ಅಚ್ಚರಿ! ವೈದ್ಯಕೀಯ ಲೋಕವನ್ನೇ ತಲ್ಲಣಗೊಳಿಸುವ ಚಿಕಿತ್ಸೆ!

By: manu
Subscribe to Boldsky

ಏಷ್ಯಾ ಅದರಲ್ಲೂ ಭಾರತ ಹಾಗೂ ಚೀನಾದಲ್ಲಿ ಹಿಂದಿನಿಂದಲೂ ಆಯುರ್ವೇದ ಹಾಗೂ ಕೆಲವೊಂದು ಚಿಕಿತ್ಸಾ ಪದ್ಧತಿಗಳು ಸಾವಿರಾರು

ವರ್ಷಗಳಿಂದ ಜಾರಿಯಲ್ಲಿದ್ದವು. ಈ ಪದ್ಧತಿಯು ಇಂದಿನ ವೈದ್ಯಕೀಯ ಲೋಕವನ್ನು ಅಚ್ಚರಿಗೊಳಿಸುವಂತಹ ಚಿಕಿತ್ಸೆಯನ್ನು ಹೊಂದಿದೆ. ಪ್ರಮುಖ ಔಷಧೀಯ ಕ್ರಮದಲ್ಲಿ ನಿವಾರಣೆಯಾಗದ ಕೆಲವೊಂದು ರೋಗಗಳು ಕೂಡ ಇಂತಹ ಚಿಕಿತ್ಸೆಗಳಿಂದ ಗುಣವಾಗುತ್ತಿವೆ.

ಇಂತಹ ಒಂದು ಚಿಕಿತ್ಸಾ ಕ್ರಮದಲ್ಲಿ ಜಿನ್ ಶಿನ್ ಜಯುತ್ಸು ಚಿಕಿತ್ಸೆಯು ಪ್ರಮುಖವಾಗಿದೆ. ಅಲ್ಲದೆ ಇದನ್ನು ಶಕ್ತಿ ಶಮನಕಾರಿ ಚಿಕಿತ್ಸಾ ಕ್ರಮವೆಂದು ಹೇಳಲಾಗುತ್ತದೆ. ಇದು ಜೀವನದ ಶಕ್ತಿ ಮತ್ತು ಅದರ ಹರಿವನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ. ಲವಲವಿಕೆಯ ಜೀವನ ಶೈಲಿಗೆ, 'ಆಕ್ಯುಪ್ರೆಷರ್ ಚಿಕಿತ್ಸೆ'

ಖಿನ್ನತೆ, ಆತಂಕ, ಬೆನ್ನುನೋವು, ಕುತ್ತಿಗೆ ನೋವಿನಂತಹ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೆರಳುಗಳನ್ನು ಒತ್ತುವುದು ಅಥವಾ ಜತೆಯಾಗಿ ಹಿಡಿದುಕೊಳ್ಳುವುದು ಈ ಚಿಕಿತ್ಸಾ ಕ್ರಮವಾಗಿದೆ. ಈ ಚಿಕಿತ್ಸಾ ಕ್ರಮದಿಂದ ಯಾವೆಲ್ಲಾ ಲಾಭಗಳು ಇವೆ ಎಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

1#

1#

ಕೈಯಲ್ಲಿರುವ ಪ್ರತಿಯೊಂದು ಬೆರಳು ಕೂಡ ದೇಹದ ಯಾವುದಾದರೊಂದು ಅಂಗಕ್ಕೆ ಸಂಪರ್ಕ ಹೊಂದಿರುತ್ತದೆ. ಹೆಬ್ಬೆರಳು-ಹೊಟ್ಟೆ, ತೋರು ಬೆರಳು-ಕಿಡ್ನಿ, ಮಧ್ಯದ ಬೆರಳು-ಮೂತ್ರನಾಳ, ಯಕೃತ್, ಉಂಗುರ ಬೆರಳು-ಕರುಳು, ಶ್ವಾಸಕೋಶ, ಕಿರಿ ಬೆರಳು-ಸಣ್ಣ ಕರುಳು, ಹೃದಯ, ಅಂಗೈಯ ಮಧ್ಯಭಾಗ-ಹೊಕ್ಕಳು.

2#

2#

ಪ್ರತಿಯೊಂದು ಬೆರಳು ಕೂಡ ಕೆಲವೊಂದು ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಹೆಬ್ಬೆರಳು-ಚಿಂತೆ, ತೋರು ಬೆರಳು-ಭಯ, ಖಿನ್ನತೆ, ಮಧ್ಯದ ಬೆರಳು-ಕೋಪ, ಹತಾಶೆ, ಉಂಗುರ ಬೆರಳು-ಬೇಸರ, ಪಶ್ವಾತ್ತಾಪ, ಕಿರುಬೆರಳು-ಅಂಜಿಕೆ, ಕಡಿಮೆ ಸ್ವಾಭಿಮಾನ, ಅಂಗೈಯ ಮಧ್ಯಭಾಗ-ಸಂಪೂರ್ಣ ಸಂತೋಷ

