For Quick Alerts
ALLOW NOTIFICATIONS  
For Daily Alerts

ಆರೋಗ್ಯ ಸಮಸ್ಯೆ ನಿವಾರಣೆಗೆ 'ಒಣ ತೆಂಗಿನಕಾಯಿ' ಸೇವನೆಯೊಂದೇ ದಾರಿ

ಇದ್ದರೂ ಸಾವಿರ ಸತ್ತರೂ ಸಾವಿರ ಎಂಬ ಗಾದೆಗೆ ಕನ್ನಡಿ ಹಿಡಿಯುವುದು ತೆಂಗಿನಕಾಯಿ. ನಿಜ, ಹಸಿ ತೆಂಗಿನಕಾಯಿಯಿಂದ ಎಷ್ಟು ಪ್ರಯೋಜನ ಪಡೆಯಬಹುದೋ ಅಷ್ಟೇ ಉಪಯೋಗಗಳನ್ನು ಒಣಗಿದ ತೆಂಗಿನಕಾಯಿಯಿಂದ ಪಡೆದುಕೊಳ್ಳಬಹುದು.

By Manu
|

ತೆಂಗಿನಕಾಯಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವಂತದ್ದು. ಆರೋಗ್ಯದ ವಿಚಾರದಲ್ಲಿ ಹಾಗೂ ಧಾರ್ಮಿಕ ವಿಷಯದಲ್ಲಿ ಇದರ ಪಾತ್ರ ಮಹತ್ವವಾದದ್ದು. ಆರೋಗ್ಯ ಕಾಪಾಡುವ ತೆಂಗಿನಕಾಯಿ ಒಣಗಿದ್ದರೆ ಅದರ ಪ್ರಯೋಜನವೇನು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಇದ್ದರೂ ಸಾವಿರ ಸತ್ತರೂ ಸಾವಿರ ಎಂಬ ಗಾದೆಗೆ ಕನ್ನಡಿ ಹಿಡಿಯುವುದು ತೆಂಗಿನಕಾಯಿ. ನಿಜ, ಹಸಿ ತೆಂಗಿನಕಾಯಿಯಿಂದ ಎಷ್ಟು ಪ್ರಯೋಜನ ಪಡೆಯಬಹುದೋ ಅಷ್ಟೇ ಉಪಯೋಗಗಳನ್ನು ಒಣಗಿದ ತೆಂಗಿನಕಾಯಿಯಿಂದ ಪಡೆದುಕೊಳ್ಳಬಹುದು. ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ

ಪ್ರಪಂಚದಾದ್ಯಂತ ಉಪಯೋಗಿಸುವ ಈ ತೆಂಗಿನಕಾಯಿಯಲ್ಲಿ ಆರೋಗ್ಯಕರ ಅಂಶ ಹಲವಾರಿದೆ. ಒಣಗಿದ ತೆಂಗಿನಕಾಯಿಯು ಆಹಾರದ ನಾರು, ತಾಮ್ರ, ಮ್ಯಾಂಗನೀಸ್, ಮತ್ತು ಸೆಲೆನಿಯಂ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ರುಚಿ ಹಾಗೂ ಪರಿಮಳದ ವಿಚಾರದಲ್ಲೂ ಉತ್ತಮ ಗುಣಮಟ್ಟ ಹೊಂದಿರುವ ಇದರ ಬಳಕೆಯಿಂದ ಉಂಟಾಗುವ ಪ್ರಯೋಜನಗಳನ್ನು ತಿಳಿಯೋಣ ಬನ್ನಿ....

ಆರೋಗ್ಯಕರ ಹೃದಯ

ಆರೋಗ್ಯಕರ ಹೃದಯ

ಒಣಗಿದ ತೆಂಗಿನಕಾಯಿಯಲ್ಲಿ ನಾರಿನಂಶ ಸಮೃದ್ಧವಾಗಿರುತ್ತದೆ. ಪುರುಷರ ದೇಹಕ್ಕೆ 38 ಗ್ರಾಂ ಆರೋಗ್ಯಕರ ನಾರಿನಂಶ ಹಾಗೂ ಮಹಿಳೆಯರ ದೇಹಕ್ಕೆ 25 ಗ್ರಾಂ ನಾರಿನಂಶದ ಅಗತ್ಯವಿರುತ್ತದೆ. ಒಣ ತೆಂಗಿನಕಾಯಿ ಇದರ ಪೂರೈಕೆಯನ್ನು ಸರಾಗವಾಗಿ ನಿರ್ವಹಿಸುತ್ತದೆ. ಅಲ್ಲದೆ ಇದರ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ದೇಹಕ್ಕೆ ಬೇಕಾದ ಸೂಕ್ತ ನಾರಿನಂಶವನ್ನು ಪೂರೈಸುತ್ತದೆ. ಹೃದಯ ರೋಗದ ಲಕ್ಷಣಗಳಿವು,,,ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಮೆದುಳಿನ ಕಾರ್ಯದ ಸುಧಾರಣೆ

