ಮನೆ ಔಷಧಿ: ಸುಟ್ಟ ಗಾಯದ ಶೀಘ್ರ ಶಮನಕ್ಕೆ 'ಅಲೋವೆರಾ' ಬೆಸ್ಟ್

By: Arshad
Subscribe to Boldsky

ಮನೆಯಲ್ಲಿ ಚಿಕ್ಕಪುಟ್ಟ ಅಪಘಾತಗಳು ಆಗುತ್ತಲೇ ಇರುತ್ತವೆ. ಆದ್ದರಿಂದ ಮನೆಯಲ್ಲೊಂದು ಪುಟ್ಟ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುವುದು ಅವಶ್ಯ. ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಎಣ್ಣೆ ಸಿಡಿದು ಬಿಸಿ ಪಾತ್ರೆ ತಾಕಿ ಅಲ್ಲಲ್ಲಿ ಸುಟ್ಟಗಾಯಗಳೂ ಆಗುತ್ತಿರುತ್ತವೆ. ಸುಟ್ಟ ಗಾಯಕ್ಕೆ ತಕ್ಷಣವೇ ತಣ್ಣೀರು ತಾಗಿಸಿ ತಣ್ಣಗಾಗಿಸುವುದು ಎಲ್ಲಕ್ಕಿಂತ ಮೊದಲು ಮಾಡಬೇಕಾದ ಪ್ರಥಮ ಚಿಕಿತ್ಸೆ. ವೈದ್ಯರು ಹತ್ತಿರವಿದ್ದರೆ ಅಥವಾ ವೈದ್ಯರ ಸಲಹೆಯ ಪ್ರಕಾರ ಔಷಧಿಯನ್ನು ಪಡೆಯಲು ಸಾಧ್ಯವಿದ್ದರೆ ತುಂಬಾ ಉತ್ತಮ. ಆದರೆ ಎಲ್ಲರಿಗೂ ಇದು ಸಾಧ್ಯವಾಗಲಿಕ್ಕಿಲ್ಲ. ನೀರಿನಿಂದ ಗಾಯವನ್ನು ತಣ್ಣಗಾಗಿಸಿದ ಬಳಿಕವೂ ಅಪಾರ ಉರಿ ಆವರಿಸುತ್ತದೆ. ಈಗೇನು ಮಾಡುವುದು? 

ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ನಿಮ್ಮ ಮನೆಯ ಹೂಕುಂಡಲ್ಲಿ ನೆಟ್ಟಿರುವ ಲೋಳೆಸರ ಈ ಸಮಸ್ಯಗೆ ಅತ್ಯುತ್ತಮವಾದ ಪರಿಹಾರವಾಗಿದೆ. ಲೋಳೆಸರ ಹಲವು ತೊಂದರೆಗಳಿಗೆ ತಕ್ಷಣದ ಪರಿಹಾರ ನೀಡುವ ಅದ್ಭುತ ಔಷಧಿಯಾಗಿದ್ದು ಇದರಲ್ಲಿ ಸುಟ್ಟಗಾಯದ ಉರಿಯನ್ನು ಶಮನಗೊಳಿಸುವುದೂ ಒಂದು. ಚರ್ಮದ ಬಗೆ ಯಾವುದೇ ಇರಲಿ, ಆರೈಕೆಗೆ ಯಾವುದೇ ಅಳುಕಿಲ್ಲದೇ ಲೋಳೆಸರವನ್ನು ಬಳಸಬಹುದು. ಇದರ ತೇವಕಾರಕ ಗುಣ ಚರ್ಮದಲ್ಲಿ ಹೆಚ್ಚಿನ ಆರ್ದ್ರತೆಯನ್ನು ಒದಗಿಸಿ ಸುಟ್ಟ ಮತ್ತು ಇತರ ಗಾಯಗಳನ್ನು ಅತಿ ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ.

ಲೋಳೆ ಸರ ಜ್ಯೂಸ್- ಇನ್ನು ತೂಕ ಇಳಿಸಲು ರೆಡಿಯಾಗಿ..!

