆಹಾರಗಳೊಂದಿಗೆ ಮಿಶ್ರಣ ಮಾಡಿಯೂ ಸೇವಿಸಬಹುದು. ಅಷ್ಟೇ ಅಲ್ಲ, ಲಿಂಬೆರಸ ಮತ್ತು ಲವಂಗವನ್ನು ನುಣ್ಣಗೆ ಅರೆದು ನೋವಿರುವ ಭಾಗದ ಮೇಲೆ ಹಚ್ಚಿಕೊಳ್ಳುವ ಮೂಲಕವೂ ದೇಹವನ್ನು ನಿರಾಲವಾಗಿಸಬಹುದು ಹಾಗೂ ರಕ್ತಪರಿಚಲನೆಯನ್ನೂ ಉತ್ತಮಗೊಳಿಸಬಹುದು.

ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!

English summary

Mix Lemon With This One Food & See What It Can Do To Your Body

Benefits of clove is well known since time immemorial. It can be used to prevent several problematic conditions. Either in whole form or peeled form, the mixture of clove and lemon can help in many problematic health issues.
X
Desktop Bottom Promotion