ಮೆದುಳಿನ ಕಾರ್ಯದ ಸುಧಾರಣೆ

ಮೆದುಳಿನ ಆರೋಗ್ಯ ಉತ್ತಮವಾಗಿರಬೇಕೆಂದು ಬಯಸುವುದಾದರೆ ಒಣ ಕೊಬ್ಬರಿಯನ್ನು ಸೇವಿಸಬೇಕು. ಮೆದುಳಿನ ಆರೋಗ್ಯ ಕಾಪಾಡುವುದರ ಜೊತೆಗೆ ಅಲ್ಝೈಮರ್ ಎಂಬ ಘೋರ ಕಾಯಿಲೆಯನ್ನು ತಡೆಯಲು ಸಹಾಯಮಾಡುತ್ತದೆ. ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

ರೋಗನಿರೋಧಕ ಶಕ್ತಿ ಹೆಚ್ಚಳ

ರೋಗನಿರೋಧಕ ಶಕ್ತಿ ಹೆಚ್ಚಳ

ಒಣಗಿದ ತೆಂಗಿನಕಾಯಿಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಸಹಾಯಮಾಡುತ್ತದೆ. ಇದು ಸೆಲೆನಿಯಂ ಸೆಲೆನೋ ಪ್ರೋಟಿನ್‍ಗಳನ್ನು ಉತ್ಪಾದಿಸಿ ಅನೇಕ ರೋಗಗಳನ್ನು ತಡೆಗಟ್ಟುತ್ತದೆ.

ಪರುಷರಲ್ಲಿ ಬಂಜೆತನದ ನಿಯಂತ್ರಣ

ಪರುಷರಲ್ಲಿ ಬಂಜೆತನದ ನಿಯಂತ್ರಣ

ಒಣತೆಂಗಿನಕಾಯಿಯ ಸೇವನೆಯಿಂದ ಸಮೃದ್ಧವಾದ ಸೆಲೆನಿಯಮ್‍ಅನ್ನು ಪಡೆಯಬಹುದು. ಇದು ಪುರುಷರಲ್ಲಿ ಉಂಟಾಗುವ ಬಂಜೆತನವನ್ನು ನಿಯಂತ್ರಿಸುತ್ತದೆ.

ರಕ್ತಹೀನತೆಯ ನಿಯಂತ್ರಣ

ರಕ್ತಹೀನತೆಯ ನಿಯಂತ್ರಣ

ಒಂದು ನಿದಿಷ್ಟ ವಯಸ್ಸಿನ ನಂತರ ದೇಹದಲ್ಲಿ ರಕ್ತಹೀನತೆಯ ಸಮಸ್ಯೆ ಕಣಿಸಿಕೊಳ್ಳುವುದು ಸಹಜ. ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆ ಉಂಟಾಗಿ ತೀವ್ರತರದ ಆರೋಗ್ಯ ಸಮಸ್ಯೆ ಉಂಟಾಗಬಹುದು. ಒಣ ತೆಂಗಿನಕಾಯಿ ಹೆಚ್ಚು ಕಬ್ಬಿಣಾಂಶ ನೀಡಿ ಆರೋಗ್ಯವನ್ನು ಕಾಪಾಡುತ್ತದೆ.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ಒಣ ತೆಂಗಿನಕಾಯಿಯಲ್ಲಿರುವ ಅನೇಕ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಒಣತೆಂಗಿನಕಾಯಿ ಸೇವನೆಯಿಂದ ಕೊಲೊನ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಅನೇಕ ಬಗೆಯ ಕ್ಯಾನ್ಸರ್‌ಗಳನ್ನು ತಡೆಯಬಹುದು.

ಜೀರ್ಣಾಂಗಕ್ಕೆ ಅನುಕೂಲ

ಜೀರ್ಣಾಂಗಕ್ಕೆ ಅನುಕೂಲ

ಇದರ ಸೇವನೆಯಿಂದ ಜೀರ್ಣಾಂಗ ಕ್ರಿಯೆಯು ಸುಗಮವಾಗುತ್ತದೆ. ಜೊತೆಗೆ ಮಲಬದ್ಧತೆ, ಅಲ್ಸರ್, ಹೆಮೊರೊಯಿಡ್ಸ್‍ನಂತಹ ಅನೇಕ ತೊಂದರೆಗಳನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಯಾವುದೇ ಅಡ್ಡ ಪರಿಣಾಮ ಬೀರದ ಈ ತೆಂಗಿನಕಾಯಿಯನ್ನು ಎಲ್ಲಾ ವಯಸ್ಸಿನವರೂ ಸ್ವೀಕರಿಸಬಹುದು.

ಸಂಧಿವಾತ ತಡೆಯುವುದು

ಸಂಧಿವಾತ ತಡೆಯುವುದು

ಪ್ರತಿದಿನ ಒಣ ತೆಂಗಿನಕಾಯಿಯ ಸೇವನೆಯಿಂದ ಸಂಧಿವಾತ ಹಾಗೂ ಆಸ್ಟಿಯೊಪೊರೋಸಿಸ್‍ನಂತಹ ತೊಂದರೆಯನ್ನು ತಡೆಯುವುದು. ಜೊತೆಗೆ ಸಂಯೋಜಕ ಅಂಗಾಂಶಗಳನ್ನು ಬಲಪಡಿಸಲು ಇದು ಸಹಾಯಮಾಡುತ್ತದೆ.

English summary

Health Benefits Of Dry Coconut

if you really want a healthy life without compromising on the taste and aroma, dry coconut is the best option. Go through these 8 health benefits of dry coconut to know how important it is to include dry coconut.
X
Desktop Bottom Promotion