ಇವೆಲ್ಲಾ ನಾಲಗೆಗೆ ರುಚಿ ನೀಡಬಹುದು, ಆದರೆ ಆರೋಗ್ಯಕ್ಕೆ ಬಹಳ ಅಪಾಯಕಾರಿ!!

By Manu
Subscribe to Boldsky

ಬ್ರೆಡ್ ಮತ್ತು ಜಾಮ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದ ದೊಡ್ಡವರ ತನಕ ಇದನ್ನು ಇಷ್ಟಪಡುವರು. ಹೆಚ್ಚಾಗಿ ಬ್ರೆಡ್ ಜಾಮ್ ಬೆಳಗ್ಗಿನ ಉಪಾಹಾರ ಮತ್ತು ಮಕ್ಕಳಿಗೆ ಶಾಲೆಗೆ ಉಪಾಹಾರಕ್ಕೂ ನೀಡಲಾಗುವುದು. ಇದನ್ನು ತಯಾರಿಸುವುದು ತುಂಬಾ ಸುಲಭವಾಗಿರುವ ಕಾರಣ ಎಲ್ಲರಿಗೂ ಇದು ಇಷ್ಟವಾಗಿದೆ. ಆದರೆ ಬ್ರೆಡ್ ಮತ್ತು ಜಾಮ್ ಎಷ್ಟು ಒಳ್ಳೆಯದು ಎಂದು ನಮಗೆ ಇದುವರೆಗೂ ತಿಳಿದಿಲ್ಲ.

ನಾವು ತಿನ್ನುವಂತಹ ಆಹಾರವು ನಮ್ಮ ಅರೋಗ್ಯ ಮತ್ತು ಮನಸ್ಸನ್ನು ತೋರಿಸುವುದು. ಒಳ್ಳೆಯ ಆಹಾರ ತಿಂದರೆ ಮನಸ್ಸು ಹಾಗೂ ದೇಹ ಉತ್ತಮವಾಗಿರುವುದು. ಕೆಲವೊಂದು ಆಹಾರವನ್ನು ಇತರ ಆಹಾರದೊಂದಿಗೆ ಸೇರಿಸಿ ತಿಂದರೆ ಅದರ ಲಾಭ ಹೆಚ್ಚಾಗುವುದು. ಇನ್ನು ಕೆಲವನ್ನು ಇತರ ಆಹಾರದೊಂದಿಗೆ ಬೆರೆಸಿಕೊಂಡು ತಿನ್ನಲೇಬಾರದು. ನಿಮ್ಮ ದೇಹಕ್ಕೆ ಯಾವ ರೀತಿಯ ಆಹಾರದ ಸಂಯೋಜನೆಯು ಹಾನಿಯುಂಟು ಮಾಡಲಿದೆ ಎಂದು ನಿಮಗೆ ತಿಳಿದಿದೆಯಾ? ಹಾಗಿದ್ದರೆ ಬೋಲ್ಡ್ ಸ್ಕೈ ಇಂತಹ ಆಹಾರಗಳ ಬಗ್ಗೆ ತಿಳಿಸಿಕೊಡಲಿದೆ. ಇದನ್ನು ಓದಿಕೊಳ್ಳಿ... 

ಬ್ರೆಡ್ ಮತ್ತು ಜಾಮ್ ಸರಿಯಾದ ಸಂಯೋಜನೆಯೇ?

ಬ್ರೆಡ್ ಮತ್ತು ಜಾಮ್ ಸರಿಯಾದ ಸಂಯೋಜನೆಯೇ?

