ದಿನಕ್ಕೊಂದು ಲೋಟ ಅರಿಶಿನ ಬೆರೆಸಿದ ನೀರು-ಆಯಸ್ಸು ನೂರು!

By: Arshad
Subscribe to Boldsky

ಅರಿಶಿನ ಒಂದು ಜನಪ್ರಿಯ ಮಸಾಲೆಯಾಗಿದ್ದು ಹೆಚ್ಚಿನ ಬಗೆಯ ಖಾದ್ಯಗಳಲ್ಲಿ ಉಪಯೋಗಿಸಲ್ಪಡುತ್ತದೆ. ಇದರಲ್ಲಿರುವ ಹಲವಾರು ಔಷಧೀಯ ಗುಣಗಳ ಭಂಡಾರ ಹಲವಾರು ತೊಂದರೆಗಳಿಗೆ ಶೀಘ್ರವಾದ ಉಪಶಮನ ನೀಡುತ್ತದೆ. ಅರಿಶಿನದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವ ಮೂಲಕವೂ ಹಲವಾರು ರೀತಿಯ ಪ್ರಯೋಜನಗಳಿವೆ. ಅಡುಗೆ ಮನೆಯ ಬಂಗಾರ 'ಅರಿಶಿನ'ದ ಚಿನ್ನದಂತಹ ಗುಣಗಳು

ಅರಿಶಿನದಲ್ಲಿ ಪ್ರಬಲವಾದ ಆಂಟಿ ಆಕ್ಸಿಡೆಂಟುಗಳು, ವೃದ್ಧಾಪ್ಯವನ್ನು ದೂರಗೊಳಿಸುವ, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ದೃಢಗೊಳಿಸುವ ಸಹಿತ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಇವೆಲ್ಲಾ ಕಾರಣದಿಂದ ಅರಿಶಿನ ಬೆರೆಸಿದ ನೀರನ್ನು ಕುಡಿಯುವ ಮೂಲಕ ಹಲವಾರು ಟಾನಿಕ್ ಗಳಿಂದ ಪಡೆಯಲಾಗದ ಉತ್ತಮ ಪೋಷಣೆಯನ್ನು ಪಡೆಯಬಹುದು. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

ವಿಶೇಷವಾಗಿ ಈ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಉಂಟಾಗಿದ್ದ ಪಿಎಚ್ ಮಟ್ಟ ಅಥವಾ ಆಮ್ಲೀಯ-ಪ್ರತ್ಯಾಮ್ಲೀಯ ಮಟ್ಟವನ್ನು ಸರಿಪಡಿಸಬಹುದು. ಈ ನೀರಿನಲ್ಲಿ ವಿಶೇಷವಾಗಿ ಸಂಧಿವಾತವನ್ನು ಗುಣಪಡಿಸುವ ಸಾಮರ್ಥ್ಯವಿದ್ದು ನಿತ್ಯವೂ ಒಂದು ಲೋಟದಂತೆ ಸತತವಾಗಿ ಒಂದು ವರ್ಷದವರೆಗೆ ಕುಡಿಯುವ ಮೂಲಕ ಸಂಧಿವಾತ ಕಡಿಮೆಯಾಗುವ ಜೊತೆಗೇ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ನೀರನ್ನು ತಯಾರಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ, ಸರಳವಾಗಿ ಮಾಡಬಹುದು... ಮುಂದೆ ಓದಿ...   

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕಚಮಚದಷ್ಟು ಅರಿಶಿನ ಪುಡಿಯನ್ನು ಬೆರೆಸಿ ಇದಕ್ಕೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ ಸೇರಿಸಿ ಈ ನೀರನ್ನು ಬೆಳಿಗ್ಗೆದ್ದ ಬಳಿಕ ದಿನದ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಒಂದು ವರ್ಷದ ಬಳಿಕ ಏನೇನು ಬದಲಾವಣೆಗಳಾಗಿರುತ್ತದೆ ಎಂಬುದನ್ನು ಈಗ ನೋಡೋಣ....

