For Quick Alerts
ALLOW NOTIFICATIONS  
For Daily Alerts

ತುಂಬಾ ಆಯಾಸ-ಸುಸ್ತು ಆಗುತ್ತಿದೆಯೇ? ಹಾಗಾದರೆ ಜೇನುತುಪ್ಪ ಸೇವಿಸಿ!!

By Divya
|

ಪ್ರತಿದಿನ ಆಫೀಸ್ ಮುಗಿಸಲಾಗದಷ್ಟು ಕೆಲಸ ಒಂದು ರೀತಿಯ ಒತ್ತಡವನ್ನು ಉಂಟುಮಾಡುತ್ತದೆ. ಕಚೇರಿಯಲ್ಲಿ ನೀಡಿದ ಟಾರ್ಗೆಟ್ ಪೂರ್ಣಗೊಳಿಸಲಾಗದೆ ಇರುವುದು. ನಿಗದಿತ ವೇಳೆಯಲ್ಲಿಯೇ ಕೆಲಸ ಮುಗಿಸಬೇಕಾದ ಅನಿವಾರ್ಯತೆ ಇರುತ್ತದೆ. ಇದಕ್ಕೆ ಅವರಿವರು ಎನ್ನುವ ಭೇದವಿರುವುದಿಲ್ಲ. ಎಲ್ಲರಿಗೂ ಒಂದೇ ನಿಯಮ. ಕಚೇರಿ ಕೆಲಸಕ್ಕೆ ಹೋಗುವ ಪ್ರತಿಯೊಬ್ಬರೂ ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸಲೇ ಬೇಕು.

ಅಂತೂ ಇಂತೂ ದಿನದ ಕೊನೆಯಲ್ಲಿ ಆದಷ್ಟು ಬೇಗ ಮನೆಗೆ ತೆರಳಿ, ಚೀಲವನ್ನು ಬಿಸಾಡಿ ಮಲಗಿದರೆ ಸಾಕು ಎನಿಸುತ್ತಿರುತ್ತದೆ. ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದರೆ ಈ ಥೆರಪಿಯನ್ನು ಪಡೆಯಲೇ ಬೇಕು. ಹೌದು, ಮೈ-ಮನಸ್ಸಿಗೆ ನಿರಾಳತೆ ನೀಡುವ ಜೇನುತುಪ್ಪ ಥೆರಪಿಯನ್ನು ಈ ಲೇಖನದಲ್ಲಿ ಪರಿಚಯಿಸುತ್ತಿದ್ದೇವೆ. ಇದನ್ನು ಓದಿ ನೀವೂ ಪ್ರಯೋಗ ಮಾಡಿ. ಉತ್ತಮ ಫಲಿತಾಂಶ ಸಿಗುವುದು.

ಜೇನುತುಪ್ಪ-ಎಳ್ಳು ಬೆರೆಸಿ ಒಂದು ತಿಂಗಳು ಖಾಲಿ ಹೊಟ್ಟೆಯಲ್ಲಿ ಸೇವಿಸಿ!

ಜೇನು ತುಪ್ಪದಲ್ಲಿ ವಿಟಮಿನ್ ಸಿ, ಕಬ್ಬಿಣಂಶ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ನೈಸರ್ಗಿಕವಾಗಿ ಸಕ್ಕರೆ ಅಂಶವನ್ನು ಒಳಗೊಂಡಿರುವ ಜೇನುತುಪ್ಪ ರೋಗನಿರೋಧಕ ಶಕ್ತಿ ಹಾಗೂ ಸೋಂಕುಗಳ ನಿವಾರಣಾ ಶಕ್ತಿಯನ್ನು ಒಳಗೊಂಡಿದೆ. ಉತ್ತಮವಾದ ಔಷಧೀಯ ಗುಣವನ್ನು ಹೊಂದಿರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ.

ಮೈ ಕೈ ನೋವಿದ್ದರೆ, ಈ ಮನೆಮದ್ದು ಸೇವಿಸಿ, ಕೂಡಲೇ ಕಡಿಮೆಯಾಗುವುದು!

ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯನ್ನು ಬಹುಬೇಗ ನಿವಾರಣೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಆದರೆ ನೆನಪಿಡಿ ಆರೋಗ್ಯಕ್ಕೆ ಒಳ್ಳೆಯದು ಎಂದು ಮಿತಿಯಿಲ್ಲದೆ ಜೇನುತುಪ್ಪದ ಉಪಯೋಗ ಅಥವಾ ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಹಿತ-ಮಿತವಾಗಿ ಹೇಗೆ ಉಪಯೋಗಿಸಬೇಕು? ಇದರ ಪರಿಣಾಮವೇನು? ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ...

