ಈ ಬೀಜಗಳು ನೋಡಲು ಚಿಕ್ಕದಾದರೂ, ಮಾಡುವ ಕೆಲಸ ದೊಡ್ಡದು!!

By: Deepak
Subscribe to Boldsky

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಕೇಳಿರಬಹುದು. ಈ ಮಾತು ಬೀಜಗಳಿಗೆ ಒಪ್ಪುತ್ತವೆ. ಆರೋಗ್ಯಕಾರಿ ಸಂಗತಿಗಳನ್ನು ತಮ್ಮೊಳಗೆ ಅಡಗಿಸಿಕೊಂಡಿರುವ ಸಂಜೀವಿನಿಗಳು ಈ ಬೀಜಗಳು. ನಿಮಗೆ ಆರೋಗ್ಯ ಬೇಕು ಎಂದಾದಲ್ಲಿ ಈ ಬೀಜಗಳನ್ನು ಸೇವಿಸುವುದನ್ನು ಮರೆಯಬೇಡಿ. ಇವುಗಳಲ್ಲಿ ಹೆಚ್ಚು ಆರೋಗ್ಯಕಾರಿ ಪ್ರಯೋಜನಗಳು ಅಡಗಿರುತ್ತವೆ.

ಅದರಲ್ಲೂ ಕೆಲವೊಂದು ತರಕಾರಿ ಬೀಜಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇವಿಸುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಮಲಬದ್ಧತೆ, ಹೃದ್ರೋಗ, ಪಾರ್ಶ್ವವಾಯು, ಅಧಿಕ ಕೊಲೆಸ್ಟ್ರಾಲ್, ಸ್ಥೂಲಕಾಯ ಮತ್ತು ಕ್ಯಾನ್ಸರ್ ಅನ್ನು ಸಹ ನಿವಾರಿಸಿಕೊಳ್ಳಬಹುದು. ತಿನ್ನಲು ರುಚಿಕರ ಹಾಗು ಆರೋಗ್ಯಕರವಾಗಿರುವ ಈ ಬೀಜಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ. ಆರೋಗ್ಯದ ಕಣಜ 'ಒಣ ಬೀಜ'ದ ಮೂಲ ಅರಿಯಿರಿ

ಪೋಷಕಾಂಶಗಳ ವಿಚಾರಕ್ಕೆ ಬಂದರೆ ಬೀಜಗಳಿಗೆ ಬೀಜಗಳೇ ಸಾಟಿ. ಇವುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ 3 ಕೊಬ್ಬಿನ ಆಮ್ಲ, ನಾರಿನಂಶ, ವಿಟಮಿನ್‌ಗಳು ಮತ್ತು ಖನಿಜಾಂಶಗಳಾದ ಮೆಗ್ನಿಷಿಯಂ, ಕಬ್ಬಿಣಾಂಶ, ಕ್ಯಾಲ್ಸಿಯ, ರಂಜಕ, ಸತು ಇತ್ಯಾದಿಗಳು ಇರುತ್ತವೆ. ಒಂದು ವೇಳೆ ನೀವು ನಿಮ್ಮ ತೂಕವನ್ನು ಹತೋಟಿಯಲ್ಲಿಡಲು ಶ್ರಮಿಸುತ್ತಿದ್ದಲ್ಲಿ, ಈ ಬೀಜಗಳನ್ನು ಸೇವಿಸಲು ಮರೆಯಬೇಡಿ. ಹದಿನೈದು ದಿನದಲ್ಲಿ ನಿಮ್ಮ ತೂಕದಲ್ಲಿ ಬದಲಾವಣೆ ಕಂಡು ಬರುತ್ತದೆ. ಬನ್ನಿ ಆರೋಗ್ಯವನ್ನು ಹೆಚ್ಚಿಸುವ ಆ ಬೀಜಗಳು ಯಾವುವು ಎಂದು ನೋಡೋಣ.... 

 

ಪಪ್ಪಾಯಿ ಬೀಜ-ಲಿವರ್‌ನ ಆರೈಕೆಗೆ

ಪಪ್ಪಾಯಿ ಬೀಜ-ಲಿವರ್‌ನ ಆರೈಕೆಗೆ

ಕೆಲವು ಕಾರಣಗಳಿಂದ ಯಕೃತ್ (ಲಿವರ್) ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಮದ್ಯಪಾನ ಇದಕ್ಕೆ ಪ್ರಮುಖ ಕಾರಣ. ಆಗ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಕೆಲವು ಭಾಗ ಕಲ್ಮಶದಿಂದ ತುಂಬಿಕೊಳ್ಳುತ್ತಾ ಹೋಗುತ್ತದೆ. ಇದನ್ನು ತೊಡೆಯಲು ಪ್ರತಿದಿನ ಮುಂಜಾನೆ ಒಂದು ಲೋಟ ಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮದ ಪಪ್ಪಾಯಿ ಬೀಜದ ಪುಡಿ ಮತ್ತು ಒಂದು ಲಿಂಬೆಯ (ದೊಡ್ಡದಾದರೆ ಅರ್ಧ) ರಸ ಹಿಂಡಿ ಕುಡಿಯುತ್ತಾ ಬಂದರೆ ಎರಡು ತಿಂಗಳಲ್ಲಿಯೇ ಈ ತೊಂದರೆ ಸಾಕಷ್ಟು ಕಡಿಮೆಯಾಗುತ್ತದೆ.

