ರಕ್ತವನ್ನು ಶುದ್ಧೀಕರಿಸುವ ಆಹಾರಗಳಿವು-ಯಾವುದೇ ಅಡ್ಡಪರಿಣಾಮಗಳಿಲ್ಲ

By: Deepu
Subscribe to Boldsky

ಇತ್ತೀಚಿನ ದಿನಗಳಲ್ಲಿ ನಾವು ಕುಡಿಯುವ ನೀರು, ತಿನ್ನುವ ಆಹಾರ, ಉಸಿರಾಡುವ ಗಾಳಿ ಪ್ರತಿಯೊಂದು ವಿಷವಾಗಿ ಬಿಟ್ಟಿರುವುದು ನಮಗ ಗೊತ್ತಿರುವ ವಿಚಾರವೇ.... ಕಲುಷಿತ ವಾತಾವರಣ ಮತ್ತು ಆಹಾರ ಉತ್ಪಾದನೆಗೆ ಬಳಸುವಂತಹ ರಾಸಾಯನಿಕಗಳೇ ಇದಕ್ಕೆ ಪ್ರಮುಖ ಕಾರಣವಾಗಿರುವುದು ವಿಪರ್ಯಾಸವೇ ಸರಿ....  ದೇಹದ ರಕ್ತ ಶುದ್ಧೀಕರಣಕ್ಕೆ-ತಪ್ಪದೇ ಈ ಟಿಪ್ಸ್ ಅನುಸರಿಸಿ

ಈ ವಿಷವೆಲ್ಲಾ ದೇಹವನ್ನು ಸೇರಿಕೊಂಡು ಹಲವಾರು ರೀತಿಯ ರೋಗಗಳಿಗೆ ಕಾರಣವಾಗಿ ಬಿಟ್ಟಿದೆ. ಇಂತಹ ವಿಷವನ್ನು ದೇಹದಿಂದ ಹೊರಹಾಕುವುದು ಅನಿವಾರ್ಯ. ದೇಹವು ತನ್ನಿಂದ ತಾನೇ ವಿಷವನ್ನು ಹೊರಗೆ ಹಾಕುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ವಿಷವನ್ನು ಹೊರಹಾಕುವುದು ದೇಹಕ್ಕೂ ತುಂಬಾ ಕಷ್ಟವಾಗುತ್ತದೆ.  ರಕ್ತವನ್ನು ಶುದ್ಧೀಕರಿಸುವ 13 ಆಹಾರಗಳು

ಆದರೆ ದೇಹದಿಂದ ವಿಷವನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವಂತಹ ಕೆಲವೊಂದು ಆಹಾರಗಳು ಇವೆ. ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಆದರೆ ಧೂಮಪಾನ, ಜಂಕ್ ಫುಡ್, ಕೃತಕ ಬಣ್ಣವನ್ನು ಹೊಂದಿರುವಂತಹ ಆಹಾರವನ್ನು ತ್ಯಜಿಸಬೇಕು. ರಕ್ತವನ್ನು ಶುದ್ಧೀಕರಿಸುವ ಆಹಾರಗಳು ಯಾವುದು ಎಂದು ಬೋಲ್ಡ್ ಸ್ಕೈ ಮೂಲಕ ತಿಳಿದುಕೊಳ್ಳಿ... 

ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್ ಜ್ಯೂಸ್

ಕೆಲವರು ಬಣ್ಣ ಕೆಂಪಗಿದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಬೀಟ್‌ರೂಟ್ ಗಡ್ಡೆಯನ್ನು ಸೇವಿಸುವುದರಿಂದ ದೂರ ಉಳಿಯುತ್ತಾರೆ. ಆದರೆ ವಾಸ್ತವವಾಗಿ ಬೀಟ್‌ರೂಟ್ ಒಂದು ಅತ್ಯುತ್ತಮವಾದ ಆಹಾರವಾಗಿದ್ದು ಇದರ ಸೇವನೆಯಿಂದ ಹಲವು ಪೋಷಕಾಂಶಗಳು ಮತ್ತು ಕರಗುವ ನಾರು ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ರಕ್ತದ ಕಣಗಳನ್ನು ಉತ್ಪತ್ತಿ ಮಾಡಲು ಬೀಟ್‌ರೂಟ್ ತುಂಬಾನೇ ನೆರವಾಗುವುದರೊಂದಿಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಅಬ್ಬಬ್ಬಾ ಬೀಟ್‌ರೂಟ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ..?

ಕ್ಯಾರೆಟ್

ಕ್ಯಾರೆಟ್

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಸೇವಿಸಬಹುದಾದ ಆರೋಗ್ಯಕ್ಕೆ ನೆರವಾಗುವ ತರಕಾರಿಗಳಲ್ಲಿ ಕ್ಯಾರೆಟ್ ಅನ್ನು ಕಡೆಗಣಿಸುವಂತಿಲ್ಲ. ಇದರಲ್ಲಿರುವ ಗ್ಲೂತಥೈಯೊನೆ ಎನ್ನುವ ಅಂಶ ರಕ್ತವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಹಸಿಯಾಗಿ ತಿಂದರೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಕ್ಯಾರೆಟ್ ಫೇಸ್ ಮಾಸ್ಕ್ ಮೂಲಕ ಮುದ್ದು ಮುಖ ಪಡೆಯಿರಿ!

