ಒಣ ಬೀಜಗಳ ಈ ಸಮಯದಲ್ಲಿ ಸೇವನೆ ಮಾಡಿದರೆ ಲಾಭ ಖಚಿತ

Posted By: Lekhaka
Subscribe to Boldsky

ಸಮಯನೇ ಸಿಗಲ್ಲ, ಇನ್ನು ಸರಿಯಾದ ಆಹಾರ ಕ್ರಮ ಪಾಲಿಸುವಂತಹ ವಿಚಾರ ಎಲ್ಲಿಂದ ಬಂತು ಎನ್ನುವ ಮಾತು ಪ್ರತಿಯೊಬ್ಬರಿಂದಲೂ ಕೇಳಿಬರುವುದು. ಇದು ನಿಜ ಕೂಡ. ವ್ಯಸ್ತ ಜೀವನದಲ್ಲಿ ಸ್ವಲ್ಪ ಹೊಟ್ಟೆಗೆ ಹಾಕಿಕೊಂಡರೆ ಸಾಕು ಎನ್ನುವ ಭಾವನೆ ನಮ್ಮದಾಗಿದೆ. ಇದರಿಂದ ರಾತ್ರಿ 12 ಗಂಟೆಗೆ ಊಟ ಮಾಡುವಂತಹ ಪರಿಸ್ಥಿತಿ. ಇದು ಸರಿಯಾದ ಕ್ರಮವಲ್ಲ. ಪ್ರತಿಯೊಂದು ಆಹಾರ ಸೇವಿಸಲು ಒಂದೊಂದು ಸಮಯವಿದೆ. ಅದನ್ನು ಪಾಲಿಸಿದರೆ ದೇಹಕ್ಕೆ ಹೆಚ್ಚಿನ ಲಾಭ ಸಿಗುವುದು. ಅದರಲ್ಲೂ ಬೀಜಗಳು ಮತ್ತು ಕಾಳುಗಳನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ ಹೆಚ್ಚಿನ ಲಾಭ ನಿಮ್ಮದಾಗಲಿದೆ.

ಕೊಬ್ಬು, ಸಕ್ಕರೆಯಂಶ ಮತ್ತು ಕ್ಯಾಲರಿ ಹೆಚ್ಚು ಎಂದು ಇದನ್ನು ಕಡೆಗಣಿಸಲಾಗುತ್ತಿತ್ತು. ಆದರೆ ಇದು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಬೀಜಗಳಲ್ಲಿ ಹೆಚ್ಚು ಕೊಬ್ಬು ಇದೆ. ಆದರೆ ಇದು ತುಂಬಾ ಆರೋಗ್ಯಕಾರಿ ಕೊಬ್ಬು. ಇದರಲ್ಲಿರುವ ಕ್ಯಾಲರಿಗಳನ್ನು ದೇಹವು ಶಕ್ತಿಯಾಗಿ ಪರಿವರ್ತಿಸುವುದು ಮತ್ತು ದೇಹದಲ್ಲಿ ಕೊಬ್ಬಾಗಿ ಉಳಿಸಿಕೊಳ್ಳುವುದು. ಕೃತಕ ಸಕ್ಕರೆ ಹಾಕದೆ ಇದ್ದರೆ ಇದರಲ್ಲಿರುವಂತಹ ಸಕ್ಕರೆಯು ದೇಹಕ್ಕೆ ಯಾವುದೇ ಕೆಟ್ಟ ಪರಿಣಾಮ ಬೀರದು. ಬೀಜಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ಪೊಟಾಶಿಯಂನಂತಹ ಅಂಶಗಳಿವೆ. ವಿಟಮಿನ್, ನಾರಿನಾಂಶ ಮತ್ತು ಒಮೆಗಾ 3 ಕೊಬ್ಬಿನಾಮ್ಲವು ಹಾಗೂ ಅಪರ್ಯಾಪ್ತ ಕೊಬ್ಬುಗಳು ಇದರಲ್ಲಿದೆ. 

