Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೋಳಿಯ ಚರ್ಮ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ? ಅಥವಾ ಕೆಟ್ಟದ್ದೇ?
ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.
ಕೋಳಿಮಾಂಸದ ಅಂಗಡಿಗೆ ಹೋದಾಗ ಅಂಗಡಿಯವರು ಸ್ಕಿನ್ ಔಟ್ ಅಥವಾ ಸ್ಕಿನ್ ಬರ್ನ್ ಮಾಡಬೇಕೇ ಎಂದು ಕೇಳುತ್ತಾರೆ. ಇದರ ಅರ್ಥ ಚರ್ಮವನ್ನು ಉಳಿಸಬೇಕೇ ಬೇಡವೇ ಎಂದು. ಕೆಲವರು ಚರ್ಮವನ್ನು ಉಳಿಸಿ ಎಂದು ಹೇಳುತ್ತಾರೆ. ಆಗ ಪುಕ್ಕವನ್ನು ನಿವಾರಿಸಿ ಚರ್ಮಸಹಿತ ಮಾಂಸವನ್ನು ನೀಡುತ್ತಾರೆ. ಚರ್ಮ ಬೇಡವೆನ್ನುವವರು ಇದರಲ್ಲಿ ಕೊಬ್ಬು ಇದೆ, ಇದರಲ್ಲಿ ಕೊಲೆಸ್ಟ್ರಾಲ್ ಇದೆ, ಇದು ಹೃದಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಗಳನ್ನು ನೀಡುತ್ತಾರೆ. ನಾನ್ ವೆಜ್ ಪ್ರಿಯರಿಗೆ ಸಿಹಿ ಸುದ್ದಿ-ಚಿಕನ್ ಆರೋಗ್ಯಕ್ಕೆ ಬಹಳ ಒಳ್ಳೆಯದು
ಆದರೆ ಸಂಶೋಧಕರ ಪ್ರಕಾರ ಕೋಳಿಮಾಂಸದ ಚರ್ಮ ಆರೋಗ್ಯಕ್ಕೆ ಉತ್ತಮ! ಆದರೆ ಇದರ ಪ್ರಮಾಣ ಮಿತವಾಗಿರಬೇಕು ಅಷ್ಟೇ. ಅಂದರೆ ಮಾಂಸದೊಂದಿಗೆ ಕೊಂಚವೇ ಪ್ರಮಾಣದ ಚರ್ಮ ಇದ್ದರೆ ರುಚಿಯೂ ಹೌದು, ಆರೋಗ್ಯಕರವೂ ಹೌದು.ಹಾಗಾದರೆ ಇದುವರೆಗೆ ನಾವೆಲ್ಲ ತಿಳಿದಿರುವಂತೆ ಕೋಳಿಮಾಂಸದ ಚರ್ಮ ಅಷ್ಟು ಕೆಟ್ಟದಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ವಾಸ್ತವಾಂಶ #1
ಕೊಬ್ಬಿನ ಬಗ್ಗೆ ಅರಿಯುವುದಾದರೆ ಒಂದು ಔನ್ಸ್ ನಷ್ಟು ಚರ್ಮದಲ್ಲಿ ಕೇವಲ ಎಂಟು ಗ್ರಾಂ ಅಪರ್ಯಾಪ್ತ ಕೊಬ್ಬು ಮತ್ತು ಮೂರು ಗ್ರಾಂ ಪರ್ಯಾಪ್ತ ಕೊಬ್ಬು ಇದೆ.

ವಾಸ್ತವಾಂಶ #2
ಚರ್ಮದಲ್ಲಿ ಯಾವ ಬಗೆಯ ಕೊಬ್ಬು ಇದೆ? ಚರ್ಮವನ್ನು ಪರೀಕ್ಷಿಸಿದ ತಜ್ಞರಿಗೆ ಇದರಲ್ಲಿ ಮೋನೋ ಅಪರ್ಯಾಪ್ತ ಕೊಬ್ಬು (ಅಥವಾ ಓಲಿಕ್ ಅಮ್ಲ) ಕಂಡುಬಂದಿದೆ. ಈ ಆಮ್ಲದ ಹೆಗ್ಗಳಿಕೆ ಎಂದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಅಂದರೆ ಇದುವರೆಗೆ ನಾವು ಹೆದರಿದಂತೆ ಹೃದಯ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಕಡಿಮೆಗೊಳಿಸುತ್ತದೆ. ಅಲ್ಲದೇ ದೇಹದಲ್ಲಿ ಹಾರ್ಮೋನುಗಳ ಪ್ರಮಾಣವನ್ನೂ ನಿಯಂತ್ರಿಸುತ್ತದೆ.

