ಬಾಳೆಕಾಯಿಯಲ್ಲಿರುವ ಗುಣಗಳನ್ನು ತಿಳಿದರೆ, ಇಷ್ಟಪಟ್ಟು ತಿನ್ನುವಿರಿ!

Posted By: manu
Subscribe to Boldsky

ಪ್ರಕೃತಿ ನಮಗೆ ಆಯಾಯ ಋತುವಿನಲ್ಲಿ ಒಂದೊಂದು ಹಣ್ಣು ಹಾಗೂ ತರಕಾರಿಗಳನ್ನು ನೀಡಿ ದೇಹದ ಆರೋಗ್ಯ ರಕ್ಷಿಸಬೇಕೆಂದು ಹೇಳಿಕೊಟ್ಟಿದೆ. ಆದರೆ ನಾವು ಎಲ್ಲವನ್ನು ಕಡೆಗಣಿಸಿ ನಮಗೆ ಇಷ್ಟಬಂದಂತೆ ಹಣ್ಣುಗಳನ್ನು ತಿನ್ನುತ್ತೇವೆ. ಸಂಸ್ಕರಿಸಲ್ಪಟ್ಟ ಹಣ್ಣುಗಳನ್ನು ನಾವು ತಿನ್ನುತ್ತೇವೆ. ತಾಜಾ ಹಣ್ಣುಗಳನ್ನು ಕಡೆಗಣಿಸುತ್ತೇವೆ. ಇಂತಹ ಹಣ್ಣುಗಳಲ್ಲಿ ಬಾಳೆಹಣ್ಣು ಪ್ರಮುಖವಾಗಿದೆ. ಎಲ್ಲಾ ಋತುವಿನಲ್ಲೂ ಸಿಗುವ ಹಣ್ಣೆಂದರೆ ಅದು ಬಾಳೆಹಣ್ಣು. ಇದರಲ್ಲಿರುವ ಪೊಟಾಶಿಯಂ ನಿಮ್ಮ ದೇಹಕ್ಕೆ ಶಕ್ತಿ ನೀಡಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಪಡಿಸುವುದು.   ಬೇಯಿಸಿದ ಬಾಳೆಕಾಯಿ ರಾಯತ

ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಕೋಶಗಳಿಗೆ ಪೋಷಣೆ ನೀಡುತ್ತದೆ ಮತ್ತು ಇದರಿಂದ ದೇಹವು ಆರೋಗ್ಯವಾಗಿರುತ್ತದೆ. ಬಾಳೆಹಣ್ಣಿನಲ್ಲಿರುವ ಲಾಭಗಳ ಬಗ್ಗೆ ಹೆಚ್ಚಿನವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಕಚ್ಚಾ ಬಾಳೆಕಾಯಿಯಲ್ಲಿರುವ ಹಲವಾರು ರೀತಿಯ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.   ಮನೆಮಂದಿಯೆಲ್ಲ ಇಷ್ಟಪಡುವ ಬಾಳೆಕಾಯಿ ಪಲ್ಯ

ಇದರಲ್ಲಿರುವ ಪಿಷ್ಠ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಆರೋಗ್ಯ ವೃದ್ಧಿಸುವುದರ ಜೊತೆಗೆ, ಪಿಷ್ಠವು ಹೀರಿಕೊಳ್ಳುವ ನಾರಿನಾಂಶದಂತೆ ಕೆಲಸ ಮಾಡುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಗೆ ಸಾಗಿ ಅಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಬನ್ನಿ ಇದರ ಇನ್ನಷ್ಟು ಪ್ರಾಮುಖ್ಯತೆಯ ತಿಳಿಯೋಣ... 

