ಪದೇ ಪದೇ ಕಾಡುವ ಸುಸ್ತು-ದಯವಿಟ್ಟು ನಿರ್ಲಕ್ಷಿಸಬೇಡಿ!

By: manu
Subscribe to Boldsky

ಶಾರೀರಿಕ ಸಾಮರ್ಥ ಉಡುಗಿದಂತೆ ಸುಸ್ತು ಆವರಿಸುತ್ತದೆ. ಕೊಂಚ ವಿರಾಮ ಹಾಗೂ ಆಹಾರ ಸೇವನೆಯ ಬಳಿಕ ಸುಸ್ತು ಇಲ್ಲವಾಗುತ್ತದೆ. ಆದರೆ ಒಂದು ವೇಳೆ ಸೂಕ್ತ ವಿಶ್ರಾಂತಿ ಹಾಗೂ ಆಹಾರಸೇವನೆಯ ಬಳಿಕವೂ ಸುಸ್ತು ಆವರಿಸಿದ್ದು ಇಡಿಯ ದಿನ ಕಡಿಮೆಯಾಗದೇ ಇದ್ದರೆ ಇದಕ್ಕೆ ಬೇರೆಯೇ ಕಾರಣಗಳಿರಬಹುದು. ಒಂದು ವೇಳೆ ನಿಮಗೂ ಇದೇ ತೊಂದರೆ ಇದ್ದರೆ ಈ ಲೇಖನ ಓದುವುದು ನಿಮಗೆ ಅಗತ್ಯ ಹಾಗೂ ಅನಿವಾರ್ಯ.....

 

ರಕ್ತಹೀನತೆ

ರಕ್ತಹೀನತೆ

ಸದಾ ಸುಸ್ತು ಆವರಿಸಿರಲು ಪ್ರಮುಖ ಕಾರಣ ರಕ್ತಹೀನತೆ ಅಥವಾ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಂಪುರಕ್ತಕಣಗಳಿಲ್ಲದೇ ಇರುವುದು. ಕೆಂಪು ಕಣಗಳ ಕೊರತೆಯಿಂದ ಇವು ಹೊತ್ತು ತರಬೇಕಾಗಿದ್ದ ಆಮ್ಲಜನಕವೂ ಕಡಿಮೆಯಾಗುವ ಕಾರಣ ದೇಹದ ಜೀವಕೋಶಗಳು ಶಕ್ತಿಯ ಕೊರತೆಯಿಂದ ಬಳಲುತ್ತವೆ.ರಕ್ತ ಹೀನತೆಯ ಲಕ್ಷಣಗಳು- ನಿರ್ಲಕ್ಷಿಸಿದರೆ ಅಪಾಯ ತಪ್ಪದು!

ರಕ್ತಹೀನತೆ

ರಕ್ತಹೀನತೆ

ಇದರೊಂದಿಗೆ ತಲೆನೋವು, ಏಕಾಗ್ರತೆಯಲ್ಲಿ ಕೊರತೆ, ಹೃದಯ ಬಡಿತದಲ್ಲಿ ಏರಿಕೆ, ನಿದ್ದಿಸಲು ಸಾಧ್ಯವಾಗದಿರುವುದು ಮೊದಲಾದವು ಎದುರಾಗುತ್ತವೆ. ತಕ್ಷಣ ರಕ್ತಪರೀಕ್ಷೆಯ ಅಗತ್ಯ ನಿಮಗಿದೆ.

