For Quick Alerts
ALLOW NOTIFICATIONS  
For Daily Alerts

  ಪುರುಷರಿಗೆ ಬೇಡದ ಸ್ತನ ಗಾತ್ರ ಕುಗ್ಗಿಸಲು ಇಲ್ಲಿದೆ ಸುಲಭ ದಾರಿ

  By Deepu
  |

  ಸದೃಢವಾದ ಆಕರ್ಷಕ ಮೈಕಟ್ಟು ಹೊಂದಿರಬೇಕು ಎನ್ನುವುದು ಎಲ್ಲರ ಸಾಮಾನ್ಯ ಬಯಕೆ. ಅಸಮರ್ಪಕವಾದ ಆಹಾರ ಪದ್ಧತಿ, ಕಳಪೆ ಮಟ್ಟದ ವ್ಯಾಯಾಮ ಮತ್ತು ಮಾದಕ ವಸ್ತುಗಳ ಸೇವನೆಗಳಿಂದ ದೇಹದ ಬೆಳವಣಿಗೆ ಹಾಗೂ ಆಕಾರದಲ್ಲಿ ಗಣನೀಯವಾದ ಬದಲಾವಣೆ ಕಾಣಬಹುದು. ಎದೆ ಭಾಗ ಹಾಗೂ ಹೊಟ್ಟೆ ಅಗತ್ಯಕ್ಕಿಂತ ಹೆಚ್ಚು ಉಬ್ಬಿಕೊಳ್ಳುವುದು, ತೋಳುಗಳಲ್ಲಿ ಕೊಬ್ಬಿನ ಶೇಖರಣೆ ಹೀಗೆ ಅನೇಕ ಸಮಸ್ಯೆಗಳಿಂದ ಆರೋಗ್ಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳಬಹುದು.

  ಇತ್ತೀಚಿನ ದಿನದಲ್ಲಿ ಪುರುಷರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು. ಹಾಗಾಗಿಯೇ ತಮ್ಮ ಎದೆ ಅಳತೆ, ಸೊಂಟದ ಭಾಗ, ಹೊಟ್ಟೆಯ ನಿಯಂತ್ರಣ ಹಾಗೂ ಕೈ-ಕಾಲುಗಳ ಸುತ್ತಳತೆಯ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇವುಗಳ ನಿರ್ವಹಣೆಗೆ ಅನೇಕ ಕಸರತ್ತುಗಳನ್ನು ಮಾಡುವುದು ಕಾಣಬಹುದು.

  ಆದರೆ ಕೆಲವರಿಗೆ ಸೂಕ್ತ ಸಮಯದ ನಂತರದ ಅವಧಿಯಲ್ಲಿ ತಮ್ಮ ದೇಹದ ನಿರ್ವಹಣೆಯ ಬಗ್ಗೆ ಅರಿವಾಗುತ್ತದೆ. ಆಗ ದೇಹದ ಬದಲಾವಣೆ ಸ್ವಲ್ಪ ಕಷ್ಟ ಎನ್ನಬಹುದು. ಆದರೂ ಕೆಲವು ನಿಯಮಗಳನ್ನು ಅನುಸರಿಸಿದರೆ ಬೇಕಾದ ಹಾಗೆ ನಮ್ಮ ದೇಹದ ದೃಢತೆಯನ್ನು ಕಾಯ್ದುಕೊಳ್ಳಬಹುದು.

  ಕೆಲ ಪುರುಷರಿಗೆ ದೇಹದಲ್ಲಿ ಕೊಬ್ಬಿನಂಶ ಹೆಚ್ಚುತ್ತಿದ್ದಂತೆ ಎದೆ ಭಾಗ (ಸ್ತನ)ದಲ್ಲಿ ಹೆಚ್ಚು ಕೊಬ್ಬು ಶೇಖರಣೆ ಆಗುವುದು. ಇದು ಮಹಿಳೆಯರಿಗೆ ಹೋಲುವಂತಿರಬಹುದು ಅಥವಾ ಅನಾರೋಗ್ಯದ ದೇಹದಂತೆ ಗೋಚರಿಸಬಹುದು. ಈ ಸಮಸ್ಯೆಗಳಿಂದ ದೂರವಾಗಿ, ಸುಂದರ ಎದೆ ಭಾಗವನ್ನು ಹೊಂದಬೇಕೆಂದರೆ ಈ ಕೆಳಗಿನ ನಿಯಮಗಳನ್ನು ಅನುಸರಿಸಿ... 