nuts

ಕೊಬ್ಬು ದೇಹಕ್ಕೆ ಶಕ್ತಿ ಒದಗಿಸಿದರೆ ಖನಿಜಾಂಶ ಮತ್ತು ವಿಟಮಿನ್ ಗಳು ದೇಹದ ವಿವಿಧ ಕಾರ್ಯಚಟುವಟಿಕೆಗಳಿಗೆ ನೆರವಾಗುವುದು. ಬೀಜಗಳ ಸೇವನೆಯಿಂದ ಸಿಗುವಂತಹ ಲಾಭಗಳು ಅಪಾರ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇದರ ಸೇವನೆ ಮಾಡಬಾರದು. ಅತಿಯಾಗಿ ಸೇವನೆ ಮಾಡಿದರೆ ಅದು ದೇಹಕ್ಕೆ ಹಾನಿಕರ. ಬೀಜಗಳು ತುಂಬಾ ಆರೋಗ್ಯಕಾರಿ ಎಂದು ತಿಳಿದು ಅದನ್ನು ಅತಿಯಾಗಿ ಸೇವನೆ ಮಾಡಬಾರದು. ಇದರಲ್ಲಿ ಕೊಬ್ಬಿನಾಂಶವಿರುವ ಕಾರಣದಿಂದ ಅತಿಯಾಗಿ ತಿಂದರೆ ಅದರಿಂದ ದೇಹದ ತೂಕ ಹೆಚ್ಚಳವಾಗುವುದು ಖಚಿತ. ಅತಿಯಾದ ಕೊಬ್ಬು ದೇಹದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು ಮತ್ತು ರಕ್ತದೊತ್ತಡವು ಹೆಚ್ಚಾಗುವುದು. ಅತಿಯಾದ ನಾರಿನಾಂಶವು ಗ್ಯಾಸ್ ಮತ್ತು ಭೇದಿ ಉಂಟುಮಾಡಬಹುದು.

Almonds

ಬೀಜಗಳ ಲಾಭ ನಿಮ್ಮ ದೇಹಕ್ಕೆ ಆಗಬೇಕು ಎಂದಾದರೆ ನೀವು ದಿನದ ನಿಗದಿತ ಸಮಯದಲ್ಲಿ ಇದರ ಸೇವನೆ ಮಾಡಬೇಕು. ಖನಿಜಾಂಶ ಮತ್ತು ವಿಟಮಿನ್ ಗಳು ಹೆಚ್ಚಾಗಿರುವ ಬೀಜಗಳನ್ನು ಬೆಳಗ್ಗೆ ಸೇವಿಸಬೇಕು. ಜೀರ್ಣಕ್ರಿಯೆಗೆ ನೆರವಾಗುವ ಬೀಜಗಳನ್ನು ರಾತ್ರಿ ವೇಳೆ ಸೇವಿಸಬೇಕು. ಈ ರೀತಿ ಸೇವನೆ ಮಾಡಿದರೆ ಬೀಜಗಳಲ್ಲಿರುವ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಒಣಬೀಜಗಳನ್ನು ಯಾವ ಸಮಯದಲ್ಲಿ ಸೇವಿಸಬಹುದು ಎನ್ನುವ ಬಗ್ಗೆ ನಿಮಗೆ ಇಲ್ಲಿ ತಿಳಿಸಿಕೊಡಲಾಗಿದೆ. ಸಮಯದೊಂದಿಗೆ ತಿನ್ನುವ ಪ್ರಮಾಣ ಕೂಡ ಅತೀ ಅಗತ್ಯವಾಗಿರುವುದು. ನಿಮ್ಮ ದೇಹಕ್ಕೆ ಬೇಕಾಗುವ ಪ್ರಮಾಣ ಮತ್ತು ಅದನ್ನು ಸೇವಿಸಬೇಕಾದ ಸಮಯದ ಬಗ್ಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ. ಮುಂದಕ್ಕೆ ಓದಿಕೊಳ್ಳಿ.

ಬೆಳಗ್ಗೆ

ಬಾದಾಮಿ

ಬೆಳಗ್ಗೆ ಎದ್ದ ಬಳಿಕ ನಾವು ತುಂಬಾ ಕಾರ್ಯಗಳನ್ನು ಮಾಡಬೇಕಾಗಿರುವ ಕಾರಣ ತುಂಬಾ ವ್ಯಸ್ತರಾಗಿರುತ್ತೇವೆ. ಕೆಲವರು ಬಾದಾಮಿಯನ್ನು ಬೆಳಗ್ಗೆ ಸೇವನೆ ಮಾಡುತ್ತಾರೆ. ಇದು ಸರಿಯಾದ ಕ್ರಮ ಕೂಡ. ಬಾದಾಮಿಯಲ್ಲಿ ವಿಟಮಿನ್ ಇ, ರಿಬೊಫ್ಲಾವಿನ್ ಮತ್ತು ಮ್ಯಾಂಗನೀಶ್ ಇದೆ. ಇದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹವು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಇದು ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡುವುದು. ಇದರಿಂದ ಬಾದಾಮಿಯನ್ನು ಬೆಳಗ್ಗೆ ಸೇವನೆ ಮಾಡಿ. 