ಥೈರಾಯ್ಡ್ ಗ್ರಂಥಿಯ ತೊಂದರೆ

ಥೈರಾಯ್ಡ್ ಗ್ರಂಥಿಯ ತೊಂದರೆ

ಒಂದು ವೇಳೆ ಥೈರಾಯ್ಡ್ ಗ್ರಂಥಿಗಳು ಪೂರ್ಣ ಪ್ರಮಾಣದ ಕ್ಷಮತೆಯಲ್ಲಿ ಕೆಲಸ ಮಾಡದೇ ಇದ್ದರೂ ಇಡಿಯ ದಿನ ಸುಸ್ತು ಆವರಿಸುತ್ತದೆ. ಥೈರಾಯ್ಡ್ ತೊಂದರೆಯೇ ಆದರೆ ಸುಸ್ತಿನ ಜೊತೆ ಒಣಗಿದ ಕೂದಲು, ಒಣಗಿದ ಚರ್ಮ, ಸುಲಭವಾಗಿ ತುಂಡಾಗುವ ಉಗುರುಗಳು, ಕಣ್ಣುಗಳ ಕೆಳಗೆ ಚಿಕ್ಕ ಚೀಲದಂತೆ ತುಂಬಿಕೊಳ್ಳುವುದು, ಧ್ವನಿ ಗಡಸಾಗುವುದು, ಹೃದಯದ ಬಡಿತದಲ್ಲಿ ಏರಿಕೆ, ಭಾವಗಳಲ್ಲಿ ಭಾರೀ ಬದಲಾವಣೆ ಮೊದಲಾದ ತೊಂದರೆಗಳೂ ಕಂಡುಬರುತ್ತವೆ. ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಪಡುವುದು ಅಗತ್ಯ. ಥೈರಾಯ್ಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

ಮಧುಮೇಹ

ಮಧುಮೇಹ

ಒಂದು ವೇಳೆ ದಿನವಿಡೀ ಸುಸ್ತು ಆವರಿಸಿದ್ದರೆ ಇದಕ್ಕೆ ಮಧುಮೇಹವೂ ಕಾರಣವಿರಬಹುದು. ಇಡಿಯ ದಿನ ಯಾವುದೇ ಕೆಲಸ ಮಾಡಲು ಶಕ್ತಿಯ ಕೊರತೆ, ಸದಾ ಬಾಯಾರಿಕೆ ಆವರಿಸುವುದು, ಸತತ ಮೂತ್ರ ವಿಸರ್ಜನೆಗೆ ಅವಸರವಾಗುವುದು, ದೃಷ್ಟಿ ಮಂದವಾಗುವುದು, ತೂಕದಲ್ಲಿ ಥಟ್ಟನೇ ಇಳಿಕೆ, ಮೈಯೆಲ್ಲಾ ತುರಿಕೆ,ಬೇಗನೇ ಸಿಟ್ಟು ಬರುವುದು ಮೊದಲಾದವು ಮಧುಮೇಹದ ಲಕ್ಷಣಗಳಾಗಿವೆ. ತಕ್ಷಣ ರಕ್ತವನ್ನು ತಪಾಸಿಸಿಕೊಳ್ಳುವುದು ಅಗತ್ಯ. ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

ಖಿನ್ನತೆ

ಖಿನ್ನತೆ

ಒಂದು ವೇಳೆ ದೈಹಿಕ ಸಾಮರ್ಥ್ಯದಲ್ಲಿ ಕಡಿಮೆಯಾಗುವ ಜೊತೆಗೇ ನಿದ್ರಿಸಲು ಕಷ್ಟವಾಗುತ್ತಿದ್ದು, ಖಿನ್ನತೆ ಆವರಿಸಿ ಸದಾ ಋಣಾತ್ಮಕವಾಗಿ ಚಿಂತಿಸುತ್ತಿದ್ದರೆ, ಯಾರೊಂದಿಗೂ ಬೆರೆಯದೇ ಒಂಟಿಯಾಗಿರಬಯಸಿದರೆ ನಿಮಗೆ ಒಂಟಿತನ ಮತ್ತು ಮಾನಸಿಕ ಒತ್ತಡದ ತೊಂದರೆ ಇರಬಹುದು. ತಕ್ಷಣ ಮಾನಸಿಕ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

English summary

Do You Always Feel Tired? These Could Be The Reasons

There are numerous reasons why many of us feel tired all the time. The reasons can be numerous and if you are one of the victims, then you must read this article and find out if any of the reasons mentioned here could be why you feel tired all the time...
Please Wait while comments are loading...
Subscribe Newsletter