Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ
ನಿಮಗೆ ಅರಿಶಿನದಿಂದ ದೊರೆಯುವ ಸೌಂದರ್ಯದ ಪ್ರಯೋಜನಗಳ ಕುರಿತು ಅರಿವಿದೆಯೇ? ಅರಿಶಿನ ಮತ್ತು ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಇದು ಪುಡಿಯ ರೂಪದಲ್ಲಿ ಸಹ ದೊರೆಯುತ್ತದೆ. ಕೆಲವೊಂದು ಭಾರತೀಯ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದರಲ್ಲಿ ಇದರ ಕೈವಾಡವು ಸಹ ಹೆಚ್ಚಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಇದರಿಂದ ನಮಗೆ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳು ಸಹ ಲಭ್ಯವಿವೆ. ಆದರೆ ಸೌಂದರ್ಯದ ಪ್ರಯೋಜನಗಳು! ಹೌದು ಇದನ್ನು ಬಳಸುವುದರಿಂದ ಸೌಂದರ್ಯವನ್ನು ಸಹ ಹೆಚ್ಚಿಸಿಕೊಳ್ಳಬಹುದು. ಇದರ ಅಲ್ಪ ಸ್ವಲ್ಪ ಪರಿಚಯ ನಿಮಗೂ ಸಹ ಇರಬಹುದು. ಆದ್ದರಿಂದಲೇ ಶತ ಶತಮಾನಗಳಿಂದ ಭಾರತೀಯ ಹೆಂಗಸರು ಅರಿಶಿನವನ್ನು ಮುಖಕ್ಕೆ ಬಳಿದುಕೊಳ್ಳುತ್ತಿದ್ದರು. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತಿದ್ದೇವೆ. ಸೂಕ್ಷ್ಮ ತ್ವಚೆ ಇರುವವರನ್ನು ಹೊರತುಪಡಿಸಿ ಯಾರು ಬೇಕಾದರು ಅರಿಶಿನವನ್ನು ಬಳಸಬಹುದು.

ಇವರು ಮಾತ್ರ ಚರ್ಮ ರೋಗ ತಜ್ಞರನ್ನು ಕಂಡು ನಂತರ ಬಳಸುವುದು ಉತ್ತಮ. ತ್ವಚೆಯನ್ನು ಅಪಾಯಕ್ಕೆ ಒಡ್ಡುವ ಸಾಹಸಕ್ಕೆ ಹೋಗುವ ಮೊದಲು ಈ ಕ್ರಮ ಕೈಗೊಳ್ಳುವುದು ಉತ್ತಮ. ಬನ್ನಿ ಅರಿಶಿನದಿಂದ ದೊರೆಯುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!
ಮೊಡವೆಗಳು
ನಮ್ಮಲ್ಲಿ ಬಹುತೇಕ ಮಂದಿಗೆ ತಿಳಿಯದೆ ಇರುವ ವಿಚಾರವೆಂದರೆ ಅರಿಶಿನವು ಮೊಡವೆಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಇದು ಅರಿಶಿನದ ಒಂದು ಅದ್ಭುತ ಪ್ರಯೋಜನ. ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ್ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಮೊಡವೆಗಳನ್ನು ನಾಶ ಮಾಡುತ್ತವೆ. ಹಾಗಾಗಿಯೆ ಭಾರತೀಯ ಮಹಿಳೆಯರು ಇದನ್ನು ಮುಖಕ್ಕೆ ಕ್ರೀಮ್ ಮತ್ತು ಫೇಸ್ ಪ್ಯಾಕ್‍ನಂತೆ ಹಚ್ಚಿಕೊಳ್ಳುವುದು.
ಎಣ್ಣೆ ತ್ವಚೆ
ಎಣ್ಣೆ ಚರ್ಮ ಹೊಂದಿರುವವರಿಗೆ ಸಹ ಅರಿಶಿನ ಉಪಕಾರಿ. ಅರಿಶಿನದ ಫೇಸ್ ಪ್ಯಾಕ್ ಅಂದರೆ ಅರಿಶಿನವನ್ನು ಒಂದು ಸ್ಪೂನ್ ಶ್ರೀಗಂಧದ ಪೇಸ್ಟ್ ಜೊತೆ ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆಯಲ್ಲಿರುವ ಜಿಡ್ಡನ್ನು ತೊಲಗಿಸಬಹುದು. ಇದನ್ನು 15 ನಿಮಿಷ ನಿಮ್ಮ ತ್ವಚೆಯ ಮೇಲೆ ಒಣಗಲು ಬಿಡಿ, ನಂತರ ತೊಳೆಯಿರಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ
ಸ್ಟ್ರೆಚ್ ಕಲೆಗಳು
ಅರಿಶಿನವನ್ನು ಬಳಸುವುದರಿಂದ ಸ್ಟ್ರೆಚ್ ಮಾರ್ಕ್ ಅಥವಾ ಕಲೆಗಳನ್ನು ನಿವಾರಿಸಿಕೊಳ್ಳಬಹುದಂತೆ. ಇದರ ಜೊತೆಗೆ ಕಡಲೆಹಿಟ್ಟನ್ನು ಬಳಸುವುದರಿಂದ ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಕೆಲವು ಹನಿ ಹಾಲನ್ನು ಬೆರೆಸಿಕೊಂಡು ಕಲೆ ಇರುವ ಕಡೆ ಇದನ್ನು ಲೇಪಿಸಿ.
ಸುಕ್ಕುಗಳು
ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸ್ವಲ್ಪ ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಮಾಡಿ. ಆಗ ನೋಡಿ, ನಿಮ್ಮ ಸುಕ್ಕಿಗೆ ಪರಿಹಾರ ದೊರೆಯಿತೆ ಇಲ್ಲವೇ, ಎಂದು. ಇವುಗಳು ಅರಿಶಿನದಿಂದ ದೊರೆಯುವ ಸೌಂದರ್ಯದ ಪ್ರಯೋಜನಗಳಾಗಿವೆ.



Click it and Unblock the Notifications