ನಿರೋಧಕ ಪಿಷ್ಟ

ನಿರೋಧಕ ಪಿಷ್ಟ

ಬಾಳೆಕಾಯಿ ನಿರೋಧಕ ಪಿಷ್ಟದಿಂದ ಸಮೃದ್ಧಗೊಂಡಿದ್ದು ಸಣ್ಣ ಕರುಳು ಇದನ್ನು ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಬಾಳೆಕಾಯಿಯ ಆರೋಗ್ಯ ಪ್ರಯೋಜನಗಳಲ್ಲಿ ಇದೂ ಕೂಡ ಒಂದಾಗಿದೆ. ಮಧುಮೇಹಿಗಳಿಗೆ ಬಾಳೆಕಾಯಿ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು ಬಾಳೆಕಾಯಿಯ ಪದಾರ್ಥಗಳನ್ನು ಸೇವಿಸುವುದರಿಂದ ಎರಡನೇ ವಿಧ ಮಧುಮೇಹವನ್ನು ದೂರಮಾಡಬಹುದಾಗಿದೆ.

ಜೀರ್ಣಕ್ರಿಯೆಗಾಗಿ

ಜೀರ್ಣಕ್ರಿಯೆಗಾಗಿ

ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಕೂಡ ಬಾಳೆಕಾಯಿಸ ಸಹಕಾರಿ ಎಂದೆನಿಸಲಿದೆ. ಫೈಬರ್ ಅನ್ನು ಒಳಗೊಂಡಿರುವ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆಕಾಯಿಯನ್ನು ಸೇವಿಸುವುದು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ ಎಂದೆನಿಸಲಿದೆ.

ಪೊಟಾಶಿಯಂ ಅಧಿಕವಾಗಿದೆ

ಪೊಟಾಶಿಯಂ ಅಧಿಕವಾಗಿದೆ

ನರಗಳ ಕ್ರಿಯೆಯನ್ನು ಇದು ಸುಧಾರಿಸಲಿದ್ದು, ರಕ್ತವನ್ನು ಶುದ್ಧೀಕರಿಸಲಿದೆ ಮತ್ತು ಸ್ನಾಯುಗಳ ಚಲನೆಯನ್ನು ಸುಧಾರಿಸುತ್ತದೆ. ನಿಮ್ಮ ದೇಹಕ್ಕೆ ಪೊಟಾಶಿಯಂ ಅನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗಿದ್ದು, ಬೇಯಿಸಿದ ಬಾಳೆಕಾಯಿ 531 ಎಮ್‌ಜಿ ಪೊಟಾಶಿಯಂ ಅನ್ನು ಒಳಗೊಂಡಿದೆ.

ಪ್ರೊಬಯೋಟಿಕ್ ಬ್ಯಾಕ್ಟೀರಿಯಾ

ಪ್ರೊಬಯೋಟಿಕ್ ಬ್ಯಾಕ್ಟೀರಿಯಾ

ಈ ಬ್ಯಾಕ್ಟೀರಿಯಾ ಅತ್ಯುತ್ತಮ ಎಂದೆನಿಸಿದ್ದು ನಿಮ್ಮ ಕರುಳನ್ನು ಆರೋಗ್ಯವಾಗಿರಿಸಲಿದೆ. ನಿಮ್ಮ ಕರುಳಿನಲ್ಲಿರುವ ಕೆಲವೊಂದು ಬ್ಯಾಕ್ಟೀರಿಯಾಗಳಿಗೆ ಇದು ಅತ್ಯುತ್ತಮ ಎಂದೆನಿಸಿದೆ. ದಿನವೂ ಹಸಿರು ಬಾಳೆಯನ್ನು ಸೇವಿಸುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ.

ವಿಟಮಿನ್‌ಗಳ ಸಂಪನ್ಮೂಲ

ವಿಟಮಿನ್‌ಗಳ ಸಂಪನ್ಮೂಲ

ಬಾಳೆಕಾಯಿಯನ್ನು ಏಕೆ ಸೇವಿಸಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಇದು ಹೆಚ್ಚುವರಿ ವಿಟಮಿನ್‌ಗಳನ್ನು ತನ್ನಲ್ಲಿ ಪಡೆದುಕೊಂಡಿದೆ. ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ ಬಿ6 ಮತ್ತು ಸಿ ಇದೆ. ವಿಟಮಿನ್ ಬಿ6 ಹಿಮೊಗ್ಲೋಬೀನ್ ಉತ್ಪಾದನೆಯನ್ನು ಮಾಡುತ್ತದೆ ಹಾಗೂ ರಕ್ತದಲ್ಲಿರುವ ಸಕ್ಕರೆಯನ್ನು ನಿಯಂತ್ರಿಸುತ್ತದೆ.

