For Quick Alerts
ALLOW NOTIFICATIONS  
For Daily Alerts

ನೀರು ಕುಡಿಯಲು ವೇಳಾಪಟ್ಟಿ!! ಇದನ್ನು ಅನುಸರಿಸಿದರೆ ಆರೋಗ್ಯ ವೃದ್ಧಿ!

ದಿನಕ್ಕೆ ಇಂತಿಷ್ಟೇ ಲೋಟ ನೀರು ಕುಡಿಯಬೇಕು, ಎಂಟು ಲೋಟಕ್ಕೆ ಕಡಿಮೆ ಆಗಬಾರದು ಎಂಬ ಲೇಖನಗಳು ನೂರಾರಿವೆ. ಆದರೆ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಲು ನೀರನ್ನು ಯಾವ ಸಮಯಕ್ಕೆ ಕುಡಿಯಬೇಕು ಎಂಬ ಮಾಹಿತಿ ಎಲ್ಲಿಯೂ ಇಲ್ಲ!

By Arshad
|

ನೀರು ಕುಡಿಯುತ್ತಾ ಇದ್ದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಹಿರಿಯರೂ ಪಾಲಕರೂ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬಲವಂತವಾಗಿಯಾದರೂ ನೀರು ಕುಡಿಸುತ್ತಾರೆ. ದಿನಕ್ಕೆ ಇಂತಿಷ್ಟೇ ಲೋಟ ನೀರು ಕುಡಿಯಬೇಕು, ಎಂಟು ಲೋಟಕ್ಕೆ ಕಡಿಮೆ ಆಗಬಾರದು ಎಂಬ ಲೇಖನಗಳು ನೂರಾರಿವೆ. ನೀರು ಕುಡಿಯುವುದಕ್ಕೂ ನೀತಿ-ನಿಯಮವಿದೆ! ಇನ್ನು ಒಟ್ಟಾರೆ ಕುಡಿಯಬೇಡಿ!!

ಆದರೆ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಲು ನೀರನ್ನು ಯಾವ ಸಮಯಕ್ಕೆ ಕುಡಿಯಬೇಕು ಎಂಬ ಮಾಹಿತಿ ಎಲ್ಲಿಯೂ ಇಲ್ಲ. ಸಾಮಾನ್ಯವಾಗಿ ನಾವೆಲ್ಲಾ ಬಾಯಾರಿಕೆಯಾದಾಗಲೆಲ್ಲಾ ನೀರು ಕುಡಿಯಬೇಕು ಎಂಬ ಸೂತ್ರಕ್ಕೆ ಜೋತುಬಿದ್ದಿದ್ದೇವೆ. ತಜ್ಞರ ಪ್ರಕಾರ ಎಂಟು ಲೋಟ ನೀರು ಅಗತ್ಯವಾದರೂ ಕೆಲವರು ದಿನಕ್ಕೆ 3-4 ಲೀಟರ್ ಆದರೂ ನೀರು ಕುಡಿಯಲೇಬೇಕು ಎಂಬ ವಾದವನ್ನು ಮಂಡಿಸುತ್ತಾರೆ. ಇನ್ನೂ ಕೆಲವರು ಬಿಸಿಲು ಹೆಚ್ಚಿದ್ದಾಗ ಹೆಚ್ಚು ಕುಡಿಯಬೇಕೆಂದೂ, ಕಡಿಮೆ ಇದ್ದಾಗ ಮತ್ತು ರಾತ್ರಿಯ ಹೊತ್ತು ಕಡಿಮೆ ಕುಡಿಯಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಯಾವಾಗ ಹೆಚ್ಚಿನ ಅಭಿಪ್ರಾಯಗಳು ಬರುತ್ತವೆಯೋ ಆಗಲೇ ಭಿನ್ನಾಭಿಪ್ರಾಯಗಳೂ ಪ್ರಾರಂಭವಾಗುತ್ತವೆ. ಈ ವಿಷಯದಲ್ಲಿ ಸರಿಯಾದ ಮಾಹಿತಿಯನ್ನು ಆರಿಸಿಕೊಳ್ಳುವುದೇ ಕಷ್ಟ. ಈ ಬಗ್ಗೆ ನಿಮಗೂ ದ್ವಂದ್ವವಿದ್ದಲ್ಲಿ ಇಂದಿನ ಲೇಖನವನ್ನು ಓದುವುದು ಅಗತ್ಯ. ವಿಶ್ವ ಜಲ ದಿನದ ಸಂದರ್ಭದಲ್ಲಿ ನೀರನ್ನು ಸರಿಯಾದ ಕ್ರಮದಲ್ಲಿ ಕುಡಿಯುವ ಮಹತ್ವವನ್ನು ಸಂದರ್ಭಯೋಚಿತವಾಗಿ ಇಂದು ನೀಡಲಾಗಿದ್ದು ಇದಕ್ಕೆ ವೈಜ್ಞಾನಿಕ ಕಾರಣಗಳನ್ನೂ ವಿವರಿಸಲಾಗಿದೆ...