ಹೆಚ್ಚಿನವರು ಬ್ರೆಡ್ ಮತ್ತು ಜಾಮ್ ನ್ನು ಬಾಲ್ಯದಲ್ಲಿ ತಿಂದಿರುತ್ತೇವೆ. ಆದರೆ ಇದು ಸರಿಯಾದ ಸಂಯೋಜನೆಯಲ್ಲ. ಬಿಳಿ ಬ್ರೆಡ್ ನಲ್ಲಿ ಇರುವುದು ಸಂಸ್ಕರಿಸಿದ ಹಿಟ್ಟು ಮತ್ತು ಜಾಮ್ ನಲ್ಲಿ ಇರುವುದು ಸಕ್ಕರೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಏರುಪೇರಾಗಬಹುದು. ಜಾಮ್ ಬಳಸಬೇಕಿದ್ದರೆ ಈಸ್ಟ್ ಇಲ್ಲದೆ ಇರುವ ಕಂದು ಬ್ರೆಡ್‌ಗೆ ಇದನ್ನು ಬಳಸಿ.

ಎಚ್ಚರ: ನೀವು ಅಂದುಕೊಂಡಷ್ಟು, ಬ್ರೆಡ್ ಆರೋಗ್ಯಕರವಲ್ಲ!

ಸೋಡಾ ಮತ್ತು ಫಿಜ್ಜಾ

ಸೋಡಾ ಮತ್ತು ಫಿಜ್ಜಾ

ಪಿಷ್ಟ, ಪ್ರೋಟೀನ್ ಮತ್ತು ಕಾರ್ಬ್ಸ್ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ಫಿಜ್ಜಾದೊಂದಿಗೆ ಸಕ್ಕರೆಯಂಶವಿರುವ ಸೋಡಾ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಮತ್ತಷ್ಟು ನಿಧಾನವಾಗುವುದು. ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು.

ಪಿಜ್ಜಾ: ನಾಲಗೆಗೆ ರುಚಿ, ಆರೋಗ್ಯಕ್ಕೆ ಮಾತ್ರ ಮಾರಕ!

ಚೀಸ್ ಪಾಸ್ತಾ

ಚೀಸ್ ಪಾಸ್ತಾ

ನೀವು ಪಾಸ್ತಾ ಇಷ್ಟಪಡುತ್ತಾ ಇದ್ದರೆ ಅದಕ್ಕೆ ಟೊಮೆಟೋ ಮತ್ತು ಚೀಸ್ ಹಾಕಬೇಡಿ. ಇದರಿಂದ ಪಾಸ್ತಾದಲ್ಲಿರುವ ಪಿಷ್ಟ ಕರಗಿಸಲು ಕಷ್ಟವಾಗಬಹುದು. ಹಸಿರೆಲೆ ಮತ್ತು ಬೇಯಿಸಿದ ತರಕಾರಿಗಳನ್ನು ಸೇರಿಸಿ.

ಚಾಕಲೇಟ್ ಹಾಲು

ಚಾಕಲೇಟ್ ಹಾಲು

ಕೋಕಾದಲ್ಲಿ ಒಕ್ಸಾಲಿಕ್ ಎನ್ನುವ ಆಮ್ಲವಿರುವ ಕಾರಣದಿಂದ ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ತೊಂದರೆ ಮಾಡಬಹುದು. ಕ್ಯಾಲ್ಸಿಯಂ ಹೆಚ್ಚಿರುವ ಹಾಲಿನೊಂದಿದೆ ಕೋಕಾ ಸೇವಿಸಿದಾಗ ಅದರಿಂದ ಒಕ್ಸಲೇಟ್ ಹರಳುಗಳು ನಿರ್ಮಾಣವಾಗಿ ಕಿಡ್ನಿಗೆ ಸಮಸ್ಯೆಯಾಗಬಹುದು. ಬಿಸಿ ಚಾಕಲೇಟ್ ನಿಮಗೆ ಇಷ್ಟವೆಂದಾದರೆ ಕೆನೆರಹಿತ ಹಾಲಿನೊಂದಿಗೆ ಇದನ್ನು ಸೇವಿಸಿ. ಇದು ಆಕ್ಸಲೇಟ್ ಹೀರುವಿಕೆಯನ್ನು ಹೆಚ್ಚಿಸುವುದು.

