ಜೇನು, ಶುಂಠಿ, ಲಿಂಬೆಯ ಸಿರಪ್- ಒಂದೆರಡು ದಿನಗಳಲ್ಲಿಯೇ ಕೆಮ್ಮು ಮಂಗಮಾಯ!

Posted By: Arshad
Subscribe to Boldsky

ಒಂದು ವೇಳೆ ನಿಮಗೆ ಫ್ಲೂ ಆವರಿಸಿ ಮೈಯೆಲ್ಲಾ ಬಿಸಿಯಾಗಿ ನಡುಗುತ್ತಿದ್ದರೆ ಈ ಲೇಖನ ನಿಮಗಾಗಿಯೇ ಇದೆ. ಏಕೆಂದರೆ ಇಂದು ಫ್ಲೂ, ಕೆಮ್ಮು ಹಾಗೂ ಇತರ ಚಳಿಗಾಲದ ಬೇನೆಗಳಿಂದ ರಕ್ಷಿಸಿಕೊಳ್ಳಲು ಉತ್ತಮವಾದ ಸಿರಪ್ ಒಂದನ್ನು ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಶುಂಠಿ, ಜೇನು ಹಾಗೂ ಲಿಂಬೆಯನ್ನು ಬಳಸಿ ಸುಲಭವಾಗಿ ತಯಾರಿಸಿಕೊಳ್ಳಬಹುದು ಹಾಗೂ ಸುಮಾರು ಮೂರು ವಾರಗಳವರೆಗೆ ಕೆಡದಂತೆ ರಕ್ಷಿಸಿಡಬಹುದು. ಬನ್ನಿ, ಈ ಸಿರಪ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಒಂದು ಕಪ್ ಜೇನು

ಎರಡು ಲಿಂಬೆಗಳು

ಎರಡೂವರೆ ಇಂಚಿನಷ್ಟು ಹಸಿಶುಂಠಿ

ಒಂದು ಕಪ್ ನೀರು.

ಸಿದ್ಧತಾ ಸಮಯ: ಹತ್ತು ನಿಮಿಷ

ತಯಾರಿಕಾ ಸಮಯ: ಮೂವತ್ತು ನಿಮಿಷಗಳು.

ವಿಧಾನ

ವಿಧಾನ

ಹಂತ 1: ಹಸಿಶುಂಠಿಯ ಸಿಪ್ಪೆ ಸುಲಿದು ಚಿಕ್ಕಚಿಕ್ಕ ತುಂಡುಗಳನ್ನಾಗಿಸಿ.

ಹಂತ 2

ಹಂತ 2

ಎರಡು ಲಿಂಬೆಗಳನ್ನು ಹಿಂಡಿ ರಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ.ಇದರ ಸಿಪ್ಪೆಯನ್ನು ಚಿಕ್ಕದಾಗಿ ಹೆಚ್ಚಿ. ಸುಮಾರು ಒಂದೂವರೆ ಚಿಕ್ಕ ಚಮಚದಷ್ಟು ತುರಿ ಸಿಕ್ಕಿದರೆ ಸಾಕು.

ಹಂತ 3

ಹಂತ 3

ಜೇನಿನ ಹೊರತು ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸುರುವಿ ಈ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ

ಹಂತ 4

ಹಂತ 4

ಕುದಿ ಬಂದ ಬಳಿಕ ಸುಮಾರು ಮೂರರಿಂದ ನಾಲ್ಕು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. ಬಳಿಕ ಉರಿ ಆರಿಸಿ ಮುಚ್ಚಳ ಮುಚ್ಚಿ ಸುಮಾರು ನಾಲ್ಕೈದು ನಿಮಿಷ ತಣಿಯಲು ಬಿಡಿ.

ಹಂತ 5

ಹಂತ 5

ಈಗ ಈ ನೀರನ್ನು ಸೋಸಿ ನೀರನ್ನು ಸಂಗ್ರಹಿಸಿ. ಶುಂಠಿ ಮತ್ತು ಲಿಂಬೆಯ ತುರಿಯನ್ನು ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ.