ಹೃದಯಯ ಕ್ಷಮತೆ ಹೆಚ್ಚಾಗಿರುತ್ತದೆ

ಹೃದಯಯ ಕ್ಷಮತೆ ಹೆಚ್ಚಾಗಿರುತ್ತದೆ

ಅರಿಶಿನದಲ್ಲಿ ಸರ್ಕ್ಯುಮಿನ್ (circumin) ಎಂಬ ಪೋಷಕಾಂಶವಿದ್ದು ಇದು ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಜಿಡ್ಡನ್ನು ಸಡಿಲಿಸಿ ಹೊರಹಾಕಲು ನೆರವಾಗುತ್ತದೆ. ಅಲ್ಲದೇ ನರಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಪ್ಪಿಸಿ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ.

ಆಮ್ಲೀಯತೆಯನ್ನು ಕಡಿಮೆಗೊಳಿಸಿರುತ್ತದೆ

ಆಮ್ಲೀಯತೆಯನ್ನು ಕಡಿಮೆಗೊಳಿಸಿರುತ್ತದೆ

ಅರಿಶಿನದ ನೀರು ಕೊಂಚ ಕ್ಷಾರೀಯವಾಗಿದ್ದು ಇದನ್ನು ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಜಠರ ಮತ್ತು ಕರುಳುಗಳಲ್ಲಿ ಉಂಟಾಗಿದ್ದ ಆಮ್ಲೀಯತೆಯನ್ನು ಸಂತುಲಿತಗೊಳಿಸಿ ಹಲವು ಬಗೆಯ ತೊಂದರೆಗಳಿಂದ ರಕ್ಷಿಸುತ್ತದೆ.

ಟೈಪ್-2 ಮಧುಮೇಹದಿಂದ ರಕ್ಷಿಸುತ್ತದೆ

ಟೈಪ್-2 ಮಧುಮೇಹದಿಂದ ರಕ್ಷಿಸುತ್ತದೆ

ಒಂದು ಸಂಶೋಧನೆಯಿಂದ ಕಂಡುಕೊಂಡ ಪ್ರಕಾರ ಈ ವಿಧಾನದಿಂದ ಅರಿಶಿನದ ಗುಣಗಳು ಟೈಪ್-2 ವಿಧದ ಮಧುಮೇಹ ಆವರಿಸುವ ಸಾಧ್ಯತೆಯನ್ನು ಗಣನೀಯ ಮಟ್ಟಿಗೆ ಕಡಿಮೆಯಾಗಿದೆ.ಟೈಪ್ 2 ಮಧುಮೇಹ: ರೋಗ ಲಕ್ಷಣಗಳು

ಮೆದುಳನ್ನು ರಕ್ಷಿಸುತ್ತದೆ

ಮೆದುಳನ್ನು ರಕ್ಷಿಸುತ್ತದೆ

ಕೆಲವು ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳ ಕೊರತೆಯಿಂದ ಆಲ್ಜೀಮರ್ಸ್ ಕಾಯಿಲೆ ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಅರಿಶಿನದಲ್ಲಿರುವ ಸರ್ಕ್ಯುಮಿನ್ ಈ ಹಾರ್ಮೋನುಗಳ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ. ತನ್ಮೂಲಕ ವೃದ್ಧಾಪ್ಯದಲ್ಲಿ ಮೆದುಳಿನ ಜೀವಕೋಶಗಳು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗುವುದನ್ನು ತಪ್ಪಿಸಿ ಮೆದುಳನ್ನು ರಕ್ಷಿಸುತ್ತದೆ. ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

ಉರಿಯೂತದ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ

ಉರಿಯೂತದ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ

ಅರಿಶಿನದಲ್ಲಿರುವ ಸರ್ಕ್ಯುಮಿನ್‌ನಲ್ಲಿ ಉರಿಯೂತ ನಿವಾರಕ ಗುಣವೂ ಇದ್ದು ಇದು ದೇಹದಲ್ಲಿ ಆವರಿಸುವ ಹಲವು ರೀತಿಯ ಉರಿಯೂತಗಳಿಂದ ರಕ್ಷಿಸುತ್ತದೆ ಹಾಗೂ ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಗುಣ ಅರಿಶಿನದ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.