ಕುಂಬಳ ಬೀಜ

ಕುಂಬಳ ಬೀಜ

ಸಂಶೋಧಕರ ಪ್ರಕಾರ, ಕುಂಬಳ ಬೀಜ ತಿನ್ನುವುದರಿಂದ ಕ್ಯಾನ್ಸರ್ ಹುಟ್ಟು ಮತ್ತು ಬೆಳವಣಿಗೆಯನ್ನು ತಡೆಯಬಹುದು. ಇದರಲ್ಲಿರುವ ಕ್ಯಾರೊಟೆನೈಡ್ಸ್ ಎಂಬ ಅತ್ಯಧಿಕ ಅಂಶ ಆರೋಗ್ಯಕ್ಕೆ ಪೂರಕ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಇದರಲ್ಲಿನ ಫೈಟೊಸ್ಟೆರೊಲ್ಸ್, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲೂ ಪರಿಣಾಮಕಾರಿ. ಒಮೆಗ 3 ಫ್ಯಾಟಿ ಆಸಿಡ್ಸ್ ತುಂಬಿರುವ ಕುಂಬಳ ಬೀಜ ತಿಂದರೆ ಕಾಯಿಲೆಗಳು ದೂರವುಳಿಯುತ್ತವೆ.

ಅಗಸೆ ಬೀಜಗಳು

ಅಗಸೆ ಬೀಜಗಳು

ಈ ಬೀಜಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿದ್ದು, ವೈದ್ಯಕೀಯ ಲಾಭಗಳು ಕೂಡ ಸಾಕಷ್ಟಿವೆ.ಇಂದಿಗೂ ಸಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅದ್ಭುತ ಬೀಜಗಳು ಎಂದು ಇವು ಹೆಸರಾಗಿವೆ. ಇವು ಮಾನವನ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಇದನ್ನು ಪುಡಿ ಮಾಡಿ ಸೇವಿಸಬಹುದು. ಇದನ್ನು ಹಾಗೆಯೇ ಸೇವಿಸಿದರೆ ಜೀರ್ಣ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಪುಡಿ ಮಾಡಿದ ಅಗಸೆ ಬೀಜಗಳನ್ನು ನೀರಿನ ಜೊತೆ ಪ್ರತಿದಿನವೂ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಇವುಗಳನ್ನು ಸೇವಿಸಿದ ಸಂದರ್ಭದಲ್ಲಿ ತಪ್ಪದೆ ನೀರನ್ನು ಹೆಚ್ಚು ಸೇವಿಸುತ್ತಾ ಇರಿ. ನಿಮಗೆ ಬೇಕಾದಲ್ಲಿ ಇದನ್ನು ಕರಿದುಕೊಂಡು ಸಹ ಸೇವಿಸಬಹುದು. ಅಗಸೆ ಬೀಜದ ಆರೋಗ್ಯಕರ ಲಾಭಗಳು

ಎಳ್ಳು

ಎಳ್ಳು

ಕ್ಯಾಲ್ಸಿಯಂ, ತಾಮ್ರಾಂಶ, ಫೈಬರ್, ಮ್ಯಾಗ್ನೀಶಿಯಂ, ಕಬ್ಬಿಣಾಂಶ ಹೆಚ್ಚಿರುವ ಎಳ್ಳು ಆರೋಗ್ಯಕ್ಕೆ ಹೆಸರುವಾಸಿ. ಕೊಲೆಸ್ಟಾಲ್ ವಿರುದ್ಧ ಹೋರಾಡುವ ಲೆಗ್ನಾಸ್ ಎಂಬ ಅಂಶ ಎಳ್ಳಿನಲ್ಲಿದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವಿರುವ ಎಳ್ಳು ಅಸ್ತಮ ಮತ್ತು ಮೈಗ್ರೇನ್ ಬರುವುದನ್ನೂ ಕೂಡ ತಡೆಯುತ್ತದೆ.ಗರ್ಭಾವಸ್ಥೆಯಲ್ಲಿ ಹಿತಮಿತವಾಗಿ ಎಳ್ಳು ಸೇವನೆ ಆರೋಗ್ಯಕರ

ಚಿಯಾ ಬೀಜಗಳು

ಚಿಯಾ ಬೀಜಗಳು

(ಚಿಯ- ಹೂಬಿಡುವ ಸಸ್ಯ ಜಾತಿಯ ಮಿಂಟ್ ಕುಟುಂಬದ ಮೆಕ್ಸಿಕೋ ಮತ್ತು ಗ್ವಾಟೆಮಾಲಾ ಮೂಲದ್ದು) ಇದು ಶರೀರದ ಉಷ್ಣತೆಯನ್ನು ಕಾಪಾಡುತ್ತದೆ ಮತ್ತು ಬೇಸಿಗೆ ಕಾಲದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಮೇಗ 3 ಕೊಬ್ಬಿನ ಆಮ್ಲಗಳು, ನಾರಿನಾಂಶಗಳು ಮತ್ತು ಉತ್ಕರ್ಷಣ (ಆಂಟಿ-ಆಕ್ಸಿಡೆಂಟ್ಸ್) ಸಮೃದ್ಧಿಯಾಗಿದೆ. ಇದು ಹೃದಯ ರೋಗಗಳನ್ನು ತಡೆಯುತ್ತದೆ ಮತ್ತು ಮೆದುಳಿಗೆ ಒಳ್ಳೆಯದು.

  

English summary

Healthy Indian Seeds And Their Health Benefits

Just a handful of these seeds can protect you from many diseases especially lifestyle ones like diabetes, high blood pressure, constipation, heart diseases, stroke, high cholesterol, obesity and even cancer. Apart from being tasty, they can prevent these common and debilitating diseases. These healthy seeds supply us with proteins, calcium, omega 3 fatty acids, fibre, vitamins, and minerals such as magnesium, iron, calcium, phosphorus, zinc etc.
Story first published: Friday, May 5, 2017, 23:45 [IST]
Subscribe Newsletter