ಹಂತ 6

ಹಂತ 6

ಈಗ ಇನ್ನೊಂದು ಪಾತ್ರೆಯಲ್ಲಿ ಜೇನನ್ನು ಹಾಕಿ ಬಿಸಿಮಾಡಿ. ಅತಿ ಚಿಕ್ಕ ಉರಿಯಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷ ಬಿಸಿ ಮಾಡಿ.ಎಚ್ಚರಿಕೆ: ಜೇನು ಬಿಸಿಯಾಗಬೇಕೇ ವಿನಃ ಗುಳ್ಳೆ ಬರಬಾರದು, ಬಂದರೆ ಇದರ ಔಷಧೀಯ ಗುಣಗಳು ನಷ್ಟವಾಗುತ್ತವೆ.

ಹಂತ 7

ಹಂತ 7

ಈಗ ಶುಂಠಿ ಮತ್ತು ಲಿಂಬೆತುರಿ ಮತ್ತು ಲಿಂಬೆಯ ರಸವನ್ನು ಈ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 8

ಹಂತ 8

ಮುಂದಿನ ಹತ್ತು ನಿಮಿಷಗಳ ವರೆಗೆ ಚಿಕ್ಕ ಉರಿಯಲ್ಲಿಯೇ ಬಿಸಿಮಾಡುತ್ತಾ ಈ ಮಿಶ್ರಣವನ್ನು ಕಲಕುತ್ತಿರಿ. ಎಲ್ಲಿಯವರೆಗೆ ಅಂದರೆ ಈ ಮಿಶ್ರಣದಿಂದ ಗುಳ್ಳೆಗಳು ಮೂಡಲು ಪ್ರಾರಂಭವಾಗುವವರೆಗೆ.

ಹಂತ 9

ಹಂತ 9

ಗುಳ್ಳೆ ಮೂಡಲು ಪ್ರಾರಂಭವಾದ ತಕ್ಷಣ ಉರಿ ಆರಿಸಿ ತಣಿಯಲು ಬಿಡಿ. ಇದು ಉಗುರುಬೆಚ್ಚಗಿರುವಷ್ಟು ತಣ್ಣಗಾದ ಬಳಿಕ ಒಂದು ಗಾಜಿನ ಜಾಡಿಯಲ್ಲಿ ಸಂಗ್ರಹಿಸಿ. ಎಚ್ಚರಿಕೆ: ಗಾಜಿನ ಪಾತ್ರೆಯಲ್ಲಿ ಈ ಬಿಸಿ ಮಿಶ್ರಣವನ್ನು ಹಾಕದಿರಿ. ಏಕೆಂದರೆ ಇದು ಪಾತ್ರೆಯಲ್ಲಿ ಬಿರುಕುಂಟುಮಾಡಬಹುದು. ಪ್ಲಾಸ್ಟಿಕ್ ಜಾಡಿಯಲ್ಲಿಯೂ ಸಂಗ್ರಹಿಸಬೇಡಿ.

ಸಂಗ್ರಹದ ಸೂಚನೆ

ಸಂಗ್ರಹದ ಸೂಚನೆ

ಈ ಜಾಡಿಯನ್ನು ತಣ್ಣಗಿನ ಹಾಗೂ ಸ್ವಚ್ಛ ಸ್ಥಳದಲ್ಲಿ ಸಂಗ್ರಹಿಸಿ. ಈ ಜಾಡಿಯ ಮೇಲೆ ಬಿಸಿಲು ಬೀಳದಂತೆ ರಕ್ಷಿಸಿ. ಗಾಳಿಯಾಡದಂತೆ ಈ ಜಾಡಿಯನ್ನು ಗಟ್ಟಿಯಾಗಿ ಮುಚ್ಚಿ. ಈ ಜಾಡಿಯನ್ನು ಮೂರು ವಾರಗಳವರೆಗೆ ಕೆಡದಂತೆ ರಕ್ಷಿಸಿಡಬಹುದು.

ಬಳಕೆಯ ವಿಧಾನ

ಸೇವನೆಗೂ ಮುನ್ನ ಒಂದು ಚಿಕ್ಕ ಚಮಚದಷ್ಟು ದ್ರಾವಣವನ್ನು ಕೊಂಚವೇ ಬಿಸಿ ಮಾಡಿ ಸೇವಿಸಿ.

