For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಆರೋಗ್ಯಕ್ಕೆ, 'ಕ್ಯಾರೆಟ್' ಹೇಳಿ ಮಾಡಿಸಿದ ತರಕಾರಿ

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಸೇವಿಸಬಹುದಾದ ಆರೋಗ್ಯಕ್ಕೆ ನೆರವಾಗುವ ತರಕಾರಿಗಳಲ್ಲಿ ಕ್ಯಾರೆಟ್ ಅನ್ನು ಕಡೆಗಣಿಸುವಂತಿಲ್ಲ....

By Hemanth
|

ಪ್ರತಿಯೊಂದು ತರಕಾರಿಯೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನಾವು ತರಕಾರಿಯಿಂದ ದೂರ ಓಡುವ ಕಾರಣದಿಂದ ಅದರ ಲಾಭಗಳು ನಮ್ಮ ದೇಹಕ್ಕೆ ಲಭ್ಯವಾಗುವುದಿಲ್ಲ. ಕೆಲವೊಂದು ತರಕಾರಿಗಳಂತೂ ಪೋಷಕಾಂಶಗಳ ಆಗರವಾಗಿರುತ್ತದೆ.ಆದರೆ ರುಚಿಯಲ್ಲಿ ಮಾತ್ರ ಕಹಿಯಾಗಿರುತ್ತದೆ. ಪುರುಷರ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು

ಆದರೆ ಕ್ಯಾರೆಟ್ ಮಾತ್ರ ಹಾಗಲ್ಲ, ರುಚಿ ಹಾಗೂ ಪೋಷಕಾಂಶ ಎರಡನ್ನೂ ಹೊಂದಿದೆ. ಕನ್ನಡದಲ್ಲಿ ಗಜ್ಜರಿಯೆಂದು ಕರೆಯಲ್ಪಡುವ ಕ್ಯಾರೆಟ್ ನಿಂದ ದೇಹದ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ. ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ಪ್ರತೀನಿತ್ಯ ಗಜ್ಜರಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹವು ಹಲವಾರು ರೋಗಗಳನ್ನು ತಡೆಗಟ್ಟುವುದು ಮತ್ತು ಬರದಂತೆ ತಡೆಯುವುದು. ಗಜ್ಜರಿಯಿಂದ ಎಷ್ಟು ಲಾಭಗಳು ನಮ್ಮ ಆರೋಗ್ಯಕ್ಕೆ ಸಿಗಲಿದೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ.


ದೃಷ್ಟಿ ಉತ್ತಮಪಡಿಸಲು

ದೃಷ್ಟಿ ಉತ್ತಮಪಡಿಸಲು

ದಿನಕೊಂದು ಕ್ಯಾರೆಟ್ ಅನ್ನು ಹಸಿಯಾಗಿ ತಿಂದರೆ ಕಣ್ಣಿನ ದೃಷ್ಟಿಯು ಸುಧಾರಣೆಯಾಗುವುದು. ಇದರಲ್ಲಿರುವ ಬಿಟಾ ಕ್ಯಾರೋಟಿನ್ ಅಂಶವು ಯಕೃತ್ ನಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸಲು ನೆರವಾಗುವುದು. ಅಕ್ಷಿಪಟಲದ ಅವನತಿ ಮತ್ತು ಕಣ್ಣು ತನ್ನ ಶಕ್ತಿ ಕಳೆದುಕೊಳ್ಳುವ

ಸಮಸ್ಯೆಯನ್ನು ಕ್ಯಾರೆಟ್ ನಲ್ಲಿ ಕಂಡುಬರುವ ಬೆಟಾ ಕ್ಯಾರೋಟಿನ್ ನಿವಾರಣೆ ಮಾಡುವುದು. ಅಲ್ಲದೆನಿತ್ಯವೂ ಕ್ಯಾರೆಟ್ ಜ್ಯೂಸ್ ಕುಡಿಯುವ ಮೂಲಕ ಕೂಡ ಉತ್ತಮ ದೃಷ್ಟಿಯನ್ನು ಪಡೆಯಬಹುದು. ಇದರಲ್ಲಿರುವ ಲ್ಯೂಟಿನ್ ಮತ್ತು ಬೀಟಾ ಕೆರೋಟಿನ್ ಗಳು ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ಕ್ಯಾರೆಟ್ ಜ್ಯೂಸ್ - ಕಣ್ಣಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ

ರಕ್ತದೊತ್ತಡ ನಿಯಂತ್ರಣಕ್ಕಾಗಿ

ರಕ್ತದೊತ್ತಡ ನಿಯಂತ್ರಣಕ್ಕಾಗಿ

ಕ್ಯಾರೆಟ್‌ನಲ್ಲಿರುವಂತಹ ಸೋಡಿಯಂ ಅಂಶವು ದೇಹದಲ್ಲಿನ ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ನಿಯಮಿತವಾಗಿ ಕ್ಯಾರೆಟ್ ಸೇವನೆ ಮಾಡುವವರ ದೇಹದಲ್ಲಿ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಕ್ಯಾರೆಟ್ ಅನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಯಕೃತ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ಕ್ಯಾರೆಟ್ ನಲ್ಲಿರುವ ಫಾಲ್ಕರಿನೊಲ್ ಅಂಶವು ಕ್ಯಾನ್ಸರ್ ಬರದಂತೆ ತಡೆಯುವುದು.