ಬೆಳಿಗ್ಗೆ ಎದ್ದ ತಕ್ಷಣ

ಬೆಳಿಗ್ಗೆ ಎದ್ದ ತಕ್ಷಣ

ಬೆಳಿಗ್ಗೆ ಎದ್ದ ತಕ್ಷಣ, ಕನಿಷ್ಠ ಒಂದರಿಂದ ಎರಡು ಲೋಟ ತಣ್ಣೀರು, ಅಂದರೆ ಫ್ರಿಜ್ಜಿನಲ್ಲಿಟ್ಟದ್ದಲ್ಲ, ಸಾದಾ ನೀರನ್ನು ಕುಡಿಯಬೇಕು. ಕೆಲವರು ಹಲ್ಲುಜ್ಜಿದ ಬಳಿಕ ಕುಡಿಯುವುದು ಉತ್ತಮವೆಂದೂ ಹೇಳುತ್ತಾರೆ. ರಾತ್ರಿಯ ಹೊತ್ತಿನ ಅನೈಚ್ಛಿಕ ಕೆಲಸಗಳ ಕಾರಣ ದೇಹದಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ನಿವಾರಿಸಲು ಈ ನೀರು ತುಂಬಾ ಅಗತ್ಯವಾಗಿದೆ.

ರಾತ್ರಿ ಮಲಗುವ ಮುನ್ನ

ರಾತ್ರಿ ಮಲಗುವ ಮುನ್ನ

ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಲೋಟ ನೀರು ಕುಡಿದು ಮಲಗುವ ಮೂಲಕ ರಾತ್ರಿಯ ಅನೈಚ್ಛಿಕ ಕಾರ್ಯಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ ಹಾಗೂ ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಸ್ನಾನಕ್ಕೂ ಮುನ್ನ

ಸ್ನಾನಕ್ಕೂ ಮುನ್ನ

ಸ್ನಾನಕ್ಕೂ ಮುನ್ನ ಒಂದು ದೊಡ್ಡಲೋಟ ನೀರನ್ನು ಕುಡಿಯುವುದನ್ನು ಇಂದಿನಿಂದಲೇ ಅಭ್ಯಾಸ ಮಾಡಿ. ಇದರಿಂದ ರಕ್ತದ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ.

ಊಟಕ್ಕೂ ಮೊದಲು ಮತ್ತು ನಂತರ

ಊಟಕ್ಕೂ ಮೊದಲು ಮತ್ತು ನಂತರ

ಊಟ ಮಾಡುವ ಸರಿಯಾಗಿ ಅರ್ಧ ಘಂಟೆಗೂ ಮುನ್ನ ಒಂದು ಲೋಟ ನೀರು ಕುಡಿಯುವುದು ತುಂಬಾ ಆರೋಗ್ಯಕರ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದು ಮಾತ್ರವಲ್ಲ, ಅಗತ್ಯಕ್ಕೂ ಹೆಚ್ಚು ತಿನ್ನುವ ಬಯಕೆಯನ್ನೂ ಹತ್ತಿಕ್ಕುತ್ತದೆ.ನೆನಪಿಡಿ, ಊಟ ಮಾಡುವಾಗ ನೀರು ಕುಡಿಯಬೇಡಿ...

ತೂಕ ಇಳಿಸಿಕೊಳ್ಳುವವರಿಗೆ...

ತೂಕ ಇಳಿಸಿಕೊಳ್ಳುವವರಿಗೆ...

ವಿಶೇಷವಾಗಿ ತೂಕ ಕಳೆದುಕೊಳ್ಳಲಿಚ್ಛಿಸುವವರಿಗೆ ಈ ವಿಧಾನ ತುಂಬಾ ಅನುಕೂಲಕರವಾಗಿದೆ. ಇದೇ ರೀತಿ ಊಟದ ಅರ್ಧ ಗಂಟೆಯ ಬಳಿಕ ಇನ್ನೊಂದು ದೊಡ್ಡ ಲೋಟ ನೀರು ಕುಡಿಯುವ ಮೂಲಕ ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ನೀರು ಮತ್ತು ಹಣ್ಣಿನ ಜ್ಯೂಸ್-ಇವೆರಡರಲ್ಲಿ ಯಾರು ಹಿತವರು?