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ರಾತ್ರಿ ವೇಳೆ ಬಾದಾಮಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ಸೇವಿಸಿ. ಸಿಪ್ಪೆಯಿದ್ದರೆ ಅದು ದೇಹವು ಹೀರಿಕೊಳ್ಳುವ ಪೋಷಕಾಂಶಗಳನ್ನು ಕಡಿಮೆಗೊಳಿಸುವುದು. ಇದರಿಂದ ಸಿಪ್ಪೆ ತೆಗೆದು ಸೇವನೆ ಮಾಡಿ. 10 ಬಾದಾಮಿ ತಿಂದರೆ ತುಂಬಾ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

pistha

ಸಂಜೆ

ಗೋಡಂಬಿ ಮತ್ತು ಪಿಸ್ತಾ

ಗೋಡಂಬಿಯು ಕೊಬ್ಬಿನಿಂದ ಸಮೃದ್ಧವಾಗಿರುವ ಕಾರಣ ಇದು ದೇಹಕ್ಕೆ ತಕ್ಷಣ ಶಕ್ತಿ ಒದಗಿಸುವುದು. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಾಶ ಮಾಡಿ ಹಲ್ಲು ಕೆಡದಂತೆ ತಡೆಯುವುದು. ಇದರಲ್ಲಿ ಇರುವಂತಹ ಮೆಗ್ನಿಶಿಯಂ ರಕ್ತದೊತ್ತಡ ಮತ್ತು ಸ್ನಾಯುಗಳ ನಿಶ್ಯಕ್ತಿ ತಡೆಯುವುದು. ಪಿಸ್ತಾವು ಹೃದಯಕ್ಕೆ ತುಂಬಾ ಒಳ್ಳೆಯದು.

ಮನೆ ಔಷಧಿ: ಬಿಪಿ ಸಮಸ್ಯೆ ಇದ್ದರೆ, ದಿನಕ್ಕೆ ಒಂದೆರಡು 'ಪಿಸ್ತಾ' ತಿನ್ನಿ

ಈ ಎರಡು ರೀತಿಯ ಬೀಜಗಳನ್ನು ಸಂಜೆ ವೇಳೆ ಸೇವಿಸಬೇಕು. ಇದರಲ್ಲಿರುವ ಕೊಬ್ಬು ದೇಹಕ್ಕೆ ತಕ್ಷಣ ಶಕ್ತಿ ನೀಡುವುದು ಮತ್ತು ತ್ರಾಣ ಒದಗಿಸುವುದು. ದಿನದ ಬಳಲಿಕೆ ಬಳಿಕ ದೇಹಕ್ಕೆ ಶಕ್ತಿಯು ಅಗತ್ಯವಾಗಿರುವುದು. ಮೂರು ಗೋಂಡಬಿ ಮತ್ತು ಪಿಸ್ತಾ ಸಂಜೆ ವೇಳೆ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.

walnuts

ರಾತ್ರಿ

ಆಕ್ರೋಟ್, ಒಣದ್ರಾಕ್ಷಿ ಮತ್ತು ಖರ್ಜೂರ

ಆಕ್ರೋಟ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕವಾಗಿದೆ. ಅದೇ ಒಣದ್ರಾಕ್ಷಿಯಲ್ಲಿ ನಾರಿನಾಂಶವಿದೆ. ಒಮೆಗಾ3 ಕೊಬ್ಬಿನಾಮ್ಲವು ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುವುದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು. ಹೆಚ್ಚಿನ ಜನರಿಗೆ ಆಕ್ರೋಟ್ ಯಾವಾಗ ಸೇವನೆ ಮಾಡಬೇಕೆಂದು ತಿಳಿದಿರುವುದಿಲ್ಲ. ಆಕ್ರೋಟ ಸೇವಿಸಲು ಸರಿಯಾದ ಸಮಯ ರಾತ್ರಿ. ಇದನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು. ಇದರಲ್ಲಿ ಇರುವಂತಹ ವಿಟಮಿನ್ ಮತ್ತು ಖನಿಜಾಂಶವು ರಾತ್ರಿ ವೇಳೆ ದೇಹ ಮತ್ತು ಚರ್ಮದ ಕೋಶಗಳನ್ನು ಸರಿಪಡಿಸಲು ನೆರವಾಗುವುದು. ಈ ಒಣ ಬೀಜಗಳನ್ನು ರಾತ್ರಿ ವೇಳೆ ಸೇವಿಸುವುದು ತುಂಬಾ ಒಳ್ಳೆಯದು. ಎರಡು ಒಣದ್ರಾಕ್ಷಿ ಜತೆಗೆ ಒಂದು ಖರ್ಜೂರ ಮತ್ತು 3-4 ಆಕ್ರೋಟ್ ನ್ನು ಪ್ರತಿನಿತ್ಯ ರಾತ್ರಿ ಸೇವಿಸಿದರೆ ದೇಹಕ್ಕೆ ಪರಿಣಾಮಕಾರಿ ಲಾಭ ಸಿಗುವುದು.

English summary

Know The Best Time To Consume Nuts

Nuts and seeds are deemed as the best foods to snack on. Health experts all over the world stress on the benefits of what these little wonders do to our body. Previously shunned for their fat content, sugar and calories, they now make their way to the top of the list of healthy foods. Nuts do contain fats but they are healthy fats which are required by our body.
Subscribe Newsletter