For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಅಸ್ತಮಾ ರೋಗವನ್ನು ನಿಯಂತ್ರಿಸಲು 'ಜೀನ್ ಥೆರಪಿ'...

By Manu
|

ಸಂಶೋಧಕರು ಇತ್ತೀಚೆಗೆ ಕಂಡುಕೊಂಡಿರುವ ಜೀನ್ ಥೆರಪಿ ಅಥವಾ ವಂಶವಾಹಿನಿಯ ಸಂಜ್ಞೆಗಳನ್ನೇ ಬದಲಿಸುವ ತಂತ್ರಜ್ಞಾನದ ಮೂಲಕ ದೇಹದ ರೋಗ ನಿರೋಧಕ ವ್ಯವಸ್ಥೆಯ ಕೆಲವು ಪ್ರತಿಕ್ರಿಯೆಗಳನ್ನು ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ, ಇದರಿಂದ ಅಸ್ತಮಾ ಅಥವಾ ಆಹಾರದ ಅಲರ್ಜಿಯಂತಹ ಅಲರ್ಜಿಕಾರಕವಾದ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲವಾಗಿಸಲು ಸಾಧ್ಯವಾಗುತ್ತದೆ.

"ಓರ್ವ ವ್ಯಕ್ತಿಗೆ ಯಾವುದಾದರೂ ಕಣದ ಅಲರ್ಜಿ ಇದ್ದರೆ ಇವರ ಅಲರ್ಜಿಯ ಪರಿಣಾಮ ವ್ಯಕ್ತವಾಗಲು ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಪಟ್ಟ ಜೀವಕೋಶಗಳು ಅಲರ್ಜಿಯುಂಟು ಮಾಡುವ ಕಣದ ಪ್ರೋಟೀನುಗಳಿಗೆ ಪ್ರತಿಕ್ರಿಯೆ ನೀಡುವುದೇ ಆಗಿದೆ" ಎಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ರೇ ಸ್ಟೆಪ್ಟೋ ರವರು ತಿಳಿಸಿದ್ದಾರೆ.

Asthma

ಈ ಸಂಶೋಧನೆಯ ಫಲಿತಾಂಶದ ಪ್ರಕಾರ ಈ ಚಿಕಿತ್ಸೆಯನ್ನು ಒಂದು ಬಾರಿ ಪಡೆದುಕೊಂಡರೆ ಜೀವನಪರ್ಯಂತ ಅಸ್ತಮಾ ಹಾಗೂ ಇತರ ಅಲರ್ಜಿಕಾರಕ ಕಣಗಳ ಪ್ರತಿಕ್ರಿಯೆಯಿಂದ ರಕ್ಷಣೆ ಪಡೆಯಬಹುದು. ಕೆಲವರಿಗೆ ಶೇಂಗಾಬೀಜ, ಜೇನಿನ ಕಡಿತ, ಲೋಳೆಮೀನಿನ ಸ್ಪರ್ಶ ಅಥವಾ ಇನ್ನಾವುದಾದರೂ ಕಣಗಳ ಅಲರ್ಜಿ ತೀವ್ರತರವಾಗಿದ್ದು ಈ ಚಿಕಿತ್ಸೆಯ ಮೂಲಕ ಇವರ ರೋಗ ನಿರೋಧಕ ವ್ಯವಸ್ಥೆಯ ಸಂವೇದನೆಯನ್ನು ಕಡಿಮೆಗೊಳಿಸಿ ಅಲರ್ಜಿ ತರಿಸುವ ಕಣಗಳ ಪ್ರೋಟೀನುಗಳನ್ನು ಸಹಿಸುವಂತೆ ಮಾಡಲಾಗುತ್ತದೆ.

ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

"ಅಸ್ತಮಾ ಹಾಗೂ ಇತರ ಅಲರ್ಜಿಕಾರಕ ಸ್ಥಿತಿಗಳಿಗೆ ಕಾರಣವಾಗುವ ರೋಗ ನಿರೋಧಕ ಜೀವಕೋಶಗಳು ಅಥವಾ ಟಿ-ಸೆಲ್ಸ್ ಅಲರ್ಜಿಗಳಿಗೆ ನೀಡುವ ಚಿಕಿತ್ಸೆಗಳಿಗೆ ಒಂದು ರೀತಿಯ ಪ್ರತಿರೋಧದ ಸ್ಮರಣಶಕ್ತಿಯನ್ನು ಬೆಳೆಸಿಕೊಂಡುಬಿಡುತ್ತವೆ ಹಾಗೂ ಚಿಕಿತ್ಸೆಗೆ ಬಗ್ಗದೇ ಇರುವುದು ರೋಗ ವಾಸಿ ಮಾಡಲು ಪ್ರಬಲ ಸವಾಲೊಡ್ಡುತ್ತದೆ" ಎಂದು ಸ್ಟೆಪ್ಟೋ ರವರು ತಿಳಿಸುತ್ತಾರೆ.

