Latest Updates
-
ಡೇಟಿಂಗ್ ಆಪ್ಗಳಲ್ಲಿ ಎಐ ಚಾಟ್ಬಾಟ್ ವಂಚನೆ: ನಿಮ್ಮ ಪ್ರೀತಿಯೇ ಬಲೆ ಆಗಬಹುದು, ಎಚ್ಚರ! -
ಚೆನ್ನೈನಲ್ಲಿ ಭಾರಿ ಮಳೆ: ಅಪಾರ್ಟ್ಮೆಂಟ್ ನಿವಾಸಿಗಳು ಮರೆಯದೆ ಮಾಡಬೇಕಾದ 20 ನಿಮಿಷದ ಸೇಫ್ಟಿ ಚೆಕ್ಲಿಸ್ಟ್ -
ಗಣೇಶ ಹಬ್ಬದ ಪ್ರಸಾದ: ಕಲಬೆರಕೆ ಸಿಹಿತಿಂಡಿಗಳನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಎಫ್ಎಸ್ಎಸ್ಎಐ ಟಿಪ್ಸ್ -
ನಾಳೆ ಗಣೇಶ ವಿಸರ್ಜನೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ -
ಸೇವಾ ಪಖ್ವಾಡ: ರಕ್ತದಾನಕ್ಕೆ ಹೋಗುವ ಮುನ್ನ ಈ ಸಿಂಪಲ್ ಪ್ಲಾನ್ ಮಿಸ್ ಮಾಡ್ಬೇಡಿ! -
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್!
ಬಾಳೆಹಣ್ಣಿನ ಸಿಪ್ಪೆ ಎಸೆಯಬೇಡಿ! ಇದರಿಂದ ಸಾಕಷ್ಟು ಪ್ರಯೋಜನಗಳಿವೆ...
ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ.ಬಾಳೆಹಣ್ಣಿನ ಸಿಪ್ಪೆಯನ್ನು ಯಾರಾದರೂ ತಿನ್ನುತ್ತಾರೆಯಾ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಮೂಡಬಹುದು. ಆದರೆ ಬಾಳೆಹಣ್ಣಿನ ಸಿಪ್ಪೆಯಲ್ಲೂ ಪೋಷಕಾಂಶಗಳಿವೆ....
ಬಾಳೆಹಣ್ಣಿನ ಸಿಪ್ಪೆಯನ್ನು ಸಹ ಬಳಸಿಕೊಳ್ಳಬಹುದಾ? ಏನ್ರೀ, ತಿಂದು ಕಸದ ಬುಟ್ಟಿಗೆ ಎಸೆಯುವ ಸಿಪ್ಪೆಯಲ್ಲಿಯು ಸಹ ರಸ ಮಾಡಬಹುದು ಎಂದು ಹೇಳುತ್ತೀರೇನು? ಕೇಳದಿಕ್ಕೆ ತುಂಬಾ ವಿಲಕ್ಷಣವಾಗಿದೆ ಎಂಬ ಅನಿಸಿಕೆ ನಿಮ್ಮಿಂದ ವ್ಯಕ್ತವಾಗಬಹುದು. ಆದರೆ ಒಮ್ಮೆ ಯೋಚಿಸಿ, ಎಂತಹ ಒಂದು ಗೂಡಂಗಡಿಯಲ್ಲೂ ಸಹ ದೊರೆಯುವ, ಐದಡಿ ಜಾಗ ದೊರೆತರೆ ಬೆಳೆಯಬಹುದಾದ ಹಣ್ಣು ಅದೊಂದೆ!. ಎಲ್ಲಾ ಕಡೆಯಲ್ಲೂ ಸಿಗುತ್ತದೆ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!
ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸಿಗುವ ಕೆಲವೇ ಕೆಲವು ಹಣ್ಣುಗಳಲ್ಲಿ ಇದು ಅಗ್ರ ಸ್ಥಾನದಲ್ಲಿದೆ. ಇದನ್ನು ತಿನ್ನುವುದರ ಜೊತೆಗೆ ಕಸಕ್ಕೆ ಎಸೆಯುವ ಅದರ ಸಿಪ್ಪೆಯಲ್ಲೂ ಸಹ ಪ್ರಯೋಜನಗಳನ್ನು ಪಡೆಯಬಹುದು. ಬಾಳೆ ಹಣ್ಣಿನ ತಿರುಳಿನಲ್ಲಿ ಪೋಷಕಾಂಶಗಳು ಮತ್ತು ಕಾರ್ಬೋಹೈಡ್ರೇಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಬಾಳೆಹಣ್ಣು: ಆರೋಗ್ಯಕ್ಕೂ ಸೈ-ಸೌಂದರ್ಯಕ್ಕೂ ಜೈ!
ಈ ತಿರುಳಿನಲ್ಲಿ ವಿಟಮಿನ್ ಬಿ-6, ಬಿ- 12, ಮ್ಯಗ್ನೀಶಿಯಂ ಮತ್ತು ಪೊಟಾಶಿಯಂಗಳು ಅಧಿಕವಾಗಿರುತ್ತದೆ. ಅದರಲ್ಲೂ ಬಾಳೆಹಣ್ಣಿನ ತಿರುಳು ಕಪ್ಪು ಬಣ್ಣಕ್ಕೆ ತಿರುಗಿದಾಗ ಅದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾದರೆ ಬನ್ನಿ ಈ ಬಾಳೆ ಹಣ್ಣಿನ ಸಿಪ್ಪೆಯನ್ನು ಏನೆಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣಾ..

