ಡೆಂಗ್ಯೂ ಜ್ವರಕ್ಕೆ ತಕ್ಷಣ ಪರಿಹಾರ ನೀಡುವ ಹಣ್ಣುಗಳಿವು... ತಪ್ಪದೇ ಸ್ವೀಕರಿಸಿ...

Posted By: manu
Subscribe to Boldsky

ಡೆಂಗ್ಯೂ ಜ್ವರ ಅಪಾಯಕಾರಿ ಕಾಯಿಲೆಗಳಲ್ಲಿ ಒಂದು. ಸುಮಾರು 2 ದಿನದಿಂದ 7 ದಿನದ ವರೆಗೆ ಕಾಡುವ ಜ್ವರ ರೋಗ. ಡೆಂಗ್ಯೂ ಸೋಂಕು ತಗುಲಿದಾಗ ಮೂಳೆಗಳಲ್ಲಿ, ಸಂಧಿ ಹಾಗೂ ಸ್ನಾಯುಗಳಲ್ಲಿ ಸೆಳೆತ ಹಾಗೂ ನೋವುಂಟಾಗುವುದು. ಈ ಕಾಯಿಲೆಗೆ ಬ್ರೇಕ್ ಬೋನ್ ಜ್ವರ ಎಂತಲೂ ಕರೆಯುತ್ತಾರೆ. ಈ ಜ್ವರ ಬರುವಾಗ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಡೆಂಗ್ಯೂ ರೋಗದ ಪ್ರಮುಖ ಲಕ್ಷಣ ಎಂದು ಪರಿಗಣಿಸಲಾಗುವುದು.

ಪ್ಲೇಟ್ಲೆಟ್ ಸಂಖ್ಯೆ'ಯನ್ನು ಹೆಚ್ಚಿಸಲು ಬಲ ನೀಡುವ ಆಹಾರಗಳಿವು...

ಜ್ವರ ಬಂದಾಗ ತಕ್ಷಣವೇ ಹಿಮೋಗ್ಲೋಬಿನ್ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಈ ರೋಗ ಆಕ್ರಮಣಗೊಂಡಾಗ ಪ್ರತಿಶತ 65 ಮಂದಿಗಳಲ್ಲಿ ಪ್ಲೇಟ್ಲೆಟ್ ಪ್ರಮಾಣ ಕಡಿಮೆಗೊಳ್ಳುತ್ತದೆ. ಇದು ಆಂತರಿಕ ರಕ್ತ ಸ್ರಾವವನ್ನು ಉಂಟುಮಾಡುವುದು. ಅಧಿಕ ರಕ್ತದೊತ್ತಡದ ಜೊತೆಗೆ ಪ್ಲೇಟ್ಲೆಟ್‌ಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿರುತ್ತದೆ. ಸಾಮಾನ್ಯವಾಗಿ 450,000-150,000 ಇರುವ ಪ್ಲೇಟ್ಲೆಟ್ ಸಂಖ್ಯೆ 450 ರಿಂದ 150ಕ್ಕೆ ಇಳಿಯುತ್ತದೆ. 150ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇಳಿಯುತ್ತಿದ್ದು ಅದು 30ಕ್ಕಿಂತ ಕಡಿಮೆಯಾದರೆ ವ್ಯಕ್ತಿ ಸಾವನಪ್ಪುವ ಸಾಧ್ಯತೆ ಇರುತ್ತದೆ.  

ಡೆಂಗ್ಯೂ ರೋಗ ನಿಯಂತ್ರಿಸುವ ಶಕ್ತಿ 'ಬೇವಿನ ಎಲೆ' ಗಳಲ್ಲಿದೆ!

