For Quick Alerts
ALLOW NOTIFICATIONS  
For Daily Alerts

ಬಣ್ಣ ಕಳೆದುಕೊಂಡ ಹಲ್ಲುಗಳ ನೈಜ ಬಣ್ಣಕ್ಕೆ ಪವರ್ ಫುಲ್ ಮನೆಮದ್ದುಗಳು

By Hemanth
|

ಮುತ್ತಿನ ಹಾರದಂತಹ ಹಲ್ಲುಗಳನ್ನು ಪಡೆಯಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಎಲ್ಲರಿಗೂ ಇಂತಹ ಹಲ್ಲುಗಳ ಭಾಗ್ಯ ಸಿಗುವುದಿಲ್ಲ. ಹಲ್ಲುಗಳು ಮುಂದೆ ಬಂದಿದ್ದರೆ ಅಥವಾ ಸರಿಯಾದ ಕ್ರಮದಲ್ಲಿ ಇಲ್ಲದೆ ಇದ್ದರೆ ಹಲ್ಲುಗಳನ್ನು ಸರಿಯಾಗಿ ಜೋಡಣೆ ಮಾಡಲು ಹಲ್ಲಿನ ವೈದ್ಯರು ಹಲ್ಲುಗಳ ಕಟ್ಟನ್ನು ಹಾಕುತ್ತಾರೆ. ಇದನ್ನು ಬ್ರೇಸ್ ಎಂದು ಕರೆಯುತ್ತಾರೆ. ಈ ಹಲ್ಲಿನ ಕಟ್ಟುಗಳನ್ನು ಹಾಕಿಸಿಕೊಂಡವರಿಗೆ ಮಾತ್ರ ಅದರ ಕೆಲವೊಂದು ಸಮಸ್ಯೆಗಳ ಬಗ್ಗೆ ತಿಳಿದಿದೆ. ಬ್ರೇಸ್ ಹಾಕಿಕೊಳ್ಳುವುದರಿಂದ ಹಲ್ಲುಗಳು ತಮ್ಮ ಬಣ್ಣ ಕಳೆದುಕೊಳ್ಳಬಹುದು.

ಹಲ್ಲುಗಳು ಹಳದಿಯಾಗಿವೆ ಎಂದು ಕೊರಗಬೇಡಿ,ಬೆಳ್ಳಗಾಗಲು ಹೀಗೆ ಮಾಡಿ...

ಹಲ್ಲಿನ ಕಟ್ಟು ಹಾಕಿಕೊಳ್ಳುವವರಿಗೆ ಹಲ್ಲುಜ್ಜುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಬಣ್ಣ ಕಳೆದುಕೊಂಡ ಹಲ್ಲುಗಳು ತಮ್ಮ ನೈಜ ಬಣ್ಣಕ್ಕೆ ಮರಳಲು ಬೋಲ್ಡ್ ಸ್ಕೈ ಕೆಲವೊಂದು ಸರಳ ಮನೆಮದ್ದುಗಳ ಬಗ್ಗೆ ಹೇಳಿಕೊಡಲಿದೆ. ಇದನ್ನು ನೀವು ತಿಳಿದುಕೊಂಡು ಪರಿಣಾಮಕಾರಿಯಾಗಿ ಬಳಸಿ. ಶಾಶ್ವತ ಅಥವಾ ತಾತ್ಕಾಲಿಕ ಹಲ್ಲಿನ ಕಟ್ಟುಗಳು ಇದ್ದರೆ ಈ ಮನೆಮದ್ದನ್ನು ದಂತವೈದ್ಯರ ಸಲಹೆ ಪಡೆಯದೇ ಬಳಸಬಹುದು....

ಅಡುಗೆ ಸೋಡಾ, ಲಿಂಬೆ ಮತ್ತು ಉಪ್ಪು

ಅಡುಗೆ ಸೋಡಾ, ಲಿಂಬೆ ಮತ್ತು ಉಪ್ಪು

ಹಲ್ಲಿನ ಈ ಮನೆಮದ್ದನ್ನು ಹಲ್ಲಿನ ಕಟ್ಟು ಹಾಕಿಕೊಂಡವರು ಮತ್ತು ಸಾಮಾನ್ಯ ಹಲ್ಲಿಗೂ ಬಳಸಿಕೊಳ್ಳಬಹುದು. ಹಲ್ಲಿನ ಸಮಸ್ಯೆ ಇದ್ದವರು ಇದನ್ನು ಉಪಯೋಗಿಸಬಹುದು. ಅಡುಗೆ ಸೋಡಾ, ಲಿಂಬೆರಸ ಮತ್ತು ಉಪ್ಪನ್ನು ಬಳಸಿಕೊಳ್ಳಬಹುದು. ಈ ಮಿಶ್ರಣವನ್ನು ಹಲ್ಲಿನ ಪೇಸ್ಟ್ ಆಗಿ ಬಳಸಿ ಪ್ರತಿದಿನವೂ ಇದರಿಂದ ಹಲ್ಲುಜ್ಜಿ. ಇದನ್ನು ಆಗಾಗ ಮಾಡಿ ನಿಯಮಿತವಾಗಿ ಬಳಸುತ್ತಾ ಇರಿ. ಅಡುಗೆ ಸೋಡಾ, ಲಿಂಬೆ ಮತ್ತು ಉಪ್ಪಿನ ಮಿಶ್ರಣವನ್ನು ತಕ್ಷಣ ಮಾಡಿಕೊಂಡು ಬಳಸಬೇಕು.