ಮೊಟ್ಟೆ ಮತ್ತು ಬೇಕನ್

ಮೊಟ್ಟೆ ಮತ್ತು ಬೇಕನ್

ಬೇಕನ್ ಮತ್ತು ಮೊಟ್ಟೆಯನ್ನು ಜತೆಯಾಗಿ ಸೇವಿಸುವುದು ಸರಿಯಾದ ನಿರ್ಧಾರವಲ್ಲ. ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನವಾಗಬಹುದು. ಬೇಕನ್ ಬದಲಿಗೆ ಮೊಟ್ಟೆಯನ್ನು ಟೊಮೆಟೋ ಜತೆ ಸೇವಿಸಿ. ಟೊಮೆಟೋದಲ್ಲಿರುವ ಆಮ್ಲವು ಜೀರ್ಣಕ್ರಿಯೆ ಉತ್ತಮಗೊಳಿಸುವುದು. ಟೊಮೆಟೋದಲ್ಲಿರುವ ಲೈಕೋಪೆನೆ ಮತ್ತು ಮೊಟ್ಟೆಯಲ್ಲಿರುವ ವಿಟಮಿನ್ ಇ ಉತ್ತಮ ಸಂಯೋಜನೆ.

ಕಿತ್ತಳೆ ಜ್ಯೂಸ್ ಮತ್ತು ಸೀರಲ್

ಕಿತ್ತಳೆ ಜ್ಯೂಸ್ ಮತ್ತು ಸೀರಲ್

ಕೆಲವರು ಬೆಳಗ್ಗಿನ ಉಪಾಹಾರಕ್ಕೆ ಸೀರಲ್ ನೊಂದಿಗೆ ಕಿತ್ತಳೆ ಜ್ಯೂಸ್ ಸೇವಿಸಲು ಬಯಸುತ್ತಾರೆ ಆದರೆ ಇದು ಸರಿಯಾದ ಸಂಯೋಜನೆಯಲ್ಲ. ನಿಮಗೆ ಇದರಿಂದ ಹೊಟ್ಟೆ ಭಾರವಾಗಬಹುದು. ಕಿತ್ತಳೆಯಲ್ಲಿರುವ ಆಮ್ಲವು ಕಾರ್ಬ್ಸ್ ಜೀರ್ಣಗೊಳ್ಳಲು ತೊಂದರೆ ಮಾಡಬಹುದು. ಸೀರಲ್ ಸೇವಿಸಿದ ಒಂದು ಗಂಟೆ ಬಳಿಕ ಕಿತ್ತಳೆ ಜ್ಯೂಸ್ ಕುಡಿದರೆ ಅದರಿಂದ ಯಾವುದೇ ರೀತಿಯ ಸಮಸ್ಯೆಯಾಗದು.

ಲಿಂಬೆರಸದೊಂದಿಗೆ ಸಲಾಡ್

ಲಿಂಬೆರಸದೊಂದಿಗೆ ಸಲಾಡ್

ಸಲಾಡ್ ಇಷ್ಟಪಡುವಿರಾದೆ ತರಕಾರಿಗಳಲ್ಲಿ ಇರುವಂತಹ ಪೋಷಕಾಂಶಗಳು ಹೀರಿಕೊಳ್ಳಲು ಆರೋಗ್ಯಕರ ಕೊಬ್ಬು ಹೊಂದಿರಬೇಕು. ಸಲಾಡ್ ನಲ್ಲಿ ಕೇವಲ ಲಿಂಬೆರಸ ಮಾತ್ರ ಬಳಸುವುದಾದರೆ ಇದಕ್ಕೆ ಒಂದು ಚಮಚ ಆಲಿವ್ ತೈಲ ಅಥವಾ ಒಂದು ಅವಕಾಡೋವನ್ನು ಸಲಾಡ್‌ಗೆ ಸೇರಿಸಿಕೊಳ್ಳಿ.

For Quick Alerts
ALLOW NOTIFICATIONS
For Daily Alerts

    English summary

    food combinations that will make you ill

    Your food is what builds you and helps you live through your life. Though we are supposed to eat mindfully, we seldom pay attention to what food combinations we eat. Some nutritious foods are very good when they are taken alone but they may prove counter productive when they are eaten along with certain other foods. Are you wondering what kind of food combinations hurt your body? Read on to know.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more