  ಕ್ರೀಮ್‍ಗಳ ಬಳಕೆ

  ಕ್ರೀಮ್‍ಗಳ ಬಳಕೆ

  ಇದು ತುಂಬಾ ಸುಲಭದ ಉಪಾಯ. ಬೇಡದ ಕೊಬ್ಬಿನಂಶವನ್ನು ತಗ್ಗಿಸಲು ಸಹಾಯಮಾಡುತ್ತದೆ. ಆದರೆ ಕ್ರೀಮ್‍ಗಳಲ್ಲಿ ಬಳಸಲಾದ ಉತ್ಪನ್ನಗಳು ಆರೋಗ್ಯಕರವಾದದ್ದೇ ಎನ್ನುವುದನ್ನು ಖಚಿತಪಡಿಸಿಕೊಂಡು ಬಳಸಬೇಕು.

  ವ್ಯಾಯಾಮ

  ವ್ಯಾಯಾಮ

  ನಿಯಮಿತವಾದ ಬೆವರುವಿಕೆಯು ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಸೂಕ್ತವಾದ ದಣಿವನ್ನು ನೀಡುವ ವ್ಯಾಯಾಮಗಳಿಂದ ಆರೋಗ್ಯಕರ ದೇಹ ಪಡೆಯಬಹುದು. ರೋವಿಂಗ್ ವ್ಯಾಯಾಮ ಮಾಡುವುದರಿಂದ ಎದೆ ಭಾಗದ ಕೊಬ್ಬು ಕರಗುವುದು. ದೇಹದ ಆಕಾರಕ್ಕೆ ಬೇಕಾದ ಸೂಕ್ತ ವ್ಯಾಯಾಮಗಳನ್ನು ಯೋಗಶಾಲೆಯಲ್ಲಿ ಮಾಡಬೇಕು. ಆಗ ದೇಹದ ಎಲ್ಲಾ ಅಂಗಾಂಗಗಳು ಆರೋಗ್ಯಕರ ಬದಲಾವಣೆಯನ್ನು ಪಡೆದುಕೊಳ್ಳುತ್ತವೆ.

  ಲಿಪೋಸಕ್ಷನ್

  ಲಿಪೋಸಕ್ಷನ್

  ಇದೊಂದು ಶಸ್ತ್ರ ಚಿಕಿತ್ಸೆ. ಈ ಚಿಕಿತ್ಸೆಯಿಂದ ಬೇಡದ ಕೊಬ್ಬನ್ನು ತೆಗೆಯುವುದು. ದೇಹದ ಯಾವ ಭಾಗದಲ್ಲಿ ಬೇಡದ ಕೊಬ್ಬು ಸಂಗ್ರಹವಾಗಿರುತ್ತದೆಯೋ, ಅಂತಹ ಜಾಗದಲ್ಲಿ ಈ ಚಿಕಿತ್ಸೆ ಮಾಡಿಸಬಹುದು. ಇದು ಮಾತ್ರೆ ಹಾಗೂ ಕ್ರೀಮ್‍ಗಳ ಬಳಕೆಗಿಂತ ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡುವುದು ಎನ್ನಲಾಗುತ್ತದೆ.

