For Quick Alerts
ALLOW NOTIFICATIONS  
For Daily Alerts

ನಂಬುತ್ತೀರೋ ಬಿಡುತ್ತೀರೋ 'ದೇಹವೇ' ರೋಗರುಜಿನಗಳ ಬೀಡು!

ದೇಹದ ಯಾವ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ ಮತ್ತು ದೇಹದ ಯಾವ ಭಾಗವು ತುಂಬಾ ಕೊಳಕು ಆಗಿದೆ ಎನ್ನುವುದನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ...

By Hemanth
|

ಮಾನವನ ದೇಹವು ವಿಷ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಬೇರೆ ಪ್ರಾಣಿಗಳ ಮಾಂಸವನ್ನು ಮನುಷ್ಯರು ತಿನ್ನುತ್ತಾರೆ. ಆದರೆ ಮಾನುಷ್ಯನ ಮಾಂಸವು ವಿಷ ಎನ್ನುವ ಕಾರಣದಿಂದ ಪ್ರತಿಯೊಬ್ಬರಿಗೂ ಇದರಿಂದ ದೂರ ಉಳಿಯುತ್ತಾರೆ. ಮಾನವ ದೇಹವು ಮೂಳೆಮಾಂಸದಿಂದ ಕೂಡಿರುವುದು ಎನ್ನುವ ದಾಸರ ಹಾಡಿದೆ.

ಅದೇ ರೀತಿ ಮಾನವ ದೇಹವು ಹಲವಾರು ಬ್ಯಾಕ್ಟೀರಿಯಾಗಳಿಗೆ ದಾರಿಯಾಗಿದೆ. ಅದರಲ್ಲೂ ಮಾನವನ ದೇಹದ ಕೆಲವೊಂದು ಭಾಗಗಳು ತುಂಬಾ ಕೊಳಕು ಆಗಿದೆ. ಬಾಯಿ, ನಾಲಿಗೆ ಮತ್ತು ದೇಹದ ಇತರ ಭಾಗದಲ್ಲಿ ನೂರಾರು ಬ್ಯಾಕ್ಟೀರಿಯಾಗಳು ವಾಸಿಸುತ್ತದೆ. ದೇಹದ ಯಾವ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ ಮತ್ತು ದೇಹದ ಯಾವ ಭಾಗವು ತುಂಬಾ ಕೊಳಕು ಆಗಿದೆ ಎನ್ನುವುದನ್ನು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಬಹುದು.....


ಬಾಯಿ

ಬಾಯಿ

ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಆದರೆ ಬಾಯಿ ದೇಹದ ಅತ್ಯಂತ ಕೊಳಕು ಭಾಗವಾಗಿದೆ. ಬಾಯಿಯಲ್ಲಿ ಸುಮಾರು 600ಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾಗಳು ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ.

ಕಂಕುಳ

ಕಂಕುಳ

ಕಂಕುಳದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾಗಳು ನೆಲೆಸಿರುತ್ತದೆ. ಇದರಿಂದಾಗಿ ನಿಮಗೆ ಬೆವರಿದಾಗ ಕೆಟ್ಟ ವಾಸನೆ ಬರುವ ಭಾಗ ಕಂಕುಳವಾಗಿದೆ. ಆ್ಯಂಟಿಬ್ಯಾಕ್ಟೀರಿಯಾ ಸೋಪ್ ನಿಂದ ಕಂಕುಳವನ್ನು ಪ್ರತೀದಿನ ಸ್ವಚ್ಛಗೊಳಿಸಿ.ಕಂಕುಳ ಕೂದಲಿನ ನಿವಾರಣೆಗೆ ಫಲಪ್ರದ ಮನೆಮದ್ದು