ಇದರ ಕೋಡನ್ನು ಮುರಿದಾಗ ಒಸರುವ ದ್ರವವನ್ನು ಹಲವಾರು ಚರ್ಮ ಪ್ರಸಾಧನಗಳಲ್ಲಿ ಮುಖ್ಯ ಪರಿಕರವಾಗಿ ಬಳಸಲಾಗುತ್ತದೆ. ಇವು ಚರ್ಮದ ಉರಿ, ನೋವುಗಳನ್ನು ಕಡಿಮೆ ಮಾಡಿ ಹೊಸಚರ್ಮ ಬೆಳೆಯಲು ನೆರವಾಗುತ್ತದೆ. ಇಂದಿನ ಲೇಖನದಲ್ಲಿ ಲೋಳೆಸರವನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು ಎಂಬುದನ್ನು ವಿವರಿಸಲಾಗಿದ್ದು ಈ ವಿಧಾನವನ್ನು ಅನುಸರಿಸುವ ಮೂಲಕ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು.....

ಲೋಳೆಸರದ ತಿರುಳನ್ನು ಸುಟ್ಟಗಾಯಕ್ಕೆ ಹಚ್ಚುವ ವಿಧಾನ

ಲೋಳೆಸರದ ತಿರುಳನ್ನು ಸುಟ್ಟಗಾಯಕ್ಕೆ ಹಚ್ಚುವ ವಿಧಾನ

ಅಗತ್ಯವಿರುವ ಪ್ರಮಾಣ: ಈಗ ತಾನೇ ಕತ್ತರಿಸಿದ ಒಂದು ಕೋಡು

ವಿಧಾನ:

ವಿಧಾನ:

1) ಮೊದಲು ಈ ಕೋಡನ್ನು ಉದ್ದಕ್ಕೆ ಕತ್ತರಿಸಿ ಹೊರಭಾಗ ಒಳಹೋಗುವಂತೆ ಒತ್ತಿ ಒಳಗಿನ ತಿರುಳು ಹೊರಬರುವಂತೆ ಮಾಡಿ.

2) ಚಿಕ್ಕ ಚಮಚದಿಂದ ಈ ತಿರುಳನ್ನು ಕೆರೆದು ಸಂಗ್ರಹಿಸಿ. ಒಂದು ಚಿಕ್ಕ ಪಾತ್ರೆಯಲ್ಲಿ ತಿರುಳನ್ನು ಹಾಕಿ ಚಮಚದಲ್ಲಿಯೇ ಜಜ್ಜಿ.

3) ಈ ತಿರುಗಳನ್ನು ಈಗ ನೇರವಾಗಿ ಸುಟ್ಟಗಾಯದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಐದಾರು ನಿಮಿಷ ಅಲ್ಲಾಡದಂತೆ ಹಾಗೇ ಇರಿಸಿ.

4) ಬಳಿಕ ಒದ್ದೆಬಟ್ಟೆಯನ್ನು ಉಪಯೋಗಿಸಿ ಒರೆಸಿಕೊಳ್ಳಿ.

ಲೋಳೆಸರದ ಲೋಷನ್

ಲೋಳೆಸರದ ಲೋಷನ್

ಸಮಯವಿದ್ದಾಗ ಈ ದ್ರಾವಣವನ್ನು ತಯಾರಿಸಿಟ್ಟುಕೊಂಡು ಫ್ರಿಜ್ಜಿನಲ್ಲಿಟ್ಟರೆ ಸುಟ್ಟಗಾಯಕ್ಕೆ ತಕ್ಷಣದ ಪರಿಹಾರ ಒದಗಿಸಬಹುದು. ಈ ವಿಧಾನದಲ್ಲಿ ಬೆಣ್ಣೆಹಣ್ಣು ಮತ್ತು ಆಲಿವ್ ಎಣ್ಣೆಯನ್ನು ಬಳಸಲಾಗಿದ್ದು ಸುಟ್ಟಗಾಯಕ್ಕೆ ತಕ್ಷಣವೇ ಹಚ್ಚುವುದರಿಂದ ಉರಿಯಾಗುವುದನ್ನು ತಪ್ಪಿಸಿ ಶೀಘ್ರ ಮಾಗಿಸಲು ನೆರವಾಗಬಹುದು.

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣು

*ಒಂದು ಲೋಳೆಸರದ ಕೋಡು

*ಒಂದು ದೊಡ್ಡ ಚಮಚ ಆಲಿವ್ ಎಣ್ಣೆ

ವಿಧಾನ:

ವಿಧಾನ:

1) ಬೆಣ್ಣೆಹಣ್ಣನ್ನು ಕತ್ತರಿಸಿ ಚಮಚದಿಂದ ಒಳಗಿನ ತಿರುಗಳನ್ನು ಸಂಗ್ರಹಿಸಿ

2) ಲೋಳೆಸರದ ಕೋಡನ್ನು ಸೀಳಿ ಒಳಗಿನ ತಿರುಗಳನ್ನು ಸಂಗ್ರಹಿಸಿ

3) ಒಂದು ಚಿಕ್ಕ ಬೋಗುಣಿಯಲ್ಲಿ ಇವೆರಡನ್ನೂ ಆಲಿವ್ ಎಣ್ಣೆಯೊಂದಿಗೆ ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿ. ಸಾಧ್ಯವಾದರೆ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಕೆಲವೇ ಸೆಕೆಂಡುಗಳ ಕಾಲ ಮಿಶ್ರಣ ಮಾಡಿ ಗಾಳಿಯಾಡದ ಜಾಡಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಡಿ.