ವಾಸ್ತವಾಂಶ #3
ಕೋಳಿಮಾಂಸ ತಿನ್ನುವವರು ಕ್ಯಾಲೋರಿಗಳ ಬಗ್ಗೆ ಭಾರೀ ಚಿಂತಾಕ್ರಾಂತರಾಗಿರುತ್ತಾರೆ. ಆದರೆ ಚರ್ಮಸಹಿತ ಮತ್ತು ಚರ್ಮರಹಿತ ಮಾಂಸದಲ್ಲಿ ಕ್ಯಾಲೋರಿಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಚರ್ಮಸಹಿತ ಮಾಂಸದಲ್ಲಿ ಕೆಲವೇ ಕ್ಯಾಲೋರಿಗಳು ಹೆಚ್ಚಿರುತ್ತವೆ ಅಷ್ಟೇ.

ವಾಸ್ತವಾಂಶ #4
ಇನ್ನೊಂದು ಉತ್ತಮ ಗುಣವೆಂದರೆ ಚರ್ಮಸಹಿತ ಮಾಂಸ ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಚರ್ಮರಹಿತ ಮಾಂಸ ಎಣ್ಣೆಯನ್ನು ಹೆಚ್ಚಾಗಿ ಹೀರಿಕೊಳ್ಳುವ ಕಾರಣ ಅಡುಗೆಯ ಸಮಯದಲ್ಲಿ ಹೆಚ್ಚಿನ ಎಣ್ಣೆಯನ್ನು ಹಾಕಬೇಕಾಗುತ್ತದೆ.

ವಾಸ್ತವಾಂಶ #5
ಆದರೆ ಚರ್ಮಸಹಿತ ಮಾಂಸವನ್ನು ಹೆಚ್ಚು ತಿನ್ನಬಹುದೇ? ತಜ್ಞರ ಪ್ರಕಾರ ಇಲ್ಲ! ಏಕೆಂದರೆ ಚರ್ಮದ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಚರ್ಮದ ಪ್ರಮಾಣ ಮಿತವಾಗಿರುವುದು ತುಂಬಾ ಅಗತ್ಯ.

ವಾಸ್ತವಾಂಶ #6
ಚರ್ಮಸಹಿತ ಮಾಂಸ ಸೇವಿಸಿದರೆ ಕೊಂಚ ಪ್ರಮಾಣಕ್ಕೇ ತೃಪ್ತಿಯಾಗುವ ಕಾರಣ ಹೆಚ್ಚಿನ ಪ್ರಮಾಣ ಸೇವಿಸುವ ಅಗತ್ಯವಿಲ್ಲ. ಆದರೆ ಚರ್ಮರಹಿತ ಮಾಂಸ ತಿಂದರೆ ಎಷ್ಟು ತಿಂದರೂ ತೃಪ್ತಿ ಸಿಗದ ಕಾರಣ ಹೆಚ್ಚು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ.

ವಾಸ್ತವಾಂಶ #7
ಒಂದು ವೇಳೆ ನೀವು ಮಾಂಸವನ್ನು ಹುರಿಯುವುದಾದರೆ ಚರ್ಮ ಗರಿಗರಿಯಾಗುವಷ್ಟು ಹುರಿಯಬೇಡಿ. ಏಕೆಂದರೆ ಕಪ್ಪಗಾದ ಚರ್ಮ ಎಲ್ಲಾ ಒಳ್ಳೆಯ ಗುಣಗಳನ್ನು ಕಳೆದುಕೊಳ್ಳುತ್ತದೆ ಹಾಗೂ ಕಪ್ಪಗಾದ ಭಾಗ ಇಂಗಾಲಕ್ಕೆ ಪರಿವರ್ತನೆಗೊಂಡು ಆರೋಗ್ಯಕ್ಕೆ ಮಾರಕವಾಗುತ್ತದೆ.



Click it and Unblock the Notifications
