For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಉಪ್ಪಿನಿಂದ ಹಸಿವು ಹೆಚ್ಚಳ-ದೇಹದ ಶಕ್ತಿ ವರ್ಧನೆ!

ಉಪ್ಪಿನಂಶ ಇರುವ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಬಾಯಾರಿಕೆಯ ಬದಲಿಗೆ ಸಿಕ್ಕಾಪಟ್ಟೆ ಹಸಿವು ಜಾಸ್ತಿಯಾಗುತ್ತದೆ ಎಂದು ಸಂಶೋಧನೆಯ ತಂಡಗಳು ತಿಳಿಸಿವೆ....

By Jaya Subramanya
|

ಇಂದಿನ ದಿನಗಳಲ್ಲಿ ಬೊಜ್ಜು ಸ್ಥೂಲಕಾಯತೆ ಎಲ್ಲರನ್ನು ಕಾಡುತ್ತಿರುವ ವ್ಯಾಧಿಯಾಗಿ ಮಾರ್ಪಟ್ಟಿದೆ. ಆಹಾರದ ಮೇಲೆ ನಿಯಂತ್ರಣ ಇಲ್ಲದಿರುವುದು, ಆಧುನಿಕ ಜೀವನ ಪದ್ಧತಿ, ಸೂಕ್ತ ವ್ಯಾಯಾಮದ ಕೊರತೆ, ನಿದ್ರಾಹೀನತೆ ಹೀಗೆ ಸಾಕಷ್ಟು ಕಾರಣಗಳಿಂದ ಸ್ಥೂಲಕಾಯತೆ ನಿಮ್ಮನ್ನು ಕಾಡುತ್ತದೆ. ಇದರ ಪರಿಣಾಮವಾಗಿಯೇ ಇಂದು ಹೆಚ್ಚಿನವರು ಅತಿ ಸಣ್ಣ ಪ್ರಾಯದಲ್ಲಿಯೇ ಹಲವಾರು ರೋಗಗಳಿಗೆ ಒಳಗಾಗುತ್ತಿದ್ದಾರೆ.

salt chips

ಕೆಲವರಾದರೂ ಈ ವಿಷಯದಲ್ಲಿ ಎಚ್ಚೆತ್ತುಕೊಂಡು ತಮ್ಮ ಆರೋಗ್ಯದ ಕಡೆಗೆ ಗಮನ ನೀಡುವ ಸಲುವಾಗಿ ಯೋಗ ಕೇಂದ್ರ, ಜಿಮ್ ಸೆಂಟ್, ಓಟ, ನಡಿಗೆ ಮೊದಲಾದ ದೈಹಿಕ ಚಟುವಟಿಕೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇತರರ ಮೂದಲಿಕೆ ಅಂತೆಯೇ ತಮ್ಮನ್ನು ಕಾಡುತ್ತಿರುವ ಮಾನಸಿಕ ಕೀಳರಿಮೆಯೇ ಇವರಲ್ಲಿ ಇಂತಹ ಬದಲಾವಣೆಗಳನ್ನು ಮಾಡಲು ಕಾರಣವಾಗಿವೆ. ಉಪ್ಪಿನಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದೇ?

ನೀವು ಡಯೆಟ್ ವಿಧಾನವನ್ನು ಅನುಸರಿಸುತ್ತಿದ್ದೀರಿ ಎಂದಾದಲ್ಲಿ ಉಪ್ಪಿನ ಆಹಾರದ ಸೇವನೆಯನ್ನು ನಾವು ಇಲ್ಲಿ ಸಲಹೆ ನೀಡುತ್ತಿದ್ದೇವೆ. ಒಂದು ಸಂಶೋಧನೆಯ ಪ್ರಕಾರ ಉಪ್ಪಿನ ಪ್ರಮಾಣ ಹೆಚ್ಚಾದರೆ ಬಾಯಾರಿಕೆ ಕಡಿಮೆಯಾಗಿ, ಹಸಿವಿನ ಪ್ರಮಾಣ ಹೆಚ್ಚಾಗಿತ್ತೆಂದು ತಿಳಿಸಿದ್ದಾರೆ ಇದರಿಂದ ನಿಮ್ಮಲ್ಲಿ ಹೆಚ್ಚು ಶಕ್ತಿ ಸಾಮರ್ಥ್ಯ ಉಂಟಾಗುತ್ತದೆ ಎಂಬುದಾಗಿಯೂ ಕೂಡ ಈ ಸಂಶೋಧನೆಯೊಂದು ತಿಳಿಸಿದೆ.

ಈ ಸಂಶೋಧನೆಯಲ್ಲಿ 10 ಪುರುಷರ ಎರಡು ತಂಡಗಳನ್ನು ವಿಮಾನಗಳಲ್ಲಿ ಇರಿಸಲಾಗಿತ್ತು. ಮೊದಲ ಗುಂಪನ್ನು 105 ದಿನಗಳ ಕಾಲ ಅಧ್ಯಯನ ಮಾಡಲಾಯಿತು ನಂತರ ಎರಡನೇ ತಂಡವನ್ನು 205 ದಿನಗಳ ಕಾಲ ಅಧ್ಯಯನ ನಡೆಸಲಾಯಿತು. ತಮ್ಮ ಆಹಾರಗಳಲ್ಲಿ ಮೂರು ಬಗೆಯ ಉಪ್ಪನ್ನು ನೀಡಿ ಅವರಿಗೆ ಆಹಾರವನ್ನು ನೀಡಲಾಯಿತು. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ಬಳಿಕ ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನಂಶ ಇರುವುದು ಪತ್ತೆಯಾಗಿತ್ತು, ಏಕೆಂದರೆ ಹೆಚ್ಚು ಪ್ರಮಾಣದ ಉಪ್ಪಿನ ಸೇವನೆಯು ಮೂತ್ರದಲ್ಲಿ ಕೂಡ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಲಿದೆ. ಅಂತೆಯೇ ಇದು ಮೂತ್ರದ ಸಂಪೂರ್ಣ ಪ್ರಮಾಣವನ್ನು ಹೆಚ್ಚಿಸಲಿದೆ ಎಂದಾಗಿತ್ತು. ಆದರೆ ಇವರುಗಳು ಕಡಿಮೆ ಪ್ರಮಾಣದ ನೀರು ಸೇವಿಸಿದ್ದು ಮೂತ್ರದಲ್ಲಿರುವ ನೀರಿನ ಪ್ರಮಾಣ ಉಪ್ಪಿನ ಸೇವನೆಯಿಂದ ಉಂಟಾಗಿರುವುದು ಎಂಬುದಾಗಿ ಕಂಡುಬಂದಿದೆ. ಈ ಉಪ್ಪು ಮೂತ್ರದಲ್ಲಿ ಹಾಗೆಯೇ ನಿಲ್ಲಲಿದ್ದು ನೀರು ಕಿಡ್ನಿಗೆ ಮರಳಿ ದೇಹವನ್ನು ತಲುಪುತ್ತದೆ.

English summary

Do You Know Why Salty Diet Reduces Thirst & Increases Hunger?

A salty diet causes people to drink less water while increasing hunger due to a higher need for energy, suggests new research. The findings, published in the Journal of Clinical Investigation, are based on a study carried out during a simulated mission to Mars. "Cosmonauts" who ate more salt retained more water, were not as thirsty, and needed more energy, the results showed.
Story first published: Thursday, April 20, 2017, 20:01 [IST]
X
Desktop Bottom Promotion