ವ್ಯಕ್ತಿಗೆ ವಿಪರೀತ ಜ್ವರ, ವಾಂತಿ ಚರ್ಮದ ಮೇಲೆ ಕೆಂಪು ಗುಳ್ಳೆಗಳು, ತಲೆನೋವು, ಮೂಗು ಮತ್ತು ಗುದನಾಳದಲ್ಲಿ ರಕ್ತಸ್ರಾವ, ಪ್ಲೇಟ್ಲೆಟ್ ಪ್ರಮಾಣದಲ್ಲಿ ಗಣನೀಯವಾದ ಇಳಿಕೆ ಉಂಟಾಗುತ್ತದೆ. ಮಹಿಳೆಯರಲ್ಲಿ ಅತಿಯಾದ ಋತುಸ್ರಾವ ಉಂಟಾಗುವುದು. ಈ ಸಂದರ್ಭದಲ್ಲಿ ಉತ್ತಮ ಆರೈಕೆ ಹಾಗೂ ಚಿಕಿತ್ಸೆಯ ಅಗತ್ಯವಿರುತ್ತದೆ. ನೈಸರ್ಗಿಕವಾಗಿಯೇ ಪ್ಲೇಟ್ಲೆಟ್ ಪ್ರಮಾಣವನ್ನು ಹೆಚ್ಚಿಸುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಲು ವೈದ್ಯರು ಸೂಚಿಸುತ್ತಾರೆ. ಅಂತಹ ಹಣ್ಣುಗಳಲ್ಲಿ ಬಹುಮುಖ್ಯ ಪಾತ್ರವಹಿಸುವ ಈ ಮೂರು ಹಣ್ಣುಗಳು ಬಹು ಬೇಗ ದೇಹದಲ್ಲಿ ಚೇತರಿಕೆಯನ್ನು ತುಂಬುತ್ತವೆ... ಬನ್ನಿ ಆ ಹಣ್ಣುಗಳ ಉಪಯೋಗ ಹಾಗೂ ಬಳಕೆಯ ವಿಧಾನವನ್ನು ತಿಳಿದುಕೊಳ್ಳೋಣ.... 

ದಾಳಿಂಬೆ

ದಾಳಿಂಬೆ

ಈ ಹಣ್ಣಿನಲ್ಲಿ ಪಾಲಿಫಿನೋಲಿಕ್ ಫ್ಲೇವೊನೋಯ್ಡ್ ಪ್ರಮಾಣ ಸಮೃದ್ಧವಾಗಿರುತ್ತದೆ. ಅಲ್ಲದೆ ವ್ಯಾಪಕವಾದ ಆಂಟಿಮೈಕ್ರೊಬಿಯಲ್ ಚಟುವಟಿಕೆಯಿಂದ ಸಾಕಷ್ಟು ಪ್ರಬಲವಾದ ಸಿನರ್ಜಿಸ್ಟ್‍ಅನ್ನು ಹೊರಹೊಮ್ಮಿಸುತ್ತದೆ. ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುವುದು. ನಿತ್ಯವು ಒಂದು ಗ್ಲಾಸ್ ದಾಳಿಂಬೆ ರಸಕ್ಕೆ 2 ಟೀಸ್ಪೂನ್ ನಿಂಬೆ ರಸವನ್ನು ಬೆರೆಸಿ ಕುಡಿಯಬೇಕು. ಜ್ವರ ಬಂದಾಗ ಪ್ರತಿ 2ಗಂಟೆಗೊಮ್ಮೆ ಈ ರಸವನ್ನು ಸೇವಿಸಿದರೆ ರಕ್ತದಲ್ಲಿ ರಕ್ತಕಣಗಳ ಸಂಖ್ಯೆ ಹೆಚ್ಚುವುದು.

ದಾಳಿಂಬೆ

ದಾಳಿಂಬೆ

ದಾಳಿಂಬೆ ಮತ್ತು ಕಪ್ಪು ಒಣ ದ್ರಾಕ್ಷಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸೋಂಕಿತ ರೋಗಿಯು ಊಟದ ನಂತರ ದಾಳಿಂಬೆ ಹಣ್ಣನ್ನು ಸೇವಿಸುವುದು ಅಥವಾ 300 ಎಮ್‍ಎಲ್ ರಸವನ್ನು ಸೇವಿಸಬೇಕು. ರಕ್ತಕಣಗಳ ಸಂಖ್ಯೆ ಹೆಚ್ಚುವುದು. ಇದನ್ನು ಕೇವಲ ಡೆಂಗ್ಯೂ ರೋಗಿಯೇ ಸೇವಿಸಬೇಕೆಂದೇನೂ ಇಲ್ಲ. ಆರೋಗ್ಯವಂತ ವ್ಯಕ್ತಿಯೂ ಇದನ್ನು ಸೇವಿಸಿದರೆ ಒಳ್ಳೆಯದು.