ಕಿವಿಗಳು

ಕಿವಿಗಳು

ದೇಹದಲ್ಲಿ ಕಂಡುಬರುವ ಅತ್ಯಂತ ಕೊಳಕು ಭಾಗವೆಂದರೆ ಅದು ಕಿವಿಯಲ್ಲಿರುವ ಮೇಣ. ಇದು ಹಲವಾರು ರೀತಿಯ ಬ್ಯಾಕ್ಟೀರಿಯಾಗಳಿಂದ ಕಿವಿಯನ್ನುರಕ್ಷಿಸುವುದು ಮಾತ್ರವಲ್ಲದೆ ಕಿವಿಯ ಒಳಗಡೆ ಇದು ತೈಲಲೇಪನವನ್ನು ನೀಡುವುದು. ಕಿವಿ ನೋವಿಗೆ ಅಂತ್ಯಹಾಡುವ ಸರಳ ಮನೆಮದ್ದುಗಳು

ನಾಲಗೆ

ನಾಲಗೆ

ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಗೆ ನಾಲಿಗೆ ಮನೆಯಾಗಿದೆ. ನಾಲಗೆಯಲ್ಲಿ ಬ್ಯಾಕ್ಟೀರಿಯಾಗಳಿದ್ದರೆ ಅದು ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಇದರಿಂದ ಪ್ರತೀದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದು ತುಂಬಾ ಮುಖ್ಯವಾಗಿದೆ.

ಕೈಯ ಉಗುರುಗಳು

ಕೈಯ ಉಗುರುಗಳು

ಕೈಯ ಉಗುರುಗಳು ದೇಹದಲ್ಲಿನ ತುಂಬಾ ಕೊಳಕಿನ ಭಾಗವಾಗಿದೆ. ಉಗುರಿನ ಕೆಳಗಡೆ ಇರುವ ಚರ್ಮದಲ್ಲಿ ಪ್ರಾಣಕ್ಕೆ ಹಾನಿಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳು ಇರುತ್ತದೆ. ಇದರಿಂದ ಉಗುರುಗಳನ್ನು ಯಾವಾಗಲೂ ಸ್ವಚ್ಛವಾಗಿಡುವುದು ತುಂಬಾ ಮುಖ್ಯ. ಬೆರಳಿನ ಉಗುರಿಗೂ-ಆರೋಗ್ಯಕ್ಕೂ, ಎತ್ತಿಂದೆತ್ತ ಸಂಬಂಧ?

ಕೂದಲು/ತಲೆಬುರುಡೆ

ಕೂದಲು/ತಲೆಬುರುಡೆ

ತಲೆಯಲ್ಲಿ ಕಂಡುಬರುವ ತುರಿಕೆ ಕೇವಲ ತಲೆಹೊಟ್ಟಿನಿಂದ ಮಾತ್ರವಲ್ಲ. ತಲೆಯಲ್ಲಿ ಇರುವಂತಹ ಧೂಳಿನೊಂದಿಗೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವ ಕಾರಣದಿಂದ ತಲೆಯಲ್ಲಿ ತುರಿಕೆ ಉಂಟಾಗುತ್ತದೆ.

ನಾಭಿ

ನಾಭಿ

ಮಾನವ ದೇಹದ ಮತ್ತೊಂದು ಕೊಳಕಿನ ಭಾಗವೆಂದರೆ ನಾಭಿ. ನಾಭಿಯನ್ನು ಪ್ರತೀದಿನ ತೊಳೆಯದೆ ಇದ್ದರೆ ನಾಭಿಯ ಕಲ್ಲು ಸೃಷ್ಟಿಯಾಗಿ ಇದರಿಂದ ಗಡ್ಡೆಯಾಗಬಹುದು.

English summary

Dirtiest Parts Of Your Body That You Never Imagined!

Many people might feel that anus is the dirtiest part of the body due to direct contact with the faecal matter. However, did you know that there are other dirty parts of the body that are dirtier, as they create an environment for bacteria to thrive on. So, if you want to know which is the dirtiest part of the human body, then this article will help find out. Continue reading to know which is the dirtiest part of the human body.
Story first published: Thursday, February 2, 2017, 20:09 [IST]
X
Desktop Bottom Promotion