For Quick Alerts
ALLOW NOTIFICATIONS  
For Daily Alerts

ವಾಕರಿಕೆ, ವಾಂತಿಯ ಸಮಸ್ಯೆಗೆ ಪವರ್‌ಫುಲ್ ಮನೆಮದ್ದು-'ದಾಲ್ಚಿನ್ನಿ'

By Arshad
|

ವಾಕರಿಕೆ ಅಥವಾ ವಾಂತಿಯಾದ ಸಮಯದಲ್ಲಿ ಮೊದಗೆ ನೆನಪಿಗೆ ಬರುವ ಸಿದ್ಧೌಷಧಿ ಎಂದರೆ ಲಿಂಬೆಹಣ್ಣು. ಸಾಮಾನ್ಯವಾಗಿ ಆಹಾರದಲ್ಲಿ ಏನಾದರೂ ತೊಂದರೆಯಾಗಿ ವಾಂತಿ ಅಥವಾ ವಾಕರಿಕೆ ಎದುರಾದರೆ ನಾವೆಲ್ಲಾ ಮೊದಲು ಅಡುಗೆ ಮನೆಯಲ್ಲಿರುವ ಸಾಮಾಗ್ರಿಗಳನ್ನು ಮೊದಲು ಪ್ರಯೋಗಿಸಿ ಇದರಿಂದ ಪ್ರಯೋಜನ ಪಡೆಯದಿದ್ದರೆ ಬಳಿಕ ವೈದ್ಯರ ಸಲಹೆ ಪಡೆಯುತ್ತೇವೆ. ಒಂದು ವೇಳೆ ಈ ಸೂಚನೆಗಳು ಸತತವಾಗಿದ್ದರೆ ಮಾತ್ರ ಲಿಂಬೆಯಿಂದ ಪರಿಹಾರ ಸಿಕ್ಕರೂ ಸರಿ, ವೈದ್ಯರನ್ನು ಕಾಣುವುದು ಅಗತ್ಯವಾಗಿದೆ.

ಸಾಮಾನ್ಯವಾಗಿ ಹೆಚ್ಚಿನ ಎಣ್ಣೆಯ ಜಿಡ್ಡು ಇರುವ ಆಹಾರ ಸೇವನೆ ಅಥವಾ ಹೊಟ್ಟೆಯಲ್ಲಿ ಏನಾದರೂ ತೊಂದರೆಯಾಗಿದ್ದರೆ ತಕ್ಷಣವೇ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಈ ತೊಂದರೆಯಿಂದ ರಕ್ಷಣೆ ಪಡೆಯಬಹುದು. ಬನ್ನಿ ಇಂತಹ ಒಂದು ಸಮರ್ಥವಾದ ಮನೆಮದ್ದಾಗಿರುವ ದಾಲ್ಚಿನ್ನಿಯ ನೀರಿನ ಟೀ ಸೇವನೆಯ ಬಗ್ಗೆ ಅರಿಯೋಣ...

ವಾಂತಿ ಕಡಿಮೆಗೊಳಿಸಲು ದಾಲ್ಚಿನ್ನಿ - ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ವಾಂತಿ ಕಡಿಮೆಗೊಳಿಸಲು ದಾಲ್ಚಿನ್ನಿ - ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಸಾಮಾನ್ಯವಾಗಿ ಬಿರಿಯಾನಿ ಅಥವಾ ಪಲಾವ್ ಮೊದಲಾದ ಮಸಾಲೆಭರಿತ ಆಹಾರಗಳಲ್ಲಿ ದಾಲ್ಚಿನ್ನಿಯೂ ಒಂದು ಪ್ರಮುಖ ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತದೆ. ಈ ದಾಲ್ಚಿನ್ನಿ ಅಥವಾ ಚೆಕ್ಕೆಗೆ ವಾಂತಿ ಹಾಗೂ ವಾಕರಿಕ ಕಡಿಮೆಗೊಳಿಸುವ ಗುಣವಿದೆ. ಆಯುರ್ವೇದದ ಪ್ರಕಾರ ಇದರಲ್ಲಿ ವಮನಕ ನಿವಾರಕ (ಅಥವಾ ವಾಂತಿ ನಿರೋಧಕ) ಹಾಗೂ ವಾಯುಪ್ರಕೋಪ ನಿವಾರಕ ಗುಣಗಳನ್ನು ಹೊಂದಿದ್ದು ಈ ಗುಣಗಳೇ ವಾಂತಿ ಹಾಗೂ ವಾಕರಿಕೆ ಕಡಿಮೆ ಮಾಡಲು ನೆರವಾಗುತ್ತವೆ. ಸಾಮಾನ್ಯವಾಗಿ ಜಠರದ ಒಳಪದರಲ್ಲಿ ಉಂಟಾಗಿರುವ ಉರಿಯೂತ ಇನ್ನೇನು ಹೊಟ್ಟೆಯಲ್ಲಿರುವುದನ್ನು ಹೊರಹಾಕುವ ಹಂತದಲ್ಲಿದ್ದೇನೆ ಎಂದು ಸೂಚಿಸುವ ಸೂಚನೆಯೇ ವಾಕರಿಕೆ. ಈ ಉರಿಯೂತವನ್ನು ಇಲ್ಲವಾಗಿಸಿ ಸೂಚನೆಯ ಅಗತ್ಯವಿಲ್ಲದಂತೆ ಮಾಡುವ ಮೂಲಕ ದಾಲ್ಚಿನ್ನಿ ವಾಕರಿಕೆ, ವಾಂತಿಯನ್ನು ನಿಲ್ಲಿಸುತ್ತದೆ.