ಲಿಂಬೆ+ಜೇನುತುಪ್ಪ

ಲಿಂಬೆ+ಜೇನುತುಪ್ಪ

ಬಿಸಿ ನೀರಿಗೆ ಲಿಂಬೆರಸವನ್ನು ಬೆರೆಸಿಕೊಂಡು, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿದರೆ ದೇಹದಲ್ಲಿರುವ ವಿಷಕಾರಿ ಅಂಶವು ಹೊರಹೋಗುವುದು. ಈ ಪಾನೀಯದೊಂದಿಗೆ ದಿನದ ಆರಂಭ ಮಾಡಿ. ಅಲ್ಲದೆ ಲಿಂಬೆಯು ಯಕೃತ್ ನಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವುದು.ಲಿಂಬೆ+ಜೇನು ಬೆರೆಸಿದ ನೀರು ಸೇವಿಸಿ-ತೂಕ ಇಳಿಸಿಕೊಳ್ಳಿ!

ಅರಿಶಿನ ಹಾಲು

ಅರಿಶಿನ ಹಾಲು

ಅರಿಶಿನಕ್ಕೆ ಹಾಲನ್ನು ಸೇರಿಸಿ ಬಳಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಇವು ಪರಿಸರದ ಅಪಾಯಕಾರಿ ಜೀವಾಣುಗಳ ವಿರುದ್ಧ ಹೋರಾಡಲು ಅತ್ಯಂತ ಸಹಾಯಕಾರಿ... ಅಂತೆಯೇ ರಕ್ತನಾಳಗಳನ್ನು ಸ್ವಚ್ಛವಾಗಿಟ್ಟು ರಕ್ತದ ಸಂಚಾರವನ್ನು ಹೆಚ್ಚಿಸುವುದು. ಅರಿಶಿನ ಹಾಲು ಕುಡಿದರೆ ರಕ್ತವು ಶುದ್ಧಿಯಾಗುವುದು.ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಹಸಿರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳಾದ ಪಾಲಕ ಮತ್ತು ಕೇಲ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಸಿ ಅಥವಾ ಹಬೆಯಲ್ಲಿ ಬೇಯಿಸಿದರೆ ಇದು ಒಳ್ಳೆಯದು.

ಚಹಾ

ಚಹಾ

ಚಹಾ ಚಹಾದಲ್ಲಿ ರಕ್ತ ಶುದ್ಧೀಕರಿಸುವ ಹಲವಾರು ರೀತಿಯ ಗಿಡಮೂಲಿಕೆ ಅಂಶಗಳಿವೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ರಕ್ತ ಶುದ್ಧೀಕರಣಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವೊಂದು ರೀತಿಯ ಚಹಾಗಳೆಂದರೆ ಶುಂಠಿ ಚಹಾ, ಪುದೀನಾ ಚಹಾ ಮತ್ತು ಸೇವಂತಿ ಚಹಾ ಇತ್ಯಾದಿ. ರಕ್ತ ಶುದ್ಧೀಕರಿಸಲು ಗ್ರೀನ್ ಟೀಯನ್ನು ಸೇವಿಸಬಹುದು.ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಬೆಳ್ಳುಳ್ಳಿ

ಬೆಳ್ಳುಳ್ಳಿ

ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಪ್ರತೀ ದಿನ ಬೆಳಿಗ್ಗೆ ಎದ್ದ ಬಳಿಕ ಬರೀ ಒಂದು ಹಸಿ ಬೆಳ್ಳುಳ್ಳಿಯ ಎಸಲನ್ನು ತಿನ್ನಿ. ಇದು ರಕ್ತವನ್ನು ಶುದ್ಧೀಕರಿಸಿ ರಕ್ತನಾಳಗಳನ್ನು ಸ್ವಚ್ಛಗೊಳಿಸುವುದು. ಯಕೃತ್ ಗೆ ಕೂಡ ಇದು ಒಳ್ಳೆಯದು. (ನೆನಪಿಡಿ- ಹಸಿ ಬೆಳ್ಳುಳ್ಳಿ ಸೇವಿಸುವ ಮುನ್ನ ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ) ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

 ಬೇವು

ಬೇವು

ಆರೋಗ್ಯದ ವಿಷಯ ಬಂದಾಗ ಬೇವಿನ ಬಳಕೆ ಅತ್ಯಂತ ಸುರಕ್ಷಿತವೂ ಯಾವುದೇ ಅಡ್ಡಪರಿಣಾಮಗಳಿಲ್ಲದ್ದೂ ಆಗಿರುವುದರಿಂದ ಅನುಮಾನರಹಿತರಾಗಿ ಬಳಸಬಹುದು. ಆದರೆ ಯಾವುದೇ ಆಯುರ್ವೇದೀಯ ಔಷಧಿಯಂತೆ ಬೇವು ಸಹಾ ತನ್ನ ಪರಿಣಾಮ ಬೀರಲು ಕೊಂಚ ಸಮಯಾವಕಾಶ ಬೇಡುವುದರಿಂದ ಇದರ ಪ್ರಭಾವ ನಿಧಾನಕ್ಕೆ ಕಂಡುಬರುತ್ತದೆ. ರಕ್ತವನ್ನು ಶುದ್ಧೀಕರಿಸಲು ಇದು ಒಳ್ಳೆಯ ಆಯ್ಕೆ. ಇದರಲ್ಲಿ ವೈರಲ್ ವಿರೋಧಿ, ನಂಜು ನಿರೋಧಕ, ಫಂಗಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಬಿಸಿ ನೀರಿಗೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿಕೊಂಡು ಪ್ರತಿದಿನ ಕುಡಿಯಬೇಕು.

 
English summary

Foods That Cleanse Your Blood

The human body can cleanse itself. But today, there are toxins everywhere. They are in the air, in the food, in cosmetics, in our surroundings, in the junk we eat and almost everywhere we go. It isn't easy for your body to take that much of toxic load. All kinds of diseases will wait for a day to pounce upon you, if you don't do anything about the toxic load.
Please Wait while comments are loading...
Subscribe Newsletter