Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿದಿನ ಕರಬೂಜ ಹಣ್ಣು ತಿನ್ನೋದ್ರಿಂದ, ಆರೋಗ್ಯಕ್ಕೆ ದುಪ್ಪಟ್ಟು ಲಾಭ...
ಕರ್ಬೂಜ ಹಣ್ಣಿನಲ್ಲಿ ಶೇ.95% ರಷ್ಟು ನೀರಿನಂಶವನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಬೇರೆ ಹೇಳಬೇಕಿಲ್ಲ. ನೀರಿನಂಶದ ಜೊತೆಗೆ ಕರ್ಬೂಜ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಹೊಂದಿದೆ. ಇದು ಎದೆ ಉರಿಯನ್ನು ಶಮನ ಮಾಡುತ್ತದೆ ಮತ್ತು ಮೂತ್ರಕೋಶಗಳಲ್ಲಿ ಇರುವ ಕಶ್ಮಲಗಳನ್ನು ಸ್ವಚ್ಛಗೊಳಿಸುತ್ತದೆ. ಈ ಹಣ್ಣಿನಲ್ಲಿ ಸಕ್ಕರೆಯಂಶ ಅಥವಾ ಕ್ಯಾಲೋರಿಗಳು ಅಧಿಕ ಪ್ರಮಾಣದಲ್ಲಿ ಇಲ್ಲ.
ಹಾಗಾಗಿ ತೂಕವನ್ನು ಕಡಿಮೆಗೊಳಿಸಿಕೊಳ್ಳಲು ಬಯಸುವವರಿಗೆ ಇದು ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳಲು ಮತ್ತು ಹಸಿವಾದಾಗ ತಿನ್ನಲು ಅತ್ಯಂತ ಉಪಯೋಗಕಾರಿಯಾಗಿದೆ. ಕರ್ಬೂಜ ಹಣ್ಣು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‍ಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತವೆ. ಇವು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಅನ್ನು ಸಹ ನಿಯಂತ್ರಿಸುತ್ತವೆ. ಕರ್ಬೂಜವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಲಾಭಗಳ ಜೊತೆಗೆ ನಿಮ್ಮ ತ್ವಚೆಯನ್ನು ಸಹ ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಎ ಸಹ ಲಭ್ಯವಿದ್ದು, ಅವು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತವೆ...

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ
ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಮತ್ತು ಸಿ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶಗಳಾಗಿದ್ದು ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತವೆ. ವಿಶೇಷವಾಗಿ ಈ ಪೋಷಕಾಂಶಗಳು ಕಣ್ಣಿನ ಪಾಪೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಸ್ಪಷ್ಟವಾದ ದೃಷ್ಟಿ ಮತ್ತು ನೋಟವನ್ನು ಉತ್ತಮಗೊಳಿಸುತ್ತವೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ
ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ ಹಾಗೂ ಅಧಿಕ ರಕ್ತದೊತ್ತಡವನ್ನು ಕಡಿಮೆಯಾಗಿಸಲು ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ
ಇದರಲ್ಲಿ ಅತಿ ಕಡಿಮೆ ಪರ್ಯಾಪ್ತ ಕೊಬ್ಬು ಹಾಗೂ ಅತಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ತೂಕ ಏರದಿರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಹೊಟ್ಟೆಯ ಹಸಿವಿನ ಭಾವನೆ ಬರದಂತೆ ನೋಡಿಕೊಳ್ಳುತ್ತದೆ. ತನ್ಮೂಲಕ ಸೇವಿಸಬಹುದಾಗಿದ್ದ ಆಹಾರಸೇವನೆಯಿಂದ ತಡೆದು ತೂಕ ಏರದಂತೆ ಪರೋಕ್ಷವಾಗಿ ನೆರವಾಗುತ್ತದೆ.

