ಅರೆ ವಾಹ್! ಗಣಪನಿಗೆ ಪ್ರಿಯವಾದ ಮೋದಕದಲ್ಲಿ ಇಷ್ಟೊಂದು ಪ್ರಯೋಜನಗಳಿವೆಯೇ?

By: Arshad
Subscribe to Boldsky

ಮೋದಕ, ಗಣಪನಿಗೆ ಪ್ರಿಯವಾದ ಈ ಸಿಹಿತಿಂಡಿ ಅಕ್ಕಿಹಿಟ್ಟು ಅಥವಾ ಮೆಕ್ಕೆಜೋಳದ ಹಿಟ್ಟು, ಕಾಯಿತುರಿ ಮತ್ತು ಬೆಲ್ಲದ ಹೂರಣದಿಂದ ತಯಾರಿಸಲಾಗುತ್ತದೆ. ವಿಶೇಷವಾಗಿ ಗಣೇಶ ಚತುರ್ಥಿಯ ಸಮಯದಲ್ಲಿ ಮೋದಕವನ್ನು ಮನೆ ಮನೆಯಲ್ಲಿ ತಯಾರಿಸಲಾಗುತ್ತದೆ. ಇದು ಸಿಹಿಯಾದ ಮತ್ತು ಎಲ್ಲರೂ ಮೆಚ್ಚುವ ಪ್ರಸಾದವಾಗಿದೆ. ಆದರೆ ಇದು ಅತಿ ಹೆಚ್ಚಿನ ಸಕ್ಕರೆ ಹೊಂದಿರುವ ಕಾರಣ ಮಧುಮೇಹಿಗಳು ತಮ್ಮ ಚಾಪಲ್ಯವನ್ನು ಕೊಂಚ ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಗಣೇಶ ಮತ್ತೆ ಬರುವನು, ರುಚಿಯಾದ ಮೋದಕ ಮಾಡಿ

ಆದರೆ ಮೋದಕವನ್ನು ಕೊಂಚವೇ ಬದಲಿಸಿ ಆರೋಗ್ಯಕರವಾಗಿಸುವ ಮೂಲಕ ಇದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಸಾಂಪ್ರಾದಾಯಿಕ ಕಾಯಿತುರಿ ಮತ್ತು ಬೆಲ್ಲದ ಬದಲು ಬೀಟ್ ರೂಟ್, ಓಟ್ಸ್ ಮತ್ತು ಹಣ್ಣುಗಳ ತುರಿಯನ್ನು ಬಳಸಿ ಹೂರಣವನ್ನು ತಯಾರಿಸುವ ಮೂಲಕ ಮಧುಮೇಹಿಗಳೂ ಸೇವಿಸಬಹುದಾದ ಆರೋಗ್ಯಕರ ಮೋದಕವನ್ನು ತಯಾರಿಸಬಹುದು. ಅಲ್ಲದೇ ಹುರಿಯಲು ಎಣ್ಣೆಯ ಬದಲು ಆರೋಗ್ಯಕರವಾದ ತುಪ್ಪವನ್ನು ಬಳಸುವುದರಿಂದ ಇನ್ನಷ್ಟು ಹೆಚ್ಚು ಆರೋಗ್ಯಕರವಾಗಿಸಬಹುದು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ಒಣಫಲಗಳಿಂದ ತುಂಬಿದ ಮೋದಕ

ಒಣಫಲಗಳಿಂದ ತುಂಬಿದ ಮೋದಕ

ಒಣಫಲಗಳು ಹಾಗೂ ಇತರ ಹಣ್ಣುಗಳ ತಿರುಳಿನಿಂದ ಕೂಡಿದ ಹೂರಣ ಹೊಂದಿದ ಮೋದಕ ಎಲ್ಲರ ಮನಗೆಲ್ಲುತ್ತದೆ. ಮಧುಮೇಹಿಗಳೂ ಸೇವಿಸಬಹುದಾದ ಮೋದಕ ಜಿಹ್ವಾಚಾಪಲ್ಯವನ್ನು ತಣಿಸುವುದರೊಂದಿಗೇ ಆರೋಗ್ಯವನ್ನೂ ಕಾಪಾಡುತ್ತದೆ. ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲ, ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ರಕ್ತನಾಳಗಳಲ್ಲಿ ಜಿಡ್ಡು ಸಂಗ್ರಹವಾಗದಂತೆ ತಡೆಯುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಎಲ್ಲಾ ಗುಣಗಳಿಂದ ಈ ಮೋದಕ ಎಲ್ಲರಿಗೂ ಪ್ರಿಯವಾಗಿದೆ.