ಮುಂದಿನ ಅರ್ಧ ಗಂಟೆಯವರೆಗೆ ನೀರನ್ನು ಕುಡಿಯದಿರಿ.

ಈ ದ್ರಾವಣವನ್ನು ದಿನಕ್ಕೆ ಮೂರು ಬಾರಿಯಂತೆ ಸತತವಾಗಿ ಮೂರು ದಿನಗಳವರೆಗೆ ಸೇವಿಸಿದರೆ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು.

ಈ ದ್ರಾವಣ ಹೇಗೆ ಕೆಲಸ ಮಾಡುತ್ತದೆ?

ಈ ದ್ರಾವಣ ಹೇಗೆ ಕೆಲಸ ಮಾಡುತ್ತದೆ?

ಲಿಂಬೆ, ಶುಂಠಿ ಮತ್ತು ಜೇನು, ಈ ಮೂರೂ ಸಾಮಾಗ್ರಿಗಳನ್ನು ಹಲವಾರು ವರ್ಷಗಳಿಂದ ಕೆಮ್ಮು, ಶೀತ ನೆಗಡಿಗಳಿಗೆ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಇದರಲ್ಲಿ ಶುಂಠಿ ಅತಿ ಹೆಚ್ಚು ಪ್ರಬಲವಾಗಿದ್ದು ಇದರ ಉರಿಯೂತ ನಿವಾರಕ ಹಾಗೂ ಸೂಕ್ಷ್ಮಜೀವಿ ನಿವಾರಕ ಗುಣಗಳು ಹಲವು ವ್ಯಾಧಿಗಳಿಗೆ ಔಷಧಿಯಾಗಿದೆ.

ಈ ಗುಣವೇ ಶೀತ ಕೆಮ್ಮಿಗೆ ಒಳಗಾಗಿರುವ ಶ್ವಾಸನಾಳಗಳ ಒಳಭಾಗದಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಂದು ಇವು ಉಂಟುಮಾಡಿದ್ದ ಸೋಂಕನ್ನು ನಿವಾರಿಸಿ ಬೇನೆಯನ್ನು ಇಲ್ಲವಾಗಿಸುತ್ತದೆ.ಅಲ್ಲದೇ ಈ ದ್ರಾವಣವನ್ನು ಸೇವಿಸುವ ಮೂಲಕ ಹಸಿವು ಹೆಚ್ಚಿಸುತ್ತದೆ ಹಾಗೂ ಶೀತ ಕೆಮ್ಮನ್ನು ಎದುರಿಸಲು ದೇಹವನ್ನು ಹೆಚ್ಚು ಬಲಯುತವಾಗಿಸಲು ನೆರವಾಗುತ್ತದೆ. ಲಿಂಬೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಒದಗಿಸುತ್ತದೆ. ಈ ಪೋಷಕಾಂಶ ಹೊಸ ರಕ್ತಕಣಗಳ ಉತ್ಪತ್ತಿಗೆ ನೆರವಾಗುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳಲು ನೆರವಾಗುತ್ತದೆ. ಹಾಗೂ ಜೇನು, ಇತರ ಎರಡರಷ್ಟು ಪ್ರಬಲವಲ್ಲದಿದ್ದರೂ ಇವೆರಡೂ ಸಾಮಾಗ್ರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಜೇನಿನ ಸೇವನೆಯಿಂದ ಸೋಂಕೊಗೊಳಗಾಗಿದ್ದ ಗಂಟಲು ಮತ್ತು ಶ್ವಾಸನಾಳಗಳ ಒಳಭಾಗವನ್ನು ಸ್ವಚ್ಛಗೊಳಿಸುವ ಮೂಲಕ ಸೋಂಕು ಇಲ್ಲವಾಗಿಸುತ್ತದೆ.

English summary

DIY Homemade Honey Ginger Cough Syrup With Lemon

If you are down with the flu, you have arrived at the right place. Because in this article you will learn a super simple recipe for honey ginger cough syrup with lemon that you can prepare at home and store for up to 3 weeks, and why each of the ingredients is magical when it comes to getting rid of your flu. So, let's get on with it.