ಹಲ್ಲು ಬಿಳಿಯಾಗಿಸುವ ದ್ರವಗಳು

ಹಲ್ಲು ಬಿಳಿಯಾಗಿಸುವ ದ್ರವಗಳು

ಹಗಲಿನಲ್ಲಿ ಹಲ್ಲಿನ ಕಟ್ಟು ಹಾಕಿಕೊಂಡು ಇದ್ದಾಗ ಹಲ್ಲುಜ್ಜುವುದು ತುಂಬಾ ಕಷ್ಟಕರ ಮತ್ತು ಸವಾಲಿನ ಕೆಲಸ. ಈ ವೇಳೆ ನೀವು ಎರಡು ದ್ರವಗಳನ್ನು ಬಳಸಿಕೊಂಡು ಎರಡು ರೀತಿಯ ದ್ರವದಿಂದ ಹಲ್ಲುಗಳನ್ನು ಬಿಳಿಗೊಳಿಸಬಹುದು. ಆ್ಯಪಲ್ ಸೀಡರ್ ವಿನೇಗರ್ ಮತ್ತು ತೆಂಗಿನೆಣ್ಣೆ ಇದರಲ್ಲಿ ಪ್ರಮುಖವಾಗಿದೆ. ಈ ಎರಡು ದ್ರವಗಳಲ್ಲಿ ಯಾವುದಾದರೂ ಒಂದನ್ನು ಒಂದು ಚಮಚ ತೆಗೆದು ಬಾಯಿಗೆ ಹಾಕಿ 2-3 ನಿಮಿಷ ಬಾಯಿ ಮುಕ್ಕಲಿಸಿಕೊಳ್ಳಿ.

ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಬಳಿಕ

ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಬಳಿಕ

ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಬಳಿಕ ಪ್ರತೀದಿನ ಇದನ್ನು ಬಳಸಿಕೊಳ್ಳಿ. ಇದು ಹಲ್ಲುಗಳನ್ನು ಬಿಳಿಗೊಳಿಸುವುದು. ಇದರಿಂದ ಹಲ್ಲಿನ ಕಟ್ಟುಗಳಿದ್ದರೂ ನೀವು ಆತ್ಮವಿಶ್ವಾಸದಿಂದ ಇರಬಹುದು.

ಹಲ್ಲು ಬಿಳಿಗೊಳಿಸುವ ಟೂಥ್ ಪೇಸ್ಟ್

ಹಲ್ಲು ಬಿಳಿಗೊಳಿಸುವ ಟೂಥ್ ಪೇಸ್ಟ್

ಹಲ್ಲುಗಳ ಕಟ್ಟುಗಳು ಇದ್ದರೂ ಪ್ರತಿನಿತ್ಯ ಹಲ್ಲುಜ್ಜುವುದು ಅತೀ ಅಗತ್ಯವಾಗಿದೆ. ಹಲ್ಲುಗಳ ಕಟ್ಟುಗಳು ಇರುವ ಸಂದರ್ಭದಲ್ಲಿ ನೀವು ದಿನದ ವೇಳೆ ಹಲ್ಲುಜ್ಜುವ ಸಮಯವನ್ನು ಹೆಚ್ಚಿಸಬೇಕು. ಹಲ್ಲುಗಳ ಕಟ್ಟುಗಳು ಇದ್ದಾಗ ನೀವು ಹಲ್ಲುಜ್ಜುವಾಗ ಹಲ್ಲು ಬಿಳಿಗೊಳಿಸುವ ಟೂಥ್ ಪೇಸ್ಟ್ ಬಳಸಿಕೊಳ್ಳಿ. ಯಾವ ಟೂಥ್ ಪೇಸ್ಟ್ ಬೇಕಿದ್ದರೂ ನೀವು ಬಳಸಬಹುದು. ಇದರಿಂದ ಹಲ್ಲಿನ ನೈಜ ಬಣ್ಣವು ಹಾಗೆ ಉಳಿದುಕೊಳ್ಳುವುದು.

English summary

Easy Remedies To Keep Your Teeth White Wearing Braces

Braces on the teeth might be a boon in the long run, but those who have it, can just list its cons. Braces are painful, trecherous, awkward and come with a baggage of too many precautions. Among the cons related to braces, a common complaint is - it makes the teeth lose its white colour.
Story first published: Tuesday, August 22, 2017, 20:08 [IST]
X
Desktop Bottom Promotion