ಎತ್ತರವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಪ್ರೋಟೀನ್‌ಯುಕ್ತ ಆಹಾರಗಳು

By: Arshad
Subscribe to Boldsky

ಒಂದು ವೇಳೆ ನಿಮ್ಮ ಎತ್ತರ ಸಾಮಾನ್ಯಕ್ಕಿಂತ ಕಡಿಮೆಯಿದ್ದು ನಿಮ್ಮ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದರೆ ಎತ್ತರ ಹೆಚ್ಚಿಸುವ ಆಹಾರಗಳನ್ನೇಕೆ ನೀವು ಪ್ರಯತ್ನಿಸಬಾರದು? ಎತ್ತರವನ್ನು HGH ಅಥವಾ Human Growth Hormone ಎಂಬ ರಸದೂತ ನಿಯಂತ್ರಿಸುತ್ತಿದ್ದು ಇದು ನಮ್ಮ ದೇಹದಲ್ಲಿರುವ ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಕೆಲವು ಪ್ರೋಟೀನುಗಳು ಮತ್ತು ಪೋಷಕಾಂಶಗಳ ಕೊರತೆಯಿಂದ ಅಗತ್ಯವಿದ್ದಷ್ಟು ರಸದೂತ ಸ್ರವಿಸಿರದೇ ಇರುವ ಕಾರಣ ಎತ್ತರ ಕಡಿಮೆಯಾಗಿರುತ್ತದೆ.

ಆದರೆ ಈ ಗ್ರಂಥಿಯನ್ನು ಪ್ರಚೋದಿಸಿ ಇನ್ನೂ ಕೊಂಚ ರಸದೂತವನ್ನು ಸ್ರವಿಸುವಂತೆ ಮಾಡಿದರೆ ಇನ್ನೂ ಕೊಂಚ ಹೆಚ್ಚು ಎತ್ತರ ಪಡೆಯಬಹುದು ಎಂದರೆ ನಂಬಲಿಕ್ಕೆ ಸಾಧ್ಯವೇ? ಹೌದು, ಕೆಲವು ವಿಟಮಿನ್ನು ಹಾಗೂ ಪ್ರೋಟೀನುಗಳ ಸೇವನೆಯಿಂದ ಕೊಂಚವಾದರೂ ಎತ್ತರವನ್ನು ಹೆಚ್ಚಿಸಲು ಸಾಧ್ಯ....

ವಿಟಮಿನ್ ಡಿ

ವಿಟಮಿನ್ ಡಿ

ಎತ್ತರ ಹೆಚ್ಚಿಸಬೇಕೆಂದರೆ ವಿಟಮಿನ್ ಡಿ ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ವಿಶೇಷವಾಗಿ ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅಗತ್ಯವಾಗಿದ್ದು ಹಾಲು ಮತ್ತು ಇತರ ಆಹಾರಗಳಲ್ಲಿರುವ ಕ್ಯಾಲ್ಸಿಯಂ ಅನ್ನು ದೇಹ ಹೀರಿಕೊಳ್ಳಲು ಸಾಧ್ಯವಾಗಿಸಲು ವಿಟಮಿನ್ ಡಿ ಬೇಕು. ಅಲ್ಲದೇ ವಿಟಮಿನ್ ಡಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ವಿಟಮಿನ್ ಡಿ ಹೆಚ್ಚಿರುವ ಆಹಾರಗಳೆಂದರೆ ಮೀನು, ಕಾಳುಗಳು, ಮೊಟ್ಟೆ, ಟೋಫು, ಸೋಯಾ ಅವರೆಯ ಹಾಲು, ಸೋಯಾ ಬೀನ್ಸ್, ಅಣಬೆ, ಸಾಸೇಜುಗಳು ಹಾಗೂ ಬಾದಾಮ್ಮಿ.