ವ್ಯಾಯಾಮಕ್ಕೂ ಮುನ್ನ ಮತ್ತು ನಂತರ

ವ್ಯಾಯಾಮಕ್ಕೂ ಮುನ್ನ ಮತ್ತು ನಂತರ

ಯಾವುದೇ ವ್ಯಾಯಮವಾಗಲಿ, ಒಂದು ದೊಡ್ಡ ಲೋಟ ನೀರು ಕುಡಿದೇ ಪ್ರಾರಂಭಿಸಬೇಕು ಹಾಗೂ ಮುಗಿದ ಬಳಿಕ ನೀರು ಕುಡಿದು ವಿಶ್ರಮಿಸಬೇಕು. ಇದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದನ್ನು ತಪ್ಪಿಸಬಹುದು. ವ್ಯಾಯಾಮದ ಅವಧಿಯಲ್ಲಿ ದೇಹ ಕಳೆದುಕೊಂಡಿದ್ದ ನೀರನ್ನು ಮತ್ತೆ ಸರಿದೂಗಿಸಲು ವ್ಯಾಯಾಮದ ಬಳಿಕದ ನೀರಿನ ಸೇವನೆ ಅಗತ್ಯವಾಗಿದೆ.

ಅಸೌಖ್ಯವಾಗಿದ್ದಾಗ

ಅಸೌಖ್ಯವಾಗಿದ್ದಾಗ

ಇತರ ದಿನಗಳಿಗಿಂತಲೂ ಅಸೌಖ್ಯವಾಗಿರುವ ದಿನಗಳಲ್ಲಿ ಉಗುರು ಬೆಚ್ಚಗಿನ ನೀರು ಮತ್ತು ಹಣ್ಣಿನ ರಸಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಇದರಿಂದ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬಹುದು ಹಾಗೂ ಅಸೌಖ್ಯಕ್ಕೆ ಕಾರಣವಾದ ವೈರಸ್ಸುಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ದೇಹದ ರೋಗನಿರೋಧಕ ಶಕ್ತಿ ಹೋರಾಡಲು ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ.

ಬಳಲಿಕೆಯ ಸಮಯದಲ್ಲಿ

ಬಳಲಿಕೆಯ ಸಮಯದಲ್ಲಿ

ಹೆಚ್ಚಿನ ದೈಹಿಕ ಶ್ರಮ ಅಥವಾ ಮಾನಸಿಕ ಶ್ರಮದ ಕಾರಣ ಬಳಲಿಕೆ ಕಂಡುಬಂದರೆ ತಕ್ಷಣವೇ ಒಂದು ಲೋಟ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆ ಬಳಲಿಕೆಗೆ ಪ್ರಮುಖ ಕಾರಣವಾಗಿದೆ. ಒಂದು ಲೋಟ ತಣ್ಣೀರು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆತು ಬಳಲಿಕೆ ದೂರಾಗುತ್ತದೆ.

ತಿಂಡಿ-ಉಪಹಾರಕ್ಕೂ ಮುನ್ನ ಮತ್ತು ಜೊತೆಗೆ

ತಿಂಡಿ-ಉಪಹಾರಕ್ಕೂ ಮುನ್ನ ಮತ್ತು ಜೊತೆಗೆ

ಸಂಜೆಯ ಹೊತ್ತು ಏನಾದರೂ ತಿಂಡಿಯನ್ನು ತಿನ್ನಬೇಕೆಂಬ ಮನಸ್ಸಾದರೆ ಇದಕ್ಕೂ ಮುನ್ನ ಒಂದು ಲೋಟ ನೀರು ಕುಡಿದು ತಿನ್ನಲು ಪ್ರಾರಂಭಿಸಿದರೆ ಅಲ್ಪ ಪ್ರಮಾಣವೇ ಸಾಕಾಗುತ್ತದೆ.

ತಿಂಡಿ-ಉಪಹಾರಕ್ಕೂ ಮುನ್ನ ಮತ್ತು ಜೊತೆಗೆ

ತಿಂಡಿ-ಉಪಹಾರಕ್ಕೂ ಮುನ್ನ ಮತ್ತು ಜೊತೆಗೆ

ಇಲ್ಲದಿದ್ದರೆ ಹೆಚ್ಚಿನ ಪ್ರಮಾಣದ ತಿಂಡಿ ಹೊಟ್ಟೆ ಸೇರಿ ಸ್ಥೂಲಕಾಯ ಮತ್ತು ಇತರ ತೊಂದರೆಗಳಿಗೆ ಕಾರಣವಾಗಬಹುದು. ಅಂತೆಯೇ ತಿಂಡಿಯ ಜೊತೆಗೇ ಕೊಂಚ ಕೊಂಚವಾಗಿ ನೀರನ್ನು ಕುಡಿಯುತ್ತಾ ಬಂದರೆ ಇನ್ನೂ ಹೆಚ್ಚು ತಿನ್ನುವ ಬಯಕೆ ಮೂಡುವುದರಿಂದ ಪಾರಾಗಬಹುದು.

English summary

Drink Water At These Times And See What Happens To Your Health

You must have heard everyone saying that drinking lots of water is good for one's health and also your parents and elders at home would be pushing you to drink more water. But, do you know what is the correct time to drink water and the right amount in order to reap its maximum benefits?
X
Desktop Bottom Promotion