ಹಲ್ಲು ಬಿಳಿಯಾಗಿಸುವುದು
ಪ್ರತಿದಿನ ಒಂದು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಹಾಕಿ ಚೆನ್ನಾಗಿ ಉಜ್ಜಿ. ಇದರಿಂದ ನಿಮ್ಮ ಹಲ್ಲುಗಳಿಗೆ ಫಳ ಫಳ ಎನ್ನುವ ಹೊಳಪು ದೊರೆಯುತ್ತದೆ. ಇದನ್ನು ಮಾಡಲಿಲ್ಲವಾದಲ್ಲಿ ನೀವು ನಿಮ್ಮ ದಂತ ವೈದ್ಯರಿಗೆ ಸಾವಿರಾರು ರೂಪಾಯಿಯನ್ನು ವ್ಯಯಿಸಬೇಕಾಗುತ್ತದೆ.

ಮೊಡವೆಗಳಿಗೆ ರಾಮಬಾಣ
ಮೊಡವೆಗಳು ಉಂಟಾದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದನ್ನು ಹಾಗೆಯೇ 30 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಜೊತೆಗೆ ಸಸ್ಯಜನ್ಯ ಎಣ್ಣೆಯನ್ನು ಬೆರೆಸಿ ಹಚ್ಚಿದರೆ ನೋವು ಮತ್ತಷ್ಟು ಕಡಿಮೆಯಾಗುತ್ತದೆ.

ಚರ್ಮದ ಗಂಟು ನಿವಾರಣೆ
ನಿಮಗೆ ಚರ್ಮದ ಗಂಟಿನಿಂದ ಯಾವುದೇ ಸಮಸ್ಯೆಯಾಗುತ್ತಾ ಇದ್ದರೆ ಬಾಳೆಹಣ್ಣಿನ ಸಿಪ್ಪೆಯಿಂದ ಇದನ್ನು ನಿವಾರಣೆ ಮಾಡಬಹುದು. ಭಾದಿತ ಪ್ರದೇಶಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಳ್ಳಿ ಮತ್ತು ಇದು ಬೇಗನೆ ನಿವಾರಣೆಯಾಗುವುದು.

ನೋಯುವ ಮಚ್ಚೆಗಳಿಗೆ
ಬಾಳೆಹಣ್ಣಿನಲ್ಲಿ ನೋವುನಿವಾರಕ ಗುಣಗಳು ಇವೆ. ಬಾಳೆಹಣ್ಣಿನ ಸಿಪ್ಪೆಯನ್ನು ನೋಯುತ್ತಿರುವ ಮಚ್ಚೆಗೆ ಉಜ್ಜಿದರೆ ನೋವು ಕಡಿಮೆಯಾಗುವುದು.

ತೂಕ ಕಳೆದುಕೊಳ್ಳಲು
ಇದನ್ನು ಓದಿ ಸ್ವಲ್ಪ ಅಚ್ಚರಿಯಾಗಬಹುದು. ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ತೂಕ ಕಳೆದುಕೊಳ್ಳಲು ಬಳಸಬಹುದು. ಪ್ರತೀ ದಿನ ಎರಡು ಬಾಳೆಹಣ್ಣುಗಳನ್ನು ಮಧ್ಯಾಹ್ನದ ಊಟದ ವೇಳೆ ಸೇವಿಸಿ. ಇದರ ಸಿಪ್ಪೆಗಳನ್ನು ಪ್ರತ್ಯೇಕವಾಗಿ ಸೇವಿಸಿ. ರಾತ್ರಿ ವೇಳೆ ಊಟ ಮಾಡಬೇಡಿ. ಯಾಕೆಂದರೆ ಬಾಳೆಹಣ್ಣಿನ ಸಿಪ್ಪೆಯು ಸರಿಯಾಗಿ ಕರಗಬೇಕು. ಅಧ್ಯಯನಗಳ ಪ್ರಕಾರ ಈ ಆಹಾರ ಕ್ರಮದಿಂದ ಸುಮಾರು 2.5 ಕೆಜಿಯಷ್ಟು ತೂಕ ಕಳೆದುಕೊಳ್ಳಬಹುದು.

ಕೀಟಗಳ ಕಡಿತಕ್ಕೆ
ಯಾವುದೇ ಕೀಟಗಳು ಕಚ್ಚಿದರೆ ಆ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಂಡರೆ ನೋವು ನಿವಾರಣೆಯಾಗುವುದು ಮತ್ತು ಭಾದಿತ ಪ್ರದೇಶವು ಬಾತುಕೊಳ್ಳುವುದು ಕಡಿಮೆಯಾಗುವುದು.

ಮುಖದ ಸುಕ್ಕು ನಿವಾರಣೆಯಾಗಲು...
ಬಾಳೆಹಣ್ಣಿನ ಸಿಪ್ಪೆಯು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತವೆ. ಬಾಳೆಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಟ್ಟೆಯ ಲೋಳೆಯನ್ನು ಬೆರೆಸಿ, ಇದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಬಿಡಿ. ನಂತರ ಮುಖ ತೊಳೆಯಿರಿ. ಇದರಿಂದ ಸುಕ್ಕುನಿವಾರಣೆಯಾಗುತ್ತದೆ.



Click it and Unblock the Notifications