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ದಾಲ್ಚಿನ್ನಿ ನೀರು

ಒಂದು ಲೋಟ ನೀರಿಗೆ ಒಂದು ಚಿಕ್ಕ ತುಂಡು ಚೆಕ್ಕೆಯನ್ನು ಹಾಕಿ ಇಡಿಯ ರಾತ್ರೆ ನೆನೆಸಿಡಿ. ಮರುದಿನದ ಬಳಿಕ ಯಾವಾಗ ವಾಕರಿಕೆ ಅನ್ನಿಸುತ್ತದೆಯೋ, ಆಗ ಈ ನೀರನ್ನು ತಕ್ಷಣವೇ ಕುಡಿಯಿರಿ. ಒಂದು ವೇಳೆ ನಿಮಗೆ ಪ್ರಯಾಣದ ಸಮಯದಲ್ಲಿ ವಾಂತಿಯಾಗುವ ತೊಂದರೆ ಇದ್ದರೆ ಈ ನೀರನ್ನು ನಿಮ್ಮ ಜೊತೆಗೇ ಕೊಂಡೊಯ್ಯಿರಿ. ವಾಂತಿಯಾಗುವ ಸೂಚನೆ ಸಿಕ್ಕುತ್ತಿದ್ದಂತೆಯೇ ಕುಡಿದು ಬಿಡಿ. ಇದರಿಂದ ವಾಂತಿಯಾಗದಿರುವಂತೆ ನೋಡಿಕೊಳ್ಳಬಹುದು.

ದಾಲ್ಚಿನ್ನಿ ಟೀ

ದಾಲ್ಚಿನ್ನಿ ಟೀ

ಒಂದು ವೇಳೆ ನೀವು ಮನೆಯಲ್ಲಿದ್ದು ವಾಕರಿಕೆಯನ್ನು ಅನುಭವಿಸುತ್ತಿದ್ದರೆ ಒಂದು ಲೋಟ ನೀರನ್ನು ಬಿಸಿಮಾಡಿ ಒಂದು ತುಂಡು ಚೆಕ್ಕೆಯನ್ನು ಕುದಿಸಿ ಟೀ ತಯಾರಿಸಿ. ಬಳಿಕ ಉರಿ ಆರಿಸಿ ಹಾಗೇ ತಣಿಯಲು ಬಿಡಿ. ಉಗುರುಬೆಚ್ಚಗಾದ ಬಳಿಕ ಕುಡಿಯಿರಿ. ಅಲ್ಲದೇ ಇದನ್ನು ಪುಡಿಯಾಗಿಸಿ ನಿತ್ಯದ ಆಹಾರದಲ್ಲಿ ಬೆರೆಸಿ ಸೇವಿಸುವ ಮೂಲಕವೂ ವಾಂತಿಯಾಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.

ಆರ್ಥೈಟಿಸ್ (ಸಂಧಿವಾತ)

ಆರ್ಥೈಟಿಸ್ (ಸಂಧಿವಾತ)

ಮೂಳೆಗಳು ಕೂಡುವಲ್ಲಿರುವ ಸಂಧಿಗಳ ನಡುವೆ ಹೆಚ್ಚು ಸವೆಯವಾಗಿ ಉಂಟಾಗುವ ಕೀಲುನೋವು ಅಥವಾ ಸಂಧಿವಾತಕ್ಕೆ ಈ ಕ್ರಮ ಅನುಸರಿಸಿ: ಒಂದು ಲೋಟ ಬಿಸಿನೀರಿಗೆ ಎರಡು ಚಮಚ ಜೇನು ಮತ್ತು ಒಂದು ಚಿಕ್ಕ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿ. ನಿತ್ಯದ ಸೇವನೆಯಿಂದ ಅತಿಹೆಚ್ಚು ಬಾಧಿತವಾಗಿದ್ದ ಕೀಲುನೋವು ಸಹಾ ಕಡಿಮೆಯಾಗಿರುವುದು ಕಂಡುಬಂದಿದೆ.

