For Quick Alerts
ALLOW NOTIFICATIONS  
For Daily Alerts

ಮನೆ ಔಷಧಿ: ಬಿಪಿ ಸಮಸ್ಯೆ ಇದ್ದರೆ, ದಿನಕ್ಕೆ ಒಂದೆರಡು 'ಪಿಸ್ತಾ' ತಿನ್ನಿ

By Manu
|

ನೀವು ಡ್ರೈ ಫ್ರೂಟ್ಸ್ ತಿನ್ನಲು ಇಷ್ಟ ಪಡುತ್ತೀರಿ ಎಂದಾದರೆ ನಿಮಗೊಂದು ಒಳ್ಳೆಯ ಸಂದೇಶ ಇಲ್ಲಿದೆ. ಕೆಲವು ನ್ಯೂಟ್ರೀಷಿಯನ್ಸ್ ಮತ್ತು ವೈದ್ಯರು ಹೇಳುವ ಪ್ರಕಾರ ಪಿಸ್ತಾದಂತಹ ಒಣ ಹಣ್ಣುಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುತ್ತದೆ ಎಂದು. ಕೆಲವು ತಿಂಡಿಗಳಿಗೆ, ಅಡುಗೆಗಳಿಗೆ ಪಿಸ್ತಾ, ಗೋಡಂಬಿ, ಬಾದಾಮಿಗಳನ್ನು ಇಟ್ಟು ಅಲಂಕರಿಸುತ್ತಾರೆ. ಈ ಅಲಂಕಾರದಲ್ಲಿರುವ ಒಣ ಹಣ್ಣುಗಳು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಅಲಂಕರಿಸುತ್ತದೆ ಎನ್ನುವ ಸಂದೇಶವನ್ನು ನೀಡಿದ್ದಾರೆ.

ಒತ್ತಡದ ಜೀವನ ಮತ್ತು ಕಲುಷಿತ ಆಹಾರದ ನಡುವೆ ರಕ್ತದೊತ್ತಡ ಎನ್ನುವುದು ಸಾಮಾನ್ಯ ಕಾಯಿಲೆ ಎನಿಸಿಕೊಂಡಿದೆ. 45 ವರ್ಷ ಮೇಲ್ಪಟ್ಟವರಲ್ಲಿ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿದೆ. ಇದಕ್ಕೆ ಪದೇ ಪದೇ ಕಾಡುವ ಅನಾರೋಗ್ಯ, ಸ್ಥೂಲಕಾಯ, ವ್ಯಾಯಾಮದ ಕೊರತೆ, ಹೆಚ್ಚಿನ ಕೊಲೆಸ್ಟ್ರಾಲ್, ಅಸಹಜವಾದ ಚಯಾಪಚಯ ಕ್ರಿಯೆಯೇ ಕಾರಣ ಎಂದು ಹೇಳಲಾಗುತ್ತದೆ.


ಕೇಸರಿ ಪಿಸ್ತಾ ಮಿಲ್ಕ್ ಶೇಕ್- ಸೂಪರ್ ಕಾಂಬಿನೇಷನ್!

ಈ ಅಧಿಕ ರಕ್ತದೊತ್ತಡ ಸಮಸ್ಯೆಗೆ ಆರೈಕೆ ಮಾಡದಿದ್ದರೆ ತಲೆನೋವು, ಆಯಾಸ ಮತ್ತು ಕೆಲವು ಹೃದಯ ಸಂಬಂಧಿ ಕಾಯಿಲೆಗಳು ಬರುವುದು. ಈ ಕಾರಣಕ್ಕೆ ನೀವೇನಾದರೂ ಮನೆ ಔಷಧಿಯನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸುಲಭವಾದ ಪಿಸ್ತಾ ಔಷಧಿಯ ಪರಿಹಾರ...

ಬೇಕಾದ ಪದಾರ್ಥಗಳು

ಬೇಕಾದ ಪದಾರ್ಥಗಳು

* ಒಣಗಿದ ಪಿಸ್ತಾ 3-4

* ಒಂದು ಗ್ಲಾಸ್ ನೀರು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

* ಮೇಲೆ ಹೇಳಿದ ಪಿಸ್ತಾವನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ಇಡೀ ನೆನೆಸಿಡಬೇಕು

* ಬೆಳಗ್ಗೆ ನೀರನ್ನು ತೆಗೆದು, ನೆನೆದ ಪಿಸ್ತಾವನ್ನು ತಿನ್ನಬೇಕು

* ಈ ರೀತಿ ಕಡಿಮೆ ಎಂದರೂ 3 ತಿಂಗಳು ಸೇವಿಸಬೇಕು

ಪಿಸ್ತಾ ವಿಶೇಷತೆ

ಪಿಸ್ತಾ ವಿಶೇಷತೆ

*ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಪಿಸ್ತಾದಲ್ಲಿ ವಿಟಮಿನ್ ಬಿ6, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಇತರ ಅಗತ್ಯ ಪೋಷಕಾಂಶಗಳ ಜೊತೆಗೆ ಪೌಷ್ಟಿಕಾಂಶಗಳು ಸೇರಿಕೊಂಡಿವೆ.

ಇದನ್ನು ಸೇವಿಸಿದಾಗ ಅಪಧಮನಿಗಳು ಕುಗ್ಗುವಂತೆ ಮಾಡುತ್ತದೆ. ಆಗ ರಕ್ತದ ಹರಿವು ಸಾಮಾನ್ಯ ಪ್ರಮಾಣದಲ್ಲಿರುತ್ತದೆ.

ನೆನಪಿಡಬೇಕು

ನೆನಪಿಡಬೇಕು

ಈ ಮನೆ ಔಷಧಿಯನ್ನು ಸೇವಿಸುತ್ತಿರುವಾಗ ವೈದ್ಯರು ಸೂಚಿಸಿದ ಔಷಧಿಯನ್ನು ಸೇವಿಸುತ್ತಿರಬೇಕು. ರೋಗ ಲಕ್ಷಣ ಕಡಿಮೆಯಾದ ನಂತರ ಔಷಧಿಯನ್ನು ಬಿಟ್ಟು, ಪಿಸ್ತಾ ಸೇವನೆ ಮುಂದುವರಿಸಬೇಕು.

English summary

Try This Pista Remedy To Reduce High Blood Pressure Naturally!

High blood pressure can be described as a condition in which the pressure of the blood against the arteries is abnormally high due to the constriction of the arteries. Some of the main causes for hypertension are stress, unhealthy diet, obesity, lack of exercise, high cholesterol, abnormal metabolic rate, etc. So, if you are looking for a home remedy for the treatment of hypertension, check out this easy pista remedy!
Story first published: Friday, July 21, 2017, 20:20 [IST]
X
Desktop Bottom Promotion