ಮನೆಯಲ್ಲೇ ಹಲ್ಲುಜ್ಜುವ ಪೇಸ್ಟ್ ತಯಾರಿಸಿ! ಓದಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By: Hemanth
Subscribe to Boldsky

ಪ್ರತೀ ದಿನ ಬೆಳಿಗ್ಗೆ ಎದ್ದ ಕೂಡಲೇ ನಮ್ಮ ಕೈಗೆ ಬರುವುದು ಬ್ರಷ್ ಮತ್ತು ಟೂತ್ ಪೇಸ್ಟ್. ಹಲ್ಲುಜ್ಜಿದ ಬಳಿಕ ನಮ್ಮ ಬೇರೆ ಕೆಲಸಗಳು ಆರಂಭವಾಗುತ್ತದೆ. ಆದರೆ ಹಲ್ಲುಜ್ಜುವ ಪೇಸ್ಟ್ ಯಾವೆಲ್ಲಾ ರಾಸಾಯನಿಕಗಳನ್ನು ಹೊಂದಿದೆ ಎನ್ನುವುದು ನಿಮಗೆ ತಿಳಿದಿದೆಯಾ? ಹೌದು, ಟೂತ್ ಪೇಸ್ಟ್‌ನಲ್ಲಿ ಕೂಡ ರಾಸಾಯನಿಕಗಳು ಒಳಗೊಂಡಿದೆ. ಆದರೆ ಈಗೀಗ ಹಲವಾರು ಆಯುರ್ವೇದಿಕ್ ಟೂತ್ ಪೇಸ್ಟ್‌ಗಳು ಬರುತ್ತಾ ಇದ್ದರೂ ಅವುಗಳಲ್ಲಿ ರಾಸಾಯನಿಕಗಳು ಇಲ್ಲವೆಂದು ತಳ್ಳಿಹಾಕುವಂತಿಲ್ಲ. ನಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಹಲ್ಲುಜ್ಜುವ ಪೇಸ್ಟ್! 

ಇದಕ್ಕಾಗಿಯೇ ಬೋಲ್ಡ್ ಸ್ಕೈ ಮನೆಯಲ್ಲೇ ಹಲ್ಲಿನ ಪೇಸ್ಟ್ ಅನ್ನು ನೈಸರ್ಗಿಕವಾಗಿ ತಯಾರಿಸುವುದು ಹೇಗೆ ಎಂದು ನಿಮಗೆ ತಿಳಿಸಲಿದೆ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ತೆಂಗಿನೆಣ್ಣೆ. ತೆಂಗಿನ ಎಣ್ಣೆಯಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಹಲ್ಲುಜ್ಜುವಾಗ ನೀವು ಏನೆಲ್ಲಾ ತಪ್ಪು ಮಾಡ್ತೀರ ಗೊತ್ತಾ?

ಇದು ಬಾಯಿಯಲ್ಲಿ ತುಂಬಿರುವ ಹಲವಾರು ರೀತಿಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲಿದೆ ಮತ್ತು ಇದರಿಂದ ಹಲ್ಲು ಕೆಡುವುದು ಕಡಿಮೆಯಾಗುತ್ತದೆ. ಮನೆಯಲ್ಲೇ ಹಲ್ಲಿನ ಪೇಸ್ಟ್ ತಯಾರಿಸಲು ನೀವೀಗ ತಯಾರಾಗಿ.....

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*½ ಕಪ್ ತೆಂಗಿನ ಎಣ್ಣೆ

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*15-30 ಹನಿ ಸಾರಭೂತ ತೈಲ(ಲಿಂಬೆ ಅಥವಾ ಪುದೀನಾ)

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*2-3 ಚಮಚ ಅಡುಗೆ ಸೋಡಾ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

1# ಎಲ್ಲಾ ಸಾಮಗ್ರಿಗಳನ್ನು ಜತೆಯಾಗಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಮನೆಯಲ್ಲೇ ತಯಾರಿಸಿದ ಹಲ್ಲಿನ ಪೇಸ್ಟ್ ಬಳಸಲು ಸಜ್ಜಾಗಿದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

2# ಸಾಮಾನ್ಯವಾಗಿ ಹಲ್ಲುಜ್ಜುವ ಪೇಸ್ಟ್ ಅನ್ನು ಬಳಸುವಂತೆ ಇದನ್ನು ಬಳಸಿ.

3# ತೆಂಗಿನ ಎಣ್ಣೆಯಿಂದ ಬಾಯಿ ಮುಕ್ಕಳಿಸಿಕೊಂಡರೆ ಮತ್ತಷ್ಟು ಒಳ್ಳೆಯದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

4# ಈ ಪೇಸ್ಟ್‌ನಿಂದ ಹಲ್ಲುಜ್ಜಿದ ಬಳಿಕ ಒಂದು ಕಪ್‌ನಲ್ಲಿ ಸ್ವಲ್ಪ ತೆಂಗಿನೆಣ್ಣೆ ಹಾಕಿಕೊಳ್ಳಿ.

5# ಇದನ್ನು ಬಾಯಿಗೆ ಹಾಕಿಕೊಂಡು ಸುಮಾರು 20 ನಿಮಿಷ ಕಾಲ ಇದನ್ನು ಬಾಯಿಯೊಳಗೆ ತಿರುಗಿಸುತ್ತಾ ಬಳಿಕ ಉಗುಳಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

6# ಬಾಯಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳನ್ನು ಇದು ತೆಗೆದುಹಾಕುವುದು.

7# ಹೆಚ್ಚಿನ ರಕ್ಷಣೆ ಬೇಕಿದ್ದರೆ ಪ್ರತೀ ಸಲ ಊಟಕ್ಕೆ ಮೊದಲು ತೆಂಗಿನೆಣ್ಣೆಯಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳಿ.

English summary

How to Make Natural Toothpaste? here are step by step tips

Coconut oil is undoubtedly the best oil with antibacterial properties. Did you know that it can inhibit bacterial growth in the mouth? Tooth decay is caused by Streptococcus and S. mutans that are known to feed on sugar and therefore reduce the pH level of the mouth. This is known to cause acidity that demineralizes the teeth. So, continue reading this article to know how to prepare this natural toothpaste recipe..
Subscribe Newsletter