ಮೂತ್ರಕೋಶದ ಸೋಂಕು

ಮೂತ್ರಕೋಶದ ಸೋಂಕು

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಜೇನು ಮತ್ತು ಎರಡು ದೊಡ್ಡಚಮಚ ದಾಲ್ಚಿನ್ನಿಪುಡಿಯನ್ನು ಸೇರಿಸಿ ಕುಡಿಯಿರಿ. ಮೂತ್ರಕೋಶದ ಸೋಂಕಿಗೆ ಕಾರಣವಾದ ಕ್ರಿಮಿಗಳು ಒಂದೇ ಬಾರಿ ನಾಶವಾಗುತ್ತವೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು

ಸುಮಾರು ಅರ್ಧ ಲೀಟರ್ ನೀರಿನಲ್ಲಿ ಎರಡು ಚಮಚ ಟೀಪುಡಿ (ಕಪ್ಪು ಟೀ), ಎರಡು ದೊಡ್ಡ ಚಮಚ ಜೇನು ಮತ್ತು ಮೂರು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕುದಿಸಿ ಸೋಸಿ ಕುಡಿಯಿರಿ. ಕುಡಿದ ಬಳಿಕ ಕೇವಲ ಎರಡು ಗಂಟೆಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖಡಾ ಹತ್ತರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.

 ಶೀತ, ನೆಗಡಿಗೆ

ಶೀತ, ನೆಗಡಿಗೆ

ಒಂದು ದೊಡ್ಡ ಚಮಚ ಉಗುರುಬೆಚ್ಚನೆಯ ಜೇನಿಗೆ ಕಾಲು ಚಿಕ್ಕಚಮಚ ದಾಲ್ಚಿನ್ನಿಪುಡಿ ಹಾಕಿ ಪ್ರತಿದಿನ ಮೂರು ಬಾರಿ ಕುಡಿಯುವುದರಿಂದ ಭಾರೀ ಶೀತವೂ ಕಡಿಮೆಯಾಗುತ್ತದೆ. ಮುಚ್ಚಿದ್ದ ಮೂಗಿನ ಹೊಳ್ಳೆಗಳು ತೆರೆದುಕೊಳ್ಳುತ್ತವೆ, ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಗೆ

ಹೃದಯ ಸಂಬಂಧಿ ಕಾಯಿಲೆಗಳಿಗೆ

ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಪ್ರತಿದಿನ ನೀವು ಸೇವಿಸುವ ಗೋಧಿಹಿಟ್ಟಿನ ಬ್ರೆಡ್ (brown bread)ನ ಬದಿಗಳಿಗೆ ಸವರಿ ಬೆಳಗ್ಗಿನ ಉಪಾಹಾರವಾಗಿ ಸೇವಿಸಿ. ಇದರಿಂದ ಹೃದಯಕ್ಕೆ ರಕ್ತಪೂರೈಸುವ ಧಮನಿಗಳಲ್ಲಿ ಸೇರಿಕೊಂಡಿದ್ದ ಕೆಟ್ಟ ಕೊಲೆಸ್ಟರಾಲ್ ಕರಗಿ ಹೃದಯಾಘಾತವಾಗುವುದರಿಂದ ಕಾಪಾಡುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು

ಪ್ರತಿದಿನ ಒಂದು ಚಮಚದಷ್ಟು ಸಮಪ್ರಮಾಣದಲ್ಲಿ ಬೆರೆಸಿದ ಜೇನು ಮತ್ತು ದಾಲ್ಚಿನ್ನಿಯ ದ್ರಾವಣವನ್ನು ಚ್ಯವನ್ ಪ್ರಾಶ್ ನಂತೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಯಿಂದ ದೇಹ ರಕ್ಷಣೆ ಪಡೆಯಲು ಹೆಚ್ಚು ಸಮರ್ಥವಾಗುತ್ತದೆ.

ತೂಕ ಇಳಿಸಲು

ತೂಕ ಇಳಿಸಲು

ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೇನು ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಕುದಿಸಿ ತಣಿಸಿ. ಈ ಪಾನೀಯವನ್ನು ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಸೇವಿಸಿ ಅರ್ಧ ಗಂಟೆಯ ಬಳಿಕ ಉಪಾಹಾರ ಸೇವಿಸಿ. ರಾತ್ರಿ ಸಹಾ ಒಂದು ಲೋಟ ಸೇವಿಸಿ ನಿದ್ರಿಸಿ. ಇದರಿಂದಾಗಿ ದೇಹದಲ್ಲಿ ಶೇಖರವಾಗಿದ್ದ ಕೊಬ್ಬು ನಿಧಾನವಾಗಿ ಕರಗುತ್ತದೆ.

English summary

Drink cinnamon water or tea to prevent nausea and vomiting

Cinnamon is an Indian spice that is commonly used in biryanis and spicy curries, not many know that it can help you beat vomiting and nausea. According to Ayurveda, cinnamon is packed with antiemetic and carminative properties that reduce the chances of feeling nauseated by stimulating the cells lining the stomach. It also improves digestion and calms the lining of the stomach.
X
Desktop Bottom Promotion