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ
ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಎಂಬ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿರುವ ಕಾರಣ ರಕ್ತ ತೆಳುವಾಗಿರಲು ಹಾಗೂ ರಕ್ತನಾಳಗಳಲ್ಲಿ ಸರಾಗವಾಗಿ ಸಂಚರಿಸಲು ನೆರವಾಗುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಈ ಮೂಲಕ ಬರಬಹುದಾಗಿದ್ದ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ಈ ಹಣ್ಣಿನ ನಿಯಮಿತ ಸೇವನೆಯಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸಬಹುದು. ಈ ಅದ್ಭುತ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆ ಹೊಂದಿದ್ದು ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಪ್ರಮುಖ ಕಾರಣವಾಗಿದೆ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿಸಲು ಪ್ರಚೋದನೆ ದೊರಕುತ್ತದೆ. ಬಿಳಿರಕ್ತಕಣಗಳು ನಮ್ಮ ದೇಹವನ್ನು ರೋಗಾಣುಗಳಿಂದ ರಕ್ಷಿಸುವ ಸೈನಿಕರಾಗಿದ್ದು ಈ ಸೈನ್ಯ ಬಲವಾಗಿದ್ದಷ್ಟೂ ವೈರಿಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯುವಂತಾಗುತ್ತದೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
ಒಂದು ವೇಳೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟಗಳು ಸಾಮಾನ್ಯಕ್ಕೂ ಹೆಚ್ಚಿದ್ದರೆ ಇಂದಿನಿಂದಲೇ ನಿತ್ಯವೂ ಕೊಂಚ ಕೇಸರಿ ಕರಬೂಜ ಹಣ್ಣುಗಳನ್ನು ಸೇವಿಸುತ್ತಾ ಬನ್ನಿ. ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಇಲ್ಲವೇ ಇಲ್ಲ. ಹಾಗಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಈಗಿರುವುದಕ್ಕಿಂತ ಏರದೇ, ಸಾಮಾನ್ಯ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.

ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುತ್ತದೆ
ಇದರಲ್ಲಿರುವ ವಿಟಮಿನ್ ಸಿ ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನೀರಿನಂಶ ಹೊಟ್ಟೆಯ ಒಳಪದರದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಹೊಟ್ಟೆಯ ಉರಿಯನ್ನು ಇಲ್ಲವಾಗಿಸುತ್ತದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ
ಇದರಲ್ಲಿ ನೀರು ಮತ್ತು ಕರಗುವ ನಾರು ಅತ್ಯಂತ ಸಂತುಲಿತ ಅನುಪಾತದಲ್ಲಿವೆ. ಇದು ಮಲಬದ್ಧತೆಯ ತೊಂದರೆಯನ್ನು ಇಲ್ಲವಾಗಿಸಲು ಸೂಕ್ತವಾಗಿದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಜೀರ್ಣಕ್ರಿಯೆಯ ತೊಂದರೆಗಳನ್ನು ನೈಸರ್ಗಿಕವಾಗಿ ಗುಣಪಡಿಸುತ್ತದೆ.

ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ
ಇದರಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಕ್ಷಮತೆ ಹೊಂದಿದ್ದು ಈ ಮೂಲಕ ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಈ ಹಾನಿ ಮುಂದುವರೆದರೆ ಕ್ಯಾನ್ಸರ್ ಗೂ ತಿರುಗಬಹುದು. ಈ ಮೂಲಕ ಕರಬೂಜದ ಹಣ್ಣು ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ.

ನಿರ್ಜಲೀಕರಣದಿಂದ ರಕ್ಷಿಸುತ್ತದೆ
ಇದರಲ್ಲಿ ಸಹಾ ಕಲ್ಲಂಗಡಿ ಹಣ್ಣಿನಂತೆಯೇ ಹೆಚ್ಚಿನ ನೀರಿನಂಶವಿರುವ ಕಾರಣ ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸಿ ಈ ಮೂಲಕ ಎದುರಾಗುವ ಶಕ್ತಿಯ ಕೊರತೆ ಹಾಗೂ ತಲೆತಿರುಗಿ ಬೀಳುವ ಸಾಧ್ಯತೆಗಳನ್ನು ಇಲ್ಲವಾಗಿಸುತ್ತದೆ.

ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ
ಈ ಹಣ್ಣಿನಲ್ಲಿರುವ ಆಕ್ಸಿಕೈನ್ ಎಂಬ ಪೋಷಕಾಂಶಕ್ಕೆ ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನಿವಾರಿಸುವ ಶಕ್ತಿ ಇದೆ. ಕೇಸರಿ ಕರಬೂಜ ಹಣ್ಣಿನ ನಿಯಮಿತ ಸೇವನೆಯಿಂದ ಮೂತ್ರಪಿಂಡಗಳಲ್ಲಿರುವ ಕಲ್ಮಶಗಳು ನಿವಾರಣೆಯಾಗುವ ಮೂಲಕ ಇಲ್ಲಿ ಇನ್ನಷ್ಟು ಕಲ್ಲುಗಳಾಗುವುದರಿಂದ ರಕ್ಷಿಸುತ್ತದೆ.

ತಡೆತಡೆದು ಬರುವ ನಿದ್ದೆಯ ತೊಂದರೆಯನ್ನು ಗುಣಪಡಿಸುತ್ತದೆ
ಕೆಲವರಿಗೆ ರಾತ್ರಿಯಿಡೀ ಕೆಲವಾರು ಬಾರಿ ಎಚ್ಚರಾಗುತ್ತಾ ಇರುತ್ತದೆ. ಇವರು ರಾತ್ರಿ ಮಲಗುವ ಮುನ್ನ, ಈ ಹಣ್ಣುಗಳನ್ನು ಸೇವಿಸಿದರೆ ಗಾಢ ನಿದ್ದೆ ಆವರಿಸಲು ಸಾಧ್ಯವಾಗುತ್ತದೆ. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ನರಗಳನ್ನು ಸಡಿಲಿಸಿ ಮೆದುಳಿಗೆ ಹೆಚ್ಚಿನ ರಕ್ತಪರಿಚಲನೆ ಒದಗಿಸುವ ಮೂಲಕ ಮೆದುಳು ನಡೆಸುವ ಅನೈಚ್ಛಿಕ ಕಾರ್ಯಗಳು ಅಬಾಧಿತವಾಗಿ ನಡೆದು ಸುಖನಿದ್ದೆ ಆವರಿಸುತ್ತದೆ.

ಗರ್ಭಿಣಿಯರಿಗೂ ಯೋಗ್ಯವಾಗಿದೆ
ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸುತ್ತದೆ. ಹಾಗೂ ಗರ್ಭಿಣಿಯಾಗಬಯಸುವ ಮಹಿಳೆಯರಲ್ಲಿ ಒಂದು ವೇಳೆ ಗರ್ಭನಾಳದ ತೊಂದರೆ (neural tube defect) ಇದ್ದು ಗರ್ಭ ನಿಲ್ಲದೇ ಇದ್ದರೆ ಈ ಹಣ್ಣಿನ ಸೇವನೆಯಿಂದ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚುತ್ತದೆ.

ಮಾಸಿಕ ದಿನಗಳ ಸೆಡೆತವನ್ನು ಕಡಿಮೆ ಮಾಡುತ್ತದೆ
ಮಾಸಿಕ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಕೆಳಹೊಟ್ಟೆಯ ಸೆಡೆತ ಹಾಗೂ ನೋವು ಹೆಚ್ಚಾಗಿದ್ದರೆ ಇದಕ್ಕೂ ಹಿಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೇಸರಿ ಕರಬೂಜಗಳನ್ನು ತಿನ್ನುವ ಮೂಲಕ ಈ ನೋವು ಕನಿಷ್ಟವಾಗುತ್ತದೆ. ಇದರಲ್ಲಿರುವ ರಕ್ತಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣ ರಕ್ತವನ್ನು ಹೆಪ್ಪುಗಟ್ಟಲು ಬಿಡದೇ ಹಾಗೂ ಹೆಪ್ಪುಗಟ್ಟಿದ್ದ ರಕ್ತವನ್ನು ಸಡಿಲಿಸಿ ಸುಲಭವಾಗಿ ವಿಸರ್ಜನೆಯಾಗುವಂತೆ ಮಾಡುವ ಮೂಲಕ ಮಾಸಿಕ ದಿನಗಳ ನೋವನ್ನು ಕಡಿಮೆ ಮಾಡುತ್ತದೆ.