ಕಿವಿ ಹಣ್ಣು

ಕಿವಿ ಹಣ್ಣು

ಕಿವಿ ಹಣ್ಣು ವಿಟಮಿನ್‍ಗಳ ಆಗರ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ ಮತ್ತು ಪೊಟ್ಯಾಷಿಯಂ ಸಮೃದ್ಧವಾಗಿದೆ. ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕ ಹಾಗೂ ನಾರಿನಂಶ ಹೊಂದಿರುವ ಈ ಹಣ್ಣನ್ನು ಅನಾರೋಗ್ಯದ ಸಮಯದಲ್ಲಿ ಸೇವಿಸಲು ಉತ್ತಮವಾದದ್ದು. ಇದು ದೇಹಕ್ಕೆ ಚೈತನ್ಯವನ್ನು ನೀಡಿ, ಅನಾರೋಗ್ಯವನ್ನು ಸರಿಪಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ಹಣ್ಣನ್ನು ಡೆಂಗ್ಯೂ ಆವರಿಸಿದ ಸಮಯದಲ್ಲಿ ಸೇವಿಸುವುದರಿಂದ ರಕ್ತ ಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಕೊಳ್ಳಬಹುದು.

ಪಪ್ಪಾಯ

ಪಪ್ಪಾಯ

ಆರೋಗ್ಯಕರ ಗುಣವನ್ನು ಹೊಂದಿರುವ ಉತ್ತಮ ಹಣ್ಣುಗಳಲ್ಲಿ ಪಪ್ಪಾಯವೂ ಒಂದು. ಈ ಹಣ್ಣು ಉತ್ತಮ ಗುಣಮಟ್ಟದ ಜೀವಸತ್ವಗಳು, ಪೋಲೇಟ್, ಫೈಬರ್ ಮತ್ತು ಪೊಟ್ಯಾಸಿಯಮ್‍ಗಳಿಂದ ಕೂಡಿದೆ. ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉತ್ತಮ ಫೈಬರ್ ಗುಣ ಹಾಗೂ ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‍ಗಳನ್ನು ಒಂಗೊಂಡಿದೆ. ಇದು ಗಾಯವನ್ನು ಗುಣಪಡಿಸಿ ರಕ್ತಹೆಪ್ಪುಗಟ್ಟುವಿಕೆಯನ್ನು ತಡೆಯುವುದು. ಇದರಲ್ಲಿರುವ ಪೇಪೈನ್ ಮತ್ತು ಚಿಮೊಪಪೈನ್ ಎನ್ನುವ ರಾಸಾಯನಿಕವು ಜ್ವರದ ಸಮಯದಲ್ಲಿ ಕಡಿಮೆಯಾಗುವ ಪ್ಲೇಟ್ಲೆಟ್ ಎಣಿಕೆ ಹೆಚ್ಚಿಸಲು ಸಹಾಯ ಮಾಡುವುದು. ಅಲ್ಲದೆ ಬಿಳಿ ರಕ್ತಗಣಗಳ ಪುನರುತ್ಪಾದಿಸಲು ಸಹಾಯ ಮಾಡುತ್ತದೆ.

ಪಪ್ಪಾಯ

ಪಪ್ಪಾಯ

ನಾಲ್ಕು ದಿನಕ್ಕೊಂದು ಬಾರಿ ಪಪ್ಪಾಯ ಹಣ್ಣಿನ ರಸವನ್ನು ಸ್ವೀಕರಿಸಿದರೆ ಅಥವಾ ತಿಂದರೂ ಸಹ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದು. ಡೆಂಗ್ಯೂ ಸಮಯದಲ್ಲಿ ಪಪ್ಪಾಯ ಹಣ್ಣಿನ ಸೇವನೆಯ ಜೊತೆ ಇದರ ಎಲೆಗಳ ರಸವನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆ ಸಾಬೀತು ಪಡಿಸಿದೆ.

For Quick Alerts
ALLOW NOTIFICATIONS
For Daily Alerts

    English summary

    Doctors Recommend These Fruits To Increase Blood Platelets

    When a person suffers from periodic fever, skin rash or vomiting then the doctors suggest to do a test for platelet count. Low platelet count can cause the risk of bleeding. There would be bleeding from nose, severe headaches, bleeding from the rectum, pain in the muscles and blood in stools. Some women do experience heavy menstrual flows. Here are some of the fruits that can increase blood platelets that are recommended by doctors
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more