ಡಯೇರಿಯಾವನ್ನು ಉಪಚರಿಸುತ್ತದೆ

ಡಯೇರಿಯಾವನ್ನು ಉಪಚರಿಸುತ್ತದೆ

ಹೆಚ್ಚಿನ ನ್ಯೂಟ್ರೀನ್ ಅಂಶಗಳನ್ನು ಒಳಗೊಂಡಿರುವ ಬಾಳೆಕಾಯಿ ಡಯೇರಿಯಾವನ್ನು ಉಪಚರಿಸುವಲ್ಲಿ ಎತ್ತಿದ ಕೈಯಾಗಿದೆ. ಚೆನ್ನಾಗಿ ಬೇಯಿಸಿದ ಬಾಳೆಕಾಯಿ ಡಯೇರಿಯಾವನ್ನು ಹತೋಟಿಯಲ್ಲಿಡುತ್ತದೆ. ಅಂತೆಯೇ ಅದರ ರೋಗಲಕ್ಷಣಗಳಾದ ತಲೆನೋವು, ವಾಕರಿಕೆ ಮತ್ತು ಸುಸ್ತನ್ನು ದೂರಮಾಡುತ್ತದೆ.

ಮಧುಮೇಹಿಗಳಿಗೆ ಉತ್ತಮ ಆಹಾರ

ಮಧುಮೇಹಿಗಳಿಗೆ ಉತ್ತಮ ಆಹಾರ

ಎರಡನೇ ಪ್ರಕಾರದ ಮಧುಮೇಹವನ್ನು ನಿಯಂತ್ರಿಸುವಲ್ಲಿ ಹಸಿರು ಬಾಳೆಕಾಯಿ ಅತ್ಯುತ್ತಮ ಎಂದೆನಿಸಿದೆ. ಇದು ಕಡಿಮೆ ಪ್ರಮಾಣದ ಸಕ್ಕರೆಯನ್ನು ಒಳಗೊಂಡಿದ್ದು, ಮಧುಮೇಹಿಗಳಿಗೆ ಇದು ಅತ್ಯುತ್ತಮವಾಗಿದೆ.

ತೂಕ ಇಳಿಕೆ

ತೂಕ ಇಳಿಕೆ

ಬಾಳೆಕಾಯಿಯಲ್ಲಿ ಫೈಬರ್ ಅಂಶವಿದ್ದು, ನಿಮ್ಮ ಹೊಟ್ಟೆಯನ್ನು ಇದು ಬೇಗನೇ ತುಂಬಿಸುತ್ತದೆ. ದೀರ್ಘ ಸಮಯದವರೆಗೆ ನಿಮಗೆ ಹಸಿವಾಗದಂತೆ ಇದು ತಡೆಯುತ್ತದೆ. ಅಂತೆಯೇ ಕಡಿಮೆ ಆಹಾರ ಸೇವನೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮ ಹಸಿವನ್ನು ತಡೆಹಿಡಿಯುವಲ್ಲಿ ಇದು ಸಹಕಾರಿಯಾಗಿದ್ದು, ನಿಮ್ಮ ತೂಕವನ್ನು ನೈಸರ್ಗಿಕವಾಗಿ ಇಳಿಸುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    Incredible Reasons Why You Should Eat Raw Bananas

    There are many recipes that you can try to avail the benefits of a raw banana without compromising on its taste. Here let's have a look at the health benefits of a raw banana and also some of the incredible reasons to eat the same.
    Story first published: Wednesday, April 12, 2017, 23:44 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more