"ಈಗ ಜೀನ್ ಥೆರಪಿ ಮೂಲಕ ಈ ಟೆ-ಸೆಲ್‌ಗಳ ಸ್ಮರಣಶಕ್ತಿಯನ್ನು ಒರೆಸಿ ಅಥವಾ ಇಲ್ಲವಾಗಿಸಿ ಈ ಮೂಲಕ ರೋಗ ನಿರೋಧಕ ಶಕ್ತಿಯ ಸಂವೇದನೆಯನ್ನು ಕಡಿಮೆಗೊಳಿಸಿ ಪ್ರೋಟೀನ್ ಅನ್ನು ಸಹಿಸುವಂತೆ ರೋಗ ನಿರೋಧಕ ಶಕ್ತಿಯನ್ನು ಮಾರ್ಪಡಿಸುವ ತಂತ್ರವನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶಸ್ಸು ಕಾಣಲಾಗಿದೆ" JCI Insight ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ವಿವರದ ಪ್ರಕಾರ ಈ ಸಂಶೋಧನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಪ್ರಾಣಿಗಳ ರಕ್ತದ ಜೀವಕೋಶಗಳನ್ನು ಪ್ರತ್ಯೇಕಿಸಿ ಇದರಲ್ಲಿ ಅಲರ್ಜಿಕಾರಕ ಪ್ರೋಟೀನ್ ಕಣವನ್ನು ನಿಯಂತ್ರಿಸುವ ವಂಶವಾಹಿನಿಯನ್ನು ಸೇರಿಸಿ ಮತ್ತೆ ಪ್ರಾಣಿಯ ರಕ್ತಕ್ಕೆ ಸೇರಿಸಿದ್ದರು.

ಈ ರೀತಿಯಾಗಿ ಮಾರ್ಪಾಡು ಹೊಂದಿದ ಜೀವಕೋಶಗಳು ಹೊಸ ರಕ್ತದ ಕಣಗಳನ್ನು ಉತ್ಪಾದಿಸಿ ಈ ಹೊಸ ರಕ್ತಕಣಗಳು ಕೆಲವು ರೋಗ ನಿರೋಧಕ ವ್ಯವಸ್ಥೆ ಅಲರ್ಜಿಕಾರಕ ಕಣಗಳಿಗೆ ತೋರುವ ಸಂವೇದನೆಯನ್ನು "ಬಂದ್" ಮಾಡುವ ಮೂಲಕ ಅಲರ್ಜಿಯಾಗದಂತೆ ನೋಡಿಕೊಳ್ಳುತ್ತವೆ. ಅಂತಿಮವಾಗಿ ಒಂದೇ ಒಂದು ಇಂಜೆಕ್ಷನ್ ಮೂಲಕ ಅಲರ್ಜಿಯ ತೊಂದರೆ ಹೊಂದಿರುವ ವ್ಯಕ್ತಿಗಳ ದೇಹ ಜೀವಮಾನವಿಡೀ ಈ ಅಲರ್ಜಿಗೆ ತುತ್ತಾಗದಿರುವಂತೆ ಸಾಧ್ಯವಾಗಲಿದೆ ಎಂದು ಸ್ಟೆಪ್ಟೋ ರವರು ತಿಳಿಸುತ್ತಾರೆ.

English summary

Gene Therapy Helps Prevent Asthma - Study

These are some of the people who were left to die alone. And the sad part is, nobody cared to even check on them for years! Even after their death, their bodies were found only after a few years, where no one had any idea of their death. Some of their neighbours did not even pay attention to the foul smell that kept emitting from these houses. These cases of unfortunate people laying dead for years makes us realise what kind of a world we are living in!
X
Desktop Bottom Promotion