4) ಈ ಬಾಟಲಿಯ ಮೇಲೆ 'ಸುಟ್ಟ ಗಾಯಗಳಿಗೆ' ಎಂದು ಸ್ಪಷ್ಟವಾಗಿ ಬರೆದು ಉಳಿದವರಿಗೆ ಕಾಣುವಂತೆ ಇರಿಸಿ. ಇದರಿಂದ ಯಾವುದೇ ಸಮಯದಲ್ಲಿ

ಸುಟ್ಟಗಾಯವಾದರೆ ಎಲ್ಲರಿಗೂ ಅನುಕೂಲವಾಗುತ್ತದೆ.

ಲೋಳೆಸರದ ಜೆಲ್ ಅನ್ನು ಮನೆಯಲ್ಲಿಯೇ ತಯಾರಿಸಿ

ಲೋಳೆಸರದ ಜೆಲ್ ಅನ್ನು ಮನೆಯಲ್ಲಿಯೇ ತಯಾರಿಸಿ

ಮಾರುಕಟ್ಟೆಯಲ್ಲಿ ದೊರಕುವ ಜೆಲ್ ಹಲವು ರೀತಿಯ ಸೌಂದರ್ಯ ಪ್ರಸಾದನವಾಗಿ ಬಳಕೆಯಾಗುತ್ತದೆ. ಆದರೆ ಇವು ದುಬಾರಿಯಾಗಿದ್ದು ಕೆಲವು ಸಂರಕ್ಷಕಗಳನ್ನೂ ಹೊಂದಿರಬಹುದು. ಇದರ ಬದಲಿಗೆ ಇನ್ನೂ ಹೆಚ್ಚು ಉತ್ತಮವಾದ ಹಾಗೂ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡರೆ ಹಲವು ತ್ವಚೆಯ ತೊಂದರೆಗಳಿಗೆ ಸಮರ್ಥವಾಗಿ ಬಳಸಬಹುದು.

ಅಗತ್ಯವಿರುವ ಪರಿಕರಗಳು

*ಒಂದು ಕೋಡು ಲೋಳೆಸರ

*ಒಂದು ದೊಡ್ಡಚಮಚ ಲಿಂಬೆರಸ

*ಒಂದು ದೊಡ್ಡ ಚಮಚ ಗೋಧಿಮೊಳಕೆ ಎಣ್ಣೆ (wheat-germ oil)

ವಿಧಾನ

ವಿಧಾನ

1) ಮೊದಲು ಲೋಳೆಸರದ ಕೋಡಿನಿಂದ ತಿರುಳನ್ನು ಬೇರ್ಪಡಿಸಿ

2) ಒಂದು ಬೋಗುಣಿಯಲ್ಲಿ ಈ ತಿರುಳನ್ನು ಉಳಿದೆರಡು ದ್ರವಗಳ ಜೊತೆಗೆ ಬೆರೆಸಿ.

3) ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ತೀರಾ ನುಣ್ಣಗೂ ಅಲ್ಲ, ತೀರಾ ದೊರಗೂ ಅಲ್ಲ ಎನ್ನುವಷ್ಟು ನುಣ್ಣಗಾಗಿಸಿ.

4) ಈ ಮಿಶ್ರಣವನ್ನು ಗಾಳಿಯಾಡದ ಜಾಡಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಡಿ ಹಾಗೂ ಹೊರಗೆ ಆಲೋವೆರಾ ಜೆಲ್-ಸುಟ್ಟಗಾಯಕ್ಕೂ ಹಚ್ಚಬಹುದು ಎಂದು ಬರೆದಿಡಿ

5) ಈ ಮಿಶ್ರಣವನ್ನು ಅಗತ್ಯವಿರುವಂತೆ ಬಳಸಿ. ಸುಟ್ಟಗಾಯಕ್ಕೆ ತಕ್ಷಣವೇ ಹಚ್ಚಿ.