ಧೂಮಪಾನ ವರ್ಜಿಸಲು ನೆರವಾಗುತ್ತದೆ
ಕೇಸರಿ ಕರಬೂಜದಲ್ಲಿರುವ ಕೆಲವು ಪೋಷಕಾಂಶಗಳು ವ್ಯಸನದಿಂದ ಹೊರಬರಲು ಮಾನಸಿಕ ಬಲ ನೀಡುತ್ತವೆ. ಈ ಬಲ ಧೂಮಪಾನ, ಮದ್ಯಪಾನಗಳಂತಹ ಅನಾರೋಗ್ಯಕರ ಅಭ್ಯಾಸಗಳನ್ನು ವರ್ಜಿಸಲು ನೆರವಾಗುತ್ತದೆ. ಈ ಹಣ್ಣಿನ ಸೇವನೆಯಿಂದ ಶ್ವಾಸಕೋಶಗಳಿಗೆ ಹೆಚ್ಚಿನ ಪೋಷಣೆ ದೊರಕುತ್ತದೆ ಹಾಗೂ ದೇಹಕ್ಕೆ ಅಭ್ಯಾಸವಾಗಿ ಹೋಗಿರುವ ನಿಕೋಟಿನ್ ನ ಪ್ರಭಾವದಿಂದ ಶೀಘ್ರವಾಗಿ ಹೊರಬರಲೂ ನೆರವಾಗುತ್ತದೆ.

ಒತ್ತಡದಿಂದ ರಕ್ಷಿಸುತ್ತದೆ
ಒಂದು ವೇಳೆ ನಿಮಗೆ ಮಾನಸಿಕ ಒತ್ತಡವಿದ್ದರೆ ಇದಕ್ಕೆ ಮಾತ್ರೆಗಳನ್ನು ನುಂಗದೇ ಕೇಸರಿ ಕರಬೂಜವನ್ನು ನಿಮ್ಮ ಆಹಾರದೊಡನೆ ಸೇವಿಸಿ. ಇದರಿಂದ ಮೆದುಳಿಗೆ ಹೆಚ್ಚಿನ ಆಮ್ಲಜನಕ ದೊರಕುತ್ತದೆ ಹಾಗೂ ತನ್ಮೂಲಕ ಮೆದುಳಿನ ಒತ್ತಡವನ್ನು ನಿವಾರಿಸಿ ನಿರಾಳವಾಗಿರಲು ನೆರವಾಗುತ್ತದೆ.

ಹಲ್ಲು ನೋವಿನಿಂದ ರಕ್ಷಿಸುತ್ತದೆ
ಈ ಹಣ್ಣಿನ ಸಿಪ್ಪೆಯಲ್ಲಿ ಹಲ್ಲುನೋವನ್ನು ಗುಣಪಡಿಸಲು ಸಮರ್ಥವಾದ ಪೋಷಕಾಂಶಗಳಿವೆ. ಹಲ್ಲು ನೋವಿದ್ದಾಗ ಈ ಸಿಪ್ಪೆಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಣಿಸಿ ಸೋಸಿ ಸಂಗ್ರಹಿಸಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳಬೇಕು.

ಮೂಳೆಗಳನ್ನು ದೃಢಪಡಿಸುತ್ತದೆ
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಸ್ನಾಯು ಹಾಗೂ ಮೂಳೆಗಳಲ್ಲಿ ಕೊಲ್ಯಾಜೆನ್ ಎಂಬ ಕಣವನ್ನು ಹೆಚ್ಚು ಉತ್ಪಾದಿಸಲು ನೆರವಾಗುಗ ಮೂಲಕ ಸ್ನಾಯು-ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ.

ಕೆಮ್ಮಿನಿಂದ ರಕ್ಷಣೆ ಒದಗಿಸುತ್ತದೆ
ಒಂದು ವೇಳೆ ಗಂಟಲಿನಲ್ಲಿ ಕಫ ತುಂಬಿಕೊಂಡು ಕೆಮ್ಮು ಸತತವಾಗಿ ಬಾಧಿಸುತ್ತಿದ್ದರೆ ಈ ಹಣ್ಣುಗಳನ್ನು ತಿನ್ನುವ ಮೂಲಕ ಕಫ ಸಡಿಲಗೊಂಡು ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಕೆಮ್ಮು ಸಹಾ ಇಲ್ಲವಾಗುತ್ತದೆ.



Click it and Unblock the Notifications