ಹೃದಯಾಘಾತ ತಡೆಯುವುದು

ಹೃದಯಾಘಾತ ತಡೆಯುವುದು

ಕ್ಯಾರೆಟ್ ನಲ್ಲಿ ಕಂಡುಬರುವಂತಹ ಉನ್ನತ ಮಟ್ಟದ ಕ್ಯಾರೊಟೆನಾಯ್ಡ್ ವ್ಯಕ್ತಿಯಲ್ಲಿ ಕಂಡುಬರುವಂತಹ ಹೃದಯಾಘಾತದ ಸಮಸ್ಯೆಯನ್ನು ನಿವಾರಿಸುತ್ತದೆ. ಕ್ಯಾರೊಟೆನಾಯ್ಡ್ ಹೊರತುಪಡಿಸಿ ಅಲ್ಪಾ ಕ್ಯಾರೊಟೆನ್ ಮತ್ತು ಲುಟೈನ್ ಇದರಲ್ಲಿದೆ. ಇದರಿಂದ ಕ್ಯಾರೆಟ್ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ದಂತದ ಆರೈಕೆ

ದಂತದ ಆರೈಕೆ

ಕ್ಯಾರೆಟ್ ಅನ್ನು ಹೆಚ್ಚು ಸೇವಿಸಿದರೆ ದಂತದ ಆರೋಗ್ಯ ಹೆಚ್ಚಲಿದ್ದು, ಹಲ್ಲುಗಳು ಕಾಂತಿಯುತವಾಗುತ್ತವೆ. ಕ್ಯಾರೆಟ್ ಅನ್ನು ಹಸಿಯಾಗಿ ಕಚ್ಚುತ್ತಾ ಸೇವಿಸಿದರೆ ಸಲೈವಾ ಅಂಶವು ಹೆಚ್ಚು ಉತ್ಪತ್ತಿಯಾಗಿ ಆಮ್ಲದ ಪ್ರಮಾಣವನ್ನು ಸಮತೋಲನದಲ್ಲಿರಿಸುವುದಲ್ಲದೇ ಹಾನಿಯುಂಟಾಗುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ.

ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

*ಎರಡು ಹೋಳು ಕ್ಯಾರೆಟ್ ಅನ್ನು ನೀರಿನಲ್ಲಿ, ಹಾಕಿ ಚೆನ್ನಾಗಿ ಬೇಯಿಸಿಕೊಂಡು, ನಂತರ ಜಜ್ಜಿಕೊಳ್ಳಿ.

*ಇನ್ನು ಇದಕ್ಕೆ ಒಂದು ಚಮಚ ಬಾದಾಮಿ ತೈಲವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.

*ತದನಂತರ ಈ ಮಿಶ್ರಣವನ್ನು ಒಂದು ಗಂಟೆಯ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ, ತಂಪಾಗಲು ಬಿಡಿ.

*ಇನ್ನು ಈ ಮಿಶ್ರಣವನ್ನು ಕಣ್ಣುಗಳ ಸುತ್ತ, ಕೆನ್ನೆ, ಗಲ್ಲದ ಭಾಗಗಳಿಗೆ ನಯವಾಗಿ ಹಚ್ಚಿಕೊಳ್ಳಿ.

*ಇಷ್ಟೆಲ್ಲಾ ಆದ ನಂತರ, ಹಚ್ಚಿಕೊಂಡಿರುವ ಮಿಶ್ರಣವನ್ನು ಗಂಟೆಯ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ಸುಕ್ಕು ರಹಿತ ಮತ್ತು ಕಾಂತಿಯುತ ತ್ವಚೆ ಹೊಂದಲು ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಅನುಸರಿಸಿ ನೋಡಿ. ನಿಮಗೆ ಉತ್ತಮ ಫಲಿತಾಂಶ ದೊರಕಲಿದೆ.

English summary

Here Is Why You Should Eat Carrots Every Day

For those who aren't aware of the benefits of carrots yet, here we mention some of the health benefits. These are the reasons why we must eat carrots every day.
X
Desktop Bottom Promotion