ಲೋಳೆಸರದ ಮಂಜುಗಡ್ಡೆ

ಲೋಳೆಸರದ ಮಂಜುಗಡ್ಡೆ

ಒಂದು ವೇಳೆ ಯಾವುದೋ ಪ್ರಮುಖ ಕಾರ್ಯದಲ್ಲಿ ಹಲವರ ಪಾತ್ರವಿದ್ದು ಸುಟ್ಟಗಾಯವಾಗುವ ಸಾಧ್ಯತೆ ಹೆಚ್ಚಾಗಿದ್ದರೆ ಲೋಳೆಸರದ ಮಂಜುಗಡ್ಡೆಗಳನ್ನು ತಯಾರಿಸಿಟ್ಟುಕೊಳ್ಳುವುದು ತುಂಬಾ ಉಪಕಾರಿ. ಈ ಮಂಜುಗಡ್ಡೆ ಸುಟ್ಟಗಾಯಕ್ಕೆ ಅತಿ ಶೀಘ್ರ ಉಪಶಮನ ಹಾಗೂ ಉರಿಯಾಗದಂತೆ ತಡೆಯುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

*ಲೋಳೆಸರ ಒಂದು ಕೋಡು

*ಕೊಂಚ ನೀರು

*ಐಸ್ ತುಂಡು ಮಾಡುವ ಟ್ರೇ

ವಿಧಾನ:

ವಿಧಾನ:

1) ಲೋಳೆಸರದ ಕೋಡನ್ನು ಸೀಳಿ ತಿರುಳನ್ನು ಸಂಗ್ರಹಿಸಿ

2) ಈ ತಿರುಳನ್ನು ಮಿಕ್ಸಿಯ ದೊಡ್ಡ ಜಾರ್ ನಲ್ಲಿ ಹಾಕಿ ಸುಮಾರು ಒಂದು ಲೋಟ ನೀರು ಹಾಕಿ ನುಣ್ಣಗಾಗುವಂತೆ ಕಡೆಯಿರಿ

3) ಈ ನೀರನ್ನು ಐಸ್ ಟ್ರೇಯಲ್ಲಿ ತುಂಬಿಸಿ ಫ್ರೀಜರ್ ನಲ್ಲಿಡಿ.

4) ಸುಟ್ಟಗಾಯವಾದ ಸಂದರ್ಭದಲ್ಲಿ ತಕ್ಷಣವೇ ಒಂದು ಐಸ್ ತುಂಡನ್ನು ತೆಗೆದು ಒಂದು ಚಿಕ್ಕ ಬಟ್ಟೆ ಅಥವಾ ಸ್ವಚ್ಛವಾಗ ಕರ್ಚೀಫಿನ ಒಳಗಿಟ್ಟು ಸುಟ್ಟ ಗಾಯದ ಮೇಲೆ ನಯವಾಗಿ ಒತ್ತಿ. ಎಂದಿಗೂ ಮಂಜುಗಡ್ಡೆಯನ್ನು ಗಾಯದ ಮೇಲೆ ನೇರವಾಗಿ ಇರಿಸಬಾರದು. ಇರಿಸಿದರೆ ಇದು ಚರ್ಮವನ್ನು ಹೆಪ್ಪುಗಟ್ಟಿಸಿ ರಕ್ತಪರಿಚಲನೆಗೆ ಅಡ್ಡಿಯಾಗಿಸುತ್ತದೆ. ಅಲ್ಲದೇ ಈ ವಿಧಾನದಿಂದ ಉರಿ ಕಡಿಮೆಯಾಗುತ್ತದೆ ಹಾಗೂ ಹೊಸಚರ್ಮ ಕಲೆಯಿಲ್ಲದೇ ಬೆಳೆಯಲು ನೆರವಾಗುತ್ತದೆ. ಆದರೆ ಈ ವಿಧಾನ ಚಿಕ್ಕಪುಟ್ಟ ಗಾಯಗಳಿಗೆ ಸೂಕ್ತವೇ ಹೊರತು ದೊಡ್ಡ ಗಾಯಗಳಿಗೆ ಬಳಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

English summary

How To Treat Burns Using Aloe Vera

Aloe gel, which is the central part of the plant, is used in many commercially available lotions and creams because it contains active compounds that reduce pain and inflammation and stimulate skin growth and repair. In this article, you will know about different ways of using aloe vera safely, so that you derive the maximum benefit out of it.
Subscribe Newsletter