ಪ್ರೋಟೀನುಗಳು

ಪ್ರೋಟೀನುಗಳು

ಎತ್ತರ ಹೆಚ್ಚಿಸಲು ಪ್ರೋಟೀನುಗಳು ಸಹಾ ಬೇಕೇ ಬೇಕು. ಪ್ರೋಟೀನು ಹೆಚ್ಚಿರುವ ಆಹಾರಗಳು ಆರೋಗ್ಯಕರ ಹಾಗೂ ಸವೆತಕ್ಕೆ ಒಳಗಾದ ಅಂಗಾಂಶವನ್ನು ಮತ್ತೆ ರಿಪೇರಿಗೊಳಿಸಿ ಹೊಸ ಅಂಗಾಂಶದ ಬೆಳವಣಿಗೆಗೆ ನೆರವಾಗುತ್ತದೆ. ಪರಿಣಾಮವಾಗಿ ಎತ್ತರ ಹೆಚ್ಚಲು ಸಾಧ್ಯವಾಗುತ್ತದೆ. ಪ್ರೋಟೀನುಗಳಲ್ಲಿರುವ ಅಮೈನೋ ಆಮ್ಲ ಈ ಎತ್ತರವನ್ನು ಹೆಚ್ಚಿಸಲು ನೆರವಾಗುತ್ತದೆ. ಪೋಟೀನು ಹೆಚ್ಚಿರುವ ಆಹಾರಗಳಾದ ಹಾಲು, ಚೀಸ್, ಹಸಿರು ಬೀನ್ಸ್, ಒಣಬೀಜಗಳು (ಕುಂಬಳ, ಕಲ್ಲಂಗಡಿ ಹಣ್ಣು, ಸ್ಕ್ವಾಶ್ ಇತ್ಯಾದಿ), ಮೀನು (ಟ್ಯೂನಾ, ಸಾಲ್ಮನ್), ಬಿಳಿ ಮಾಂಸ, ಶೇಂಗಾ ಬೀಜ, ಬೇಳೆಕಾಳುಗಳು, ಓಟ್ಸ್ ರವೆ, ಸೋಯಾ ಬೀನ್ಸ್, ಹಾಗೂ ಮೊಳಕೆ ಬಂದಿರುವ ಕಾಳುಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇವು ಹೆಚ್ಚಾಗಿರುವಂತೆ ನೋಡಿಕೊಳ್ಳುವ ಮೂಲಕ ಎತ್ತರ ಹೆಚ್ಚುವಂತೆ ನೋಡಿಕೊಳ್ಳಬಹುದು.

ವಿಟಮಿನ್ ಎ

ವಿಟಮಿನ್ ಎ

ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಬೇಕಾದರೆ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಬೇಕು. ವಿಟಮಿನ್ ಎ ದೇಹದಲ್ಲಿ ಕ್ಯಾಲ್ಸಿಯಂ ನಷ್ಟವಾಗದಂತೆ ತಡೆಯುವ ಮೂಲಕ ಮೂಳೆಗಳನ್ನು ದೃಢ ಹಾಗೂ ಆರೋಗ್ಯಕರವಾಗಿರಿಸಲು ನೆರವಾಗುತ್ತದೆ. ವಿಟಮಿನ್ ಎ ಕಣ್ಣಿನ ದೃಷ್ಟಿಗೂ ಉತ್ತಮ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿರುವ ಪಾಲಕ್ ಸೊಪ್ಪು, ಬೀಟ್ರೂಟ್, ಕ್ಯಾರೆಟ್, ಕೋಳಿ ಮಾಂಸ, ಖರಬೂಜದ ಹಣ್ಣು, ಪಪ್ಪಾಯಿ, ಪೀಚ್ ಹಣ್ಣುಗಳು, ಹಾಲು, ಟೊಮೇಟೊ, ಬಟಾಣಿ ಕಾಳು ಹಾಗೂ ಆಪ್ರಿಕಾಟ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಿರಬೇಕು. ಟೊಮಾಟೋ, ಬೀಟ್ರೂಟ್, ಕ್ಯಾರೆಟ್ ಮೊದಲಾದ ತರಕಾರಿಗಳನ್ನು ಸಾಧ್ಯವಾದಷ್ಟು ಹಸಿಯಾಗಿಯೇ ಸೇವಿಸಬೇಕು ಅಥವಾ ರಸವನ್ನು ಹಿಂಡಿ ತಾಜಾ ಇದ್ದಂತೆಯೇ ಕುಡಿಯಬೇಕು.

 ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಎತ್ತರ ಹೆಚ್ಚಿಸುವಲ್ಲಿ ಮೂಳೆಗಳ ಪಾತ್ರ ಪ್ರಮುಖವಾಗಿದ್ದು ಮೂಳೆಗಳು ದೃಢವಾಗಿರುವುದು ಅತ್ಯಂತ ಅಗತ್ಯವಾಗಿದೆ. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳ ಸೇವನೆಯಿಂದ ಮೂಳೆಗಳ ಬೆಳವಣಿಗೆ ಹಾಗೂ ದೃಢತೆ ಹೆಚ್ಚುತ್ತದೆ. ಡೈರಿ ಉತ್ಪನ್ನಗಳಾದ ಹಾಲು, ಚೀಸ್, ಮೊಸರು ಹಾಗೂ ಮೊಟ್ಟೆಗಳನ್ನು ನಿತ್ಯವೂ ಸೇವಿಸುವ ಮೂಲಕ ಎತ್ತರ ಹೆಚ್ಚಲು ನೆರವಾಗುತ್ತದೆ. ಇವು ಹೊಟ್ಟೆಯನ್ನು ತುಂಬಿಸುವ ಹಾಗೂ ಆರೋಗ್ಯಕರ ಆಹಾರಗಳಾಗಿವೆ.

ಖನಿಜಗಳು

ಖನಿಜಗಳು

ಮೂಳೆಗಳ ರಚನೆಯನ್ನು ಖನಿಜಗಳು ಬಲಪಡಿಸುತ್ತವೆ. ಅಲ್ಲದೇ ಮೂಳೆಗಳ ಗಾತ್ರವನ್ನೂ ಹೆಚ್ಚಿಸಲು ನೆರವಾಗುತ್ತವೆ ಅಷ್ಟೇ ಅಲ್ಲ, ದೇಹದಲ್ಲಿ ರಕ್ತಪರಿಚಲನೆ ಉತ್ತಮಗೊಳಿಸಲೂ ನೆರವಾಗುತ್ತದೆ. ಮೂಳೆಯನ್ನು ನೈಸರ್ಗಿಕವಾಗಿ ಬಲಪಡಿಸಲು ಮತ್ತು ಎತ್ತರವನ್ನು ಹೆಚ್ಚಿಸಲು ಖನಿಜಗಳು ಹೆಚ್ಚಿರುವ ಆಹಾರಗಳಾದ ಬೀನ್ಸ್, ದ್ವಿದಳಧಾನ್ಯಗಳು, ಬ್ರೋಕೋಲಿ, ಪಾಲಕ್ ಸೊಪ್ಪು, ಎಲೆಕೋಸು, ಕುಂಬಳಕಾಯಿ, ಕ್ಯಾರೆಟ್, ಅವರೆ ಜಾತಿಯ ಕಾಳುಗಳು, ಬಾಳೆಹಣ್ಣು, ದ್ರಾಕ್ಷಿ, ಪೀಚ್ ಹಣ್ಣುಗಳನ್ನು ನಿತ್ಯವೂ ಸಾಧ್ಯವಾದಷ್ಟು ಸೇವಿಸಬೇಕು.

English summary

Foods that Increase Height Fast and Naturally

If you don't like your short height and several attempts have failed you in increasing a foot, then why not try foods which can help in height gain! Human Growth Hormone, HGH is a secretion from the pituitary gland which increases the body height. Due to lack of proteins and nutrition, the growth is limited or very slow. It is difficult to believe but even foods can increase body height. So, improve the supplement of proteins and vitamins in your diet with these foods to enhance height gain.
Story first published: Tuesday, September 26, 2017, 13:32 [IST]
Subscribe Newsletter