ಕ್ಯಾನ್ಸರ್ ಬರುವುದರಿಂದ ತಪ್ಪಿಸುತ್ತದೆ

ಕ್ಯಾನ್ಸರ್ ಬರುವುದರಿಂದ ತಪ್ಪಿಸುತ್ತದೆ

ಅರಿಶಿನದಲ್ಲಿ ಅತ್ಯಂತ ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಿದ್ದು ಇವು ಜೀವಕೋಶಗಳನ್ನು ಅನಿಯಂತ್ರಿತ ಬೆಳವಣಿಗೆಯಾಗದಂತೆ ತಡೆದು ಹಲವು ರೀತಿಯ ಕ್ಯಾನ್ಸರ್ ಬರುವುದರಿಂದ ತಪ್ಪಿಸುತದೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಸಂಧಿವಾತ ಕಡಿಮೆಯಾಗಿರುತ್ತದೆ

ಸಂಧಿವಾತ ಕಡಿಮೆಯಾಗಿರುತ್ತದೆ

ಒಂದು ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಅರಿಶಿನದಲ್ಲಿರುವ ಸರ್ಕ್ಯುಮಿನ್ ಒಂದು ಉತ್ತಮವಾದ ಉರಿಯೂತ ನಿವಾರಕವಾಗಿದ್ದು ಸಂಧಿವಾತ ಕಾರಣದಿಂದ ಊದಿಕೊಂಡಿದ್ದ ಮೂಳೆಸಂಧುಗಳು ಮತ್ತು ಸಂಧಿವಾತದ ನೋವನ್ನು ಶೀಘ್ರವಾಗಿ ಗುಣಪಡಿಸುತ್ತದೆ. ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿರುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿರುತ್ತದೆ

ನಿಯಮಿತವಾಗಿ ಅರಿಶಿನವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಆಮ್ಲೀಯತೆಯಾಗುವುದನ್ನು ತಪ್ಪಿಸಿದಂತಾಗುತ್ತದೆ.

ಯಕೃತ್ ಅನ್ನು ರಕ್ಷಿಸಿರುತ್ತದೆ

ಯಕೃತ್ ಅನ್ನು ರಕ್ಷಿಸಿರುತ್ತದೆ

ಅರಿಶಿನದ ಸೇವನೆಯ ಮೂಲಕ ಪಿತ್ತಕೋಶದ ಕ್ಷಮತೆ ಹೆಚ್ಚುತ್ತದೆ ಹಾಗೂ ತನ್ಮೂಲಕ ಯಕೃತ್ ನ ಮೇಲೆ ವಿಷಕಾರಿ ವಸ್ತುಗಳ ಪ್ರಭಾವದಿಂದ ರಕ್ಷಿಸುತ್ತದೆ. ಅಲ್ಲದೇ ಇದುವರೆಗೆ ನಾಶವಾಗಿದ್ದ ಯಕೃತ್‌ನ ಜೀವಕೋಶಗಳು ಮತ್ತೆ ಬೆಳೆಯುವಂತೆ ಮಾಡಿ ಯಕೃತ್‌ನ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಈ ಗುಣವೂ ಅರಿಶಿನದ ನೀರನ್ನು ಕುಡಿಯುವ ಮೂಲಕ ಪಡೆಯಬಹುದಾದ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.

ಆಯಸ್ಸು ಹೆಚ್ಚಿಸುತ್ತದೆ

ಆಯಸ್ಸು ಹೆಚ್ಚಿಸುತ್ತದೆ

ಅರಿಶಿನದಲ್ಲಿರುವ ಸರ್ಕ್ಯುಮಿನ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಾಶಪಡಿಸುವ ಮೂಲಕ ಉರಿಯೂತ ಇಲ್ಲವಾಗುತ್ತದೆ ಹಾಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಈ ಮೂಲಕ ವೃದ್ದಾಪ್ಯವೂ ದೂರವಾಗಿ ಆಯಸ್ಸನ್ನು ಹೆಚ್ಚಿಸುತ್ತದೆ.

 
English summary

Health Benefits Of Turmeric Water

Turmeric water also has the capacity to relieve arthritis symptoms as well. Drinking one glass of water every day for 12 months will make a huge difference to your health. This is how you can prepare this miracle drink. Add one spoon of ground turmeric to a glass of warm water. Also add a pinch of black pepper to it. Drink this warm glass of liquid every morning. Read further to find out about the health benefits of turmeric water.
Please Wait while comments are loading...
Subscribe Newsletter