ಹಣ್ಣುಗಳಿಂದ ಕೂಡಿದ ಮೋದಕ

ಹಣ್ಣುಗಳಿಂದ ಕೂಡಿದ ಮೋದಕ

ಹಣ್ಣುಗಳ ತಿರುಳಿನಲ್ಲಿ ವಿಟಮಿನ್ನುಗಳು, ಕರಗುವ ಹಾಗೂ ಕರಗದ ನಾರು, ಪೊಟ್ಯಾಶಿಯಂ ಹಾಗೂ ಫೋಲಿಕ್ ಆಮ್ಲಗಳಿವೆ. ಈ ಹಣ್ಣುಗಳ ತಿರುಳನ್ನು ಹೊಂದಿದ ಮೋದಕಗಳು ಆರೋಗ್ಯಕರ ಹಾಗೂ ದೇಹದಾರ್ಢ್ಯತೆಯನ್ನು ಉಳಿಸಿಕೊಳ್ಳಲು ಹಾಗೂ ಚಟುವಟಿಕೆಯಿಂದ ಕೂಡಿರಲು ನೆರವಾಗುತ್ತವೆ.

ಹೆಸರು ಬೇಳೆಯ ಮೋದಕ ರೆಸಿಪಿ

ಓಟ್ಸ್ ನಿಂದ ಕೂಡಿದ ಮೋದಕ

ಓಟ್ಸ್ ನಿಂದ ಕೂಡಿದ ಮೋದಕ

ಇನ್ನೊಂದು ವಿಧಾನದಲ್ಲಿ ಹೂರಣವನ್ನು ಕಾಯಿತುರಿಯ ಬದಲಿಗೆ ಓಟ್ಸ್ ರವೆಯನ್ನು ಬಳಸಿಯೂ ತಯಾರಿಸಬಹುದು. ವಿಶೇಷವಾಗಿ ಒಂದು ಕಪ್ ಓಟ್ಸ್ ಉಪಾಹಾರಕ್ಕೆ ಉತ್ತಮ ಪರ್ಯಾಯವಾಗಿದೆ. ಇದೇ ಕಾರಣಕ್ಕೆ ಓಟ್ಸ್ ಹೂರಣದ ಮೋದಕವೂ ಆರೋಗ್ಯಕರ ಆಯ್ಕೆಯಾಗಿದೆ.

ಓಟ್ಸ್ ನಿಂದ ಕೂಡಿದ ಮೋದಕ

ಓಟ್ಸ್ ನಿಂದ ಕೂಡಿದ ಮೋದಕ

ಓಟ್ಸ್ ನಲ್ಲಿ ಹೆಚ್ಚಿನ ಬೀಟಾ-ಗ್ಲುಕಾನ್ ನಾರು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಇವು ಕೊಲೆಸ್ಟ್ರಾಲ್ ನಿಯಂತ್ರಿಸಲು ನೆರವಾಗುತ್ತವೆ. ಈ ಮೋದಕಗಳನ್ನು ಹುರಿಯಲು ತುಪ್ಪ ಬಳಸಿದ್ದರೂ ಕೊಲೆಸ್ಟ್ರಾಲ್ ಏರುವ ಭಯವಿಲ್ಲವಾದುದರಿಂದ ಯಾವುದೇ ಭಯವಿಲ್ಲದೇ ಈ ಮೋದಕಗಳನ್ನು ಸೇವಿಸಬಹುದು.

ಬೀಟ್ರೂಟ್ ಹೂರಣದ ಮೋದಕ

ಬೀಟ್ರೂಟ್ ಹೂರಣದ ಮೋದಕ

ಬೀಟ್ರೂಟ್ ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಸ್ನಾಯುಗಳ ಚಲನೆಯನ್ನು ಸಡಿಲಗೊಳಿಸುತ್ತದೆ. ಮ್ಯಾಂಗನೀನ್ ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ ಹಾಗೂ ಯಕೃತ್, ಮೇದೋಜೀರಕ ಗ್ರಂಥಿ ಹಾಗೂ ಮೂತ್ರಪಿಂಡಗಳ ಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಇಂತಹ ಹೆಚ್ಚಿನ ಪೋಷಕಾಂಶವುಳ್ಳ ಬೀಟ್ರೂಟ್ ತುರಿಯನ್ನು ಹೂರಣವಾಗಿ ಬಳಸುವ ಮೂಲಕ ಮೋದಕವನ್ನು ಆರೋಗ್ಯಕರವಾಗಿ ತಯಾರಿಸಿ ಸೇವಿಸಿ ಆರೋಗ್ಯದ ಜೊತೆಗೇ ಹಬ್ಬದ ಸವಿಯನ್ನೂ ಹೆಚ್ಚಿಸಬಹುದು.

English summary

Health Benefits Of Modak

Modak is an Indian sweet made of rice flour or corn flour with grated coconut and jaggery as stuffing. This is one of the well known sweets that is prepared especially during the Ganesh Chaturthi festival. Although, it is one of the delicious prasads that one yearns for, yet with the high level of health hazards especially if you are a diabetic patient, you always reconsider your decision before having modaks.
Subscribe Newsletter