  ಸೂಕ್ತ ಆಹಾರಕ್ರಮ

  ಸೂಕ್ತ ಆಹಾರಕ್ರಮ

  ಆಹಾರ ಕ್ರಮದಲ್ಲಿ ಕೆಲವು ತಿಂಡಿ-ತಿನಿಸುಗಳಿಂದ ದೂರವುಳಿದು, ದೇಹವನ್ನು ದಂಡಿಸುವುದು ಉಪವಾಸ. ಕ್ರಮಬದ್ಧವಾದ ಉಪವಾಸ ಅಥವಾ ಆಹಾರದಲ್ಲಿ ಪಥ್ಯವನ್ನು ಅನುಸರಿಸುವುದರಿಂದ ಎದೆಯಳತೆಯನ್ನು ಕಾಪಾಡಬಹುದು. ಸೂಕ್ತ ಆಹಾರ ಕ್ರಮದಿಂದ ದೇಹಕ್ಕೆ ಬೇಕಾದ ಪೋಷಕಾಂಶ ಹಾಗೂ ಕೊಬ್ಬಿನ ಸಂಗ್ರಹಣೆ ಸರಾಗವಾಗಿ ಆಗುವುದು. ಎದೆ ಭಾಗ ಮತ್ತು ಮೈಕಟ್ಟು ಸುಂದರವಾಗುವುದು.

  ಮಾತ್ರೆಗಳ ಸೇವನೆ

  ಮಾತ್ರೆಗಳ ಸೇವನೆ

  ಕೆಲವು ಸೌಂದರ್ಯ ವರ್ಧಕ ಮಾತ್ರೆಗಳನ್ನು ಸೇವಿಸುವುದರಿಂದ ಸುಂದರ ಮೈಕಟ್ಟನ್ನು ಹೊಂದಬಹುದು. ಆ ಮಾತ್ರೆಗಳು ಎದೆ ಭಾಗ, ಸೊಂಟ, ಹೊಟ್ಟೆ, ಭುಜ ಸೇರಿದಂತೆ ಇನ್ನಿತರ ಅಂಗಾಂಗಗಳಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸುವುದು. ಆದರೆ ಇವುಗಳ ಸೇವನೆಯಬಗ್ಗೆ

  ಸೂಕ್ತ ಸಲಹೆ ಹಾಗೂ ಮಾರ್ಗದರ್ಶನದ ಅಗತ್ಯವಿರುತ್ತದೆ. ಇಲ್ಲವಾದರೆ ಆರೋಗ್ಯಕ್ಕೆ ಕೆಲವು ಅಡ್ಡ ಪರಿಣಾಮಗಳು ಬೀರಬಹುದು.

  ಪುರುಷರ ಬ್ರಾ

  ಪುರುಷರ ಬ್ರಾ

  ಅತೀ ಸಡಿಲವಾದ ಸ್ತನಗಳನ್ನು ಹೊಂದಿರುವ ಪುರುಷರಿಗಾಗಿಯೇ ಇದು ಮೀಸಲಾಗಿದೆ. ನಿಮ್ಮ ಎದೆಯು ಅತೀ ಸಡಿಲವಾಗಿದ್ದು, ವ್ಯಾಯಾಮ ಕಾಲದಲ್ಲಿ ಇದು ಅಹಿತಕರ ಅನುಭವವನ್ನು ನೀಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ನೀವು ಈ ಬ್ರಾವನ್ನು ಧರಿಸಬಹುದು. ಈ ಯೋಚನೆಯು ನಿಮಗೆ ವಿಚಿತ್ರವೆನಿಸಿದರೂ ಸಹ, ವ್ಯಾಯಾಮ ನಿರ್ವಹಿಸಲು ಕಷ್ಟವಾದಾಗ ಇದು ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಆರಂಭದ ಹಂತದಲ್ಲಿ ನೀವು ಈ ಉಪಾಯವನ್ನು ಅನುಸರಿಸಬಹುದು ಮತ್ತು 2 ಅಥವಾ 3 ತಿಂಗಳುಗಳಲ್ಲಿ ಸಹಜವಾಗಿಯೇ ನೀವು ಈ ಬ್ರಾ ಹಾಗೂ ಉಬ್ಬಿದ ಎದೆ ಇವೆರಡರಿಂದಲೂ ಮುಕ್ತರಾಗುವಿರಿ.

  English summary

  How To Get Rid Of Man Boobs

  Have your friends ever made fun of you saying that you have bigger boobs than your girlfriend? You are not alone. Many guys have the problem of developing man boobs. It is basically lose fat accumulated around the chest that makes it resemble a woman's breasts. There are ways to lose man boobs fast if you are willing to put in some serious effort.
  Story first published: Sunday, June 11, 2017, 13:23 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more