1ನೇ ವಿಧಾನ

1ನೇ ವಿಧಾನ

ಯಾವುದೇ ಭಾವನೆ ನಿಮ್ಮ ಅನುಭವಕ್ಕೆ ಬರುತ್ತಾ ಇದ್ದರೆ ಇದನ್ನು ಮೊದಲು ಗುರುತಿಸಿಕೊಳ್ಳಿ. 2 ನಿಮಿಷ ಕಾಲ ಮೌನವಾಗಿ ಕುಳಿತುಕೊಳ್ಳಿ ಮತ್ತು ದೀರ್ಘವಾಗಿ ಉಸಿರಾಡಿ. ನಿಮಗೆ ಒತ್ತಡ ನೀಡುವಂತಹ ಯಾವುದೇ ಪರಿಸ್ಥಿತಿಯಾಗಿದ್ದರೂ ಹೀಗೆ ಮಾಡಿ.

2ನೇ ವಿಧಾನ

2ನೇ ವಿಧಾನ

ನಿಮ್ಮ ಭಾವನೆಗೆ ಸಂಬಂಧಿಸಿದ ಕೈಯ ಬೆರಳನ್ನು ಗುರುತಿಸಿ ಅದನ್ನು ಇನ್ನೊಂದು ಕೈಯಿಂದ ಹಿಡಿದುಕೊಳ್ಳಿ. ತುಂಬಾ ಬಲವಾಗಿ ಅಥವಾ ತುಂಬಾ ಲಘುವಾಗಿ ಹಿಡಿಯಬೇಡಿ. ನಿಮಗೆ ತುಂಬಾ ಭಯವಾಗಿ ಖಿನ್ನತೆಯಿಂದ ಬಳಲುತ್ತಾ ಇದ್ದರೆ ತೋರು ಬೆರಳನ್ನು ಹಿಡಿದುಕೊಳ್ಳಿ. ಯಾವುದೇ ಕೆಲಸದ ಸಂದರ್ಶನ ವೇಳೆ ತುಂಬಾ ಅಂಜಿಕೆಯಾಗಿದ್ದರೆ ಕಿರು ಬೆರಳನ್ನು ಹಿಡಿದುಕೊಳ್ಳಿ.

3ನೇ ವಿಧಾನ

3ನೇ ವಿಧಾನ

ಬೆರಳನ್ನು 3-5 ನಿಮಿಷ ಕಾಲ ಹಿಡಿದುಕೊಂಡು ದೀರ್ಘವಾಗಿ ಉಸಿರಾಡಿ. ನಿಮಗೆ ಮಿಡಿಯುವ ಸಂವೇದನೆಯಾದಾಗ ಹಿಡಿತ ಬಿಟ್ಟುಬಿಡಿ. ಇನ್ನೊಂದು ಕೈಯ ಬೆರಳಿಗೂ ಇದೇ ರೀತಿ ಮಾಡಿ.

4ನೇ ವಿಧಾನ

4ನೇ ವಿಧಾನ

ಹೀಗೆ ಮಾಡಿದ ಬಳಿಕ ಒತ್ತಡವು ಕಡಿಮೆಯಾಗುತ್ತದೆ. ಈ ವಿಧಾನವನ್ನು ಯಾವುದೇ ಸಮಯ ಮತ್ತು ಯಾವ ಜಾಗದಲ್ಲೂ ಮಾಡಬಹುದು.

5ನೇ ವಿಧಾನ

5ನೇ ವಿಧಾನ

ದೇಹದಲ್ಲಿ ರಕ್ತ ಪರಿಚಲನೆಯಾಗುವಂತೆ ಶಕ್ತಿ ಕೂಡ ಪರಿಚಲನೆಯಾಗುತ್ತಾ ಇರುತ್ತದೆ. ಯೋಗದ ಪ್ರಕಾರ ಪ್ರಾಣ ಅಥವಾ ಜೀವನದ ಶಕ್ತಿಯು ನಾಡಿಗಳ ಮೂಲಕ ದೇಹದೆಲ್ಲೆಡೆ ಸಂಚಾರವಾಗುತ್ತದೆ. ಜೀವನ ಶಕ್ತಿಯು ನಾವು ಬದುಕಲು, ಉಸಿರಾಡಲು ಮತ್ತು ನಡೆದಾಡಲು ನೆರವಾಗುತ್ತದೆ. ಈ ಚಿಕಿತ್ಸೆಯು ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಶಕ್ತಿಯು ಹರಿಯುವಂತೆ ಮಾಡುತ್ತದೆ.

English summary

Hold Your Finger And See What Happens!

The name of this technique is Jin Shin Jyutsu. More than a technique, it can be considered as an energy healing method. It is said to balance the life energy and its flow. This method is said to treat depression, anxiety, back pain, neck pain and even PTSD too. And, all it takes is just pressing or holding your fingers gently. Surprised? Read on to know more...
Please Wait while comments are loading...
Subscribe Newsletter