ಜೇನುತುಪ್ಪ

ಜೇನುತುಪ್ಪ

* ಒಂದು ಚಮಚ ಜೇನುತುಪ್ಪಕ್ಕೆ ಚಿಟಿಕೆ ಉಪ್ಪನ್ನು ಸೇರಿಸಿ.

* ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಸೇವಿಸಿ.

* ಈ ವಿಧಾನದಿಂದ ಅತಿಯಾದ ಆಯಾಸ ನಿವಾರಣೆಯಾಗಿ, ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

ಜೇನುತುಪ್ಪ ಮತ್ತು ಗ್ರೀನ್ ಟೀ

ಜೇನುತುಪ್ಪ ಮತ್ತು ಗ್ರೀನ್ ಟೀ

* ಒಂದು ಗ್ಲಾಸ್ ನೀರನ್ನು ಚೆನ್ನಾಗಿ ಕುದಿಸಿ.

* ಕುದಿಯುತ್ತಿರುವ ನೀರಿಗೆ ಒಂದು ಚಮಚ ಗ್ರೀನ್ ಟೀ ಪೌಡರ್ ಸೇರಿಸಿ.

* ಪೌಡರ್ ಚೆನ್ನಾಗಿ ಕುದಿಯಲು 5 ನಿಮಿಷ ಬಿಡಿ

* ನಂತರ ಒಂದು ಗ್ಲಾಸ್‍ಗೆ ನೀರನ್ನು ಜರಡಿಯಲ್ಲಿ ಹಿಡಿಯಿರಿ. ಜೊತೆಗೆ ಒಂದು ಚಮಚ ಜೇನುತುಪ್ಪ ಸೇರಿಸಿ.

* ಈ ರೀತಿಯ ಚಹಾವನ್ನು ದಿನಕ್ಕೆ 1-2 ಬಾರಿ ಸೇವಿಸಿ.

ಜೇನುತುಪ್ಪ ಮತ್ತು ಹಾಲು

ಜೇನುತುಪ್ಪ ಮತ್ತು ಹಾಲು

* ಒಂದು ಗ್ಲಾಸ್ ಬಿಸಿ ಹಾಲನ್ನು ತೆಗೆದುಕೊಳ್ಳಿ.

* ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ, ಚೆನ್ನಾಗಿ ತಿರುವಿ.

* ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಿ.

ಜೇನುತುಪ್ಪ, ಶುಂಠಿ ಮತ್ತು ನಿಂಬೆ

ಜೇನುತುಪ್ಪ, ಶುಂಠಿ ಮತ್ತು ನಿಂಬೆ

* ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.

* ಇದಕ್ಕೆ ಅರ್ಧ ಚಮಚ ಜೇನು ತುಪ್ಪ, 2 ಚಮಚ ನಿಂಬೆ ರಸ, 2 ಚಮಚ ಶುಂಠಿ ರಸವನ್ನು ಸೇರಿಸಿ.

* ಇವುಗಳನ್ನು ಚೆನ್ನಾಗಿ ಬೆರೆಸಿ, ದಿನಕ್ಕೆ 1-2 ಬಾರಿ ಕುಡಿಯಿರಿ.

ಜೇನುತುಪ್ಪ ಮತ್ತು ದಾಲ್ಚಿನ್ನಿ

ಜೇನುತುಪ್ಪ ಮತ್ತು ದಾಲ್ಚಿನ್ನಿ

* ಒಂದು ಗ್ಲಾಸ್ ಬೆಚ್ಚಗಿನ ಹಾಲನ್ನು ತೆಗೆದುಕೊಳ್ಳಿ.

* ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ.

* ಇದನ್ನು ಚೆನ್ನಾಗಿ ಕಲುಕಿ.

* ನಿತ್ಯವೂ ಮಲಗುವ ಮುನ್ನ ಒಮ್ಮೆ ಸೇವಿಸಿ

English summary

Is Your Work Leaving You Tired & Stressed? Try These Honey Therapies

Honey has been known to mankind since time immemorial. Due to its innumerable health benefits honey has been used as one of the major ingredients in ayurveda as well. This probably could be the reason why our grandparents and parents ran behind us and made us have that one spoon of honey.
X
Desktop Bottom Promotion