ಡಬಲ್ 'ಟೋನ್ಡ್ ಹಾಲು' ಕುಡಿದರೆ... ದೇಹ ಹೇಳುವುದು ಥ್ಯಾಂಕ್ಯೂ...

By: Divya
Subscribe to Boldsky

ಇತ್ತೀಚೆಗೆ ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯು ಆಹಾರದ ವಿಚಾರದಲ್ಲೂ ಪಥ್ಯವನ್ನು ಅನುಸರಿಸುವಂತೆ ಮಾಡಿದೆ. ಅದರಲ್ಲೂ ಹಾಲನ್ನು ಕುಡಿಯುವ ವಿಷಯದಲ್ಲಿ ಹೆಚ್ಚು ಎಂದೇ ಹೇಳಬಹುದು. ಹೆಚ್ಚು ಕೊಬ್ಬಿನಂಶ ಹೊಂದಿದೆಯೇ? ಇಲ್ಲವೇ ಎನ್ನುವುದನ್ನು ಗಮನಿಸುತ್ತಾರೆ. ಡಬಲ್ ಟೋನ್ಡ್ ಮಿಲ್ಕ್ (ಹೆಚ್ಚು ಕೊಬ್ಬನ್ನು ಹೊಂದಿರುವ ಹಾಲು) ಎಂದಾದರೆ ಅದನ್ನು ಮುಟ್ಟುವುದೇ ಇಲ್ಲ. 

ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ...

ನಿಜ ಹೇಳಬೇಕೆಂದರೆ ದೇಹಕ್ಕೆ ಬೇಕಾದ ಅಗತ್ಯ ಕ್ಯಾಲ್ಸಿಯಂ ಅನ್ನು ಡಬಲ್ ಟೋನ್ಡ್ ಮಿಲ್ಕ್ ನೀಡುತ್ತದೆ. ನೀವೇನಾದರೂ ಹಾಲನ್ನು ದ್ವೇಷಿಸಿದರೆ ನಿಮ್ಮ ಮೂಳೆ ಮತ್ತು ಸ್ನಾಯುಗಳು ನಿಮ್ಮನ್ನು ದ್ವೇಷಿಸುತ್ತವೆ!.. ಹೌದು ಇವು ದೇಹಕ್ಕೆ ಬೇಕಾದ ಎಲ್ಲಾ ಬಗೆಯ ಪ್ರೋಟೀನ್‍ಗಳನ್ನು ನೀಡಿ, ಹೆಚ್ಚು ಶಕ್ತಿಯುತವಾಗಿರುವಂತೆ ಮಾಡುತ್ತದೆ. ಹೆಚ್ಚು ಕೊಬ್ಬಿನಂಶ ಇರುವ ಹಾಲನ್ನು ಕುಡಿಯುವುದರಿಂದ ಏನು ಪ್ರಯೋಜನ? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿದರೆ ಈ ಲೇಖನವನ್ನು ಓದಿ...  

ಉಪಯೋಗ-1

ಉಪಯೋಗ-1

ಸಾಮಾನ್ಯ ಹಾಲಿಗಿಂತ ಡಬಲ್ ಟೋನ್ಡ್ ಹಾಲಿನಲ್ಲಿ ವಿಟಮಿನ್-ಡಿ ಪ್ರಮಾಣವು ಹೆಚ್ಚಾಗಿರುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ವಿಟಮಿನ್ ಡಿ ಇದರಲ್ಲಿ ಇರುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತವೆ.

ಉಪಯೋಗ-2

ಉಪಯೋಗ-2

ಟೋನ್ಡ್ ಹಾಲಿಗಿಂತ ಕಡಿಮೆ ಕ್ಯಾಲೋರಿಯನ್ನು ಡಬಲ್ ಟೋನ್ಡ್ ಮಿಲ್ಕ್ ಹೊಂದಿರುತ್ತದೆ. ಟೋನ್ ಮಾಡಿದ ಹಾಲಿನ ಒಂದು ಕಪ್ 150 ಕ್ಯಾಲೋರಿಯನ್ನು ನೀಡಿದರೆ, ಡಬಲ್ ಟೋನ್ ಹಾಲು 111 ಕ್ಯಾಲೊರಿಯನ್ನು ಹೊಂದಿರುತ್ತದೆ.

ಉಪಯೋಗ-3

ಉಪಯೋಗ-3

ಡಬಲ್ ಟೋನ್ಡ್ ಹಾಲಿನಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುತ್ತದೆ. ದೇಹಕ್ಕೆ ಅಗತ್ಯ ಇರುವ ಶಕ್ತಿಯನ್ನು ನೀಡುತ್ತದೆ. ನಿತ್ಯವೂ ಇದರ ಸೇವನೆ ಮಾಡಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು.

ಉಪಯೋಗ-4

ಉಪಯೋಗ-4

ಡಬಲ್ ಟೊನ್ಡ್ ಹಾಲಿನಲ್ಲಿ ಕೊಬ್ಬಿನಂಶವು ಶೇ. 1.5ರಷ್ಟು ಇರುತ್ತದೆ. ಇದನ್ನು ಕುಡಿಯುವುದರಿಂದ ಬೊಜ್ಜು ಅಥವಾ ಹೃದಯ ಸಂಬಂಧಿ ಸಮಸ್ಯೆ ಬರಬಹುದೆಂಬ ಭಯ ಪಡುವ ಅಗತ್ಯವಿಲ್ಲ.

ಉಪಯೋಗ-5

ಉಪಯೋಗ-5

ಮುಂಜಾನೆಯ ವ್ಯಾಯಾಮದ ನಂತರ ಡಬಲ್ ಟೋನ್ಡ್ ಮಿಲ್ಕ್ ಸೇವಿಸಿದರೆ ಪರಿಪೂರ್ಣ ಅನುಭವ ಸಿಗುವುದು. ಜೊತೆಗೆ ಆರೋಗ್ಯಕರ ಅಂಶಗಳನ್ನು ದೇಹಕ್ಕೆ ಒದಗಿಸಿದಂತಾಗುವುದು.

ಉಪಯೋಗ-6

ಉಪಯೋಗ-6

ಡಬಲ್ ಟೋನ್ಡ್ ಮಿಲ್ಕ್ ಅಧಿಕ ಪ್ರಮಾಣದ ಪೌಷ್ಟಿಕಾಂಶವನ್ನು ಒಳಗೊಂಡಿದೆ. ಒಂದು ಕಪ್ ಹಾಲಿನಲ್ಲಿ 8 ಗ್ರಾಂ ಪ್ರೋಟೀನ್ ಇರುತ್ತದೆ.

ದಿನನಿತ್ಯ ತುಳಸಿ ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ

English summary

Is Double Toned Milk Good For Health?

Double toned milk is actually good for you. It is a product of whole milk and skimmed milk. If you are lactose intolerant, you can stay away from it. But otherwise, here are some good reasons why you must drink double toned milk every morning.
Story first published: Friday, June 2, 2017, 7:02 [IST]
Subscribe Newsletter